Apple: ಆಪಲ್‌ನಿಂದ ಹೊಸ ನಿರ್ಧಾರ: ಮುಂದಿನ ವರ್ಷ ಈ ಐಪ್ಯಾಡ್ ವೇರಿಯಂಟ್ ಸ್ಟಾಪ್?
ಆಪಲ್ (Apple) ಆಗಾಗ್ಗೆ ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡುವುದರ ಜೊತೆಗೆ ಶಾಕಿಂಗ್ ಮಾಹಿತಿಯನ್ನೂ ಸಹ ನೀಡುತ್ತಿರುತ್ತದೆ. ಆದರೆ,ಇದು ತನ್ನ ಗ್ರಾಹಕರ ಒಳಿತಿಗಾಗಿ ಮಾಡುವ ಪ್ರಕ್ರಿಯೆ ಅನ್ನುವುದು ನಿಮ್ಮ ಗಮನಕ್ಕೆ ಇರಲಿ. ಅದರಂತೆ ಈಗ ಮುಂದಿನ ವರ್ಷದಿಂದ ಈ ಐಪ್ಯಾಡ್ (iPad) ವೇರಿಯಂಟ್ ಸ್ಟಾಪ್ ಮಾಡಲು ಮುಂದಾಗಿದೆ.
ಹೌದು, ಕಳೆದ ಹನ್ನೆರಡು ವರ್ಷಗಳಲ್ಲಿ 2023 ಆಪಲ್‌ಗೆ ವಿಶೇಷವಾದ ವರ್ಷ. ಯಾಕೆಂದರೆ ಈ ವರ್ಷ ಯಾವುದೇ ಐಪ್ಯಾಡ್ ಅನ್ನು ಲಾಂಚ್ ಮಾಡಿಲ್ಲ. ಆದರೆ, ಆಪಲ್ ಮುಂದಿನ ವರ್ಷ ಹೊಸ ರೀತಿಯ ಡಿವೈಸ್‌ಗಳನ್ನು ಲಾಂಚ್ ಮಾಡಲು ಸಿದ್ಧವಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದರ ನಡುವೆ ನಿರಂತರವಾಗಿ ಬೆಳೆಯುತ್ತಿರುವ ಐಪ್ಯಾಡ್ ಶ್ರೇಣಿಯನ್ನು ಸುಗಮಗೊಳಿಸಲು ಕೆಲವು ಹಳೆಯ ಮಾದರಿಗಳನ್ನು ನಿಲ್ಲಿಸಲು ಮುಂದಾಗಿದೆ. ಹಾಗಿದ್ರೆ, ಯಾವೆಲ್ಲಾ ಡಿವೈಸ್‌ಗಳಿಗೆ ಗೇಟ್ ಪಾಸ್ ನೀಡಲಾಗುತ್ತದೆ ಅನ್ನೋ ವಿವರ ಇಲ್ಲಿದೆ ನೋಡಿ.

ಮುಂದಿನ ವರ್ಷದಿಂದ ಬದಲಾವಣೆ: ಹತ್ತು ವರ್ಷಗಳ ಹಿಂದೆ ಆಪಲ್‌ನ ಐಪ್ಯಾಡ್ ಕೇವಲ ಎರಡು ವೇರಿಯಂಟ್ ಆಯ್ಕೆ ಪಡೆದಿದ್ದು, ಅಂದರೆ ಒಂದು ದೊಡ್ಡದು ಮತ್ತೊಂದು ಚಿಕ್ಕದು. ಜೊತೆಗೆ ಹಿಂದಿನ ವರ್ಷದ ವೇರಿಯಂಟ್‌ಗಳನ್ನು ರಿಯಾಯಿತಿಯಲ್ಲಿಯೂ ಮಾರಾಟ ಮಾಡಿತು. ಅದರಂತೆ ಮುಂಬರುವ ವರ್ಷಗಳಲ್ಲಿ, ಆಪಲ್ ವಿವಿಧ ರೀತಿಯ ಗ್ರಾಹಕರನ್ನು ಆಕರ್ಷಿಸಲು ಮತ್ತು ಹೆಚ್ಚಿನ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಹೆಚ್ಚಿನ ಆಯ್ಕೆಗಳನ್ನು ಸೇರಿಸಲು ಮುಂದಾಗಿದೆ. ಪರಿಣಾಮವಾಗಿ, ಹಳೆಯ ಆವೃತ್ತಿಗಳಿಗೆ ವಿದಾಯ ಹೇಳಲಿದೆ ಎಂದು ತಿಳಿದುಬಂದಿದೆ.
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಐದು ಐಪ್ಯಾಡ್‌ಗಳ ವೇರಿಯಂಟ್‌ಗಳನ್ನು ನಾವು ನೋಡಬಹುದು ಅದರಲ್ಲಿ ಪ್ರೊ, ಏರ್, ಮಿನಿ, ಹಾಗೆಯೇ ಸಾಮಾನ್ಯ ಐಪ್ಯಾಡ್‌ನ ಒಂಬತ್ತನೇ ಮತ್ತು ಹತ್ತನೇ ತಲೆಮಾರುಗಳು. ಕೆಲವು ಮಾದರಿಗಳು ಸ್ವಲ್ಪ ವಿಭಿನ್ನ ಡಿಸ್ಪ್ಲೇ ಗಾತ್ರಗಳು ಮತ್ತು ಒಂದೇ ರೀತಿಯ ಫೀಚರ್ಸ್ ಹೊಂದಿದ್ದು, ಯಾವುದನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಲು ಬಳಕೆದಾರರಿಗೆ ಸವಾಲಾಗಿದೆ. ಪರಿಣಾಮ ಐಪ್ಯಾಡ್ ಶ್ರೇಣಿಯಲ್ಲಿ ಬದಲಾವಣೆಯನ್ನು ತರಲು ಆಪಲ್ ಮುಂದಾಗಿದೆ.

9 ನೇ ತಲೆಮಾರಿನ ಐಪ್ಯಾಡ್ ವೇರಿಯಂಟ್ ಮುಂದಿನ ವರ್ಷ ಸ್ಥಗಿತಗೊಳಿಸಬಹುದು ಎಂದು ತಿಳಿದುಬಂದಿದೆ. ಅಂದರೆ ಇದೇ ಐಪ್ಯಾಡ್ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಮುಂದಿನ ಐಪ್ಯಾಡ್ ಏರ್ ಮಾದರಿಗೆ M2 ಚಿಪ್ ಅನ್ನು ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ. ಹಾಗೆಯೇ 2024 ರ ಕೊನೆಯಲ್ಲಿ ರಿಫ್ರೆಶ್ ಮಾಡಲಾದ ಐಪ್ಯಾಡ್ ಪ್ರೊ ಕೂಡ ನವೀಕರಣ ಪಡೆಯಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಆಪಲ್ 2015 ರ ಆಪಲ್ ಪೆನ್ಸಿಲ್ ಅನ್ನು ನಿಧಾನವಾಗಿ ಹೊರಹಾಕಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಇನ್ನು ಐಪ್ಯಾಡ್ ಪ್ರೊ ಎರಡು ಗಾತ್ರಗಳಲ್ಲಿ ಬರಲಿದೆ ಎಂದು ತಿಳಿದುಬಂದಿದ್ದು, ಎಂದಿನಂತೆ 11 ಇಂಚುಗಳು ಮತ್ತು 12.9 ಇಂಚುಗಳ ಆಯ್ಕೆಯನ್ನು ಇವುಗಳಲ್ಲಿ ಕಾಣಬಹುದಾಗಿದೆ. ಮುಂಬರುವ ಪ್ರೊ ಮಾದರಿಗಳು M3 ಚಿಪ್‌ನೊಂದಿಗೆ ಬರುತ್ತವೆ ಎಂದು ಹೇಳಲಾಗುತ್ತಿದೆ. ನಂತರ, 12.9 ಇಂಚಿನ ಮಿನಿಎಲ್ಇಡಿ ಬದಲಿಗೆ OLED ಡಿಸ್‌ಪ್ಲೇ ಆಯ್ಕೆ ನೀಡಬಹುದು ಎಂದೂ ಸಹ ಹೇಳಲಾಗುತ್ತಿದೆ.

ಐಪ್ಯಾಡ್ ಏರ್ ಕೂಡ ಮುಂದಿನ ವರ್ಷ ಎರಡು ಗಾತ್ರದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ. ಅದರಲ್ಲಿ ಪ್ರೊ 11 ಇಂಚಿನ ಮತ್ತು 12.9 ಇಂಚಿನ ಮಾದರಿಗಳು. ಗ್ರಾಹಕರು ವಿವಿಧ ಬೆಲೆಗಳಲ್ಲಿ ಹೆಚ್ಚಿನ ಆಯ್ಕೆಗಳನ್ನು ಪಡೆಯುವಂತೆ ಮಾಡುವುದೇ ಈ ಕ್ರಮದ ಹಿಂದಿನ ಉದ್ದೇಶವಾಗಿದೆ ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇದಕ್ಕೆ ಕಾರಣ ಏನೆಂದರೆ ಹಲವಾರು ಗ್ರಾಹಕರು ಪ್ರೊ ಮಾದರಿಗಾಗಿ ಹೆಚ್ಚಿನ ಹಣವನ್ನು ನೀಡುವ ಬದಲು ದೊಡ್ಡ ಐಪ್ಯಾಡ್ ಅನ್ನು ಖರೀದಿ ಮಾಡಬಹುದು. ಇದರೊಂದಿಗೆ ಹೊಸ ಐಪ್ಯಾಡ್ ಪ್ರೊ ಮತ್ತು ಏರ್ ಮಾಡೆಲ್‌ಗಳನ್ನು ಮಾರ್ಚ್ 2024 ರಲ್ಲಿ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ


Click it and Unblock the Notifications








