ಆಪಲ್‌ನ ಹೊಸ 'ಐಫೋಡ್‌ ಟಚ್' ಲಾಂಚ್‌ ; 256GB ಸ್ಟೋರೇಜ್‌ ಬಲ!

|

ಆಪಲ್‌ ಸಂಸ್ಥೆಯ ಐಫೋನ್‌ ಸೇರಿದಂತೆ ಇತರೆ ಸ್ಮಾರ್ಟ್‌ ಉತ್ಪನ್ನಗಳು ಎಂದರೇ ಎಲ್ಲರಿಗೂ ಇಷ್ಟ. ಅವುಗಳಲ್ಲಿ ಕಂಪನಿಯ ಐಫೋಡ್‌ ಡಿವೈಸ್‌ಗಳು ಸಹ ಭಾರಿ ಟ್ರೆಂಡ್‌ ಸೃಷ್ಠಿಸಿವೆ. 2015ರಲ್ಲಿ ಐಫೋಡ್‌ ಟಚ್‌ ಹೆಸರಿನಲ್ಲಿ ಐಫೋಡ್‌ ಪರಿಚಯಿಸಿತ್ತು, ಕಂಪನಿಯು ಇದೀಗ ಅದೇ ಮಾದರಿಯ ಐಫೋಡ್‌ ಅನ್ನು ಮತ್ತಷ್ಟು ಅಪ್‌ಡೇಟ್‌ ಮಾಡಿ ಅದರ ಸ್ಟೋರೇಜ್‌ ಸಾಮರ್ಥ್ಯವನ್ನು ಹೆಚ್ಚಿಸಿ ಬಿಡುಗಡೆ ಮಾಡಿದೆ.

ಆಪಲ್‌ನ ಹೊಸ 'ಐಫೋಡ್‌ ಟಚ್' ಲಾಂಚ್‌ ; 256GB ಸ್ಟೋರೇಜ್‌ ಬಲ!

ಹೌದು, ಆಪಲ್‌ ಕಂಪನಿಯು ತನ್ನ ಐಫೋಡ್‌ ಟಚ್‌ನ ಹೊಸ ಅವತರಣಿಕೆಯನ್ನು ರಿಲೀಸ್‌ ಮಾಡಿದ್ದು, ಈ ಐಫೋಡ್‌ನಲ್ಲಿ 256GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯವನ್ನು ಒದಗಿಸಲಾಗಿದೆ. ಇದು ಹೊಸ ಅಪ್‌ಡೇಟ್‌ ವರ್ಷನ್‌ನ ಪ್ರಮುಖ ಆಕರ್ಷಣೆ ಆಗಿದೆ. ಇದರೊಂದಿಗೆ 16nm A10 ಫ್ಯೂಶನ್‌ SoC ಪ್ರೊಸೆಸರ್ ಐಫೋಡ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಭಾರತದಲ್ಲಿ ಈ ಐಫೋಡ್‌ ಡಿವೈಸ್‌ನ ಆರಂಭಿಕ ಬೆಲೆಯು 18,900ರೂ.ಗಳು ಆಗಿದೆ.

ಆಪಲ್‌ನ ಹೊಸ 'ಐಫೋಡ್‌ ಟಚ್' ಲಾಂಚ್‌ ; 256GB ಸ್ಟೋರೇಜ್‌ ಬಲ!

ಆಪಲ್‌ನ ಫ್ಯೂಸನ್‌ ಪ್ರೊಸೆಸರ್‌ ಅತ್ಯುತ್ತಮ ಫೀಚರ್ಸ್‌ಗಳಿಗೆ ಬೆಂಬಲ ನೀಡಲಿದ್ದು, ಫೇಸ್‌ಟೈಮ್‌ ಕಾಲ್, ಆಪಲ್‌ ARಕಿಟ್‌, ಮತ್ತು AR ಆಪ್‌ಗಳನ್ನು ಒಳಗೊಂಡಿರಲಿದೆ. ಹಾಗೆಯೇ ಈ ಪ್ರೊಸೆಸರ್ ವೇಗದ ಕಾರ್ಯನಿರ್ವಣೆಗೆ ಬೆಂಬಲ ನೀಡಲಿದ್ದು, ಗ್ರಾಫಿಕ್‌ ಸಹ ಅತ್ಯುತ್ತಮವಾಗಿರಲಿದೆ. ಹಾಗಾದರೇ ಆಪಲ್‌ ಐಫೋಡ್‌ ಟಚ್‌ ಇನ್ನಿತರೆ ಏನೆಲ್ಲಾ ಸ್ಪೆಷಿಲ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸೈನ್‌

ಡಿಸೈನ್‌

ಅಪ್‌ಡೇಟ್‌ ಆಗಿರುವ ಹೊಸ ಆಪಲ್‌ ಐಫೋಡ್‌ ಟಚ್‌ ಬಾಹ್ಯ ನೋಟವು ಆಕರ್ಷಕವಾಗಿದ್ದು, (ಅಲ್ಟ್ರಾ ಥೀನ್) ತೆಳುವಾದ ರಚನೆಯೊಂದಿಗೆ ತುಂಬಾ ಹಗುರವಾಗಿಯೂ ಇದೆ. ಈ ಐಫೋಡ್‌ ಗೇಮಿಂಗ್‌ ಮತ್ತು ಮ್ಯೂಸಿಕ್‌ ಸೇರಿದಂತೆ ಮನರಂಜನೆಗೆ ಪೂರಕವಾಗಿದ್ದು, ಹಿಂಭಾಗದಲ್ಲಿ ಕ್ಯಾಮೆರಾ ಮತ್ತು ಎಲ್‌ಇಡಿ ಲೈಟ್‌ ನೀಡಲಾಗಿದೆ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಆಪಲ್‌ ಐಫೋಡ್‌ ಟಚ್‌ ಡಿವೈಸ್‌ 1136×640 ಪಿಕ್ಸಲ್‌ ರಸಲ್ಯೂಶನ್‌ ಸಾಮರ್ಥ್ಯ ದೊಂದಿಗೆ 4 ಇಂಚಿನ ರೇಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಹೆಚ್ಚು ಪ್ರಖರತೆಯಿಂದ ಕೂಡಿದ್ದು, ಸ್ಕ್ರೀನಿನ್‌ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 326ppi ಆಗಿದೆ. ಡಿಸ್‌ಪ್ಲೇಯ ಕೆಳಭಾಗದಲ್ಲಿ ಹೋಮ್‌ ಬಟನ್‌ ನೀಡಲಾಗಿದೆ.

ಪ್ರೊಸೆಸರ್ ಶಕ್ತಿ

ಪ್ರೊಸೆಸರ್ ಶಕ್ತಿ

ಈ ಐಫೋಡ್‌ನಲ್ಲಿ 16nm A10 ಫ್ಯೂಶನ್‌ SoC ಪ್ರೊಸೆಸರ್ ಕಾರ್ಯನಿರ್ವಹಿಸಲಿದೆ. ಇದು ಸಿಪಿಯು ಮಾದರಿಗಿಂತ ಎರಡುಪಟ್ಟು ಹೆಚ್ಚಿನ ವೇಗದಲ್ಲಿ ಕೆಲಸನಿರ್ವಹಿಸಲಿದ್ದು, ಹಾಗೆಯೇ ಗ್ರಾಫಿಕ್ಸ್‌ ಸಹ ವೇಗದಲ್ಲಿರಲಿದೆ. ಈ ಪ್ರೊಸೆಸರ್ ಕಂಪನಿಯ ಫೇಸ್‌ಟೈಮ್‌ ಫೀಚರ್‌ಗೆ ಬೆಂಬಲ ನೀಡಲಿದ್ದು, ಜತೆಗೆ ಹಲವು ಅತ್ಯುತ್ತಮ ಆಪ್‌ಗಳಿಗೂ ಪೂಕರವಾಗಿದೆ.

ಕ್ಯಾಮೆರಾ

ಕ್ಯಾಮೆರಾ

8 ಮೆಗಾಪಿಕ್ಸಲ್ ಕ್ಯಾಮೆರಾವನ್ನು ಹೊಂದಿದ್ದು, f/2.4 ಅಪರ್ಚರ್‌ ಆಗಿದೆ. ಈ ಕ್ಯಾಮೆರಾವು ಸಂಪೂರ್ಣ ಎಚ್‌ಡಿ ವಿಡಿಯೊ ರೆಕಾರ್ಡಿಂಗ್‌ ಬೆಂಬಲ ಪಡೆದಿದ್ದು, 120fps ಸಾಮರ್ಥ್ಯದಲ್ಲಿ ಸ್ಲೋ ಮೋಷನ್‌ ವಿಡಿಯೊ ಸೆರೆಹಿಡಿಯುವ ಆಯ್ಕೆಯನ್ನು ಹೊಂದಿದೆ. ಮುಂಬದಿಯಲ್ಲಿ ಸೆಲ್ಫಿಗಾಗಿ 1.2ಮೆಗಾಪಿಕ್ಸಲ್ ಕ್ಯಾಮೆರಾವನ್ನು ಒದಗಿಸಲಾಗಿದ್ದು, ಇದು ಸಹ ಉತ್ತಮ ವಿಡಿಯೊ ರೆಕಾರ್ಡಿಂಗ್‌ಗೆ ಬೆಂಬಲ ನೀಡಲಿದೆ.

ಬೆಲೆ ಮತ್ತು ವೇರಿಯಂಟ್ಸ್‌

ಬೆಲೆ ಮತ್ತು ವೇರಿಯಂಟ್ಸ್‌

ಆಪಲ್‌ ಐಫೋಡ್‌ ಟಚ್‌ ಇದೀಗ ಬಿಡುಗಡೆ ಆಗಿದ್ದು, ಮೂರು ವೇರಿಯಂಟ್‌ ಮಾದರಿಗಳ ಆಯ್ಕೆಯಲ್ಲಿ ದೊರೆಯಲಿವೆ. 32GB ಸ್ಟೋರೇಜ್‌ ವೇರಿಯಂಟ್‌ ಬೆಲೆ 18,900ರೂ, 128GB ಸ್ಟೋರೇಜ್‌ ವೇರಿಯಂಟ್‌ ಬೆಲೆ 28,900ರೂ ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಬೆಲೆ 38,900ರೂ.ಗಳು ಆಗಿದೆ.

Best Mobiles in India

English summary
Apple iPod touch with A10 Fusion SoC, up to 256GB storage launched; price in India starts at Rs 18,900.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X