Apple MacBook ಖರೀದಿಗೆ ಇದುವೇ ಬೆಸ್ಟ್ ಟೈಮ್; ಆಫರ್ ಎಷ್ಟು ಗೊತ್ತಾ?
ರಕ್ಷಾಬಂಧನ ಹಬ್ಬದ ಪ್ರಯುಕ್ತ ವಿಜಯ್ ಸೇಲ್ಸ್ (Vijay Sales) ತಾಣವು ಆಪಲ್ ಸಂಸ್ಥೆಯ ವಿವಿಧ ಮ್ಯಾಕ್‌ಬುಕ್ ಏರ್ ಡಿವೈಸ್‌ಗಳಿಗೆ ಆಕರ್ಷಕ ರಿಯಾಯಿತಿಗಳಲ್ಲಿ ತಿಳಿಸಿದೆ. ಈ ಸ್ಪೆಷಲ್ ಸೇಲ್ ನಲ್ಲಿ 2024 ರ ಮ್ಯಾಕ್‌ಬುಕ್ ಏರ್ M3 ( MacBook Air M3) ಡಿವೈಸ್‌ನ 8+256GB ವೇರಿಯಂಟ್ ಬಲು ಬೊಂಬಾಟ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಆಪಲ್ ಪ್ರಿಯರಿಗೆ ಭಾರೀ ಖುಷಿ ನೀಡಿದೆ. ಇನ್ನು ಈ ಡಿವೈಸ್ 67W USB-C ಚಾರ್ಜಿಂಗ್ ಸೌಲಭ್ಯ ಪಡೆದಿದ್ದು, ಜೊತೆಗೆ 8-ಕೋರ್ CPU ಮತ್ತು 10-ಕೋರ್ GPU ಅನ್ನು ಒಳಗೊಂಡಿರುತ್ತದೆ.
ಹೌದು, ವಿಜಯ್ ಸೇಲ್ಸ್ ವೆಬ್‌ಸೈಟ್‌ನಲ್ಲಿ ಆಪಲ್ ಮ್ಯಾಕ್‌ಬುಕ್ ಏರ್ M3 ( MacBook Air M3) ಡಿವೈಸ್ ಆಕರ್ಷಕ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಡಿವೈಸ್‌ನ 8 + 256GB ವೇರಿಯಂಟ್ ಬೆಲೆಯು 1,14,900 ರೂ. ಆಗಿದೆ. ಈ ಸೇಲ್‌ನಲ್ಲಿ ಶೇ 10% ಡಿಸ್ಕೌಂಟ್ ಲಭ್ಯ ಇದ್ದು, ಇದರ ಬೆಲೆ 1,03,490 ರೂ. ಆಗುತ್ತದೆ. ಅಲ್ಲದೇ ಆಯ್ದ ಬ್ಯಾಂಕ್ ಕೊಡುಗೆ ಪಡೆದರೇ ಇದನ್ನು 93,490 ರೂ. ಗಳಿಗೆ ಖರೀದಿ ಮಾಡಬಹುದು. ಇನ್ನುಳಿದಂತೆ ಈ ಡಿವೈಸ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ನೋಡೋಣ.

ಆಪಲ್ ಮ್ಯಾಕ್‌ಬುಕ್ ಏರ್ M3 ಫೀಚರ್ಸ್
ಆಪಲ್ ಮ್ಯಾಕ್‌ಬುಕ್ ಏರ್ M3 ಇದು 13 ಮತ್ತು 15 ಇಂಚಿನ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಸಿಗುತ್ತದೆ. ಇದು ಹಿಂದಿನ ಮಾದರಿಗಳಲ್ಲಿ ಒಂದೇ ಬದಲಿಗೆ ಎರಡು ಬಾಹ್ಯ ಪ್ರದರ್ಶನಗಳಿಗೆ ಸಂಪರ್ಕಿಸುವುದಕ್ಕೆ ಅವಕಾಶ ಇದೆ. ಇನ್ನು ಈ ಎರಡೂ ಮಾದರಿಗಳು ಇನ್ನೂ ಲಿಕ್ವಿಡ್ ರೆಟಿನಾ ಪರದೆಗಳನ್ನು ಹೊಂದಿದ್ದು, 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದೆ.
ಅಲ್ಲದೇ ಇದು ಮ್ಯಾಕ್‌ಬುಕ್ ಏರ್ M3 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು 8 ಕೋರ್ CPU ಮತ್ತು 10 ಕೋರ್ GPU ಅನ್ನು ಒಳಗೊಂಡಿರುತ್ತದೆ. ವೇಗವಾದ 16 ಕೋರ್ ನ್ಯೂರಲ್ ಎಂಜಿನ್ ಕೂಡ ಇದೆ. ಇದಲ್ಲದೆ ಆಪಲ್ ಹೊಸ ಮ್ಯಾಕ್‌ಬುಕ್ ಏರ್ ಅನ್ನು 'AI ಗಾಗಿ ವಿಶ್ವದ ಅತ್ಯುತ್ತಮ ಗ್ರಾಹಕ ಲ್ಯಾಪ್‌ಟಾಪ್' ಎಂದು ಹೇಳಲಾಗಿದೆ. ಇದು 60% ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದು ಅತ್ಯಂತ ವೇಗವಾದ ಇಂಟೆಲ್ ಆಧಾರಿತ ಮ್ಯಾಕ್‌ಬುಕ್‌ಗಳಿಗಿಂತ 13x ವೇಗವಾಗಿದೆ.
ಮ್ಯಾಕ್‌ಬುಕ್ ಏರ್ M3 ಹಾರ್ಡ್‌ವೇರ್ ವೇಗವರ್ಧಿತ ಮೆಶ್ ಶೇಡಿಂಗ್ ಮತ್ತು ರೇ ಟ್ರೇಸಿಂಗ್‌ನೊಂದಿಗೆ ವಾಸ್ತವಿಕ ಗೇಮಿಂಗ್ ಅನುಭವವನ್ನು ನೀಡುತ್ತದೆ. AV1 ಡಿಕೋಡಿಂಗ್‌ಗೆ ಸಹ ಸಪೋರ್ಟ್ ಇದೆ. ಚಿಪ್‌ಸೆಟ್ ಅಪ್‌ಗ್ರೇಡ್‌ನ ಹೊರತಾಗಿ, ಹೊಸ ಮ್ಯಾಕ್‌ಬುಕ್ ಏರ್ ವೈಫೈ - 6E ಸಫೋರ್ಟ್ ಪಡೆದಿದೆ. ಧ್ವನಿ ಪ್ರತ್ಯೇಕತೆ ಮತ್ತು ವೈಡ್ ಸ್ಪೆಕ್ಟ್ರಮ್ ಮೈಕ್ರೊಫೋನ್ ಮೋಡ್‌ಗಳು, ಆಡಿಯೊ ಮತ್ತು ವೀಡಿಯೊ ಕರೆಗಳಲ್ಲಿ ವರ್ಧಿತ ಧ್ವನಿ ಸ್ಪಷ್ಟತೆಯನ್ನು ಸಹ ಪಡೆದುಕೊಂಡಿದೆ.
Apple MacBook Air M3 13 ಇಂಚಿನ ವೇರಿಯಂಟ್ ಹಾಗೂ 15 ಇಂಚಿನ ವೇರಿಯಂಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇವೆ. ಮ್ಯಾಕ್‌ಬುಕ್ ಏರ್ M3 ಲ್ಯಾಪ್‌ಟಾಪ್‌ಗಳು 1080p ಫೇಸ್‌ಟೈಮ್ ಕ್ಯಾಮೆರಾ, ಮೂರು ಮೈಕ್ರೊಫೋನ್‌ಗಳು ಮತ್ತು ಸ್ಪಾಟಿಯಲ್ ಆಡಿಯೊ ಮತ್ತು ಡಾಲ್ಬಿ ಅಟ್ಮಾಸ್‌ಗೆ ಸಪೋರ್ಟ್ ಸಹ ನೀಡಲಿವೆ. ಅಲ್ಲದೆ ಸ್ಟಾರ್‌ಲೈಟ್, ಸ್ಪೇಸ್ ಗ್ರೇ ಮತ್ತು ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇವೆ.


Click it and Unblock the Notifications








