Red Apple Watch: ವಿಶ್ವ ಏಡ್ಸ್ ದಿನದ ಹಿನ್ನೆಲೆ ಆಪಲ್‌ನಿಂದ ರೆಡ್ ಆಪಲ್ ವಾಚ್ ಸರಣಿ 9 ಲಾಂಚ್! ಕೆಂಪು ಸುಂದರಿಯ ವಿಶೇಷತೆ ಏನು?
ಆಪಲ್ ಡಿವೈಸ್‌ಗಳಲ್ಲಿ (Apple device) ಆಪಲ್ ಸ್ಮಾರ್ಟ್‌ವಾಚ್‌ಗಳು ಸಹ ಬಹಳ ಬೇಡಿಕೆ ಪಡೆದಿದೆ. ಅದರಲ್ಲೂ ಹಲವಾರು ಜನರ ಜೀವ ಉಳಿಸಿದ ಕೀರ್ತಿಯನ್ನು ಈ ವಾಚ್‌ಗಳು ಪಡೆದುಕೊಂಡಿದೆ. ಈ ನಡುವೆ ಆಪಲ್ ಪ್ರಿಯರಿಗೆ ಮತ್ತಷ್ಟು ಸಂತಸ ನೀಡುವ ಉದ್ದೇಶದಿಂದ ಆಪಲ್‌ನಿಂದ ರೆಡ್ ಆಪಲ್ ವಾಚ್ ಸರಣಿ 9 (Red Apple Watch Series 9) ಅನಾವರಣ ಮಾಡಲಾಗಿದೆ.
ಹೌದು, ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನದಂದು (World AIDS Day) ಹೊಸ ಬಣ್ಣದ ವಾಚ್ ಅನ್ನು ಅನಾವರಣಗೊಳಿಸಲಾಗಿದೆ. ಹೊಂದಾಣಿಕೆಯ ಕೆಂಪು ಸ್ಪೋರ್ಟ್ ಬ್ಯಾಂಡ್‌ನೊಂದಿಗೆ ಕೆಂಪು ಅಲ್ಯೂಮಿನಿಯಂ ಕೇಸ್ ಆಯ್ಕೆಯನ್ನೂ ಈ ವಾಚ್‌ಗೆ ನೀಡಲಾಗಿದೆ. ಈ ಮೂಲಕ ಇದು ಸಂಪೂರ್ಣ ಕೆಂಪುಮಯವಾಗಿದೆ. ಹಾಗಿದ್ರೆ, ಈ ಕೆಂಪು ಸುಂದರಿಯ ಪ್ರಮುಖ ಫೀಚರ್ಸ್ ಏನು?, ಈ ರೀತಿಯ ವಿಶೇಷ ಡಿವೈಸ್ ಅನ್ನು ಆಪಲ್ ಯಾಕೆ ಲಾಂಚ್ ಮಾಡುತ್ತದೆ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಪಲ್ ವಾಚ್ ಸರಣಿ 9: ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನದಂದು ಹೊಸ ಬಣ್ಣದ ವಾಚ್ ಅನ್ನು ಆಪಲ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ವಾಚ್ ಅಪ್‌ಗ್ರೇಡ್ ಮಾಡಿದ ಆರೋಗ್ಯ ಸೆನ್ಸರ್ ಆಯ್ಕೆ ಮತ್ತು ಸುರಕ್ಷತಾ ಫೀಚರ್ಸ್ ಅನ್ನು ಹೊಂದಿದೆ. ಅದರಲ್ಲಿ ಪ್ರಮುಖವಾಗಿ ರಕ್ತದ ಆಮ್ಲಜನಕ ಮಾನಿಟರಿಂಗ್, ಇಸಿಜಿ ಸಾಮರ್ಥ್ಯಗಳು, ಫಾಲ್ ಡಿಟೆಕ್ಷನ್, ಎಮರ್ಜೆನ್ಸಿ ಎಸ್‌ಒಎಸ್ ಸೌಲಭ್ಯ ಇದೆ.
ಮುಖ್ಯವಾಗಿ ಅಲ್ಟ್ರಾ-ವೈಡ್‌ಬ್ಯಾಂಡ್ ತಂತ್ರಜ್ಞಾನ ಆಯ್ಕೆ ನೀಡಲಾಗಿದ್ದು, ಈ ಮೂಲಕ ಕಳೆದುಹೋದ ಐಫೋನ್ ಸುಲಭವಾಗಿ ಪತ್ತೆ ಮಾಡಬಹುದಾಗಿದೆ. ಅದರಲ್ಲೂ ಪ್ರಮುಖವಾಗಿ ಫಿಟ್‌ನೆಸ್‌ನಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಸ್ಮಾರ್ಟ್‌ವಾಚ್ ಸೂಕ್ತ ಆಯ್ಕೆಯಾಗಿದೆ. ಯಾಕೆಂದರೆ ಸುಧಾರಿತ ತಾಲೀಮು ಟ್ರ್ಯಾಕಿಂಗ್ ಮಾಡುವ ಸಾಮರ್ಥ್ಯ ಪಡೆದುಕೊಂಡಿದ್ದು, ಇದರಲ್ಲಿನ ಆಲ್‌ವೇಸ್ ಆನ್ ಡಿಸ್‌ಪ್ಲೇ ಎಂತಹ ಪ್ರಕಾಶಮಾನವಾದ ಬೆಳಕಿನಲ್ಲೂ ಅತ್ಯುತ್ತಮ ವೀಕ್ಷಣೆ ಅನುಭವ ನೀಡುತ್ತದೆ.

ಇನ್ನು ಮೊದಲೇ ತಿಳಿಸಿದಂತೆ ವಿಶ್ವ ಏಡ್ಸ್ ದಿನದಂದು ಇದನ್ನು ಲಾಂಚ್ ಮಾಡಲಾಗಿರುವುದರಿಂದ ಸೋಲಾರ್ ಅನಲಾಗ್ ಸೇರಿದಂತೆ ವಿಶೇಷವಾಗಿ ವಿಶ್ವ ಏಡ್ಸ್ ದಿನಕ್ಕಾಗಿ ಇದನ್ನು ಕಸ್ಟಮೈಸ್ ಮಾಡಲಾಗಿದೆ. ಈ ವಿಶೇಷ ವಾಚ್ ಫೇಸ್ ಈ ವಾಚ್ ಬಳಕೆದಾರರಿಗೆ ರೋಮಾಂಚಕ ಅನುಭವವನ್ನು ನೀಡಲಿದೆ. ಜೊತೆಗೆ ವೇಗದ ಚಾರ್ಜ್ ಬೆಂಬಲ, ಸಿರಿ ಮತ್ತು 'ಡಬಲ್ ಟ್ಯಾಪ್' ಎಂಬ ಗೆಸ್ಚರ್ ಆಧಾರಿತ ಫೀಚರ್ಸ್ ಆಯ್ಕೆ ನೀಡಲಾಗಿದೆ.
ಇದರೊಂದಿಗೆ S9 ಪ್ರೊಸೆಸರ್‌ನಲ್ಲಿರುವ 4 ಕೋರ್ ನ್ಯೂರಲ್ ಎಂಜಿನ್ ಡಬಲ್ ಟ್ಯಾಪ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುತ್ತದೆ. ಈ ಮೂಲಕ ಮಣಿಕಟ್ಟಿನ ಚಲನೆಯನ್ನು ಪತ್ತೆ ಮಾಡುವ ಕೆಲಸ ಮಾಡುತ್ತದೆ. ಹಾಗೆಯೇ 2000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಇದ್ದು, ಸರಣಿ 8 ಗಿಂತ ದ್ವಿಗುಣವಾಗಿದೆ. ಇದರೊಂದಿಗೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 18 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ ಎಂದು ಕಂಪೆನಿ ಹೇಳಿದೆ.
ಬಂದ ಆದಾಯ HIV ಪೀಡಿತರಿಗೆ: ಕಂಪನಿಯು 2006 ರಿಂದ ರೆಡ್ ಜೊತೆ ಪಾಲುದಾರಿಕೆಯನ್ನು ಪಡೆದಿದ್ದು, ಈ ವಸ್ತುಗಳಿಂದ ಬರುವ ಆದಾಯವನ್ನು ಗ್ಲೋಬಲ್ ಫಂಡ್ ಮೂಲಕ ಉಪ-ಸಹಾರನ್ ಅರಿಕಾದಲ್ಲಿ HIV/AIDS ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತದೆ. ಅದರಂತೆ ಡಿಸೆಂಬರ್ 8 ರವರೆಗೆ ಪ್ರತಿ ವಾಚ್ ಖರೀದಿಗೆ ಆಪಲ್ $1 ಅನ್ನು ಈ ಕಾರ್ಯಕ್ರಮಗಳಿಗೆ ದೇಣಿಯಾಗಿ ನೀಡುತ್ತದೆ.

ಹೊಸದಾಗಿ ಪ್ರಾರಂಭಿಸಲಾದ ಆಪಲ್ ರೆಡ್ ವಾಚ್ ಸರಣಿ 9 (ಉತ್ಪನ್ನ) ರೆಡ್ ಮಾಡೆಲ್ ಗೆ 41,900 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ವಾಚ್ ಅನ್ನು ಆಪಲ್‌ನ ಅಧಿಕೃತ ಆನ್‌ಲೈನ್ ಸ್ಟೋರ್ ಹಾಗೂ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಕಳೆದ 17 ವರ್ಷಗಳಲ್ಲಿ ಆಪಲ್‌ನ ಗ್ರಾಹಕರು ರೆಡ್ ಡಿವೈಸ್ ಖರೀದಿಗಳ ಮೂಲಕ ಕಾಲು ಶತಕೋಟಿ ಡಾಲರ್‌ಗಳಷ್ಟು ಕೊಡುಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.


Click it and Unblock the Notifications








