Home
ಸುದ್ದಿಜಾಲ

ಐಫೋನ್ 14 ಇನ್ಮುಂದೆ ಈ ಬಣ್ಣದಲ್ಲೂ ಲಭ್ಯ?; ಯಾಕೆ ಗೊತ್ತಾ?

ಆಪಲ್‌ನ ಯಾವುದೇ ಡಿವೈಸ್‌ಗಳು ಗ್ರಾಹಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತವೆ. ಅದರಲ್ಲೂ ಐಫೋನ್‌ಗಳು ಮಾತ್ರ ಬಳಕೆದಾರರಿಗೆ ವಿಶೇಷ ಹಾಗೂ ಅಚ್ಚುಮೆಚ್ಚು. ಇದನ್ನು ಮನಗಂಡಿರುವ ಆಪಲ್‌ ಸಂಸ್ಥೆ ಇನ್ಮುಂದೆ ತನ್ನ ಫೋನ್‌ನ ಬಣ್ಣದಲ್ಲಿ ಬದಲಾವಣೆ ಮಾಡಲಿದೆ.

ಹೌದು, ಕಳೆದ ಕೆಲವು ದಿನಗಳ ಹಿಂದೆ ಗೋಲ್ಡ್‌ ಐಫೋನ್‌ 14 ಸುದ್ದಿ ಭಾರೀ ವೈರಲ್ ಆಗಿತ್ತು. ಯಾಕೆಂದರೆ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ತಮ್ಮ ಗೆಲುವನ್ನು ಸಂಭ್ರಮಿಸಲು 35 ಚಿನ್ನದ ಲೇಪಿತ ಐಫೋನ್ 14 ಗಳನ್ನು ಖರೀದಿ ಮಾಡಿದ್ದಾರೆ. ಇವುಗಳನ್ನು ತಮ್ಮ ತಂಡದ ಸದಸ್ಯರಿಗೆ ನೀಡಲಿದ್ದಾರೆ. ಇದಾದ ಬಳಿಕ ಈಗ ಐಫೋನ್‌ 14 ಗೆ ಭಾರೀ ಬೇಡಿಕೆ ನಿರ್ಮಾಣ ಆಗಿದೆ ಎನ್ನಲಾಗಿದ್ದು, ಈಗ ಮತ್ತೊಂದು ವಿಷಯದಲ್ಲಿ ಐಫೋನ್‌ 14 ಮುನ್ನೆಲೆಗೆ ಬಂದಿದೆ.

ಐಫೋನ್ 14 ಇನ್ಮುಂದೆ ಈ ಬಣ್ಣದಲ್ಲೂ ಲಭ್ಯ?; ಯಾಕೆ ಗೊತ್ತಾ?

ಆಪಲ್‌ ಐಫೋನ್‌ 14 ಈಗ ಚಿನ್ನದ ಬಣ್ಣದಲ್ಲಿ?

ಮೆಸ್ಸಿ ಅವರ ಚಿನ್ನದ ಫೋನ್‌ಗಳು ಭಾರೀ ಸುದ್ದಿಯಾದ ನಂತರ ಇದೀಗ ಸಾಮಾನ್ಯ ಐಫೋನ್‌ 14 ಗಳು ಸಹ ಚಿನ್ನದ ಬಣ್ಣದಲ್ಲಿ ಕಾಣಿಸಿಕೊಳ್ಳಲಿವೆ ಎಂದು ವರದಿಯಾಗಿದೆ. ಅದರಂತೆ ಆಪಲ್‌ ಶೀಘ್ರದಲ್ಲೇ ತನ್ನ ಐಫೋನ್ 14 ಅನ್ನು ಹಳದಿ ಬಣ್ಣದಲ್ಲಿ ಪರಿಚಯಿಸಲಿದೆ ಎಂದು ಪ್ರಮುಖ ವರದಿಗಳಿಂದ ತಿಳಿದುಬಂದಿದೆ. ಆದರೂ ಸಹ ಈ ಫೋನ್‌ನ ಫೀಚರ್ಸ್‌ ಹಾಗೂ ಇನ್ನಿತರೆ ಶೈಲಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ.

ಆಪಲ್‌ನ ಪಿಆರ್‌ ತಂಡವು ಮುಂದಿನ ವಾರ ಉತ್ಪನ್ನ ಬ್ರೀಫಿಂಗ್ ಅನ್ನು ಯೋಜಿಸುತ್ತಿದೆ ಎಂದು ಮ್ಯಾಕ್ ರೂಮೋರ್ಸ್ ವರದಿ ಮಾಡಿದ್ದು, ಈ ವೇಳೆ ಯಾವುದೇ ಹೊಸ ಫೋನ್‌ ಬಗ್ಗೆ ಘೋಷಣೆ ಮಾಡದೆ ಈಗಾಗಲೇ ಭಾರೀ ಸದ್ದು ಮಾಡುತ್ತಿರುವ ಐಫೋನ್‌ 14 ಅನ್ನು ಬೇರೆ ಬಣ್ಣದಲ್ಲಿ ಪರಿಚಯಿಸುವ ಬಗ್ಗೆ ಉಲ್ಲೇಖಿಸಲಾಗುತ್ತದೆ ಎನ್ನಲಾಗಿದೆ. ಈ ನೀತಿಯು ಐಫೋನ್ 14 ಮಾರಾಟವನ್ನು ಹೆಚ್ಚಿಸುವ ಆಪಲ್‌ನ ಕಾರ್ಯತಂತ್ರದ ಭಾಗವಾಗಿದೆ ಎಂದೂ ಸಹ ತಿಳಿದುಬಂದಿದೆ.

ಐಫೋನ್ 14 ಇನ್ಮುಂದೆ ಈ ಬಣ್ಣದಲ್ಲೂ ಲಭ್ಯ?; ಯಾಕೆ ಗೊತ್ತಾ?

ಕಾಲಕಾಲಕ್ಕೆ ಈ ರೀತಿ ಬದಲಾವಣೆ ಮಾಡುತ್ತಿದೆ ಆಪಲ್

ಆಪಲ್ ಕಾಲಕಾಲಕ್ಕೆ ಈ ರೀತಿಯ ಕೆಲವು ಪ್ರಯೋಗಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಯಾಕೆಂದರೆ ಐಫೋನ್ 12 ಸರಣಿಯಲ್ಲಿ ಆಪಲ್ ಮಾರ್ಚ್ 2021 ರ ವೇಳೆಗೆ ಹೊಸ ನೇರಳೆ ಬಣ್ಣದ ಐಫೋನ್ ಅನ್ನು ಪರಿಚಯಿಸಿತ್ತು. ಇದಾದ ನಂತರ ಐಫೋನ್ 13 ಸರಣಿಯ ಲಾಂಚ್‌ ಮಾಡುವಾಗ, ಹಸಿರು ಬಣ್ಣದ ಫೋನ್‌ಗಳನ್ನು ಅನಾವರಣ ಮಾಡಿತ್ತು. ಈಗ ಹಳದಿ ಬಣ್ಣದ ಐಫೋನ್ 14 ಅನ್ನು ಪರಿಚಯಿಸಲು ಯೋಜಿಸುತ್ತಿರುವುದು ವಿಶೇಷವೇನಲ್ಲ.

ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಇದೇ ರೀತಿಯ ಬಣ್ಣದ ಫೋನ್‌ಗಳನ್ನು 2019 ರಲ್ಲಿ ಐಫೋನ್‌ 11 ಮತ್ತು 2018 ರಲ್ಲಿ ಐಫೋನ್‌ XR ನಲ್ಲಿ ಪರಿಚಯಿಸಲಾಗಿತ್ತು. ಆ ವೇಳೆ ಈ ಫೋನ್‌ಗಳು ಮಾರುಕಟ್ಟೆಯಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದವು. ಇವೆಲ್ಲಾ ಕ್ರಮಗಳು ಮೊದಲೇ ತಿಳಿಸಿದಂತೆ ಮಾರಾಟದ ತಂತ್ರವಾಗಿವೆಯೇ ಹೊರತು ಇದರಲ್ಲಿ ಬೇರೆ ವಿಷಯವಿಲ್ಲ. ಸದ್ಯಕ್ಕೆ ಐಫೋನ್‌ 14 ಮತ್ತು ಐಫೋನ್‌ 14 ಪ್ಲಸ್‌ ಮಿಡ್‌ನೈಟ್ ಬ್ಲಾಕ್, ಸ್ಟಾರ್‌ಲೈಟ್ ವೈಟ್‌, ರೆಡ್‌, ಬ್ಲೂ ಮತ್ತು ಪರ್ಪಲ್‌ ಕಲರ್‌ ಬಣ್ಣದಲ್ಲಿ ಕಾಣಿಸಿಕೊಂಡಿದೆ.

ಐಫೋನ್ 14 ಇನ್ಮುಂದೆ ಈ ಬಣ್ಣದಲ್ಲೂ ಲಭ್ಯ?; ಯಾಕೆ ಗೊತ್ತಾ?

ಇನ್ನು ಮೆಸ್ಸಿ ಅವರು ಆರ್ಡರ್‌ ಮಾಡಲಾದ ಅಷ್ಟೂ ಚಿನ್ನದ ಫೋನ್‌ಗಳು 1.73 ಕೋಟಿ ಬೆಲೆಯನ್ನು ಹೊಂದಿದ್ದು, ಈ ಫೋನ್‌ ಮೇಲೆ ಆಟಗಾರರ ಹೆಸರು, ಅವರ ಜರ್ಸಿ ಸಂಖ್ಯೆಗಳು ಮತ್ತು ಅರ್ಜೆಂಟೀನಾದ ಲಾಂಛನದ ಚಿತ್ರವನ್ನು ಮೂಡಿಸಲಾಗಿದೆ. ಐಡಿಸೈನ್ ಗೋಲ್ಡ್ ಕಂಪನಿ ಈ ಫೋನ್‌ಗಳನ್ನು ತಯಾರು ಮಾಡಿದ್ದು, ಈ ಎಲ್ಲಾ ಫೋನ್‌ಗಳನ್ನು ಈಗಾಗಲೇ ಪ್ಯಾರಿಸ್‌ನಲ್ಲಿರುವ ಸ್ಟಾರ್ ಅಪಾರ್ಟ್‌ಮೆಂಟ್‌ಗೆ ತಲುಪಿಸಲಾಗಿದೆ ಎಂದು ತಿಳಿದುಬಂದಿದೆ.

Best Mobiles in India

English summary
iPhone 14 is in the news once again and there are rumors that it will be available in yellow color from now on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+