ಐಫೋನ್ ಪ್ರಿಯರು ಖುಷಿಯಾಗೋದು ಗ್ಯಾರಂಟಿ; ನೀವು ಇದನ್ನು ನಿರೀಕ್ಷಿಸಿರಲ್ಲ ಬಿಡಿ!
ಟೆಕ್ ದೈತ್ಯ ಎನಿಸಿರುವ ಆಪಲ್ ಸಂಸ್ಥೆಯು ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಡಿಮ್ಯಾಂಡ್ ಹೊಂದಿದೆ. ಸಂಸ್ಥೆಯು ತನ್ನ ಪ್ರತಿ ಹೊಸ ಐಫೋನ್ ಸರಣಿಯಲ್ಲಿ ಹೆಚ್ಚಿನ ಸೆಕ್ಯುರಿಟಿ ಆಯ್ಕೆಗಳು ಸೇರಿದಂತೆ ಇತರೆ ಆಕರ್ಷಕ ಫೀಚರ್ಸ್‌ಗಳ ಮೂಲಕ ಗ್ರಾಹಕರ ನಿರೀಕ್ಷೆ ಹೆಚ್ಚಿಸುತ್ತಾ ಸಾಗಿದೆ. ಆದರೆ ಆಪಲ್ ಸಂಸ್ಥೆಯ ಈ ಹೊಸ ಸುದ್ದಿ ತಿಳಿದ್ರೆ, ಅಂತೂ ಬರೋಕೆ ರೆಡಿ ಆಯ್ತಾ ಈ ಐಫೋನ್ ಎಂದು ನೀವು ಖಂಡಿತಾ ಖುಷಿ ಆಗ್ತೀರಾ!
ಹೌದು, ಆಪಲ್ ಸಂಸ್ಥೆಯು ಇದೀಗ ಫೋಲ್ಡೆಬಲ್ ಐಫೋನ್ (foldble iPhone) aಪರಿಚಯಿಸಲು ಸಜ್ಜಾಗುತ್ತಿದ್ದು, ಮುಂಬರುವ 2026 ರ ದ್ವಿತೀಯಾರ್ಧದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಮಾರುಕಟ್ಟೆಯಲ್ಲಿ ಫೋಲ್ಡೆಬಲ್ ಮೊಬೈಲ್‌ಗಳು ಹೇಳಿಕೊಳ್ಳುವಂತಹ ವೇಗದ ಬೆಳವಣಿಗೆಯೇನು ಕಂಡಿಲ್ಲ. ಅದಾಗ್ಯೂ, ಆಪಲ್ ಮಡಚಬಹುದಾದ ಐಫೋನ್‌ನತ್ತ ಚಿತ್ತ ಹರಿಸಿದೆ.

ಈಗಾಗಲೇ ಸ್ಯಾಮ್‌ಸಂಗ್, ಹುವಾವೇ, ಒನ್‌ಪ್ಲಸ್ ಹಾಗೂ ಮೊಟೊರೊಲಾ ಸಂಸ್ಥೆಗಳು ತಮ್ಮ ಫೋಲ್ಡೆಬಲ್ ಮೊಬೈಲ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿ, ಗುರುತಿಸಿಕೊಂಡಿವೆ. ಇನ್ನು ಫೋಲ್ಡೆಬಲ್ ಮೊಬೈಲ್‌ಗಳ ವಿಭಾಗದಲ್ಲಿ ಸ್ಯಾಮ್‌ಸಂಗ್ ಸಂಸ್ಥೆಯು ಪ್ರಮುಖ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈಗ ಈ ವಿಭಾಗಕ್ಕೆ ಆಪಲ್ ಲಗ್ಗೆ ಇಡುತ್ತಿರುವುದು ಗ್ರಾಹಕರನ್ನು ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.
ಇನ್ನು ಬರಲಿರುವ ಆಪಲ್ ಫೋಲ್ಡೆಬಲ್ ಐಫೋನ್ (Apple foldble iPhone) ಡಿವೈಸ್ ಪವರ್‌ಫುಲ್ ಚಿಪ್‌ಸೆಟ್ ಪ್ರೊಸೆಸರ್, ಹೈ ಎಂಡ್ ಮಾದರಿಯ ಕ್ಯಾಮೆರಾಗಳು ಮತ್ತು ಪ್ರಬಲ ಹಾರ್ಡ್‌ವೇರ್ ಫೀಚರ್ಸ್‌ಗಳನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ. ಹಾಗೆಯೇ ಸಂಸ್ಥೆಯ ಇತ್ತೀಚಿನ iOS ಪಡೆದಿರುವ ಸಾಧ್ಯತೆಗಳು ಇದೆ. ಅದರೊಂದಿಗೆ ಐಕ್ಲೌಡ್, ಆಪಲ್ ಪೇ ಹಾಗೂ ಆಪಲ್ ಮ್ಯೂಸಿಕ್ ಗಳಂತಹ ಇತರೆ ಆಪಲ್‌ನ ಸೇವೆಗಳ ಸೌಲಭ್ಯ ಕೂಡಾ ಪಡೆದಿರಲಿದೆ.
ಅಂದಹಾಗೆ ಇತ್ತೀಚಿನ ಐಫೋನ್ 16 ( iPhone 16 ) ಸರಣಿಯು ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಮಾಡೆಲ್‌ಗಳನ್ನು ಒಳಗೊಂಡಿದೆ. ಆರಂಭಿಕ ಐಫೋನ್ 16 ಮಾಡೆಲ್ ಸಹ ಗ್ರಾಹಕರ ಗಮನ ಸೆಳದಿದೆ. ಈ ಐಫೋನ್ 6.7 ಇಂಚಿನ ರೇಟಿನಾ XDR ಡಿಸ್‌ಪ್ಲೇ ರಚನೆ ಅನ್ನು ಪಡೆದುಕೊಂಡಿದೆ. ಹಾಗೆಯೇ ಇದು A18 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಈ ಚಿಪ್‌ಸೆಟ್ ಎರಡು ಪಟ್ಟು ವೇಗದ ನ್ಯೂರಲ್ ಎಂಜಿನ್ ಹಾಗೂ 17 ಪ್ರತಿಶತ ಹೆಚ್ಚು ಬ್ಯಾಂಡ್‌ವಿಡ್ತ್ ಪಡೆದಿದೆ.
ಇದಲ್ಲದೇ ಆಪಲ್ ಐಫೋನ್ 16 ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮೊದಲ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಇದು ಇದರೊಂದಿಗೆ 12 ಮೆಗಾ ಪಿಕ್ಸಲ್‌ನ ಟೆಲಿಫೋಟೋ ಲೆನ್ಸ್ ಸಹ ಪಡೆದಿದೆ. ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ಕೆಲಸ ನಿರ್ವಹಿಸಲಿದೆ. ಇದು ಮ್ಯಾಕ್ರೋ ಫೋಟೋಗ್ರಫಿಯನ್ನು ಸಪೋರ್ಟ್ ಮಾಡುತ್ತದೆ.
ಅಂದಾಹಗೆ ಈ ಐಫೋನ್ (Apple iPhone 16) 128 GB ಹಾಗೂ 256 GB ವೇರಿಯಂಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗೆಯೇ ಆಪಲ್ ಐಫೋನ್ 16 ಹಾಗೂ ಐಫೋನ್ 16 ಪ್ಲಸ್ ಮೊಬೈಲ್ ತನ್ನ ಈ ಹಿಂದಿನ ಸರಣಿಗಿಂತ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದು ಐಫೋನ್ ಪ್ರಿಯರ ಗಮನ ಸೆಳೆದಿದೆ.


Click it and Unblock the Notifications








