ನಿಜಕ್ಕೂ ಇದು ಅಚ್ಚರಿ!.ಇನ್ಮುಂದೆ ನಿಮ್ಮ iPhone ಅನ್ನು ಹೀಗೂ ಅನ್‌ಲಾಕ್ ಮಾಡಬಹುದು!
ಆಪಲ್ ಐಫೋನ್ ಬಳಕೆದಾರರಿಗೆ ಟಚ್ ಐಡಿ, ಫಿಂಗರ್‌ಪ್ರಿಂಟ್ ಸೆನ್ಸರ್ ನಂತಹ ಆಯ್ಕೆಗಳು ಈಗಾಗಲೇ ಹಳೆಯದೆನಿಸಿದ್ದು, ಅಲ್ಲದೇ ಫೇಸ್ ಐಡಿ ಕೂಡಾ ಮರೆಯಾಗುವ ಕಾಲ ಬಂದೇ ಬಿಟ್ಟಿದೆ. ಅರೇ ಇದೇನಿದು ಅಂತೀರಾ.. ಹೌದು ಆಪಲ್ ಐಫೋನ್‌ಗಳಲ್ಲಿ ಇನ್ಮುಂದೆ ಹೃದಯದ ಬಡಿತದ (heartbeat) ಮೂಲಕ ಫೋನ್ ಅನ್ನು ಅನ್‌ಲಾಕ್ ಮಾಡುವ ವಿಶೇಷ ಸೌಲಭ್ಯ ಸೇರ್ಪಡೆ ಆಗಲಿದೆ ಎಂದು ವರದಿಯಾಗಿದೆ. ಈ ವಿಶೇಷ ಫೀಚರ್ ಐಫೋನ್ ಬಳಕೆದಾರರಿಗೆ ಖುಷಿ ಜೊತೆಗೆ ಅಚ್ಚರಿ ಸಹ ಮೂಡಿಸಿದೆ.
ನಿಮ್ಮ ಮೊಬೈಲ್ ಅನ್ನು ಅನ್‌ಲಾಕ್ ಮಾಡಲು ನೀವು ಪಾಸ್‌ವರ್ಡ್, ಪಿನ್, ಟಚ್ ಐಡಿ, ಫೇಸ್ ಐಡಿ ಮತ್ತು ಫಿಂಗರ್‌ಪ್ರಿಂಟ್ ಸೆನ್ಸರ್‌ನಂತಹ ವಿಭಿನ್ನ ವಿಧಾನಗಳನ್ನು ಬಳಕೆ ಮಾಡಿರಬಹುದು. ಇವುಗಳಿಗೆ ಹೊರತಾಗಿ ಆಪಲ್ (Apple) ಐಫೋನ್ ತನ್ನ ಡಿವೈಸ್‌ಗಳಿಗೆ ಹೊಸ ಬಯೋಮೆಟ್ರಿಕ್ ಫೀಚರ್ ಅನ್ನು ಪರೀಕ್ಷಿಸುತ್ತಿದೆ, ಅದುವೇ ಹೃದಯದ ಬಡಿತದ (heartbeat) ಮೂಲಕ ಫೋನ್ ಅನ್ನು ಅನ್‌ಲಾಕ್. ಉದಾಹರಣೆಗೆ - iPhone ಮತ್ತು Mac ಡಿವೈಸ್ ಅನ್ನು ಅನ್‌ಲಾಕ್ ಮಾಡಲು ನಿಮ್ಮ ಹೃದಯ ಬಡಿತವನ್ನು ಬಳೆಸುವುದು.

ECG ಆಧಾರಿತ ಬಯೋಮೆಟ್ರಿಕ್ ಫೀಚರ್
ಆಪಲ್ ಐಫೋನ್ (Apple iPhone), ಐಪ್ಯಾಡ್ (iPad) ಮತ್ತು ಮ್ಯಾಕ್ (Mac) ಸೇರಿದಂತೆ ತನ್ನ ಡಿವೈಸ್‌ಗಳಿಗೆ ECG (ಎಲೆಕ್ಟ್ರೋಕಾರ್ಡಿಯೋಗ್ರಾಮ್) ಬಯೋಮೆಟ್ರಿಕ್ ಫೀಚರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ವರದಿ ಆಗಿದೆ. ಈ ಫೀಚರ್ ಬಳಕೆದಾರರ ಹೃದಯ ಬಡಿತಗಳ ವಿಶಿಷ್ಟ ಲಯವನ್ನು ಆಧರಿಸಿದೆ ಹಾಗೂ ಬಳಕೆದಾರರ ಹೃದಯದ ಲಯ ಹೊಂದಿಕೆಯಾದಾಗ ನಿಮ್ಮ ಫೋನ್ / ಡಿವೈಸ್ ಅನ್‌ಲಾಕ್ ಆಗುತ್ತದೆ.
ಹೃದಯ ಬಡಿತದ ಮೂಲಕ ಫೋನ್ ಅನ್‌ಲಾಕ್
ಪ್ರತಿಯೊಬ್ಬ ವ್ಯಕ್ತಿಯ ಹೃದಯ ಬಡಿತವು ಫಿಂಗರ್‌ಪ್ರಿಂಟ್ ಅಥವಾ ಬಯೋಮೆಟ್ರಿಕ್ ಸೆನ್ಸಾರ್ ನಂತೆಯೇ ವಿಶೇಷವಾದ ಲಯವನ್ನು ಹೊಂದಿರುತ್ತದೆ. ಆಪಲ್ ವಾಚ್‌ನಲ್ಲಿ ಇಸಿಜಿ (ECG) ಅಪ್ಲಿಕೇಶನ್ ಅನ್ನು ಬಳಸುವ ಮೂಲಕ, ಆಪಲ್ ಹೃದಯ ಬಡಿತಗಳ ಲಯ ವನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ಅದನ್ನು ಬಳಕೆದಾರರ ಗುರುತಿನ ರೂಪವಾಗಿ ಬಳಕೆ ಮಾಡಬಹುದು.
ಆಪಲ್ ವಾಚ್ ಜೊತೆಗೆ ಏಕೀಕರಣ
ಬಳಕೆದಾರರು ತಮ್ಮ ಆಪಲ್ ವಾಚ್ (Apple Watch) ಅನ್ನು ನಿಮ್ಮ ಐಫೋನ್ (iPhone) ಅಥವಾ ಇತರ ಆಪಲ್ ಡಿವೈಸ್‌ಗಳ ಜೊತೆಗೆ ಜೋಡಿಸಿದಾಗ ಈ ಹೊಸ ತಂತ್ರಜ್ಞಾನವು ಕೆಲಸ ಮಾಡುತ್ತದೆ. ಆಪಲ್ ವಾಚ್ ಧರಿಸಿರುವ ಬಳಕೆದಾರರು ಇಸಿಜಿ (ECG) ಆಪ್ ಮೂಲಕ ತಮ್ಮ ಹೃದಯ ಬಡಿತದ ಲಯವನ್ನು ಬಳಸಿಕೊಂಡು ತಮ್ಮ ಡಿವೈಸ್‌ಗಳ ಅನ್‌ಲಾಕ್ ಮಾಡಲು ಸಾಧ್ಯವಾಗುತ್ತದೆ.
ಸುಧಾರಿತ ಸೆಕ್ಯುರಿಟಿ
ಈ ನೂತನ ತಂತ್ರಜ್ಞಾನವು iPhone, iPad ಮತ್ತು Mac ಬಳಕೆದಾರರಿಗೆ ಸೆಕ್ಯುರಿಟಿಯ ಹೆಚ್ಚುವರಿ ಸ್ಕ್ರೀನ್ ಅನ್ನು ಒದಗಿಸುತ್ತದೆ. ಫೇಸ್ ಅನ್‌ಲಾಕ್, ಫಿಂಗರ್‌ಪ್ರಿಂಟ್ ಮತ್ತು ಪಾಸ್‌ವರ್ಡ್ ಜೊತೆಗೆ, ಬಳಕೆದಾರರು ತಮ್ಮ ಹೃದಯ ಬಡಿತದ ಲಯವನ್ನು ಬಳಸಿಕೊಂಡು ತಮ್ಮ ಡಿವೈಸ್‌ಗಳ ಅನ್‌ಲಾಕ್ ಮಾಡಬಹುದು. ಆದಾಗ್ಯೂ, ಈ ನೂತನ ತಂತ್ರಜ್ಞಾನವು ವಾಣಿಜ್ಯಿಕ ವಾಗಿ ಯಾವಾಗ ಲಭ್ಯವಾಗುತ್ತದೆ ಎಂಬುದರ ಕುರಿತು ಇನ್ನು ಯಾವುದೇ ಅಧಿಕೃತ ಮಾಹಿತಿ ದೊರೆತ್ತಿಲ್ಲ.
ಆಪಲ್ (Apple) ಕಂಪನಿಯ ಐಫೋನ್ 15 ಮತ್ತು ಐಫೋನ್ 14 ಸೇರಿದಂತೆ ಇತರೆ ಕೆಲವು ಐಫೋನ್ ಮಾಡೆಲ್‌ಗಳು ಜನಪ್ರಿಯ ಅಮೆಜಾನ್ ವೆಬ್‌ಸೈಟ್ ಹಾಗೂ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಗಳಲ್ಲಿ ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications








