ಆಪಲ್ ಲೆಟ್ ಲೂಸ್ ಈವೆಂಟ್: ವಿಶೇಷ ಫೀಚರ್ಸ್‌ನೊಂದಿಗೆ ಐಪ್ಯಾಡ್ ಏರ್ ಲಾಂಚ್, ಬೆಲೆ ಎಷ್ಟು?
ಆಪಲ್ ಲೆಟ್ ಲೂಸ್ ಈವೆಂಟ್ 2024 (Apple Let Loose Event 2024) ನಲ್ಲಿ ಆಪಲ್ ವಿವಿಧ ಡಿವೈಸ್‌ಗಳನ್ನು ಘೋಷಣೆ ಮಾಡುತ್ತಿದೆ. ಈ ನಡುವೆ ಆಪಲ್ ಐಪ್ಯಾಡ್ ಏರ್ (iPad Air) 6th ಜನ್ ಅನ್ನು M2 ಚಿಪ್‌ನೊಂದಿಗೆ ಮತ್ತು ಎರಡು ಸೈಜ್ ವೇರಿಯಂಟ್‌ನಲ್ಲಿ ಲಾಂಚ್ ಮಾಡಲಾಗಿದೆ.
ಆಪಲ್ ತನ್ನ ಲೆಟ್ ಲೂಸ್ ಈವೆಂಟ್‌ನಲ್ಲಿ ಹೊಸ ಐಪ್ಯಾಡ್ ಏರ್ 2024 ಅನ್ನು ಪರಿಚಯಿಸಿದೆ. ಐಪ್ಯಾಡ್ ಏರ್ 2024 ಡಿವೈಸ್ M2 ಚಿಪ್‌ಸೆಟ್, ಡಿಸ್‌ಪ್ಲೇನ ಅಂಚಿನಲ್ಲಿರುವ ಕ್ಯಾಮೆರಾ, ಆಪಲ್ ಪೆನ್ಸಿಲ್‌ಗೆ ಬೆಂಬಲ, ಲ್ಯಾಂಡ್‌ಸ್ಕೇಪ್ ಸ್ಟಿರಿಯೊ ಆಡಿಯೊ ಮತ್ತು ಹೊಸ ಮ್ಯಾಜಿಕ್ ಕೀಬೋರ್ಡ್ ಆಯ್ಕೆ ಪಡೆದಿದೆ. ಹಾಗಿದ್ರೆ ಬನ್ನಿ ಈ ಡಿವೈಸ್ ಹೊಂದಿರುವ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಐಪ್ಯಾಡ್ ಏರ್ 2024: ಪೂರ್ವವರ್ತಿಯಂತೆ ಹೊಸ ಐಪ್ಯಾಡ್ ಏರ್ ಮಾದರಿ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಜಿತೆಗೆ 12 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಮೊದಲ ಬಾರಿಗೆ ಟ್ಯಾಬ್ಲೆಟ್‌ನ ಉದ್ದದ ಅಂಚಿಗೆ ಬದಲಾಯಿಸಿದೆ. ಇದರ ಜೊತೆಗೆ ಈ ಡಿವೈಸ್ M2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, M1 ಚಿಪ್‌ಸೆಟ್‌ಗಿಂತ 50 ಪ್ರತಿಶತ ವೇಗವಾಗಿದೆ.
ಹಾಗೆಯೇ A14 ಬಯೋನಿಕ್‌ಗೆ ಹೋಲಿಸಿದರೆ, ಹೊಸ ಐಪ್ಯಾಡ್ ಏರ್ ಮೂರು ಪಟ್ಟು ಕಾರ್ಯಕ್ಷಮತೆ ವರ್ಧನೆಯನ್ನು ತೋರಿಸುತ್ತದೆ. ಇದು 1TB ವರೆಗಿನ ಇಂಟರ್ ಸ್ಟೋರೇಜ್ ಅನ್ನು ನೀಡಲಿದ್ದು, ಈ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಹೊಸ ಐಪ್ಯಾಡ್ ಏರ್ 2024 ಲ್ಯಾಂಡ್‌ಸ್ಕೇಪ್ ಸ್ಟಿರಿಯೊ ಆಡಿಯೊಗೆ ಬೆಂಬಲ ಪಡೆದುಕೊಂಡಿದೆ. ಪ್ರಮುಖವಾಗಿ ಇದು ಆಪಲ್ ಪೆನ್ಸಿಲ್ ಅನ್ನು ಬೆಂಬಲಿಸುತ್ತದೆ.

ಐಪ್ಯಾಡ್ ಪ್ರೊ 2024 ಆಪಲ್ ಪೆನ್ಸಿಲ್ ಹೋವರ್ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದ್ದು, ಈ ಹಿಂದೆ ಪ್ರೊ ಮಾದರಿಯಲ್ಲಿ ಮಾತ್ರ ಲಭ್ಯವಿತ್ತು. ಐಪ್ಯಾಡ್‌ನಲ್ಲಿ ಬೆಂಬಲಿತ ಆಪ್‌ಗಳಲ್ಲಿ ಟೂಲ್ಸ್ ಮತ್ತು ಕಂಟ್ರೋಲ್‌ಗಳ ನಡುವೆ ಪೂರ್ವವೀಕ್ಷಿಸಲು ಮತ್ತು ಬದಲಾಯಿಸಲು ಇದು ಬಳಕೆದಾರರನ್ನು ಅನುಮತಿಸುತ್ತದೆ. ಹೊಸ ಐಪ್ಯಾಡ್ ಏರ್ ಹೊಸ ಮ್ಯಾಜಿಕ್ ಕೀಬೋರ್ಡ್ ಮತ್ತು ಟಚ್ ಐಡಿಯೊಂದಿಗೆ ಕಾಣೀಸಿಕೊಂಡಿದೆ. ಉಳಿದಂತೆ ಇದು ಚಾರ್ಜ್ ಮಾಡಲು ಟೈಪ್-ಸಿ ಪೋರ್ಟ್ ಅನ್ನು ಹೊಂದಿದ್ದು, ಪ್ರಾದೇಶಿಕ ಆಡಿಯೊವನ್ನು ಬೆಂಬಲಿಸುವ ಸ್ಪೀಕರ್ ಅನ್ನು ಈ ಡಿವೈಸ್‌ನಲ್ಲಿ ಕಾಣಬಹುದಾಗಿದೆ.
ಐಪ್ಯಾಡ್ ಪ್ರೊ 2024 ಬೆಲೆ ಹಾಗೂ ಲಭ್ಯತೆ: ಈ ಟ್ಯಾಬ್ ಎರಡು ಸೈಜ್ ವೇರಿಯಂಟ್ ನಲ್ಲಿ ಕಾಣಿಸಿಕೊಂಡಿದೆ. ಅಂದರೆ 11 ಇಂಚಿನ ಮತ್ತು 13 ಇಂಚಿನ ಟ್ಯಾಬ್ ಲಭ್ಯ ಇದ್ದು, ಇದು ನೀಲಿ, ನೇರಳೆ, ಸ್ಟಾರ್ಲೈಟ್ ಮತ್ತು ಸ್ಪೇಸ್ ಗ್ರೇ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ. ಹಾಗೆಯೇ 11 ಇಂಚಿನ ಐಪ್ಯಾಡ್‌ನ 128GB ಸ್ಟೋರೇಜ್ ವೇರಿಯಂಟ್‌ಗೆ 59,990 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 13 ಇಂಚಿನ ಐಪ್ಯಾಡ್‌ಗೆ 79,990 ರೂ.ಗಳ ಆರಂಭಿಕ ಬೆಲೆ ಇದೆ.
ಈ ಡಿವೈಸ್ ಅನ್ನು ನೀವು ಮೇ 15 ರಿಂದ ಆಪಲ್ ಸ್ಟೋರ್‌ನಿಂದ ಭಾರತದಲ್ಲಿ ಖರೀದಿ ಮಾಡಬಹುದಾಗಿದೆ. ಬಿಡಿಭಾಗಗಳ ವಿಷಯಕ್ಕೆ ಬಂದರೆ ಹೊಸದಾಗಿ ಪ್ರಾರಂಭಿಸಲಾದ ಆಪಲ್ ಪೆನ್ಸಿಲ್ ಪ್ರೊ ಹೊಸ ಐಪ್ಯಾಡ್ ಏರ್‌ಗೆ ಹೊಂದಿಕೊಳ್ಳುತ್ತದೆ. ಇದು 11,900 ರೂ.ಗೆ ಲಭ್ಯವಿದೆ. ಆಪಲ್ ಪೆನ್ಸಿಲ್ ಟೈಪ್ ಸಿ 7,900 ರೂ.ಗೆ ಲಭ್ಯವಿದೆ. ಇದರೊಂದಿಗೆ ಹೊಸ ಮ್ಯಾಜಿಕ್ ಕೀಬೋರ್ಡ್ ಅನ್ನು ಹೊಸ 11 ಇಂಚಿನ ಐಪ್ಯಾಡ್ ಏರ್‌ಗಾಗಿ 29,900 ರೂ.ಗಳಿಗೆ ಮತ್ತು ಹೊಸ 13 ಇಂಚಿನ ಐಪ್ಯಾಡ್ ಏರ್‌ಗಾಗಿ 33,900 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








