ಆಪಲ್‌ ಸಿಇಓ 'ಟಿಮ್‌ ಕುಕ್‌' ಭಾರತದಲ್ಲಿ ಭೇಟಿ ನೀಡಿದ ವಿಶೇಷ ಸ್ಥಳಗಳು

Written By:

ಪ್ರಖ್ಯಾತ ಟೆಕ್‌ ಕಂಪನಿಗಳ 'ಸಿಇಓ'ಗಳು ಇತರೆ ದೇಶಗಳಿಗೆ ಭೇಟಿ ನೀಡಿದರೆ ಕೇವಲ ಅವರ ಬ್ಯುನಿನೆಸ್‌ ಅಭಿವೃದ್ದಿಯ ಬಗ್ಗೆ ಮಾತ್ರ ಹೆಚ್ಚು ಚರ್ಚೆ, ಒಪ್ಪಂದಗಳನ್ನು ಮಾಡುತ್ತಾರೆ. ಆದರೆ ಭಾರತಕ್ಕೆ ಭೇಟಿ ನೀಡಿದ ಆಪಲ್‌ ಸಿಇಓ 'ಟಿಮ್ ಕುಕ್‌'ರವರು ಮಾತ್ರ ಇತರೆ ಟೆಕ್‌ ಸಿಇಓಗಳಿಗಿಂತ ವಿಭಿನ್ನ ಎನ್ನಬಹುದು. ಯಾಕಂದ್ರೆ ಭಾರತಕ್ಕೆ ಭೇಟಿ ನೀಡಿದ ಕೇವಲ ಎರಡು ದಿನಗಳಲ್ಲಿ ಮುಂಬೈನ ಸಿದ್ದಿವಿನಾಯಕ ದೇವಸ್ಥಾನ ಭೇಟಿ, ಬಾಲಿವುಡ್‌ ರೌಂಡ್‌ ಮಾತ್ರವಲ್ಲದೇ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಸಹ ನೋಡಿದ್ದಾರೆ.

ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ 'ಮಾರ್ಕ್‌ ಜುಕರ್‌ಬರ್ಗ್‌' ಮತ್ತು ಸತ್ಯ ನಾಡೆಲ್ಲಾ' ರವರು ಕೇವಲ ತಮ್ಮ ಉದ್ದೇಶಗಳನ್ನು ಮುಗಿಸಿ ಹಿಂದಿರುಗಿದ್ದರು. ಆದರೆ ಆಪಲ್‌ ಸಿಇಓ 'ಟಿಮ್‌ ಕುಕ್‌' ರವರು ಅವರಿಗಿಂತ ವಿಭಿನ್ನ ಎಂಬುದನ್ನು ಕೇವಲ ಎರಡು ದಿನಗಳಲ್ಲಿ ಅರ್ಥ ಮಾಡಿಸಿದ್ದಾರೆ. ಅಂದಹಾಗೆ ಟಿಮ್ ಕುಕ್‌'ರವರು ತಮ್ಮ ಬ್ಯುಸಿನೆಸ್‌ ಕಾರ್ಯಗಳಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಭಾರತಕ್ಕೆ ನೀಡಿ, ಇಲ್ಲಿನ ಸಭಾರಂಭಗಳಲ್ಲಿ ಪ್ರೀತಿಯಿಂದ ಭಾಗಿಯಾಗಿದ್ದಾರೆ. ಟಿಮ್‌ಕುಕ್‌'ರವರ ಭಾರತದ ಭೇಟಿ ಎರಡು ದಿನಗಳಲ್ಲಿ ಎಷ್ಟು ವಿಶೇಷವಾಗಿತ್ತು ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ನೋಡಿರಿ.

ಬೆಂಗಳೂರಿಗರಿಗೂ ಬಂತು ಆಪಲ್‌ನಲ್ಲಿ ಕೆಲಸ ಮಾಡುವ ಭಾಗ್ಯ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
rn

ಸಿದ್ಧಿವಿನಾಯಕ ದೇವಸ್ಥಾನ

1

ಟಿಮ್‌ ಕುಕ್‌'ರವರ ಭಾರತ ಭೇಟಿಯ ಮೊದಲನೇ ದಿನದ ವಿಶೇಷತೆ ಅವರು ಧಾರ್ಮಿಕ ಆಚರಣೆಯಲ್ಲಿ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಭಾಗವಹಿಸಿದ್ದು. ವೀಡಿಯೋ ನೋಡಿ.
ವೀಡಿಯೋ ಕೃಪೆ:Shree Siddhivinayak

ಅನಂತ್‌ ಅಂಬಾನಿ

ಅನಂತ್‌ ಅಂಬಾನಿ

2

ಆಪಲ್‌ ಸಿಇಓ ಮುಖೇಶ್‌ ಅಂಬಾನಿ ಮತ್ತು ಅನಂತ್‌ ಅಂಬಾನಿ ಅವರ ಜೊತೆ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯ.
ಚಿತ್ರ ಕೃಪೆ: Indian Express

ಶಾರುಖ್ ಖಾನ್‌ ನಿವಾಸದಲ್ಲಿ ಅಮಿತಾಬ್‌ ಬಚನ್‌

ಶಾರುಖ್ ಖಾನ್‌ ನಿವಾಸದಲ್ಲಿ ಅಮಿತಾಬ್‌ ಬಚನ್‌

3

ಬಾಲಿವುಡ್‌ ಕಿಂಗ್‌ಖಾನ್‌ ಶಾರುಖ್‌ ಖಾನ್‌ ರವರು ತಮ್ಮ ನಿವಾಸ "ಮನ್ನತ್‌"ನಲ್ಲಿ ಏರ್ಪಡಿಸಿದ್ದ ಪಾರ್ಟಿಯಲ್ಲಿ 'ಟಿಮ್‌ ಕುಕ್‌' ರವರು ಶಾರುಖ್‌ ಖಾನ್‌ ಮತ್ತು ಅಮಿತಾಬ್‌ ಬಚ್ಚನ್‌ ಜೊತೆ ಕ್ಯಾಮೆರಾಗೆ ಲುಕ್‌ ಕೊಟ್ಟಿದ್ದು ಹೀಗೆ.
ಚಿತ್ರ ಕೃಪೆ: ಟ್ವಿಟರ್‌

ಐಪಿಎಲ್‌ ಪಂದ್ಯದಲ್ಲಿ ಕುಕ್‌

ಐಪಿಎಲ್‌ ಪಂದ್ಯದಲ್ಲಿ ಕುಕ್‌

4

ಟಿಮ್‌ ಕುಕ್‌'ರವರು ಕಾನ್ಪುರದಲ್ಲಿ ಗುಜರಾತ್‌ ಲಯನ್ಸ್‌ ಮತ್ತು ಕೊಲ್ಕತ್ತ ನೈಟ್‌ ರೈಡರ್ಸ್‌ ಟೀಮ್‌ಗಳ ನಡುವಿನ ಐಪಿಎಲ್‌ ಪಂದ್ಯದ ಸಂದರ್ಭದಲ್ಲಿ ಅಲ್ಲಿ ತಮ್ಮ ಹಾಜರು ನೀಡಿದ್ದ ದೃಶ್ಯ.
ಚಿತ್ರ ಕೃಪೆ: BCCI

ಹೈದಾರಾಬಾದ್‌

ಹೈದಾರಾಬಾದ್‌

5

ಉತ್ತರ ಪ್ರದೇಶ ಭೇಟಿ ನಂತರ ಟಿಮ್‌ ಕುಕ್‌'ರವರು ಹೈದಾರಾಬಾದ್‌ನ GNITS ಮಹಿಳಾ ಕಾಲೇಜಿಗೆ ಭೇಟಿ ನೀಡಿ ಅಲ್ಲಿ ಅಭಿವೃದ್ದಿ ಕೇಂದ್ರ ಉದ್ಘಾಟನೆ ಮಾಡಿದ ಸಂದರ್ಭ ಕಳೆಯುತ್ತಿರುವ ಸಂತೋಷದ ಕ್ಷಣ.
ಚಿತ್ರ ಕೃಪೆ :ಟ್ವಿಟರ್‌

ಗೊಲ್ಕೊಂಡಾ ಕೋಟೆ

ಗೊಲ್ಕೊಂಡಾ ಕೋಟೆ

6

ಸಮಯವನ್ನು ಸರಿಯಾಗಿ ಬಳಕೆ ಮಾಡುತ್ತಿದ್ದ ಟಿಮ್‌ ಕುಕ್‌ರವರು ಹೈದಾರಾಬಾದ್‌ನ ಗೊಲ್ಕೊಂಡಾ ಕೋಟೆ ವೀಕ್ಷಿಸಿದ್ದು ಹೀಗೆ.
ಚಿತ್ರ ಕೃಪೆ: ಪಿಟಿಐ

ನಾಳೆಯ ದಿನಗಳು

ನಾಳೆಯ ದಿನಗಳು

7

ಟಿಮ್‌ ಕುಕ್‌'ರವರ ನಾಳೆಯ ದಿನದ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಕಾರಣ ಟಿಮ್‌ ಕುಕ್‌'ರವರು ಪ್ರಧಾನಿ ನರೇಂದ್ರ ಮೋದಿ'ಯವರನ್ನು ಭೇಟಿ ಮಾಡಲಿದ್ದಾರೆ.
ಚಿತ್ರ ಕೃಪೆ: youtube

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Tim Cook Shows World CEOs There's A LOT More To India Than Just Business. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot