'ಶಾರುಖ್‌ ಖಾನ್‌'ರನ್ನು ಆಪಲ್ ಭಾರತದ ರಾಯಭಾರಿ ಮಾಡುತ್ತಂತೆ

By Suneel
|

ಕಿಂಗ್‌ಖಾನ್‌ ಎಂದೇ ಪ್ರಖ್ಯಾತವಾದ ಬಾಲಿವುಡ್‌ ಸಿನಿಮಾ ನಟ 'ಶಾರುಖ್ ಖಾನ್‌' ರವರು ಈಗ ಬೃಹತ್‌ ದೊಡ್ಡ ಟೆಕ್‌ ಕಂಪನಿಯ ಭಾರತದ ರಾಯಭಾರಿಯಾಗುತ್ತಿದ್ದಾರೆ. ಹೌದು ಬಹುಶಃ ಬೃಹತ್‌ ದೊಡ್ಡ ಟೆಕ್‌ ಕಂಪನಿ ಎಂದ ತಕ್ಷಣ ಗಿಜ್‌ಬಾಟ್‌ ಓದುಗರಿಗೆ 'ಆಪಲ್‌' ಕಂಪನಿ ಅಥವಾ 'ಗೂಗಲ್' ಕಂಪನಿ ನೆನಪಾಗುತ್ತದೆ. ಆದ್ರೆ 'ಶಾರುಖ್‌ ಖಾನ್‌' ಭಾರತದ ರಾಯಭಾರಿಯಾಗುತ್ತಿರುವುದು ಆಪಲ್‌ ಕಂಪನಿಗೆ ಎಂದು ವರದಿ ಮಾಡಲಾಗಿದೆ. ಆಪಲ್‌ ಕಂಪನಿಯ ಪ್ರೊಫೈಲ್‌ ಅನ್ನು ತೀಕ್ಷ್ಣವಾಗಿ ಪರೀಶೀಲಿಸಿದಾಗ 'ಕಿಂಗ್‌ ಖಾನ್‌' ಅನ್ನು ಆಪಲ್‌ ಭಾರತದ ರಾಯಭಾರಿಯಾಗಿ ಮಾಡುತ್ತಿದೆ ಎಂದು ವರದಿ ಮಾಡಲಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಆಪಲ್‌ ಸಿಇಓ 'ಟಿಮ್‌ ಕುಕ್‌' ಭಾರತದಲ್ಲಿ ಭೇಟಿ ನೀಡಿದ ವಿಶೇಷ ಸ್ಥಳಗಳು

1

1

ಆಪಲ್‌ ತನ್ನ ಹೊಸ ಐಫೋನ್‌ಅನ್ನು ಈ ವರ್ಷದಲ್ಲಿ ಲಾಂಚ್‌ ಮಾಡುವ ವೇಳೆ 'ಶಾರುಖ್‌ ಖಾನ್‌' ಆಪಲ್‌ನ ಭಾರತದ ರಾಯಭಾರಿ ಎಂಬುದನ್ನು ಪ್ರಕಟಣೆ ಮಾಡುತ್ತದೆ ಎಂದು ಸ್ಥಳಿಯ ವೆಬ್‌ಸೈಟ್‌ 'PC Tablet' ಅಜ್ಞಾತ ಮೂಲಗಳ ಪ್ರಕಾರ ಹೇಳಿದೆ.

2

2

ಆಪಲ್‌ ಹಲವು ರಾಯಭಾರಿಗಳನ್ನು ಹೊಂದಿದ್ದು, ಬ್ರೆಜಿಲ್‌ನಲ್ಲಿ ಸಾಕರ್‌ ಆಟಗಾರ 'ನೇಮಾರ್‌', ಅಮೆರಿಕದಲ್ಲಿ ಬಾಸ್ಕೆಟ್ ಬಾಲ್‌ ಆಟಗಾರ 'ಸ್ಟಿಫ್‌ ಕರ್ರಿ'ಯನ್ನು ಆಪಲ್‌ ತನ್ನ ಪ್ರಾಡಕ್ಟ್‌ಗಳ ಆಕರ್ಷಣೆಗಾಗಿ ಬಳಸಿಕೊಳ್ಳುತ್ತಿದೆ.

3

3

ಆಪಲ್‌ ಸಿಇಓ 'ಟಿಮ್‌ ಕುಕ್‌' ಕಳೆದ ತಿಂಗಳಷ್ಟೇ ಭಾರತಕ್ಕೇ ಭೇಟಿ ನೀಡಿದ್ದರು. ಟಿಮ್‌ ಕುಕ್‌'ಗೆ 'ಕಿಂಗ್‌ ಖಾನ್‌' ಡಿನ್ನರ್‌ ಪಾರ್ಟಿನೂ ಸಹ ನೀಡಿದ್ದರೂ. ಬಾಲಿವುಡ್‌ ಸಿನಿತಾರೆಗಳೆಲ್ಲಾ ಸೇರಿದ್ದ ಈ ಪಾರ್ಟಿಯಲ್ಲಿ 'ಟಿಮ್ ಕುಕ್'ರ ಮೈಂಡ್‌ ಒಳಗೆ ರಾಯಭಾರಿಗಾಗಿ 'ಕಿಂಗ್‌ ಖಾನ್‌- ಶಾರುಖ್‌ ಖಾನ್‌' ಮಾತ್ರ ಬಂದಿರುವ ಸೂಚನೆಗಳು ಕಾಣಿಸಿಕೊಂಡಿವೆ.

4

4

ಆಪಲ್‌ ಪ್ರಾಡಕ್ಟ್‌ ಮಾರಾಟ ವಿಷಯದಲ್ಲಿ ಚೀನಾ ಮಾರುಕಟ್ಟೆ ಕುಸಿದಿರುವ ಹಿನ್ನೆಲೆಯಲ್ಲಿ, ಭಾರತ ಆಪಲ್‌ ಪ್ರಾಡಕ್ಟ್‌ ಬೆಳವಣಿಗೆ ಉತ್ತಮ ಮಾರುಕಟ್ಟೆಯ ಕೇಂದ್ರ ಬಿಂದು ಎಂದು ಆಪಲ್‌ ಘೋಷಿಸಿದೆ.

5

5

"ಹೊಸ LTE ನೆಟ್‌ವರ್ಕ್‌ ದೇಶದಲ್ಲಿ ಬಂದಿರುವುದರಿಂದ, 2 ರಷ್ಟು ಮಾರುಕಟ್ಟೆ ಪಾಲನ್ನು ಮೀರಿ ಐಫೋನ್‌ ಮಾರಾಟ ಮಾಡಬಹುದು, ಆದರೆ ಭಾರತದಲ್ಲಿ ಬೆಲೆ ಅಡಚಣೆಯಾಗಿದ್ದರು ಸಹ "ಐಫೋನ್‌ ಎಸ್‌ಇ" ಹಲವು ಭಾರಿ ಮಾರಾಟವಾಗಿವೆ" ಎಂದು 'ಟಿಮ್‌ ಕುಕ್‌' ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಆಪಲ್‌ ಸಿಇಓ 'ಟಿಮ್‌ ಕುಕ್‌' ಭಾರತದಲ್ಲಿ ಭೇಟಿ ನೀಡಿದ ವಿಶೇಷ ಸ್ಥಳಗಳುಆಪಲ್‌ ಸಿಇಓ 'ಟಿಮ್‌ ಕುಕ್‌' ಭಾರತದಲ್ಲಿ ಭೇಟಿ ನೀಡಿದ ವಿಶೇಷ ಸ್ಥಳಗಳು

ಟೈಮ್ ಟ್ರಾವೆಲ್ ಭವಿಷ್ಯ: 350 ವರ್ಷಗಳ ಹಿಂದೆಯೇ ಐಫೋನ್ ಪತ್ತೆ ಟೈಮ್ ಟ್ರಾವೆಲ್ ಭವಿಷ್ಯ: 350 ವರ್ಷಗಳ ಹಿಂದೆಯೇ ಐಫೋನ್ ಪತ್ತೆ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
Apple to make Bollywood star Shah Rukh Khan an Indian brand ambassador report. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X