ಈ ಆಪ್ ಇದ್ದರೆ ಸ್ಮಾರ್ಟ್‌ಫೋನ್ ಕಳೆದುಹೋಗಲು ಸಾಧ್ಯವೇ ಇಲ್ಲ!!

ಕಳೆದುಹೋದ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿ ಮರಳಿ ಪಡೆಯುವ ಹಾಗೂ ಅದರಲ್ಲಿನ ದಾಖಲೆಗಳನ್ನು ಕಳ್ಳರು ಕದಿಯಲು ಸಾಧ್ಯವಿಲ್ಲದಂತಹ ಆಪ್ ಒಂದು ಬೆಂಗಳೂರಲ್ಲಿ ಬಿಡುಗಡೆಯಾಗಿದೆ.

|

ಆನ್‍ಲೈನ್ ಬ್ಯಾಂಕಿಂಗ್, ಕಾಟ್ಯಾಕ್ಟ್, ಫೇಸ್‌ಬುಕ್ ಮಾಹಿತಿ ಹೊತ್ತಿರುವ ಸ್ಮಾರ್ಟ್‌ಫೋನ್ ಕಳೆದು ಹೋದರೆ ಅಥವಾ ಯಾರಾದರೂ ಕಳ್ಳತನ ಮಾಡಿದರೆ ಆಗುವ ನೋವು ನನ್ನ ಶತ್ರುವಿಗೂ ಬೇಡ ಎಂಬ ಗಾದೆಯೇ ಹುಟ್ಟಿದೆ. ಇದರ ಜೊತೆಯಲ್ಲಿಯೇ ಬೆಂಗಳೂರಿನಲ್ಲಿಯೇ ಇದಕ್ಕೆ ಪರಿಹಾರವೂ ಸಿಕ್ಕಿದೆ.!!

ಹೌದು, ಕಳೆದುಹೋದ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿ ಮರಳಿ ಪಡೆಯುವ ಹಾಗೂ ಅದರಲ್ಲಿನ ದಾಖಲೆಗಳನ್ನು ಕಳ್ಳರು ಕದಿಯಲು ಸಾಧ್ಯವಿಲ್ಲದಂತಹ ಆಪ್ ಒಂದು ಬೆಂಗಳೂರಲ್ಲಿ ಬಿಡುಗಡೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಆಪ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.!!

ಓದಿರಿ: ಜಿಯೋ DTH ಬೆಲೆ ಎಷ್ಟು..ಎಷ್ಟು ಚಾನೆಲ್..ಆನ್‌ಲೈನ್‌ ಬುಕ್ಕಿಂಗ್ ಹೇಗೆ? ಫುಲ್ ಡೀಟೆಲ್ಸ್ ಇಲ್ಲಿದೆ.!!

ಕಳೆದುಹೋದ ಮೊಬೈಲ್ ಲಾಕ್ ತೆರೆಯಲು ಪ್ರಯತ್ನಿಸುವವರ ಚಿತ್ರವನ್ನು ತೆಗೆಯುವ ಮತ್ತು ಲಾಕ್ ತೆರೆಯುವವರ ಸ್ಥಳವನ್ನು ದಾಖಲಿಸಿಕೊಳ್ಳುವ ಈ ಆಪ್ ಬೇರೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

 ಆಪ್ ಯಾವುದು?

ಆಪ್ ಯಾವುದು?

ಈಸಿ-ಸೆಕ್ಯೂರ್ ಹೆಸರಿನ ಸೆಕ್ಯುರಿಟಿ ಆಪ್ ಬಿಡುಗಡೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಆಪ್ ಈಗಾಗಲೇ ಟ್ರೆಂಡ್ ಆಗಿದೆ.ಸ್ಮಾರ್ಟ್‌ಫೋನ್ ಹೆಚ್ಚು ಸುರಕ್ಷಿತವಾಗಿರಿಸಲು ಅತ್ಯುತ್ತಮ ಆಪ್ ಇದಾಗಿದೆ.!!

ಚಿತ್ರ ತೆಗೆದು ಸೆಂಡ್ ಮಾಡುತ್ತದೆ.!!

ಚಿತ್ರ ತೆಗೆದು ಸೆಂಡ್ ಮಾಡುತ್ತದೆ.!!

ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಲಾಕ್ ತೆರೆಯಲು ಪ್ರಯತ್ನಿಸುವವರ ಚಿತ್ರ ತೆಗೆದು ನಿಮ್ಮ ನೊಂದಾಯಿತ ಮೇಲ್‌ಗೆ ಸೆಂಡ್ ಮಾಡುವ ಅತ್ಯಾಧುನಿಕ ತಂತ್ರಜ್ಞಾನವನ್ನು ಆಪ್ ಹೊಂದಿದೆ. ಹಾಗಾಘಿ ಕಳ್ಳರನ್ನು ಸುಲಭವಾಗಿ ಹಿಡಿಯಬಹುದಾಗಿದೆ.!!

ದಾಖಲೆಗಳು ಅಳಿಸಿಹಾಕುತ್ತದೆ.!!

ದಾಖಲೆಗಳು ಅಳಿಸಿಹಾಕುತ್ತದೆ.!!

ಮೊಬೈಲ್ ಲಾಕ್ ಆಗಿರದಿದೆ ಸಿಮ್ ಕಾರ್ಡ್ ಬದಲಿಸಿ ಬೇರೆ ಸಿಮ್ ಅಳವಡಿಸಿಕೊಂಡರೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಹೊಸದಾಗಿ ಬಳಸುತ್ತಿರುವ ಫೊನ್ ಸಂಖ್ಯೆ ರವಾನೆಯಾಗುತ್ತದೆ. ಜೊತೆಗೆ ನೋಂದಾಯಿಸಿಕೊಂಡ ಕೋಡ್ ಸಂಖ್ಯೆ ಮೂಲಕ ಮೊಬೈಲ್‍ನಲ್ಲಿರುವ ಎಲ್ಲಾ ದಾಖಲೆಗಳು ಅಳಿಸಿಹಾಕಬಹುದಾಗಿದೆ.!!

ಉಚಿತ ಆಪ್ ಅಲ್ಲ.!!

ಉಚಿತ ಆಪ್ ಅಲ್ಲ.!!

ಇಷ್ಟೊಂದು ಸೆಕ್ಯುರಿಟಿ ಆಯ್ಕೆಯನ್ನು ಹೊಂದಿರುವ ಈ ಆಪ್ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿಲ್ಲ.!! ಈ ಆಪ್ ಬಳಸಲು ವರ್ಷಕ್ಕೆ 365/ ರೂ.ಪಾವತಿಸಬೇಕಿದೆ.!! ಜೊತೆಗೆ ಎಲ್ಲಾ ಖಾಸಗಿ ಮಾಹಿತಿಗಳು ಗೌಪ್ಯವಾಗಿರಲಿದೆ.

Best Mobiles in India

English summary
Now you can download app from playstore. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X