Home
ಸುದ್ದಿಜಾಲ

Apple: ಆಪಲ್‌ ಪ್ರಿಯರಿಗೆ ಗುಡ್‌ ನ್ಯೂಸ್: ಕೆಲವೇ ವರ್ಷಗಳಲ್ಲಿ ಫೋಲ್ಡಬಲ್‌ ಐಫೋನ್, ಐಪ್ಯಾಡ್ ?

ಆಪಲ್‌ನ ಡಿವೈಸ್‌ಗಳು (Apple device) ಎಲ್ಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿರುತ್ತವೆ. ಅದರಲ್ಲೂ ಐಫೋನ್‌ಗಳಗಂತೂ ಭರ್ಜರಿ ಬೇಡಿಕೆ ಪಡೆದಿವೆ. ಅದಾಗ್ಯೂ ಆಂಡ್ರಾಯ್ಡ್‌ ಫೋನ್‌ಗಳ ಕೆಲವು ಫೀಚರ್ಸ್‌ ವಿಷಯಕ್ಕೆ ಬಂದರೆ ಆಪಲ್‌ ಇನ್ನೂ ಸಹ ಹಿಂದುಳಿದಿದೆ ಎಂದರೆ ತಪ್ಪಾಗಲಾರದು.

ಹೌದು, ಆಪಲ್‌ ಐಫೋನ್‌ಗಳು ಸ್ಮಾರ್ಟ್‌ಫೋನ್‌ ವಲಯದಲ್ಲಿ ದೊಡ್ಡಣ್ಣ ಎನಿಸಿಕೊಂಡರೂ ಸಹ ಈಗಾಗಲೇ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಲಭ್ಯ ಇರುವ ಹೆಚ್ಚಿನ ಮೆಗಾಪಿಕ್ಸೆಲ್‌ನ ಕ್ಯಾಮೆರಾ, ಎಐ ಫೀಚರ್ಸ್‌ ಸೇರಿದಂತೆ ಇನ್ನೂ ಅನೇಕ ಫೀಚರ್ಸ್‌ ಆಫಲ್‌ ಫೋನ್‌ಗಳಿಲ್ಲ. ಅದರಲ್ಲೂ ಫೋಲ್ಡಬಲ್‌ ಫೋನ್‌ ವಿಚಾರದಲ್ಲಂತೂ ಬಹು ದೂರ ನಿಂತು ಆಂಡ್ರಾಯ್ಡ್‌ ಫೋನ್‌ಗಳನ್ನು ಗಮನಿಸುತ್ತಲೇ ಬರುತ್ತಿದೆ. ಈ ಬೆಳವಣಿಗೆ ನಡುವೆ ಆಪಲ್‌ ಸಹ ಈ ವಿಭಾಗದಲ್ಲಿ ದೊಡ್ಡ ಕ್ರಾಂತಿ ಮಾಡಲು ಸಜ್ಜಾದಂತೆ ಕಂಡಿದೆ. ಹಾಗಿದ್ರೆ, ಆಪಲ್‌ ಫೋಲ್ಡಬಲ್‌ ಫೋನ್‌ಗಳನ್ನು ಯಾವಾಗ ಅನಾವರಣ ಮಾಡಲಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆಪಲ್‌ ಪ್ರಿಯರಿಗೆ ಗುಡ್‌ ನ್ಯೂಸ್:ಕೆಲವೇ ವರ್ಷಗಳಲ್ಲಿ ಫೋಲ್ಡಬಲ್‌ ಐಫೋನ್,ಐಪ್ಯಾಡ್?

ಶೀಘ್ರದಲ್ಲೇ ಆಪಲ್‌ ಫೋಲ್ಡಬಲ್‌ ಐಫೋನ್, ಐಪ್ಯಾಡ್: ಶೀಘ್ರದಲ್ಲೇ ಆಪಲ್‌ ಫೋಲ್ಡಬಲ್‌ ಫೋನ್‌ಗಳನ್ನು (Apple foldable phone) ಅನಾವರಣ ಮಾಡಲಿದೆ ಎಂದ ಮಾತ್ರಕ್ಕೆ ಮುಂದಿನ ಕೆಲವೇ ತಿಂಗಳಲ್ಲೋ ಅಥವಾ ಮುಂದಿನ ವರ್ಷಕ್ಕೋ ಅನಾವರಣ ಮಾಡುತ್ತದೆ ಎಂದು ತಿಳಿದುಕೊಳ್ಳಬೇಡಿ. ಯಾಕೆಂದರೆ ಆಪಲ್ 2026 ಅಥವಾ 2027 ರಲ್ಲಿ ಫೋಲ್ಡಬಲ್‌ ಆಪಲ್‌ ಡಿವೈಸ್‌ ಗಳನ್ನು ಅನಾವರಣ ಮಾಡಲಿದೆ ಎನ್ನಲಾಗಿದೆ. ಇವು 7 ರಿಂದ 8 ಇಂಚುಗಳಷ್ಟು ಡಿಸ್ಪ್ಲೇ ಗಾತ್ರದೊಂದಿಗೆ ಬರಲಿದೆ ಎನ್ನಲಾಗಿದೆ. ಈ ಮೂಲಕ ಸ್ಯಾಮ್‌ಸಂಗ್‌ಗೆ ನೇರ ಎದುರಾಳಿ ಆಗಲಿದೆ.

ಕೊರಿಯನ್ ವೆಬ್‌ಸೈಟ್ ದಿ ಎಲೆಕ್‌ನ ಮ್ಯಾಕ್‌ರೂಮರ್ಸ್ ವರದಿ ಮಾಡಿದಂತೆ, ಆಪಲ್‌ನ ಫೋಲ್ಡವಲ್‌ ಡಿವೈಸ್‌ಗಳು 7 ರಿಂದ 8 ಇಂಚುಗಳ ನಡುವಿನ ಡಿಸ್‌ಪ್ಲೇ ಗಾತ್ರವನ್ನು ಹೊಂದಿರಬಹುದು ಸೂಚಿಸುತ್ತದೆ. ಹಾಗೆಯೇ ವೇಗವಾಗಿ ವಿಕಸನಗೊಳ್ಳುತ್ತಿರುವ ಫೋಲ್ಡಬಲ್‌ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಸಾಧಾರಣ ಸ್ಪರ್ಧಿಯನ್ನು ಸೂಚಿಸುತ್ತದೆ ಎಂದಿದ್ದು,
ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5 ನೊಂದಿಗೆ ನೇರ ಸ್ಪರ್ಧೆಗೆ ಇಳಿಯಲಿದೆ ಎಂದು ತಿಳಿಸಿದೆ.

ಆಪಲ್‌ ಪ್ರಿಯರಿಗೆ ಗುಡ್‌ ನ್ಯೂಸ್:ಕೆಲವೇ ವರ್ಷಗಳಲ್ಲಿ ಫೋಲ್ಡಬಲ್‌ ಐಫೋನ್,ಐಪ್ಯಾಡ್?

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ನಂತಹ ಸಣ್ಣ ಡಿವೈಸ್‌ಗಳಲ್ಲಿ ಕಂಡುಬರುವ ಫ್ಲಿಪ್ ಫೋನ್ ವಿನ್ಯಾಸದ ಬದಲಿಗೆ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫೋಲ್ಡ್ ಸರಣಿಯನ್ನು ಹೋಲುವ ಡಿವೈಸ್‌ಗಳನ್ನು ಆಪಲ್‌ ಅನುಸರಿಸಲಿದೆ ಎನ್ನಲಾಗಿದೆ. ಆದರೆ ಈ ಫೋಲ್ಡಬಲ್ ಫೀಚರ್ಸ್‌ ಐಫೋನ್ ಅಥವಾ ಐಪ್ಯಾಡ್ ನಲ್ಲಿ ಲಭ್ಯ ಆಗಲಿದೆಯಾ ಅನ್ನೋ ಮಾಹಿತಿ ಮಾತ್ರ ಅಸ್ಪಷ್ಟ. ಅದಾಗ್ಯೂ ಎಲೆಕ್ ಐಪ್ಯಾಡ್ ಮಿನಿ ಲೈನ್‌ಗೆ ಬದಲಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಈ ನಡುವೆ ಆಪಲ್ ಏಕಕಾಲದಲ್ಲಿ OLED ಡಿಸ್‌ಪ್ಲೇಯನ್ನು ಹೊಂದಿರುವ ಐಪ್ಯಾಡ್ ಮಿನಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ವದಂತಿಗಳಿವೆ. ಅದರಲ್ಲೂ ಸ್ಯಾಮ್‌ಸಂಗ್ ಡಿಸ್‌ಪ್ಲೇ ಮತ್ತು ಎಲ್‌ಜಿ ಡಿಸ್‌ಪ್ಲೇ ಎರಡೂ ಆಪಲ್‌ಗೆ ಕಳೆದ ವರ್ಷದಿಂದ 7 ಇಂಚಿನ ಮತ್ತು 8 ಇಂಚಿನ ಡಿಸ್‌ಪ್ಲೇ ಮಾದರಿಗಳನ್ನು ಪೂರೈಸುತ್ತಿವೆ ಎಂಬ ವರದಿ ಇದ್ದು, ಸ್ಯಾಮ್‌ಸಂಗ್ ಡಿಸ್‌ಪ್ಲೇ ಪ್ರಾಥಮಿಕ ಪೂರೈಕೆದಾರ ಎಂದು ನಿರೀಕ್ಷಿಸಲಾಗಿದೆ.

ಶೀಘ್ರದಲ್ಲೇ ಎಐ ಸೌಲಭ್ಯ: ಇನ್ನು ಆಪಲ್‌ ತನ್ನ ಡಿವೈಸ್‌ಗಳಿಗೆ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳನ್ನು ಪರಿಚಯಿಸಲಿದೆ ಎನ್ನುವ ಮಾತು ಸಹ ಕೇಳಿಬಂದಿದೆ. ಈ ಮಾಹಿತಿಯನ್ನು ಸ್ವತಃ ಟಿಮ್ ಕುಕ್ ಅವರೇ ಬಹಿರಂಗಪಡಿಸಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯನ ಡಿವೈಸ್‌ಗಳ ಬಗ್ಗೆ ಮಾತನಾಡುವಾಗ, ಕುಕ್ ಅವರು ಎಐ ಗಾಗಿ ಪ್ರಚಂಡ ಸಮಯ ಮತ್ತು ಶ್ರಮವನ್ನು ವ್ಯಯಿಸಲಾಗುತ್ತಿದೆ ಎಂದಿದ್ದಾರೆ.

ಆಪಲ್‌ ಪ್ರಿಯರಿಗೆ ಗುಡ್‌ ನ್ಯೂಸ್:ಕೆಲವೇ ವರ್ಷಗಳಲ್ಲಿ ಫೋಲ್ಡಬಲ್‌ ಐಫೋನ್,ಐಪ್ಯಾಡ್?

ನಾವು ಮುಂದೆ ಭವಿಷ್ಯವನ್ನು ರೂಪಿಸುವ ಇತರ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ. ಅದು ಕೃತಕ ಬುದ್ಧಿಮತ್ತೆಯನ್ನು ಒಳಗೊಂಡಿದೆ, ಅಲ್ಲಿ ನಾವು ಅಪಾರವಾದ ಸಮಯ ಮತ್ತು ಶ್ರಮವನ್ನು ಕಳೆಯುವುದನ್ನು ಮುಂದುವರಿಸುತ್ತೇವೆ ಮತ್ತು ಈ ವರ್ಷದ ನಂತರ ಆ ಜಾಗದಲ್ಲಿ ನಮ್ಮ ನಡೆಯುತ್ತಿರುವ ಕೆಲಸದ ವಿವರಗಳನ್ನು ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ ಎಂದಿದ್ದಾರೆ.

Best Mobiles in India

English summary
Even though Apple iPhones are the big brother in the smartphone sector, Apple phones still lack many features including high megapixel camera, AI features which are already available in Android phones. Meanwhile, it is said that Apple will introduce a foldable device in the next few years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+