ಐಫೋನ್ ಪ್ರಿಯರಿಗೆ ಕಾದಿದೆ ಬಿಗ್ ಶಾಕ್!..ನೀವು ಹುಬ್ಬೇರಿಸುವುದು ಪಕ್ಕಾ!
ಟೆಕ್ ದೈತ್ಯ ಆಪಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್ 15 ಸರಣಿಯನ್ನು ಇನ್ನೇನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಸರಣಿಯು ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ (ಅಥವಾ ಅಲ್ಟ್ರಾ) ಹೆಸರಿನಿಂದ ಅನಾವರಣ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ ಐಫೋನ್ 15 ಬಿಡುಗಡೆಗೆ ಮುನ್ನವೇ ಸಂಸ್ಥೆಯ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
ಹೌದು, ಆಪಲ್ ಸಂಸ್ಥೆಯು ತನ್ನ ನೂತನ ಐಫೋನ್ 15 ಸರಣಿಯನ್ನು ಅಧಿಕೃತವಾಗಿ ಲಾಂಚ್ ಮಾಡಲು ಸಕಲ ರೀತಿ ಸಜ್ಜಾಗುತ್ತಿದೆ. ಈ ನಡುವೆ ಆಪಲ್ ಸಂಸ್ಥೆಯು ಏಕಾಏಕಿ ಗ್ರಾಹಕರಿಗೆ ಶಾಕ್ ನೀಡಿದ್ದು, ಐಫೋನ್ 15 ಸರಣಿ ಲಾಂಚ್ ಬಳಿಕ ತನ್ನ ಕೆಲವು ಜನಪ್ರಿಯ ಐಫೋನ್ ಮಾಡೆಲ್‌ಗಳನ್ನು ನಿಲ್ಲಿಸಲಿದೆ ಎಂದು ಇತ್ತೀಚಿನ ವರದಿಯಿಂದ ತಿಳಿದು ಬಂದಿದೆ.

ಆ ಪೈಕಿ ಸಂಸ್ಥೆಯು ಕಳೆದ ವರ್ಷ ಬಿಡುಗಡೆ ಮಾಡಿದ್ದ ಐಫೋನ್ 14 ಪ್ರೊ, ಐಫೋನ್ 14 ಪ್ರೊ ಮ್ಯಾಕ್ಸ್, ಐಫೋನ್ 12 ಮತ್ತು ಐಫೋನ್ 13 ಮಿನಿ ಇನ್ನು ಸ್ಥಗಿತವಾಗಲಿವೆ. ಹೊಸ ಮಾಡೆಲ್‌ಗಳ ಮಾರಾಟವನ್ನು ಹೆಚ್ಚಿಸಲು ಕಂಪನಿಯು ಹಳೆಯ ಪ್ರೊ ಆವೃತ್ತಿಗಳಿಗೆ ಗೇಟ್ ಪಾಸ್ ನೀಡುತ್ತದೆ. ಹಾಗೆಯೇ ಹೊಸ ಸರಣಿ ಲಾಂಚ್ ಬಳಿಕ ಭಾರತದಲ್ಲಿ, ಕೆಲವು ಹಳೆಯ ಐಫೋನ್‌ಗಳು 10,000 ರೂ.ಗಳಷ್ಟು ಬೆಲೆಯನ್ನು ಕಡಿತವಾಗುವ ಸಾಧ್ಯತೆಗಳು ಇರುತ್ತವೆ.
* ಐಫೋನ್ 14 ಬೆಲೆಯು 79,900ರೂ
* ಐಫೋನ್ 14 ಪ್ಲಸ್ ಬೆಲೆಯು 89,900ರೂ
* ಐಫೋನ್ 14 ಪ್ರೊ ಬೆಲೆಯು 1,29,900ರೂ
* ಐಫೋನ್ SE ಬೆಲೆಯು 49,900ರೂ
* ಐಫೋನ್ 13 ಬೆಲೆಯು 69,900ರೂ
* ಐಫೋನ್ 12 ಬೆಲೆಯು 59,900ರೂ (64GB ವೇರಿಯಂಟ್)

ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಫೀಚರ್ಸ್ : ಐಫೋನ್ 14 ಪ್ರೊ ಫೋನ್ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಹೊಂದಿದ್ದು, ಮೊದಲ ಬಾರಿಗೆ ಆಲ್ವೇಸ್ ಆನ್ ಡಿಸ್‌ಪ್ಲೇ ನೀಡುತ್ತದೆ. ಅದೇ ರೀತಿ ಐಫೋನ್ 14 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ರೆಟಿನಾ XDR ಡಿಸ್‌ಪ್ಲೇ ಹೊಂದಿದ್ದು, ಇದು ಸಹ ಆಲ್ವೇಸ್ ಆನ್ ಕಾರ್ಯವನ್ನು ಹೊಂದಿದೆ.
ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯು 48 ಮೆಗಾ ಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ಕ್ಯಾಮೆರಾವನ್ನು 65 ಪ್ರತಿಶತ ದೊಡ್ಡ ಸಂವೇದಕವನ್ನು ಹೊಂದಿದೆ. 48 ಮೆಗಾ ಪಿಕ್ಸೆಲ್ ಅಗಲದ ಕ್ಯಾಮೆರಾ 2x ಟೆಲಿಫೋಟೋ ವೀಕ್ಷಣೆಯನ್ನು ಸಹ ನೀಡುತ್ತದೆ. ಐಫೋನ್ 14 ಪ್ರೊ ಆಕ್ಷನ್ ಮೋಡ್ ಅನ್ನು ನೀಡುತ್ತದೆ, ಇದು ಆಟೋಫೋಕಸ್, ಕ್ರ್ಯಾಶ್ ಡಿಟೆಕ್ಷನ್ ಮತ್ತು Emergency SOS via satellite ಸಂಪರ್ಕವನ್ನು ಬಳಸಿಕೊಂಡು ಸುಧಾರಿತ ಮುಂಭಾಗದ ಕ್ಯಾಮೆರಾ.
ಆಪಲ್‌ನ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಈ ಎರಡು ಫೋನ್‌ಗಳು A16 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್ ಪಡೆದಿವೆ. ಆರು-ಕೋರ್ CPU ಹೊಂದಿದ್ದು. ಅಧಿಕ ಕಾರ್ಯಕ್ಷಮತೆಯ ಕೋರ್‌ಗಳನ್ನು ಒಳಗೊಂಡಿದೆ. ಇನ್ನು ಹೊಸ A16 ಚಿಪ್‌ಗಳು ಡೈನಾಮಿಕ್ ಐಲ್ಯಾಂಡ್ ಫೀಚರ್ ನಲ್ಲಿ ಕಂಡುಬರುವ ಮೃದುವಾದ ಅನಿಮೇಷನ್‌ಗಳಿಗೆ ಶಕ್ತಿ ತುಂಬಲು ಸಹಾಯ ಮಾಡುತ್ತದೆ.
ಐಫೋನ್ 13 ಮಿನಿ ಫೋನ್ ಫೀಚರ್ಸ್ : ಐಫೋನ್ 13 ಮಿನಿ ಫೋನ್ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. . 800nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್ ಸೌಲಭ್ಯ ಪಡೆದಿದೆ.
ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.


Click it and Unblock the Notifications








