microLED: ಮೈಕ್ರೋಎಲ್ಇಡಿ ಡಿಸ್‌ಪ್ಲೇನ ಅಲ್ಟ್ರಾ ವಾಚ್ ಯೋಜನೆಗೆ ಗುಡ್ ಬೈ ಹೇಳಲಿದೆ ಆಪಲ್! ಕಾರಣ ಏನು?
ಸ್ಮಾರ್ಟ್‌ವಾಚ್‌ಗಳು (Smartwatches) ಇಂದು ಒಂದು ಬಳಕೆದಾರರಿಗೆ ವಿಶೇಷವಾದ ಪ್ರಯೋಜನಗಳನ್ನು ಕಲ್ಪಿಸಿಕೊಡುತ್ತಿವೆ. ಅದರಲ್ಲೂ ಹೊಸದಾಗಿ ಅನಾವರಣ ಆಗುತ್ತಿರುವ ವಾಚ್‌ಗಳು ಭಿನ್ನ ಸೆನ್ಸರ್ ಮೂಲಕ ನಿಖರ ಆರೋಗ್ಯ ಮಾಹಿತಿ ಸೇರಿದಂತೆ ಇನ್ನಿತರೆ ರೀತಿಯಲ್ಲಿ ಬಳಕೆದಾರರಿಗೆ ಅತ್ಯಾನುಕೂಲವಾಗಿದೆ. ಈ ನಡುವೆ ಜೀವರಕ್ಷಕ ಎಂದು ಕರೆಸಿಕೊಂಡಿರುವ ಆಪಲ್ ವಾಚ್‌ಗಳಲ್ಲಿ ಕೆಲವು ಬದಲಾವಣೆ ಆಗಲಿದೆ ಎನ್ನಲಾಗಿದೆ.
ಹೌದು, ಆಪಲ್ ವಾಚ್‌ಗಳು ಇತರೆ ವಾಚ್‌ಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಈಗಾಗಲೇ ಸಾಕಷ್ಟು ಜನರ ಜೀವ ಉಳಿಸಿದ ಕೀರ್ತಿಯನ್ನು ಈ ವಾಚ್‌ಗಳು ಪಡೆದಿದ್ದು, ಈ ಮೂಲಕ ತಮ್ಮ ಬೇಡಿಕೆಯನ್ನು ಹೆಚ್ಚು ಮಾಡಿಕೊಂಡಿವೆ. ಆದರೆ ಈಗ ಮೈಕ್ರೋಎಲ್ಇಡಿ ಡಿಸ್‌ಪ್ಲೇನ (MicroLED display) ಅಲ್ಟ್ರಾ ವಾಚ್ ಪ್ಲ್ಯಾನ್‌ಗೆ ಆಪಲ್ ಗುಡ್ ಬೈ ಹೇಳಲಿದೆ ಎನ್ನಲಾಗಿದೆ. ಹಾಗಿದ್ರೆ, ಯಾಕೆ ಆಪಲ್ ಈ ನಿರ್ಧಾರ ಮಾಡಿದೆ?, ಏನಿದು ಮೈಕ್ರೋಎಲ್ಇಡಿ ಡಿಸ್‌ಪ್ಲೇ? ತಿಳಿಯಿರಿ.

ಮೈಕ್ರೋಎಲ್ಇಡಿ ಡಿಸ್‌ಪ್ಲೇನ ಆಪಲ್ ಅಲ್ಟ್ರಾ ವಾಚ್: ಆಪಲ್ ವಾಚ್ ಅಲ್ಟ್ರಾದಲ್ಲಿ ಮೈಕ್ರೋಎಲ್ಇಡಿ ತಂತ್ರಜ್ಞಾನವನ್ನು ಬಳಸುವ ತನ್ನ ಯೋಜನೆಗಳನ್ನು ಆಪಲ್ ಈ ಹಿಂದೆ ಘೋಷಣೆ ಮಾಡಿತ್ತು. ಆದರೆ ಮೈಕ್ರೊಎಲ್ಇಡಿ ಉತ್ಪನ್ನಕ್ಕೆ ಗಮನಾರ್ಹ ಮೌಲ್ಯವನ್ನು ಸೇರಿಸಲು ಸಾಧ್ಯವಿಲ್ಲವಾದ್ದರಿಂದ ಮತ್ತು ಉತ್ಪಾದನಾ ವೆಚ್ಚಗಳು ತುಂಬಾ ಹೆಚ್ಚಿರುವ ಕಾರಣಕ್ಕೆ ಆಪಲ್ ಈ ಯೋಜನೆಯಿಂದ ಹಿಂದೆ ಸರಿಯಲಿದೆ ಎನ್ನಲಾಗಿದೆ. ದಿ ಎಲೆಕ್‌ನ ವರದಿಯ ಪ್ರಕಾರ ಮೈಕ್ರೋಎಲ್‌ಇಡಿ ಡಿಸ್‌ಪ್ಲೇ ಇರುವ ಆಪಲ್ ವಾಚ್‌ನ ಚೊಚ್ಚಲ ಪ್ರದರ್ಶನವು 2026 ಕ್ಕಿಂತಲೂ ವಿಳಂಬವಾಗಬಹುದು ಎನ್ನಲಾಗಿದೆ.
ಮೈಕ್ರೋಎಲ್ಇಡಿ ಎಂದರೇನು?
ಮೈಕ್ರೋಎಲ್ಇಡಿ (ಮೈಕ್ರೋ ಲೈಟ್-ಎಮಿಟಿಂಗ್ ಡಯೋಡ್) ಡಿಸ್‌ಪ್ಲೇಗಳು ಪ್ರತ್ಯೇಕ ಎಲ್ಇಡಿಗಳನ್ನು ಪಿಕ್ಸೆಲ್‌ಗಳಾಗಿ ಬಳಕೆ ಮಾಡಿತ್ತವೆ, ತಮ್ಮದೇ ಆದ ಬೆಳಕು ಮತ್ತು ಬಣ್ಣಗಳನ್ನು ಈ ಮೂಲಕ ಹೊರಸೂಸುತ್ತವೆ. ಇದು ಎಲ್‌ಸಿಡಿ ಮತ್ತು ಓಎಲ್‌ಇಡಿ ಡಿಸ್‌ಪ್ಲೇಗಳಿಗೆ (OLED display) ಹೋಲಿಸಿದರೆ ತೀವ್ರ ಬ್ರೈಟ್‌ನೆಸ್, ಶಕ್ತಿಯ ದಕ್ಷತೆ ಮತ್ತು ಎದ್ದುಕಾಣುವ ಬಣ್ಣಗಳನ್ನು ನೀಡುತ್ತದೆ. ಇದಲ್ಲದೆ, ಸ್ಮಾರ್ಟ್ ವಾಚ್‌ಗಳಂತಹ ಸಣ್ಣ ಡಿವೈಸ್‌ಗಳಿಗೆ ಸೂಕ್ತವಾದ ಸ್ಲಿಮ್, ಹೊಂದಿಕೊಳ್ಳುವ ಡಿಸ್‌ಪ್ಲೇಯನ್ನು ಸಕ್ರಿಯಗೊಳಿಸಲು ಮೈಕ್ರೋಎಲ್ಇಡಿ ಸಹಾಯ ಮಾಡುತ್ತದೆ.

ಮೈಕ್ರೋಎಲ್ಇಡಿ ಆಪಲ್ ವಾಚ್ ಭವಿಷ್ಯದಲ್ಲಿ ಲಭ್ಯ ಇರಲಿದೆಯೇ?
ಆಪಲ್ ಮೈಕ್ರೋ ಎಲ್ಇಡಿ ಅಭಿವೃದ್ಧಿ ತಂಡದಿಂದ ಅನೇಕ ಜನರನ್ನು ವಜಾಗೊಳಿಸಿದೆ ಎನ್ನಲಾಗಿದೆ. ಈ ನಡುವೆ ಆಪಲ್ ಪೂರೈಕೆದಾರ AMS-Osram ಈ ಯೋಜನೆಯ ವಿಶೇಷ ಮೈಕ್ರೋಎಲ್ಇಡಿ ಚಿಪ್ ಪೂರೈಕೆದಾರ ಎಂದು ತಿಳಿದುಬಂದಿತ್ತು. ಆದರೆ ಆಪಲ್‌ನೊಂದಿಗಿನ ಅದರ ಮೈಕ್ರೋ ಎಲ್‌ಇಡಿ ಸಹಯೋಗವನ್ನು ಕಂಪನಿಯು ರದ್ದುಗೊಳಿಸಿದೆ ಎನ್ನಲಾಗಿದ್ದು, ಭವಿಷ್ಯದಲ್ಲಿ ಮೈಕ್ರೋ ಎಲ್‌ಇಡಿ ಡಿವೈಸ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಆಪಲ್ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಕಂಡುಕೊಳ್ಳಲಾಗಿದೆ.
ಮೈಕ್ರೋಎಲ್ಇಡಿ ಓಎಲ್‌ಇಡಿ ಗಿಂತ ಹೆಚ್ಚು ದುಬಾರಿ: ಮೈಕ್ರೋ ಎಲ್‌ಇಡಿ ಕಳೆದ 2 ದಶಕಗಳಿಂದ ಮಾರುಕಟ್ಟೆಯಲ್ಲಿದೆ. ಆದರೆ, ಆಪಲ್ ಈಗ ಅದರ ಮೇಲೆ ಕೆಲಸ ಮಾಡಲು ಮುಂದಾಗಿತ್ತು. ವಾಸ್ತವವಾಗಿ, ಮೈಕ್ರೋ ಎಲ್ಇಡಿ ಪ್ಯಾನಲ್‌ಗಳು ಓಎಲ್‌ಇಡಿ ಪ್ಯಾನೆಲ್‌ಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಕೊರಿಯನ್ ಕಂಪನಿ ಸ್ಯಾಮ್‌ಸಂಗ್ ಮೈಕ್ರೋ ಎಲ್ಇಡಿ ಸಹಾಯದಿಂದ ಸುಮಾರು 1 ಲಕ್ಷ 50 ಡಾಲರ್ ವೆಚ್ಚದ ಟಿವಿಯನ್ನು ಸಹ ತಯಾರು ಮಾಡಿದೆ.

ಇನ್ನು ಇನ್ಮುಂದೆ ಆಪಲ್ ತನ್ನ ಸ್ಮಾರ್ಟ್‌ವಾಚ್ ಸರಣಿಯ ಓಎಲ್‌ಇಡಿ ತಂತ್ರಜ್ಞಾನವನ್ನು ಸುಧಾರಿಸುವುದನ್ನು ಮುಂದುವರಿಸುತ್ತದೆ ಎಂದು ತಿಳಿದುಬಂದಿದೆ. ವಾರ್ಷಿಕ ಪ್ರವೃತ್ತಿಯ ಪ್ರಕಾರ ಆಪಲ್ ವರ್ಷದ ದ್ವಿತೀಯಾರ್ಧದಲ್ಲಿ ಐಫೋನ್ 16 ಸರಣಿಯೊಂದಿಗೆ ಆಪಲ್ ವಾಚ್ ಅಲ್ಟ್ರಾ 3 ಅನ್ನು ಲಾಂಚ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.


Click it and Unblock the Notifications








