ಗ್ರಾಹಕರ ಕುತೂಹಲ ಹೆಚ್ಚಿಸಿದೆ ಆಪಲ್ ಸಂಸ್ಥೆಯ ಮಾರ್ಚ್ ಕಾರ್ಯಕ್ರಮ!
ಟೆಕ್ ವಲಯದಲ್ಲಿ ಆಪಲ್ ಸಂಸ್ಥೆಯ ಲಾಂಚ್ ಕಾರ್ಯಕ್ರಮಗಳು ಕುತೂಹಲ ಮೂಡಿಸುತ್ತವೆ. ಸದ್ಯ ಆಪಲ್ ಸಂಸ್ಥೆಯು ಮಾರ್ಚ್ 2024 ರಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಿರುವ ಬಗ್ಗೆ ವರದಿಗಳಾಗಿದ್ದು, ಈ ಕಾರ್ಯಕ್ರಮದಲ್ಲಿ ಸಂಸ್ಥೆಯು ಕೆಲವು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.
ಹೌದು, ಆಪಲ್ ಸಂಸ್ಥೆಯು ಇದೇ ಮಾರ್ಚ್ ತಿಂಗಳಿನಲ್ಲಿ ಕಾರ್ಯಕ್ರಮವೊಂದನ್ನು ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಆಪಲ್ ಐಮ್ಯಾಕ್, ಐಫೋನ್ SE, ಏರ್‌ಟ್ಯಾಗ್ ಹಾಗೂ ಇತರೆ ಕೆಲವು ಇತ್ಪನ್ನಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಗಳು ಇವೆ. ಹಾಗೆಯೇ ಐಪ್ಯಾಡ್ ಹಾಗೂ ಮ್ಯಾಕ್ ಸರಣಿಗಳಿಗಾಗಿ ಹೊಸ ಡಿವೈಸ್ ಅನಾವರಣ ಮಾಡುವ ಸಾಧ್ಯತೆಗಳೂ ಇವೆ.

ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಪ್ರಕಾರ, ಆಪಲ್ ಸಂಸ್ಥೆಯು ಐಪ್ಯಾಡ್ ಪ್ರೊ ಮತ್ತು ಐಪ್ಯಾಡ್ ಏರ್‌ನ ಹೊಸ ಆವೃತ್ತಿಗಳಲ್ಲಿ ಕೆಲಸ ನಿರ್ವಹಿಸುತ್ತಿದೆ. ಸಂಸ್ಥೆಯು ಈಗಾಗಲೇ ಅಸ್ತಿತ್ವದಲ್ಲಿರುವ ಐಪ್ಯಾಡ್ ಪ್ರೊ, ಐಪ್ಯಾಡ್ (9 ನೇ ಮತ್ತು 10 ನೇ ತಲೆಮಾರಿನ), ಐಪ್ಯಾಡ್ ಏರ್ ಮತ್ತು ಐಪ್ಯಾಡ್ ಮಿನಿ ಐದು ಐಪ್ಯಾಡ್ ಮಾದರಿಗಳಿಗೆ ಸೇರಲಿದೆ.
ಬಿಗ್ ಸ್ಕ್ರೀನ್ ಐಪ್ಯಾಡ್ ಏರ್
ಹೊಸ ಐಪ್ಯಾಡ್ ಏರ್ ಮಾದರಿಗಳು ಕ್ರಮವಾಗಿ 10.9 ಇಂಚುಗಳು ಮತ್ತು 12.9 ಇಂಚುಗಳ ಗಾತ್ರ ಪಡೆದಿರುವ ಸ್ಕ್ರೀನ್‌ಗಳನ್ನು ಹೊಂದಿವೆ ಎಂದು ನಿರೀಕ್ಷಿಸಲಾಗಿದೆ. ಆದರೆ ಎಲ್ಲಾ-ಕಾರ್ಯಕ್ಷಮತೆಯು ಶಕ್ತಿಯುತ M2 ಚಿಪ್‌ನೊಂದಿಗೆ ಕೆಲಸ ಪಡೆಯುತ್ತದೆ ಎನ್ನಲಾಗಿದೆ. ಆದರೆ ಹಿಂಭಾಗದ ಕ್ಯಾಮರಾ ವೈ-ಫೈ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಲ್ಲಿ ಹೆಚ್ಚಿನ ಅಪ್‌ಡೇಟ್ ಜೊತೆಗೆ ಮರುವಿನ್ಯಾಸವನ್ನು ಪಡೆಯುತ್ತದೆ ಎಂದು ಹೇಳಲಾಗಿದೆ.

15 ಇಂಚಿನ ಮ್ಯಾಕ್‌ಬುಕ್ ಏರ್
ಆಪಲ್ ತನ್ನ ಮ್ಯಾಕ್‌ಬುಕ್ ಏರ್ ಶ್ರೇಣಿಯನ್ನು ಈಗ ಹೊಸ 13 ಇಂಚಿನ ಮತ್ತು 15 ಇಂಚಿನ ಮಾಡೆಲ್‌ಗಳಿಗೆ ಅಪ್‌ಡೇಟ್ ಮಾಡಲು ಯೋಜಿಸುತ್ತಿದೆ. ಅದು M3 ಚಿಪ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಇನ್ನು ಆಪಲ್ ಸಂಸ್ಥೆಯ M3 ಚಿಪ್ ಇತ್ತೀಚಿನ ಪ್ರೊಸೆಸರ್ ಆಗಿದ್ದು ಅದು ಕಳೆದ ವರ್ಷ ಬಿಡುಗಡೆಯಾದ ಹೊಸ ಮ್ಯಾಕ್‌ಬುಕ್ ಪ್ರೊ ಮತ್ತು ಐಮ್ಯಾಕ್ ಮಾಡೆಲ್‌ಗಳಿಗೆ ಶಕ್ತಿ ತುಂಬುತ್ತದೆ.
ಆಪಲ್ M3 ಚಿಪ್ ಹೆಚ್ಚು ನೈಜವಾದ ಗ್ರಾಫಿಕ್ಸ್ ಮತ್ತು ಎಫೆಕ್ಟ್‌ಗಳೊಂದಿಗೆ ಮ್ಯಾಕ್‌ಬುಕ್ ಏರ್ ಮಾದರಿಗಳ ಗೇಮಿಂಗ್ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ. ಈ M3 ಚಿಪ್ ಕಳೆದ ವರ್ಷ ಬಿಡುಗಡೆಯಾದ 14 ಇಂಚಿನ ಮ್ಯಾಕ್‌ಬುಕ್ ಪ್ರೊ ಡಿವೈಸ್, 16 ಇಂಚಿನ ಮ್ಯಾಕ್‌ಬುಕ್ ಪ್ರೊ ಡಿವೈಸ್ ಹಾಗೂ 24 ಇಂಚಿನ ಐಮ್ಯಾಕ್ ಮಾದರಿಗಳನ್ನು ಸಹ ಸಪೋರ್ಟ್ ಮಾಡುತ್ತದೆ.
ಇನ್ನು ಮ್ಯಾಕ್‌ಬುಕ್ ಏರ್ ಮಾಡೆಲ್‌ಗಳ ವಿನ್ಯಾಸವು ಈ ವರ್ಷ ಹೆಚ್ಚು ಬದಲಾವಣೆ ಆಗುವುದಿಲ್ಲ. ಅದಾಗ್ಯೂ, ಅವು ಇತರ ಮ್ಯಾಕ್‌ಗಳಂತೆ ವೈ-ಫೈ 6E ಕನೆಕ್ಟಿವಿಟಿ ಪಡೆದಿರಬಹುದು. ಸಂಸ್ಥೆಯ 13 ಇಂಚಿನ ಮ್ಯಾಕ್‌ಬುಕ್ ಏರ್ ಮಾಡೆಲ್ ಅನ್ನು ಜುಲೈ 2022 ರಲ್ಲಿ ಕೊನೆಯದಾಗಿ ರಿಫ್ರೆಶ್ ಮಾಡಲಾಗಿದೆ. ಆದರೆ 15 ಇಂಚಿನ ಮ್ಯಾಕ್‌ಬುಕ್ ಏರ್ ಮಾಡೆಲ್ ಅನ್ನು ಜೂನ್ 2023 ರಲ್ಲಿ ಪರಿಚಯಿಸಲಾಯಿತು.
ಆಪಲ್ M3 ಅಲ್ಟ್ರಾ ಚಿಪ್‌ನ ವ್ಯಾಪಕ ಪರೀಕ್ಷೆಯನ್ನು ಪ್ರಾರಂಭಿಸಿಲ್ಲ ಎಂದು ಬ್ಲೂಮ್‌ಬರ್ಗ್ ಕಳೆದ ನವೆಂಬರ್‌ನಲ್ಲಿ ವರದಿ ಮಾಡಿದೆ. ಅದು ಮ್ಯಾಕ್ ಸ್ಟುಡಿಯೋ ಮತ್ತು ಮ್ಯಾಕ್ ಪ್ರೊನ ಹೊಸ ಆವೃತ್ತಿಗಳಿಗೆ ಶಕ್ತಿ ನೀಡುತ್ತದೆ.
OLED ಸ್ಕ್ರೀನ್
ಆಪಲ್ ಸಂಸ್ಥೆಯು ಓಎಲ್‌ಇಡಿ ಸ್ಕ್ರೀನ್ ಪರಿಚಯಿಸುವತ್ತ ಚಿತ್ತ ಹರಿಸಿದ್ದು, ಇದು 11 ಇಂಚಿನ ಮತ್ತು 13 ಇಂಚಿನ OLED ಸ್ಕ್ರೀನ್‌ಗಳನ್ನು ಒಳಗೊಂಡಿರುವ ಹೊಸ ಐಪ್ಯಾಡ್ ಪ್ರೊ ಮಾದರಿಗಳನ್ನು ಪರಿಚಯಿಸಲು ವದಂತಿಗಳಿವೆ. ಈ ಸ್ಕ್ರೀನ್‌ಗಳು ಪ್ರಸ್ತುತ ಮಾದರಿಗಳ LCD ಸ್ಕ್ರೀನ್‌ಗಳಿಗಿಂತ ಹೆಚ್ಚು ಬ್ರೈಟ್ನೆಸ್ ಪಡೆದಿರಲಿವೆ. ಇತ್ತೀಚಿನ ಐಫೋನ್ ಮತ್ತು ಆಪಲ್ ವಾಚ್ ಮಾದರಿಗಳು, ಅಗ್ಗದ ಐಫೋನ್ SE ಹೊರತುಪಡಿಸಿ, ಈಗಾಗಲೇ OLED ಸ್ಕ್ರೀನ್ ಹೊಂದಿವೆ.


Click it and Unblock the Notifications








