ಆಪಲ್ ಮ್ಯಾಕ್‌ಬುಕ್‌ ಏರ್‌ M2 ಘೋಷಣೆ ಬೆನ್ನಲ್ಲೇ ಗ್ರಾಹಕರಿಗೆ ಬಿಗ್ ಶಾಕ್‌!

|

ಟೆಕ್‌ ದೈತ್ಯ ಆಪಲ್‌ ಕಂಪೆನಿ ತನ್ನ ವಾರ್ಷಿಕ ಸಮ್ಮೇಳನ WWDC 2022ನಲ್ಲಿ ಹೊಸ ಉತ್ಪನ್ನಗಳನ್ನು ಅನಾವರಣ ಮಾಡಿದೆ. ಆ ಪೈಕಿ ಸಂಸ್ಥೆಯು ತನ್ನ ಬಹುನಿರೀಕ್ಷಿತ ಆಪಲ್ ಮ್ಯಾಕ್‌ಬುಕ್‌ ಏರ್‌ M2 ಘೋಷಣೆ ಮಾಡಿದೆ. ಆದರೆ ಆಪಲ್ ಮ್ಯಾಕ್‌ಬುಕ್‌ ಏರ್‌ M2 ಘೋಷಣೆ ಮಾಡಿದ ಬೆನ್ನಲ್ಲೇ ಆಪಲ್ ಸಂಸ್ಥೆಯು ಗ್ರಾಹಕರಿಗೆ ಬಿಗ್ ಶಾಕ್‌ ನೀಡಿದೆ.

ಆಪಲ್ ಮ್ಯಾಕ್‌ಬುಕ್‌ ಏರ್‌ M2 ಘೋಷಣೆ ಬೆನ್ನಲ್ಲೇ ಗ್ರಾಹಕರಿಗೆ ಬಿಗ್ ಶಾಕ್‌!

ಹೌದು, ಆಪಲ್‌ ಮ್ಯಾಕ್‌ಬುಕ್‌ ಏರ್‌ M1 ಬೆಲೆಯಲ್ಲಿ ಏರಿಕೆ ಮಾಡಿ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ. WWDC 2022 ಕಾರ್ಯಕ್ರಮದಲ್ಲಿ M2 ಚಿಪ್‌ಸೆಟ್ ಆಧಾರಿತ ಮ್ಯಾಕ್‌ಬುಕ್‌ ಘೋಷಿಸಿದ ನಂತರ, ಮ್ಯಾಕ್‌ಬುಕ್‌ ಏರ್‌ M1 ಬೆಲೆಯಲ್ಲಿ ಇಳಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸದ್ದಿಲ್ಲದೇ ಆಪಲ್‌ ಮ್ಯಾಕ್‌ಬುಕ್‌ ಏರ್‌ M1 ಬೆಲೆಯಲ್ಲಿ ಹೆಚ್ಚಳ ಮಾಡಿ, ಗ್ರಾಹಕರು ದಂಗಾಗುವಂತೆ ಮಾಡಿದೆ. 8GB RAM ಮತ್ತು 256GB ಸ್ಟೋರೇಜ್‌ ಮಾಡೆಲ್‌ನ ಆಪಲ್‌ ಮ್ಯಾಕ್‌ಬುಕ್‌ ಏರ್‌ M1 ಬೆಲೆ ಈಗ 99,900ರೂ. ಆಗಿದೆ. ಹಾಗಾದರೇ ಆಪಲ್‌ ಮ್ಯಾಕ್‌ಬುಕ್‌ ಏರ್‌ M1 ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಪಲ್ ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್‌ M1 ಚಿಪ್ ಅನ್ನು ಪ್ಯಾಕ್ ಮಾಡುತ್ತದೆ. ಇದು ಮ್ಯಾಕ್‌ಗಾಗಿ ಕಂಪನಿಯಿಂದ ಚಿಪ್‌ನಲ್ಲಿ ಮೊದಲ ಸಿಸ್ಟಮ್ ಆಗಿದೆ. M1 ಚಿಪ್ 8 ಕೋರ್ CPU ಮತ್ತು 8-ಕೋರ್ GPU ಜೊತೆಗೆ 8GB ಮೆಮೊರಿ ಮತ್ತು 256GB SSD ಸಂಗ್ರಹಣೆಯನ್ನು ಪ್ಯಾಕ್ ಮಾಡುತ್ತದೆ. ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್‌ 2560 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ 13.3 ಇಂಚಿನ LED ಬ್ಯಾಕ್‌ಲಿಟ್ ಡಿಸ್‌ಪ್ಲೇ ಹೊಂದಿದೆ. ಇದು 400 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡುತ್ತದೆ.

ಇನ್ನು ಈ ಮ್ಯಾಕ್‌ಬುಕ್ ಏರ್ 720p ಫೇಸ್‌ಟೈಮ್ HD ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಟಚ್ ಐಡಿಯನ್ನು ಕೂಡ ಹೊಂದಿದೆ. ಇದು ಪವರ್ ಆನ್ ಬಟನ್‌ಗೆ ಸಂಯೋಜಿಸಲ್ಪಟ್ಟಿದೆ. ಈ ಲ್ಯಾಪ್‌ಟಾಪ್ ಫೋರ್ಸ್ ಟಚ್ ಟ್ರ್ಯಾಕ್‌ಪ್ಯಾಡ್‌ನೊಂದಿಗೆ ಬರುತ್ತದೆ. ಇದು Wi-Fi 6 ಅನ್ನು ಬೆಂಬಲಿಸುತ್ತದೆ ಮತ್ತು ಎರಡು Thunderbolt ಪೋರ್ಟ್‌ಗಳೊಂದಿಗೆ ಬರುತ್ತದೆ. ಮ್ಯಾಕ್‌ಬುಕ್ ಏರ್ M1 ನ ಅತಿ ದೊಡ್ಡ ಹೈಲೈಟ್ ಎಂದರೆ ಇದು 18 ಗಂಟೆಗಳ ಬ್ಯಾಟರಿ ಬಾಳಿಕೆ ನೀಡಲಿದೆ.

ಆಪಲ್‌ನ ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್‌ 304.1 x 212.4 x 10.9 ಸುತ್ತಳತೆ ಯನ್ನು ಪಡೆದಿದ್ದು, ಇದು 1.29 ಕಿ.ಲೋ ತೂಕವನ್ನು ಹೊಂದಿದೆ. ಹಾಗೆಯೇ ಈ ಲ್ಯಾಪ್‌ಟಾಪ್ 13.3 ಇಂಚಿನ ಡಿಸ್‌ಪ್ಲೇ ಇದ್ದು, ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 227 ppi ಆಗಿದೆ. ಜೊತೆಗೆ 400 nits ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ. ಬಿಲ್ಟ್‌ ಇನ್‌ ಸ್ಪೀಕರ್ಸ್‌ ಇದ್ದು, 720p HD ಸಾಮರ್ಥ್ಯದ ವಿಡಿಯೋ ರೆಕಾರ್ಡಿಂಗ್ ಸಪೋರ್ಟ್‌ ಒಳಗೊಂಡಿದೆ.

ಆಪಲ್ ಮ್ಯಾಕ್‌ಬುಕ್‌ ಏರ್‌ M2 ಘೋಷಣೆ ಬೆನ್ನಲ್ಲೇ ಗ್ರಾಹಕರಿಗೆ ಬಿಗ್ ಶಾಕ್‌!

ಆಪಲ್‌ ಮ್ಯಾಕ್‌ಬುಕ್‌ ಏರ್‌ (2022)
ಆಪಲ್‌ ಮ್ಯಾಕ್‌ಬುಕ್‌ ಏರ್‌ (2022) M2 ಚಿಪ್‌ಸೆಟ್‌ ಅನ್ನು ಹೊಂದಿದೆ. ಇದು ಮೊದಲ ತಲೆಮಾರಿನ M1 ಆಪಲ್ ಸಿಲಿಕಾನ್ ಚಿಪ್‌ನ ಸುಧಾರಿತ ಆವೃತ್ತಿಯಾಗಿದೆ. ಇನ್ನು ಈ ಹೊಸ ಚಿಪ್‌ಸೆಟ್ ಹಿಂದಿನ ಚಿಪ್‌ಸೆಟ್‌ಗಿಂತ 18% ಸುಧಾರಿತ CPU ಕಾರ್ಯಕ್ಷಮತೆ ಮತ್ತು 35% GPU ಕಾರ್ಯಕ್ಷಮತೆಯನ್ನು ನೀಡುತ್ತದೆ. ಅಲ್ಲದೆ ಸ್ಪರ್ಧಾತ್ಮಕ 10 ಕೋರ್ ಪ್ರೊಸೆಸರ್‌ಗಳಿಗೆ ಹೋಲಿಸಿದರೆ 1.9 ಪಟ್ಟು ವೇಗವಾಗಿ ಕಾರ್ಯನಿರ್ವಹಿಸಿದೆ. ಇನ್ನು ಈ ಲ್ಯಾಪ್‌ಟಾಪ್‌ 13.6 ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಈ ಆಪಲ್‌ ಮ್ಯಾಕ್‌ಬುಕ್‌ ಏರ್‌ (2022) 2TB ಸ್ಟೋರೇಜ್‌ ಅನ್ನು ಹೊಂದಿದೆ. ಹಾಗೆಯೇ ಮ್ಯಾಕ್‌ಬುಕ್ ಏರ್ (2022) ಐಚ್ಛಿಕ 67W USB ಟೈಪ್-ಸಿ ಪವರ್ ಅಡಾಪ್ಟರ್‌ನೊಂದಿಗೆ 30 ನಿಮಿಷಗಳಲ್ಲಿ ಡಿವೈಸ್‌ ಅನ್ನು 50% ವೇಗವಾಗಿ ಚಾರ್ಜ್ ಮಾಡಲು ಬೆಂಬಲವನ್ನು ನೀಡಲಿದೆ.

Best Mobiles in India

English summary
Apple MacBook Air M1 India price hiked after launching MacBook Air M2.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X