ಬೆಂಗಳೂರಿನಲ್ಲಿ ಭರ್ಜರಿ ಜಾಬ್ ಆಫರ್ ನೀಡಿದ ಆಪಲ್ !!

Written By:

ಜಗತ್ತಿನ ನಂಬರ್ ಒನ್ ಸ್ಮಾರ್ಟ್‌ಫೋನ್‌ ಕಂಪೆನಿ ಆಪಲ್ ಬೆಂಗಳೂರಿನಲ್ಲಿ ಜಾಬ್ ಆಫರ್ ಪ್ರಕಟಿಸಿದೆ. ಇದೀಗ ಬೆಂಗಳೂರಿನಲ್ಲಿಯೇ ಮೊಬೈಲ್ ತಯಾರಿಕಾ ಕಂಪೆನಿಯನ್ನು ಆರಂಭಿಸುತ್ತಿರುವ ಆಪಲ್ ನೂತನ ನೌಕರರಿಗಾಗಿ ಹಲವಾರು ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದೆ.

ಭಾರತಕ್ಕೆ ಅವಶ್ಯಕತೆ ಇರುವಷ್ಟು ಐಫೋನ್‌ಗಳನ್ನು ಬೆಂಗಳೂರಿನಲ್ಲಿಯೇ ತಯಾರಿಸಲು ಆಪಲ್ ಕಂಪೆನಿ ಮುಂದಾಗಿದ್ದು, ಬೆಂಗಳೂರು ಕಂಪೆನಿಯ ಕಾರ್ಯಾಚರಣೆಗಾಗಿ ಸಾಕಷ್ಟು ಮಾನವಸಂಪನ್ಮೂಲಕ್ಕೆ ಬೇಡಿಕೆ ಹೊಂದಿದೆ.

ಬೆಂಗಳೂರಿನಲ್ಲಿ ಭರ್ಜರಿ ಜಾಬ್ ಆಫರ್ ನೀಡಿದ ಆಪಲ್ !!

ಓದಿರಿ: ಈ ಆಪ್ ಇದ್ದರೆ ಸ್ಮಾರ್ಟ್‌ಫೋನ್ ಕಳೆದುಹೋಗಲು ಸಾಧ್ಯವೇ ಇಲ್ಲ!!

ಮೇ ತಿಂಗಳ ಮೊದಲವಾರದಲ್ಲಿ ಆಪಲ್ ಕಂಪೆನಿ ಭಾರತದಲ್ಲಿ ಮೊಬೈಲ್ ತಯಾರಿಕೆಯನ್ನು ಆರಂಭಿಸುತ್ತಿದ್ದು, ಟೆಸ್ಟ್ ಎಂಜಿನಿಯರ್, ಸೋಶಿಯಲ್ ಮಾರ್ಕೆಟಿಂಗ್ ಮತ್ತು ಮಾರ್ಕೆಟಿಂಗ್ ವಿಭಾಗಗಳಿಗೆ ಸೇರಿದಂತೆ 200ಕ್ಕೂ ಹೆಚ್ಚು ಉಧ್ಯೋಗಗಳಿಗೆ ಅರ್ಜಿ ಆಹ್ವಾನಿಸಿದೆ.

ಬೆಂಗಳೂರಿನಲ್ಲಿ ಭರ್ಜರಿ ಜಾಬ್ ಆಫರ್ ನೀಡಿದ ಆಪಲ್ !!

BE, MBA ಮತ್ತು BTech ಮಾಡಿರುವ ಅನುಭವಿ ಉದ್ಯೋಗಿಗಳಿಗೆ ಆಪಲ್ ಬೇಡಿಕೆ ಹೊಂದಿದ್ದು, ಬೆಂಗಳೂರಿನ ಆಪಲ್‌ ಕಂಪೆನಿಯಲ್ಲಿ ಉದ್ಯೋಗ ಮಾಡಲು ಇಚ್ಚಿಸುವವರು ಆಪಲ್ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.!! ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ. https://jobs.apple.com

English summary
ಬೆಂಗಳೂರಿನಲ್ಲಿಯೇ ಮೊಬೈಲ್ ತಯಾರಿಕಾ ಕಂಪೆನಿಯನ್ನು ಆರಂಭಿಸುತ್ತಿರುವ ಆಪಲ್ ನೂತನ ನೌಕರರಿಗಾಗಿ ಹಲವಾರು ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದೆ.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot