Home
ಸುದ್ದಿಜಾಲ

ತರಾತುರಿಯಲ್ಲಿ ಐಫೋನ್‌ 15 ಖರೀದಿಸಿದ ಗ್ರಾಹಕರಿಗೆ ಶಾಕ್!, ಈ ಸಮಸ್ಯೆಗೆ ಪರಿಹಾರ ಏನು? ಆಪಲ್‌ ಹೇಳೋದೇನು?

ಭಾರತದಲ್ಲಿ ಐಫೋನ್ 15 ಸರಣಿ (iPhone 15 series) ಫೋನ್‌ಗಳಿಗೆ ಭಾರೀ ಬೇಡಿಕೆ ಇದ್ದು, ಮುಂಗಡವಾಗಿ ಆರ್ಡರ್‌ ಮಾಡಿದ ಗ್ರಾಹಕರು ಈ ಫೋನ್‌ಗಳನ್ನು ಖರೀದಿ ಮಾಡಿ ಬಳಕೆ ಮಾಡಲು ಆರಂಭಿಸಿದ್ದಾರೆ. ಈ ಮೂಲಕ ಹೊಸ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಕೆಲವು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಈಗಾಗಲೇ ಐಫೋನ್‌ 15 ಫೋನ್‌ ಖರೀದಿ ಮಾಡಿದ ಗ್ರಾಹಕರಲ್ಲಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಬೇಸರ ಹೊರಹಾಕಿದ್ದಾರೆ. ಯಾಕೆಂದರೆ ಕೆಲವು ಗ್ರಾಹಕರು ಐಫೋನ್‌ 15 ಸರಣಿಯಲ್ಲಿ 3 ಪ್ರಮುಖ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಹಾಗಿದ್ರೆ, ಈ ಸಮಸ್ಯೆಗಳೇನು?, ಈ ಸಮಸ್ಯೆಗಳ ಬಗ್ಗೆ ಆಪಲ್‌‌ ಹೇಳೋದೇನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ತರಾತುರಿಯಲ್ಲಿ ಐಫೋನ್‌ 15 ಖರೀದಿಸಿದ ಗ್ರಾಹಕರಿಗೆ ಶಾಕ್!

ಹೊಸ ಐಫೋನ್‌ ವಿರುದ್ಧ ದೂರು: ಐಫೋನ್‌ಗಳಲ್ಲಿ ಕಂಡು ಬಂದ ಮೂರು ದೂರುಗಳಲ್ಲಿ ಎರಡು ದೂರುಗಳಿಗೆ ಪ್ರತಿಕ್ರಿಯೆ ನೀಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಅದರಲ್ಲಿ ಪ್ರಮುಖವಾಗಿ ಸೆಟಪ್ ಬಗ್ ಸಮಸ್ಯೆ. ಇದು ಆಪಲ್ ಅಧಿಕೃತವಾಗಿ ಪ್ರತಿಕ್ರಿಯಿಸಿದ 2 ದೂರುಗಳಲ್ಲಿ ಒಂದಾಗಿದೆ. ಈ ದೋಷ ಏನೆಂದರೆ ನೀವು ಹಳೆಯ ಐಫೋನ್‌ನಿಂದ ಡೇಟಾವನ್ನು ನೇರವಾಗಿ ವರ್ಗಾಯಿಸಲು ಮುಂದಾದಾಗ ಐಫೋನ್ 15 ಫ್ರೀಜ್ ಆಗುತ್ತದೆ.

ಈ ಸಮಸ್ಯೆಯನ್ನು ಸರಿಪಡಿಸಲು ಆಪಲ್ ಸಣ್ಣ ಫರ್ಮ್‌ವೇರ್ ನವೀಕರಣಗಳನ್ನು ನೀಡಿದೆ. ಅಂದರೆ iOS 17.0.1 ಮತ್ತು iOS 17.0.2 ಫರ್ಮ್‌ವೇರ್ ನವೀಕರಣಗಳನ್ನು ಬಿಡುಗಡೆ ಮಾಡಿದೆ. ನೀವು ಈ ನವೀಕರಣವನ್ನು ಸ್ವೀಕರಿಸಿದ್ದರೆ, ಸೆಟ್ಟಿಂಗ್‌ ವಿಭಾಗಕ್ಕೆ ಹೋಗಿ ಬಳಿಕ ಜನರಲ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ಬಳಿಕ ಸಾಫ್ಟ್‌ವೇರ್ ನವೀಕರಣ ವಿಭಾಗ ಕಾಣಿಸಿಕೊಳ್ಳಲಿದ್ದು, ಈ ಕೆಲಸ ಮಾಡಬಹುದು.

ಆಪಲ್‌ ಗ್ರಾಹಕರು ಮಾಡಿದ ಎರಡನೇ ದೂರು ಐಫೋನ್‌ 15 ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ಗೆ (iPhone 15 Pro, iPhone 15 Pro Max) ಸಂಬಂಧಿಸಿದೆ. ಈ ಸಂಬಂಧ ಎಕ್ಸ್ ನಲ್ಲಿ ಬಳಕೆದಾರರು ವರದಿ ಮಾಡಿದ್ದಾರೆ. ಎಕ್ಸ್‌ ಬಳಕೆದಾರ ಆಂಡ್ರ್ಯೂ ಕ್ಲೇರ್ ಸೇರಿದಂತೆ ಕೆಲವು ಗ್ರಾಹಕರು, ಪ್ರೊ ಮಾಡೆಲ್‌ಗಳ ಹೊಸ ಟೈಟಾನಿಯಂ ಫಿನಿಶ್ ಫಿಂಗರ್‌ಪ್ರಿಂಟ್ ಸ್ಮಡ್ಜ್‌ಗಳೇ ಕಾಣಿಸುತ್ತವೆ. ಇದು ಫೋನ್‌ನ ಅಂದವನ್ನೇ ಹಾಳು ಮಾಡುತ್ತದೆ ಎಂದು ಉಲ್ಲೇಖಿಸಲಾಗಿದೆ.

ಈ ಸಂಬಂಧ ಆಪಲ್‌ ಐಒಎಸ್ ಸೆಟ್ಟಿಂಗ್‌ಗಳಲ್ಲಿನ ದೋಷಕ್ಕೆ ಪ್ರತಿಕ್ರಿಯಿಸಿದ ರೀತಿಯಲ್ಲಿಯೇ ಈ ದೂರಿಗೂ ಪ್ರತಿಕ್ರಿಯಿಸಿದೆ. ನಿಮ್ಮ ಚರ್ಮದಲ್ಲಿನ ಎಣ್ಣೆಯು ಐಫೋನ್ 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್‌ನಲ್ಲಿನ ಹೊರಗಿನ ಬ್ಯಾಂಡ್‌ನ ಬಣ್ಣವನ್ನು ತಾತ್ಕಾಲಿಕವಾಗಿ ಬದಲಾದಂತೆ ಕಾಣುವಂತೆ ಮಾಡುತ್ತದೆ ಅಷ್ಟೇ ಎಂದು ಆಪಲ್ ಉಲ್ಲೇಖಿಸಿದೆ.

ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಯ ಟೈಟಾನಿಯಂ ಲೇಪನವನ್ನು ಹೊಳೆಯುವಂತೆ ಮಾಡಲು ಮೃದುವಾದ, ಸ್ವಲ್ಪ ತೇವ, ಲಿಂಟ್-ಮುಕ್ತ ಬಟ್ಟೆ ಬಳಕೆ ಮಾಡಿ ಕ್ಲೀನ್‌ ಮಾಡಿ ಎಂದು ಶಿಪಾರಸು ಮಾಡಲಾಗಿದೆ. ಇದು ಸಾಧ್ಯ ಇಲ್ಲ ಎಂದಾದರೆ ನಿಮ್ಮ ಈ ಫೋನ್‌ಗಳನ್ನು ಉತ್ತಮ ರಕ್ಷಣಾತ್ಮಕ ಕೇಸ್‌ನಲ್ಲಿ ಇರಿಸಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಆಪಲ್‌ ತಿಳಿಸಿದೆ.

ಮೂರನೇ ಸಮಸ್ಯೆ ಗುಣಮಟ್ಟದ ನಿಯಂತ್ರಣಕ್ಕೆ ಸಂಬಂಧಿಸಿದೆ. ಇಲ್ಲಿಯವರೆಗೆ ಈ ಸಮಸ್ಯೆಯು ಕೇವಲ ಸಾಕ್ಷ್ಯವನ್ನು ಆಧರಿಸಿದೆಯಷ್ಟೇ. ಅಂದರೆ ಈ ಬಗ್ಗೆ ಆಪಲ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಕೆಲವು ಜನಪ್ರಿಯ ಸಾಮಾಜಿಕ ಮಾಧ್ಯಮ ಟಿಪ್‌ಸ್ಟರ್‌ಗಳು ಮತ್ತು ರೆಡ್ಡಿಟ್ ಬಳಕೆದಾರರು ಮಾತ್ರ ವರದಿ ಮಾಡಿದ್ದಾರೆ. ಈ ಮೂಲಕ ಸಾಕಷ್ಟು ಜನರು ಬೆಚ್ಚಿಬಿದ್ದಿದ್ದಾರೆ.

ತರಾತುರಿಯಲ್ಲಿ ಐಫೋನ್‌ 15 ಖರೀದಿಸಿದ ಗ್ರಾಹಕರಿಗೆ ಶಾಕ್!

ಈ ದೂರುಗಳ ಪ್ರಕಾರ, ಹೊಸ ಫೋನ್ ಗಳಲ್ಲಿ ಅಂದರೆ ಐಫೋನ್‌ 15 ಪ್ರೊ ಮತ್ತು ಪ್ರೊ ಮ್ಯಾಕ್ಸ ಮಾದರಿಗಳು ಉತ್ಪಾದನಾ ದೋಷಗಳೊಂದಿಗೆ ಕಂಡು ಬಂದಿವೆಯಂತೆ. ಅಂದರೆ ಈ ಐಫೋನ್‌ಗಳ ಅಂಚುಗಳೊಂದಿಗೆ ಡಿಸ್‌ಪ್ಲೇಯನ್ನು ಸರಿಯಾಗಿ ಜೋಡಿಸಿಲ್ಲವಂತೆ. ಜೊತೆಗೆ ಟೆಲಿಫೋಟೋ ಕ್ಯಾಮರಾ ಲೆನ್ಸ್ ಒಳಗೆ ಧೂಳು ಮತ್ತು ಕಾಸ್ಮೆಟಿಕ್ ಹಾನಿ ಕಾಣಿಸಿಕೊಂಡಿದೆ ಎಂದು ದೂರಿದ್ದಾರೆ. ಆದರೆ, ಈವರೆಗೂ ಈ ಸಂಬಂಧ ಆಪಲ್‌ ಪ್ರತಿಕ್ರಿಯೆ ನೀಡಿಲ್ಲ.

Best Mobiles in India

English summary
Some of the customers who have already purchased the iPhone 15 have expressed their appreciation while others have expressed their frustration. Because some customers have reported 3 major issues with iPhone 15 series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+