ಆಪಲ್‌ ಮ್ಯಾಕ್‌ಬುಕ್ ಪ್ರೊ, ಮ್ಯಾಕ್‌ಬುಕ್ ಏರ್‌ ಮತ್ತು ಮ್ಯಾಕ್‌ ಮಿನಿ ಲಾಂಚ್!

|

ಇತ್ತೀಚಿಗಷ್ಟೆ ಐಫೋನ್ 12 ಸರಣಿಯನ್ನು ಲಾಂಚ್ ಮಾಡಿದ್ದ ಜನಪ್ರಿಯ ಆಪಲ್‌ ಸಂಸ್ಥೆಯು ಈಗ ಹೊಸದಾಗಿ ಮೂರು ಮ್ಯಾಕ್‌ಬುಕ್ ಮಾಡೆಲ್‌ಗಳನ್ನು ಅನಾವರಣ ಮಾಡಿದೆ. ಸಂಸ್ಥೆಯು ನಿನ್ನೆ ನಡೆದ WWCD 2020 ವರ್ಚುವಲ್ ಕಾರ್ಯಕ್ರಮದಲ್ಲಿ ಈ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ಈ ಮ್ಯಾಕ್‌ಬುಕ್‌ ಮಾಡೆಲ್‌ಗಳು ARM- ಆಧಾರಿತ ಸಿಲಿಕಾನ್ ಪ್ರೊಸೆಸರ್‌ಗಳನ್ನು ಆಧರಿಸಿವೆ.

WWCD 2020

ಹೌದು, ಆಪಲ್‌ ಸಂಸ್ಥೆಯು WWCD 2020 ವರ್ಚುವಲ್ ಕಾರ್ಯಕ್ರಮದಲ್ಲಿ ಮ್ಯಾಕ್‌ಬುಕ್ ಪ್ರೊ 13 ಇಂಚು, ಮ್ಯಾಕ್‌ಬುಕ್ ಏರ್‌ ಮತ್ತು ಮ್ಯಾಕ್‌ ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಮೂರು ಮ್ಯಾಕ್‌ ಮಾಡೆಲ್‌ಗಳು ಸಂಸ್ಥೆಯ ನೂತನ ARM- ಆಧಾರಿತ ಸಿಲಿಕಾನ್-ಆಪಲ್‌ M1 ಹೆಸರಿನ ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿವೆ. ಹಾಗಾದರೇ ಆಪಲ್‌ ಸಂಸ್ಥೆಯು ಈ ಮೂರು ಉತ್ಪನ್ನಗಳ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಮ್ಯಾಕ್

ಆಪಲ್ ಮೂರು ಹೊಸ ಮ್ಯಾಕ್ ಉತ್ಪನ್ನಗಳ ಭಾರತ ಬೆಲೆಗಳನ್ನು ಘೋಷಿಸಿದೆ. ಆಪಲ್ M1 ಸೊಕ್ ಚಾಲಿತ 13 ಇಂಚಿನ ಮ್ಯಾಕ್‌ಬುಕ್ ಪ್ರೊ 256 ಜಿಬಿ ಬೆಲೆಯು 1,22,900ರೂ. ಆಗಿದೆ. ಹಾಗೆಯೇ 512GB ವೇರಿಯಂಟ್‌ ಮಾಡೆಲ್‌ ಬೆಲೆಯು 1,42,900 ರೂ. ಆಗಿದೆ. 512 ಜಿಬಿ ಇಂಟೆಲ್ ಮಾದರಿಯ ಮ್ಯಾಕ್‌ಬುಕ್ ಪ್ರೊ 13 ಇಂಚಿನ ಬೆಲೆ 1,74,900 ರೂ. ಆಗಿದೆ. ಇನ್ನು 1 ಟಿಬಿ ಮಾದರಿಯ ಬೆಲೆಯು 1,94,900 ರೂ. ಆಗಿದೆ. ಹಿಂದಿನ ಮ್ಯಾಕ್‌ಬುಕ್ ಮಾದರಿಗಳಂತೆಯೇ ಹೊಸ ಉತ್ಪನ್ನಗಳು ಸಿಲ್ವರ್ ಮತ್ತು ಸ್ಪೇಸ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಬರುತ್ತವೆ.

ಆಪಲ್‌

ಅದೇ ರೀತಿ ಭಾರತದಲ್ಲಿ ಆಪಲ್‌ M1 ಎಸ್‌ಒಸಿ ಹೊಂದಿರುವ 256 ಜಿಬಿ ಮ್ಯಾಕ್‌ಬುಕ್ ಏರ್ ಬೆಲೆಯು 92,900 ರೂ. ಆಗಿದೆ. ಹಾಗೆಯೇ 512 ಜಿಬಿ ರೂಪಾಂತರದ ಬೆಲೆಯು 1,17,900ರೂ. ಆಗಿದೆ. ಇನ್ನು ಮ್ಯಾಕ್‌ಬುಕ್‌ ಏರ್ ಡಿವೈಸ್‌ ಸಿಲ್ವರ್, ಸ್ಪೇಸ್ ಗ್ರೇ ಮತ್ತು ಗೋಲ್ಡ್ ಸೇರಿದಂತೆ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಡಿವೈಸ್‌

ಆಪಲ್ ಹೊಸ ಮ್ಯಾಕ್ ಮಿನಿ ಡಿವೈಸ್‌ ಸ್ಪರ್ಧಾತ್ಮಕ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಭಾರತದಲ್ಲಿ, 256 ಜಿಬಿ ಸಂಗ್ರಹದ ಆಪಲ್‌ M1 ಹೊಂದಿದ ಮ್ಯಾಕ್ ಮಿನಿ ಡಿವೈಸ್‌ ಬೆಲೆ 64,900ರೂ. ಆಗಿದೆ. 512 ಜಿಬಿ ಶೇಖರಣಾ ಮಾದರಿಯ ಬೆಲೆಯು 84,900ರೂ. ಆಗಿದೆ. ಇನ್ನು ಈ ಡಿವೈಸ್‌ ಸಿಲ್ವರ್ ಕಲರ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ.

Most Read Articles
Best Mobiles in India

English summary
Apple launched MacBook Pro 13-inch, MacBook Air, and Mac Mini with its in-house M1 chip at its virtual event last night.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X