Home
ಸುದ್ದಿಜಾಲ

Apple iphone: ಕ್ರಾಂತಿ ಸೃಷ್ಟಿಸಲು ಸಜ್ಜಾಗುತ್ತಿದೆ ಆಪಲ್...ಇಲ್ಲಿದೆ ಮಾಹಿತಿ!

ಆಪಲ್‌ ಕಂಪೆನಿಯ ಐಫೋನ್‌ಗಳಿಗೆ ಭರ್ಜರಿ ಬೇಡಿಕೆ ಇದೆ. ಈ ನಡುವೆ ಭಾರತದಲ್ಲಿ ಮುಂದಿನ ಸರಣಿಯ ಐಫೋನ್‌ಗಳನ್ನು ತಯಾರಿಸಲು ಎಲ್ಲಾ ಸಿದ್ಧತೆ ನಡೆಯುತ್ತಿದೆ. ಅದರಲ್ಲೂ ಈ ಟಾಟಾ ಕಂಪೆನಿ ಈ ಫೋನ್‌ಗಳ ಜೋಡಣೆ ಕಾರ್ಯ ಮಾಡುವ ನಿರೀಕ್ಷೆ ಇದೆ. ಈ ನಡುವೆ ಮುಂದಿನ ಆಪಲ್‌ ಫೋನ್‌ಗಳ ಬಗ್ಗೆ ಅಚ್ಚರಿ ಮೂಡಿಸುವ ಮಾಹಿತಿ ಹೊರಬಿದ್ದಿದೆ.

ಹೌದು, ಐಫೋನ್‌ಗಳ ಕ್ರೇಜ್‌ ಎಂದಿಗೂ ಕಡಿಮೆ ಆಗುವುದಿಲ್ಲ. ಈ ನಡುವೆ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ದೊಡ್ಡ ಕ್ರಾಂತಿಯನ್ನುಂಟು ಮಾಡುವ ಭಾಗವಾಗಿ ಟೆಕ್ ದೈತ್ಯ ಆಪಲ್‌ ಬೆಜೆಲ್-ಲೆಸ್ ಮತ್ತು ನಾಚ್-ಲೆಸ್ (bezel-less and notch-less) ಡಿಸ್‌ಪ್ಲೇಯೊಂದಿಗೆ ಅದ್ಭುತವಾದ ಐಫೋನ್‌ನ(iPhone) ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಬನ್ನಿ ಈ ಫೋನ್‌ಗಳು ಹೇಗೆ ಕಾಣಿಸಲಿವೆ, ಎಂದಿನಿಂದ ಈ ಫೋನ್‌ಗಳು ಲಭ್ಯ ಇರಲಿವೆ ಎಂಬುದನ್ನು ತಿಳಿಯೋಣ.

Apple iphone: ಕ್ರಾಂತಿ ಸೃಷ್ಟಿಸಲು ಸಜ್ಜಾಗುತ್ತಿದೆ ಆಪಲ್...ಇಲ್ಲಿದೆ ಮಾಹಿತಿ!

ವಿಶೇಷ ಐಫೋನ್‌ಗಳು : ಭವಿಷ್ಯದ ಐಫೋನ್‌ಗಳಿಗಾಗಿ ಬೆಜೆಲ್-ಲೆಸ್, ನಾಚ್‌-ಲೆಸ್ ಡಿಸ್‌ಪ್ಲೇಯನ್ನು ವಿನ್ಯಾಸಗೊಳಿಸಲು ಆಪಲ್ ಕಂಪೆನಿಯು ಸ್ಯಾಮ್‌ಸಂಗ್ (Samsung) ಮತ್ತು ಎಲ್‌ಜಿಯೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದ್ದು, ಅದರಂತೆ ಡಿಸ್‌ಪ್ಲೇನ ಕೆಳಭಾಗದಲ್ಲಿ ಕ್ಯಾಮೆರಾ ಮತ್ತು ಸೆನ್ಸರ್‌ಗಳನ್ನು ಇರಿಸಲು ಕಂಪನಿಯು ಯೋಜಿಸಿದೆ ಎಂದು ಹೇಳಲಾಗುತ್ತಿದೆ.

ಆಪಲ್‌ 2017 ರಲ್ಲಿ ಐಫೋನ್ 10 (iPhone 10) ಅನ್ನು ಲಾಂಚ್‌ ಮಾಡಿತ್ತು. ಈ ಫೋನ್ ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಸೂಪರ್ ಸ್ಲಿಮ್ ಸೈಡ್ ಬೆಜೆಲ್‌ಗಳನ್ನು ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಮತ್ತು ಸೆಲ್ಫಿ ಕ್ಯಾಮೆರಾ ಮತ್ತು ಫೇಸ್ ಐಡಿಗಳನ್ನು ಮರೆಮಾಡಲು ಮೇಲ್ಭಾಗದಲ್ಲಿ ದಪ್ಪವಾದ ನಾಚ್ ಹೊಂದಿದ್ದ ಫೋನ್‌ ಆಗಿ ಜನಪ್ರಿಯತೆ ಪಡೆದುಕೊಂಡಿತ್ತು. ಇದಾದ ನಂತರ ಐಫೋನ್‌ 14 ಪ್ರೊ ಸರಣಿಯನ್ನು ಪರಿಚಯಿಸುವವರೆಗೂ ಈ ವಿನ್ಯಾಸವು ಹೆಚ್ಚು ಕಡಿಮೆ ಹಾಗೆಯೇ ಇದೆ.

ಆದರೆ ಈಗ ಕಂಪನಿಯು ಡಿಸ್‌ಪ್ಲೇನಲ್ಲಿನ ವಿನ್ಯಾಸವನ್ನು ಬದಲಾವಣೆ ಮಾಡಲು ಮುಂದಾಗಿದ್ದು, ಈ ಮೂಲಕ ನಾಚ್ ಇಲ್ಲದ ಮತ್ತು ಶೂನ್ಯ ಬೆಜೆಲ್ ಆಯ್ಕೆಯ ಐಫೋನ್ ಅನ್ನು ಅನಾವರಣ ಮಾಡಲು ಸಜ್ಜಾಗಲಿದೆ ಎನ್ನಲಾಗಿದೆ. ಅದಾಗ್ಯೂ ಮೊದಲೇ ತಿಳಿಸಿದಂತೆ ಈ ವಿಶೇಷ ಶೈಲಿಯ ಡಿಸ್‌ಪ್ಲೇ ಆಯ್ಕೆಯನ್ನು ಯಾವ ಸರಣಿಯ ಫೋನ್‌ಗಳು ಹೊಂದಿರಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ದಕ್ಷಿಣ ಕೊರಿಯಾದ ಲೀಕ್‌ಸ್ಟರ್ ಐಸ್ ಯೂನಿವರ್ಸ್ ಪ್ರಕಾರ, ಆಪಲ್ ಕಂಪೆನಿಯು ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಜೊತೆಗೆ ಬೆಜೆಲ್-ಲೆಸ್, ನಾಚ್-ಲೆಸ್ ಡಿಸ್‌ಪ್ಲೇಯನ್ನು ವಿನ್ಯಾಸಗೊಳಿಸಲು ಕೆಲಸ ಮಾಡುತ್ತಿದೆ. ಹಾಗೆಯೇ ಕಂಪನಿಯು OLED ಡಿಸ್‌ಪ್ಲೇ ಬಳಸುವುದನ್ನು ಮುಂದುವರಿಸುತ್ತದೆ. ಇದನ್ನು ಐಫೋನ್‌ 12 ಸರಣಿಯಿಂದಲೂ ಬಳಸಲಾಗುತ್ತಿದ್ದು, ಆಪಲ್ ತನ್ನ ಮಿಡ್‌ ರೇಂಜ್‌ಬಜೆಟ್ ವಿಭಾಗದಲ್ಲಿ ಕರ್ವ್ಡ್ ಡಿಸ್‌ಪ್ಲೇಗಳನ್ನು ಬಳಸುವ ಅನೇಕ ಆಂಡ್ರಾಯ್ಡ್ ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ ಫ್ಲಾಟ್ ಡಿಸ್‌ಪ್ಲೇ ಬಳಸುವುದನ್ನು ಮುಂದುವರಿಸಲು ಬಯಸುತ್ತದೆ ಎಂದು ವರದಿ ಉಲ್ಲೇಖ ಮಾಡಲಾಗಿದೆ.

ಹಾಗೆಯೇ ಮುಂದಿನ ಫೋನ್‌‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 (Samsung Galaxy Z Fold 4) ನಲ್ಲಿ ಇರುವ ಹಾಗೆ ಕ್ಯಾಮೆರಾ ಮತ್ತು ಅಗತ್ಯ ಸೆನ್ಸರ್‌ಗಳನ್ನು ಡಿಸ್‌ಪ್ಲೇಯ ಕೆಳಗೆ ಇರಿಸಲು ಆಪಲ್‌ ಯೋಜಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂದರೆ ತೆಳುವಾದ ಫಿಲ್ಮ್ ಎನ್‌ಕ್ಯಾಪ್ಸುಲೇಶನ್ (TFE) ಮತ್ತು ಅಂಡರ್-ಪ್ಯಾನಲ್ ಕ್ಯಾಮೆರಾ (UPC) ತಂತ್ರಜ್ಞಾನಗಳನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗುತ್ತದಂತೆ. ಈ TFE ತೇವಾಂಶ ಮತ್ತು ಆಮ್ಲಜನಕದಿಂದ OLED ಯನ್ನು ರಕ್ಷಣೆ ಮಾಡುತ್ತದೆ.

ಈ ಬೆಜೆಲ್-ಲೆಸ್ ಸ್ಮಾರ್ಟ್‌ಫೋನ್‌ಗಳು ಹೊಸದಲ್ಲವಾದರೂ, ಪ್ರಮುಖ ಕಂಪೆನಿಗಳು ಇಂದಿಗೂ ಇನ್ನೂ ತಮ್ಮ ಫೋನ್‌ಗಳಲ್ಲಿ ಅಳವಡಿಕೆ ಮಾಡಿಲ್ಲ. ಅದರಲ್ಲೂ ಶಿಯೋಮಿ 2021 ರಲ್ಲಿ ಕ್ವಾಡ್ ಕರ್ವ್ಡ್ ವಾಟರ್‌ಫಾಲ್ ಡಿಸ್‌ಪ್ಲೇ ತಂತ್ರಜ್ಞಾನವನ್ನು ಒಳಗೊಂಡಿರುವ ಪರಿಕಲ್ಪನೆಯ ಸ್ಮಾರ್ಟ್‌ಫೋನ್ ಅನ್ನು ಪ್ರದರ್ಶನ ಮಾಡಿತ್ತು. ಈ ಫೋನ್‌ನ ಡಿಸ್‌ಪ್ಲೇ ಅಂಚುಗಳನ್ನು ಆವರಿಸಲಿದ್ದು, ತಲ್ಲೀನಗೊಳಿಸುವ ನೋಟವನ್ನು ನೀಡುತ್ತಿತ್ತು.

Apple iphone: ಕ್ರಾಂತಿ ಸೃಷ್ಟಿಸಲು ಸಜ್ಜಾಗುತ್ತಿದೆ ಆಪಲ್...ಇಲ್ಲಿದೆ ಮಾಹಿತಿ!

ಆಪಲ್‌ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ: ಈ ನಾಚ್-ಲೆಸ್, ಬೆಜೆಲ್-ಲೆಸ್ ಐಫೋನ್ ಕುರಿತು ಆಪಲ್‌ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಅದಾಗ್ಯೂ ಒಂದು ವರ್ಷದ ಬಳಿಕ ಈ ರೀತಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತವೆ ಎಂದು ನಿರೀಕ್ಷಿಸಬಹುದಷ್ಟೇ. ಉಳಿದಂತೆ ಆಪಲ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಹೊಸ ಐಫೋನ್ 15 ಮತ್ತು ಐಫೋನ್ 15 ಪ್ರೊ ಸರಣಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಪ್ರಮುಖ ಮಾಹಿತಿ ಪ್ರಕಾರ ಆಪಲ್ 15 ಸರಣಿಯಲ್ಲಿನ ಎಲ್ಲಾ ನಾಲ್ಕು ಐಫೋನ್‌ಗಳಿಗೆ ಒಂದೇ ರೀತಿಯ ಡಿಸ್‌ಪ್ಲೇಯನ್ನು ನೀಡುತ್ತದೆ ಎಂದು ತಿಳಿದುಬಂದಿದೆ. ಅಂದರೆ ಐಫೋನ್ 15 ಮತ್ತು ಐಫೋನ್ 15 ಪ್ರೊ ಫೋನ್‌ಗಳು 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದರೆ, ಐಫೋನ್ 15 ಪ್ಲಸ್ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.

Best Mobiles in India

English summary
Tech giant Apple is known to be working on the development of a flagship iPhone with bezel-less and notch-less display as part of a major revolution in the smartphone industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+