ಆಪಲ್ ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್‌ಗೆ ಭರ್ಜರಿ ರಿಯಾಯಿತಿ!
ಆಪಲ್ ಕಂಪೆನಿ ತನ್ನ ಮ್ಯಾಕ್‌ಬುಕ್ ಏರ್ M1 ಖರೀದಿ ಮಾಡುವ ಗ್ರಾಹಕರಗೆ ಈಗ ಸಿಹಿಸುದ್ದಿ. ಮಾರುಕಟ್ಟೆಯಲ್ಲಿ ಆಪಲ್ ಮ್ಯಾಕ್‌ಬುಕ್ ಲ್ಯಾಪ್‌ಟಾಪ್‌ಗಳು ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿವೆ. ಸದ್ಯ ಭಾರತದಲ್ಲಿ ಮ್ಯಾಕ್‌ಬುಕ್ ಏರ್ M1 ಭಾರೀ ರಿಯಾಯಿತಿಯನ್ನು ಪಡೆದುಕೊಂಡಿದೆ. ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ನಲ್ಲಿ ಆಪಲ್ ಮ್ಯಾಕ್‌ಬುಕ್ ಏರ್ M1 ಭರ್ಜರಿ ರಿಯಾಯಿತಿ ಪಡೆದಿದೆ.

ಹೌದು, ಫ್ಲಿಪ್‌ಕಾರ್ಟ್ ನಲ್ಲಿ ಮ್ಯಾಕ್‌ಬುಕ್ ಏರ್ M1 ಬಿಗ್ ಡಿಸ್ಕೌಂಟ್ ಪಡೆದುಕೊಂಡಿದೆ. ಕಳೆದ ವರ್ಷ 92,900 ರೂ.ಗೆ ಬಿಡುಗಡೆಯಾಗಿದ್ದ ಈ ಲ್ಯಾಪ್‌ಟಾಪ್ ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಆಕರ್ಷಕ 84,990ರೂ. ಗಳ ಡಿಸ್ಕೌಂಟ್ ಬೆಲೆಯನ್ನು ಪಡೆದಿದೆ. ಇದರೊಂದಿಗೆ 23,100ರೂ.ಗಳ ವರೆಗೂ ಅತ್ಯುತ್ತಮ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯವಾಗಲಿದೆ. ಹೀಗಾಗಿ ಆಫರ್‌ನಲ್ಲಿ ಆಪಲ್ ಮ್ಯಾಕ್‌ಬುಕ್ ಏರ್ M1 ಖರೀದಿಗೆ ಇದು ಸಕಾಲ. ಹಾಗದಾರೆ ಆಪಲ್ ಮ್ಯಾಕ್‌ಬುಕ್ ಏರ್ M1 ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಪಲ್ ಮ್ಯಾಕ್‌ಬುಕ್ ಏರ್ M1
ಫ್ಲಿಪ್‌ಕಾರ್ಟ್‌ನಲ್ಲಿ ಮ್ಯಾಕ್‌ಬುಕ್ ಏರ್ M1 ಈಗ ದೊಡ್ಡ ಆಫರ್ ಪಡೆದಿದೆ. ಈ ಲ್ಯಾಪ್‌ಟಾಪ್ 2020 ರಲ್ಲಿ 92,900ರೂ. ಗಳ ಮೂಲ ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಮ್ಯಾಕ್‌ಬುಕ್ ಏರ್ ಎಂ1 ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ 84,990ರೂ. ಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಅಂದರೆ ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್ 7,910 ರೂ. ರಿಯಾಯಿತಿ ಪಡೆದಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್ ತಾಣವು ಹೆಚ್ಚುವರಿಯಾಗಿ 23,100 ರೂ. ವರೆಗೂ ಎಕ್ಸ್‌ಚೇಂಜ್ ರಿಯಾಯಿತಿಯನ್ನು ನೀಡುತ್ತದೆ.
ಇನ್ನು ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್ M1 ಚಿಪ್ ಅನ್ನು ಪ್ಯಾಕ್ ಮಾಡುತ್ತದೆ. ಇದು ಮ್ಯಾಕ್‌ಗಾಗಿ ಕಂಪನಿಯಿಂದ ಚಿಪ್‌ನಲ್ಲಿ ಮೊದಲ ಸಿಸ್ಟಮ್ ಆಗಿದೆ. M1 ಚಿಪ್ 8-ಕೋರ್ CPU ಮತ್ತು 8-ಕೋರ್ GPU ಜೊತೆಗೆ 8GB ಮೆಮೊರಿ ಮತ್ತು 256GB SSD ಸಂಗ್ರಹಣೆಯನ್ನು ಪ್ಯಾಕ್ ಮಾಡುತ್ತದೆ. ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್ 2560 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ 13.3 ಇಂಚಿನ LED ಬ್ಯಾಕ್‌ಲಿಟ್ ಡಿಸ್‌ಪ್ಲೇ ಹೊಂದಿದೆ. ಇದು 400 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡುತ್ತದೆ.

ಇನ್ನು ಈ ಮ್ಯಾಕ್‌ಬುಕ್ ಏರ್ 720p ಫೇಸ್‌ಟೈಮ್ HD ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್ ಟಚ್ ಐಡಿಯನ್ನು ಕೂಡ ಹೊಂದಿದೆ. ಇದು ಪವರ್ ಆನ್ ಬಟನ್‌ಗೆ ಸಂಯೋಜಿಸಲ್ಪಟ್ಟಿದೆ. ಈ ಲ್ಯಾಪ್‌ಟಾಪ್ ಫೋರ್ಸ್ ಟಚ್ ಟ್ರ್ಯಾಕ್‌ಪ್ಯಾಡ್‌ನೊಂದಿಗೆ ಬರುತ್ತದೆ. ಇದು Wi-Fi 6 ಅನ್ನು ಬೆಂಬಲಿಸುತ್ತದೆ ಮತ್ತು ಎರಡು Thunderbolt ಪೋರ್ಟ್‌ಗಳೊಂದಿಗೆ ಬರುತ್ತದೆ. ಮ್ಯಾಕ್‌ಬುಕ್ ಏರ್ M1 ನ ಅತಿ ದೊಡ್ಡ ಹೈಲೈಟ್ ಎಂದರೆ ಇದು 18 ಗಂಟೆಗಳ ಬ್ಯಾಟರಿ ಬಾಳಿಕೆ ನೀಡಲಿದೆ.
ಆಪಲ್‌ನ ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್ 304.1 x 212.4 x 10.9 ಸುತ್ತಳತೆ ಯನ್ನು ಪಡೆದಿದ್ದು, ಇದು 1.29 ಕಿ.ಲೋ ತೂಕವನ್ನು ಹೊಂದಿದೆ. ಹಾಗೆಯೇ ಈ ಲ್ಯಾಪ್‌ಟಾಪ್ 13.3 ಇಂಚಿನ ಡಿಸ್‌ಪ್ಲೇ ಇದ್ದು, ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 227 ppi ಆಗಿದೆ. ಜೊತೆಗೆ 400 nits ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ. ಬಿಲ್ಟ್ ಇನ್ ಸ್ಪೀಕರ್ಸ್ ಇದ್ದು, 720p HD ಸಾಮರ್ಥ್ಯದ ವಿಡಿಯೋ ರೆಕಾರ್ಡಿಂಗ್ ಸಪೋರ್ಟ್ ಒಳಗೊಂಡಿದೆ.


Click it and Unblock the Notifications








