Home
ಸುದ್ದಿಜಾಲ

Apple Pencil: ಐಪ್ಯಾಡ್‌ಗಳಿಗಾಗಿ ಅಗ್ಗದ ಬೆಲೆಯ ಪೆನ್ಸಿಲ್ ಲಾಂಚ್; ಆಕರ್ಷಕ ಫೀಚರ್ಸ್‌

ಆಪಲ್‌ ಐಫೋನ್‌ಗಳಷ್ಟೇ (Apple iPhone) ಜನಪ್ರಿಯತೆ ಆಪಲ್‌ನ ಇತರೆ ಸ್ಮಾರ್ಟ್‌ ಡಿವೈಸ್‌ಗಳಿಗೂ ಇದೆ. ಅದರಲ್ಲೂ ಇತ್ತೀಚಿಗೆ ಹೊಸ ಹೊಸ ಸ್ಮಾರ್ಟ್‌ ಡಿವೈಸ್‌ಗಳನ್ನು ಆಪಲ್ ಪರಿಚಯಿಸಿಕೊಂಡು ಬರುತ್ತಿದ್ದು, ಅವುಗಳ ಸಾಲಿಗೆ ಹೊಸ ಆಪಲ್‌ ಪೆನ್ಸಿಲ್ (Apple Pencil) ಸೇರಿಕೊಳ್ಳಲಿದೆ. ಈ ಪೆನ್ಸಿಲ್‌ ಯುಎಸ್‌ಬಿ-ಸಿ ಚಾರ್ಜಿಂಗ್‌ ಬೆಂಬಲ ಪಡೆದಿದೆ.

ಹೌದು, ಆಪಲ್ ಯುಎಸ್‌ಬಿ-ಸಿ ಆಯ್ಕೆ ಇರುವ ಆಪಲ್ ಪೆನ್ಸಿಲ್ ಅನ್ನು ಲಾಂಚ್‌ ಮಾಡಲಾಗಿದೆ. ಇದು ಐಪ್ಯಾಡ್ ಬಳಕೆದಾರರಿಗೆ ಬಜೆಟ್ ಸ್ನೇಹಿ ಆಯ್ಕೆ ಆಗಿದ್ದು, ಸ್ಲೈಡಿಂಗ್ ಕ್ಯಾಪ್ ವಿನ್ಯಾಸ, ಮ್ಯಾಟ್ ಫಿನಿಶ್ ಮತ್ತು ಫ್ಲಾಟ್ ಎಡ್ಜ್ ವಿನ್ಯಾಸದೊಂದಿಗೆ ಕಾಣಿಸಿಕೊಂಡಿದೆ. ಈ ಮೂಲಕ ಚಾರ್ಜ್ ಹಾಗೂ ಇನ್ನಿತರೆ ಕೆಲಸಗಳಿಗೆ ಸುಲಭ ಆಯ್ಕೆ ನೀಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿವರ ಏನೆಂದು ತಿಳಿದುಕೊಳ್ಳೋಣ ಬನ್ನಿ.

ಐಪ್ಯಾಡ್‌ಗಳಿಗಾಗಿ ಅಗ್ಗದ ಬೆಲೆಯ  ಪೆನ್ಸಿಲ್ ಲಾಂಚ್; ಆಕರ್ಷಕ ಫೀಚರ್ಸ್‌

ಆಪಲ್ ಪೆನ್ಸಿಲ್: ಐಫೋನ್‌ 15 ಸರಣಿ (iPhone 15 series) ಫೋನ್‌ಗಳು ಈ ಕ್ಷಣಕ್ಕೂ ಸದ್ದು ಮಾಡುತ್ತಿವೆ. ಅಷ್ಟೇ ಯಾಕೆ ಮುಂದಿನ ಐಫೋನ್ 16 ಸರಣಿ (iPhone 16 series) ಫೋನ್‌ಗಳ ಬಗ್ಗೆಯೂ ಲೀಕ್‌ ಮಾಹಿತಿ ಹರಿದಾಡುತ್ತಿದೆ. ಈ ಎಲ್ಲಾ ಖುಷಿ ವಿಚಾರದೊಂದಿಗೆ ಕೈಗೆಟುಕುವ ದರದಲ್ಲಿ ಆಪಲ್ ಪೆನ್ಸಿಲ್ ಅನ್ನು ಲಾಂಚ್‌ ಮಾಡಲಾಗಿದೆ. ಈ ಡಿವೈಸ್‌ ಐಪ್ಯಾಡ್ ಬಳಕೆದಾರರಿಗೆ ಬಜೆಟ್ ಸ್ನೇಹಿ ಆಗಿವುದು ಮಾತ್ರ ಸಂತಸ ಪಡುವ ವಿಚಾರ.

ಕಡಿಮೆ ಲೇಟೆನ್ಸಿ ಮೋಡ್‌ನೊಂದಿಗೆ ಕಾಣಿಸಿಕೊಂಡಿರುವ ಈ ಪೆನ್ಸಿಲ್ ಸ್ಕೆಚಿಂಗ್, ಟಿಪ್ಪಣಿಗಳು ಮತ್ತು ಡ್ರಾಯಿಂಗ್‌ಗೆ (Sketching, notes, drawing) ಅತ್ಯುತ್ತಮ ಆಯ್ಕೆಯಾಗಿದೆ. ಈ ಗ್ಯಾಜೆಟ್ ಟೈಪ್-ಸಿ ಪೋರ್ಟ್‌ನೊಂದಿಗೆ ಎಲ್ಲಾ ಐಪ್ಯಾಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಲಾಂಚ್‌ ಮಾಡುವ ಮೂಲಕ ಆಪಲ್ ಇದುವರೆಗೆ ಒಟ್ಟು ಮೂರು ಪೆನ್ಸಿಲ್‌ಗಳನ್ನು ಲಾಂಚ್‌ ಮಾಡಿದಂತೆ ಆಗಿದೆ.

ಯುಎಸ್‌ಬಿ-ಸಿ ಹೊರತುಪಡಿಸಿ ಹೊಸ ಆಪಲ್ ಪೆನ್ಸಿಲ್‌ನಲ್ಲಿ ಹೊಸದೇನೂ ಕಾಣಿಸುವುದಿಲ್ಲ. ಆದಾಗ್ಯೂ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಯನ್ನು ಕಾಣಬಹುದು. ಹೈಲೈಟ್ ವೈಶಿಷ್ಟ್ಯದ ಕುರಿತು ಹೇಳುವುದಾದರೆ ಇದು ಐಪ್ಯಾಡ್‌ ಓಎಸ್‌ ನ ಸ್ಕ್ರಿಬಲ್, ಕ್ವಿಕ್ ನೋಟ್ ಮತ್ತು ಫ್ರೀಫಾರ್ಮ್ ಫೀಚರ್ಸ್‌ ಅನ್ನು ಬೆಂಬಲಿಸುತ್ತದೆ. ಐಪ್ಯಾಡ್‌ ಪ್ರೊ M2 ಜೊತೆಗೆ ಈ ಪೆನ್ಸಿಲ್ ನಿಖರವಾದ ರೇಖಾಚಿತ್ರಕ್ಕಾಗಿ ಹೋವರ್ ಕಾರ್ಯವನ್ನು ಸಹ ಬೆಂಬಲಿಸಲಿದೆ

ಈ ಡಿವೈಸ್‌ ಒತ್ತಡದ ಸೂಕ್ಷ್ಮತೆ, ವೈರ್‌ಲೆಸ್ ಕನೆಕ್ಟಿವಿಟಿ ಮತ್ತು ಚಾರ್ಜಿಂಗ್ ಮತ್ತು ಟೂಲ್ ಸ್ವಿಚಿಂಗ್‌ಗಾಗಿ ಡಬಲ್-ಟ್ಯಾಪ್ ಕಾರ್ಯನಿರ್ವಹಣೆಯಂತಹ ಫೀಚರ್ಸ್‌ ಆಯ್ಕೆಯನ್ನು ಹೊಂದಿಲ್ಲ. ಅದರೆ ಇರುವ ಕೆಲವು ಫೀಚರ್ಸ್‌ನಲ್ಲಿ ಇದು ಐಪ್ಯಾಡ್‌ಗೆ ಸಂಪರ್ಕಗೊಂಡ ನಂತರ ಬ್ಯಾಟರಿಯ ಬ್ಯಾಕಪ್‌ ಅನ್ನು ಉಳಿಸಲು ಆಟೋಮ್ಯಾಟಿಕ್‌ ಆಗಿ ಸ್ಲೀಪ್ ಮೋಡ್‌ಗೆ ಬದಲಾಗುತ್ತದೆ.

ಯಾವೆಲ್ಲಾ ಡಿವೈಸ್‌ಗಳಿಗೆ ಬೆಂಬಲ ನೀಡುತ್ತದೆ?: ಈ ಹೊಸ ಆಪಲ್ ಪೆನ್ಸಿಲ್‌ ಐಪ್ಯಾಡ್ (10 ನೇ ತಲೆಮಾರು), ಐಪ್ಯಾಡ್ ಏರ್ (4 ನೇ ಮತ್ತು 5 ನೇ ತಲೆಮಾರು), ಐಪ್ಯಾಡ್ ಪ್ರೊ 11 (1 ನೇ, 2 ನೇ, 3 ನೇ, ಮತ್ತು 4ನೇ ತಲೆಮಾರು), 12.9 ಇಂಚಿನ ಐಪ್ಯಾಡ್‌ ಪ್ರೊ (3ನೇ, 4ನೇ, 5ನೇ ಮತ್ತು 6ನೇ ತಲೆಮಾರು) ಹಾಗೂ ಐಪ್ಯಾಡ್ ಮಿನಿ (6ನೇ ತಲೆಮಾರು) ಡಿವೈಸ್‌ಗಳಿಗೆ ಸುಲಭವಾಗಿ ಹೊಂದಿಕೆ ಆಗುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ.

ಇನ್ನು ಅಕ್ಟೋಬರ್ 2022 ರಲ್ಲಿ ಆಪಲ್‌ 10 ನೇ ತಲೆಮಾರಿನ ಐಪ್ಯಾಡ್ ಅನ್ನು ಲಾಂಚ್‌ ಮಾಡಿತ್ತು. ನಂತರ ಅದೇ ತಿಂಗಳಲ್ಲಿ M1 ಚಿಪ್‌ನೊಂದಿಗೆ ಐಪ್ಯಾಡ್‌ ಏರ್ (iPad Air) ಅನ್ನು ಮಾರ್ಚ್ 2022 ರಲ್ಲಿ ಲಾಂಚ್ ಮಾಡಿತ್ತು. ಈಗ ಕೈಗೆಟುಕುವ ದರದಲ್ಲಿ ಆಪಲ್‌ನ ಪೆನ್ಸಿಲ್‌ನೊಂದಿಗೆ ಕಾಣಿಸಿಕೊಂಡಿದೆ. ಈ ಮೂಲಕ ಆಪಲ್‌ ತನ್ನ ಐಪ್ಯಾಡ್‌ (iPad) ಬಳಕೆದಾರರಿಗೆ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ನೀಡುವ ಗುರಿಯನ್ನು ಹೊಂದಿದೆ.

ಆಪಲ್‌ ಪೆನ್ಸಿಲ್ ಬೆಲೆ ಹಾಗೂ ಲಭ್ಯತೆ: ಹೊಸ ಆಪಲ್ ಪೆನ್ಸಿಲ್ ಅನ್ನು ಭಾರತದಲ್ಲಿ 7,900ರೂ.ಗಳ ಬೆಲೆಗೆ ಬಿಡುಗಡೆ ಆಗಿದೆ. ವಿಷಯ ಏನೆಂದರೆ ಇದನ್ನು ಖರೀದಿ ಮಾಡಲು ನೀವು ನವೆಂಬರ್‌ ವರೆಗೂ ಕಾಯಬೇಕಿದೆ. ಇನ್ನು ಕಳೆದ ಬಾರಿ ಬಿಡುಗಡೆಯಾದ ಆಪಲ್‌ 2 ನೇ ಜನ್ ಪೆನ್ಸಿಲ್‌ಗಿಂತ ಅಗ್ಗವಾಗಿದೆ. ಅದರ ಬೆಲೆ 11,900 ರೂ.ಗಳಾಗಿತ್ತು. ಈ ಡಿವೈಸ್‌ ಅನ್ನು ಆಪಲ್ ತನ್ನ ಶಿಕ್ಷಣ ಯೋಜನೆಯ ಭಾಗವಾಗಿ ಪರಿಚಯಿಸಿದೆ.

ಐಪ್ಯಾಡ್‌ಗಳಿಗಾಗಿ ಅಗ್ಗದ ಬೆಲೆಯ  ಪೆನ್ಸಿಲ್ ಲಾಂಚ್; ಆಕರ್ಷಕ ಫೀಚರ್ಸ್‌

ಅಂದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಇದು ಬಹಳ ಸಹಾಯಕವಾಗಲಿದೆ ಎಂದು ಆಪಲ್‌ ತಿಳಿಸಿದ್ದು, ಈ ಶೈಕ್ಷಣಿಕ ಬೆಲೆಯು ಪ್ರಸ್ತುತ ಮತ್ತು ಹೊಸದಾಗಿ ಸೇರ್ಪಡೆಯಾದ ಕಾಲೇಜು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಯೋಗ್ಯವಾಗಿದೆ. ಹಾಗೆಯೇ ಎಲ್ಲಾ ದರ್ಜೆಯ ಹಂತಗಳ ಅಧ್ಯಾಪಕರು, ಸಿಬ್ಬಂದಿ ಮತ್ತು ಮನೆ-ಶಾಲಾ ಶಿಕ್ಷಕರಿಗೆ ಇದು ಉತ್ತಮ ಟೂಲ್ಸ್ ಆಗಲಿದೆ ಎಂದು ಹೇಳಿದೆ.

Best Mobiles in India

English summary
Apple has launched Apple Pencil with USB-C option. It is a budget friendly gadgets for iPad users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+