Apple: ಬೆಂಗಳೂರಿನಲ್ಲಿ ಆಪಲ್‌ನ ನೂತನ ಕಚೇರಿ! ಹೇಗಿದೆ ಗೊತ್ತಾ ಈ ಅತ್ಯಾಧುನಿಕ ಬೃಹತ್ ಕಟ್ಟಡ?
ಆಪಲ್‌ಗೂ (Apple) ಭಾರತದಕ್ಕೂ ವಿಶೇಷವಾದ ನಂಟು. ಅದರಲ್ಲೂ ಹೆಚ್ಚು ಆಪಲ್ ಡಿವೈಸ್ ಬಳಕೆ ಮಾಡುವ ದೇಶಗಳಲ್ಲಿ ಭಾರತದ ಅಗ್ರಸ್ಥಾನದಲ್ಲಿದ್ದು, ಇದರೊಂದಿಗೆ ಬೆಂಗಳೂರು ವಿಶೇಷವಾಗಿ ಬೆಸೆದುಕೊಂಡಿದೆ. ಈ ಎಲ್ಲಾ ಕಾರಣಕ್ಕೆ ಈಗ ಬೆಂಗಳೂರಲ್ಲಿನ ನೂತನ ಕಚೇರಿ ಬಹಳ ಸದ್ದು ಮಾಡುತ್ತಿದೆ.
ಹೌದು, ಆಪಲ್‌ನ 25 ವರ್ಷಗಳ ಪ್ರಯಾಣದ ಭಾಗವಾಗಿ ಬೆಂಗಳೂರಲ್ಲಿ ಹೊಸ ಆಫೀಸ್ ಮೂಲಕ ಗ್ರಾಹಕರಿಗೆ ವಿಶೇಷ ಪ್ರಯೋಜನ ನೀಡಲಿದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಕಚೇರಿ ಪರಿಸರ ಸ್ನೇಹಿಯಾಗಿರಲಿದೆ. ಅಷ್ಟೇ ಅಲ್ಲದೆ ಗ್ರಾಹಕರಿಗೆ ಹಾಗೂ ಉದ್ಯೋಗಿಗಳಿಗೆ ಪ್ರೀಮಿಯಂ ಅನುಭವವನ್ನೂ ನೀಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಇದು ಎಷ್ಟು ಅಂತಸ್ತಿನ ಕಟ್ಟಡ, ಇಲ್ಲಿ ಏನೆಲ್ಲಾ ಕಾರ್ಯಗಳು ನಡೆಯಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರಲ್ಲಿ ಆಪಲ್‌ನ ನೂತನ ಕಚೇರಿ: ಆಪಲ್‌ನ ಈ ನೂತನ ಕಚೇರಿ ಬರೋಬ್ಬರಿ 15 ಅಂತಸ್ತಿನ ಕಟ್ಟಡ ಹೊಂದಿರಲಿದ್ದು, ಇಲ್ಲಿ ಗ್ರಾಹಕರ ಬೆಂಬಲಕ್ಕಾಗಿ ಎಲ್ಲಾ ರೀತಿಯ ಪ್ರಯೋಜನಗಳು ಸಿಗಲಿವೆ. ಈ ಅಫೀಸ್ ಕೇವಲ ಆಫೀಸ್ ಮಾತ್ರ ಆಗಿರದೆ ಭಾರತೀಯ ಪೂರೈಕೆದಾರರು ಮತ್ತು ಪರಿಸರ ಸಂಸ್ಥೆಗಳೊಂದಿಗೆ ಸಹಕರಿಸುತ್ತದೆ ಎಂದು ತಿಳಿದುಬಂದಿದೆ. ಈ ಮೂಲಕ ಸುಸ್ಥಿರ ಬೆಳವಣಿಗೆಗೆ ಅದರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಸೃಜನಶೀಲತೆ, ಯೋಗಕ್ಷೇಮ ಮತ್ತು ನಾವೀನ್ಯತೆಗಾಗಿ ವಿನ್ಯಾಸಗೊಳಿಸಲಾದ ಸ್ಥಳ ಇದಾಗಿರಲಿದೆ.
ಈ ಆಫೀಸ್ 1,200 ಉದ್ಯೋಗಿಗಳು ಕೆಲಸ ಮಾಡಬಹುದಾದ ಸ್ಥಳಾವಕಾಶ ಹೊಂದಿರಲಿದ್ದು, ಇಲ್ಲಿ ಲ್ಯಾಬ್‌ಗಳು, ಟೀಮ್‌ವರ್ಕ್‌ಗಾಗಿ ಮೀಸಲಾದ ಪ್ರದೇಶಗಳು ಮತ್ತು ವಿರಾಮಕ್ಕಾಗಿ ಕೆಫೆ ಮ್ಯಾಕ್ಸ್ ಎಂಬ ಮೀಸಲು ಪ್ರದೇಶಗಳು ಸಹ ಇರಲಿವೆ. ಎಲ್ಲಕ್ಕಿಂತ ಮಿಗಿಲಾಗಿ ಪರಿಸರ ಸ್ನೇಹಿ ಆಫೀಸ್ ಇದಾಗಿರಲಿದ್ದು, ಎಲ್ಲಾ ಕಡೆ ಸಾಕಷ್ಟು ಹಸಿರಿನೊಂದಿಗೆ ಸೊಗಸಾದ ಒಳಾಂಗಣವನ್ನು ಹೊಂದಿದೆ. ಇದೆಲ್ಲವನ್ನೂ ಸ್ಥಳೀಯ ವಸ್ತುಗಳನ್ನೇ ಬಳಕೆ ಮಾಡಿಕೊಂಡು ನಿರ್ಮಾಣ ಮಾಡಲಾಗಿದೆ.

ಇಡೀ ಆಫೀಸ್ 100 ಪ್ರತಿಶತ ನವೀಕರಿಸಬಹುದಾದ ಶಕ್ತಿಯಿಂದ ಕಾರ್ಯನಿರ್ವಹಿಸಲಿದ್ದು, ಈ ವಿಶೇಷವಾದ ಹೊಸ ಆಫೀಸ್ ಮುಂಬೈ, ಹೈದರಾಬಾದ್ ಮತ್ತು ಗುರುಗ್ರಾಮ್‌ನಲ್ಲಿರುವ ಆಪಲ್ ನ ಇತರ ಆಫೀಸ್‌ಗಳ ಸಾಲಿಗೆ ಸೇರಲಿದೆ. ಆದರೆ ಇದು ಭಾರತದಲ್ಲಿ ಗಮನಾರ್ಹವಾದ 25 ವರ್ಷಗಳ ಪ್ರಯಾಣವನ್ನು ಕೇಂದ್ರೀಕರಿಸಲಿದೆ. ಇನ್ನು ಆಪಲ್‌ನ ಬೆಂಗಳೂರು ತಂಡಗಳು ಸಾಫ್ಟ್‌ವೇರ್ ಅಭಿವೃದ್ಧಿಯಿಂದ ಹಿಡಿದು ಗ್ರಾಹಕ ಬೆಂಬಲದವರೆಗೆ ವ್ಯಾಪಕ ಶ್ರೇಣಿಯ ಸೇವೆಗಳನ್ನು ನೀಡಲಿವೆ.
ಅದರಂತೆ ಭಾರತದಲ್ಲಿ ಸುಮಾರು 3,000 ಉದ್ಯೋಗಿಗಳೊಂದಿಗೆ, ಆಪಲ್ 2018 ರಿಂದ ಇಲ್ಲಿಯವರೆಗೆ ಹಸಿರು ಶಕ್ತಿಯನ್ನು ಮಾತ್ರ ಬಳಕೆ ಮಾಡಿಕೊಂಡು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ಭಾಗವಾಗಿದ್ದು, ಈ ಮೂಲಕ ಇತರೆ ಟೆಕ್ ಕಂಪೆನಿಗಳಿಗೆ ಮಾರ್ಗದರ್ಶನವಾಗಿ ಕಾಣಿಸಿಕೊಂಡಿದೆ. ಅದರಲ್ಲೂ ಫ್ರಾಂಕ್ ವಾಟರ್‌ನಂತಹ ಸಂಸ್ಥೆಗಳೊಂದಿಗಿನ ಸಹಭಾಗಿತ್ವವು ಬೆಂಗಳೂರಿನ ಹೊರವಲಯದಲ್ಲಿರುವ ಪರಿಸರ ಸಂರಕ್ಷಣೆಗೆ ಆಪಲ್‌ನ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ.
ಆಪಲ್ ಈ ಸಂಬಂಧ ಹೇಳಿಕೆ ನೀಡಿದ್ದು, ಆಪಲ್ ಭಾರತದಲ್ಲಿ ವಿಸ್ತರಿಸಿಕೊಳ್ಳುವ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದೆ. ಈ ಹೊಸ ಆಫೀಸ್ ದೊಡ್ಡದಾಗಿ ಬೆಳೆಯುವುದಷ್ಟೇ ಅಲ್ಲ, ಇದು ಪ್ಲಾನೆಟ್‌ಗೆ ಒಳ್ಳೆಯದು ಹಾಗೆಯೇ ಭಾರತದಲ್ಲಿ ಶಾಶ್ವತವಾದ ಧನಾತ್ಮಕ ಪ್ರಭಾವವನ್ನು ಇರಿಸುವ ಕೆಲಸ ಇದಾಗಿದೆ. ಜೊತೆಗೆ ಆಪಲ್ ಬೆಂಗಳೂರಿನ ಹೃದಯಭಾಗದಲ್ಲಿರುವ ನಮ್ಮ ಹೊಸ ಕಚೇರಿಯೊಂದಿಗೆ ಭಾರತದಲ್ಲಿ ವಿಸ್ತರಿಸಲು ಥ್ರಿಲ್ ಆಗಿದೆ ಎಂದು ಉಲ್ಲೇಖಿಸಿದೆ.

ಮುಂದುವರೆದು ಈ ಡೈನಾಮಿಕ್ ನಗರವು ಈಗಾಗಲೇ ಸಾಫ್ಟ್‌ವೇರ್ ಎಂಜಿನಿಯರಿಂಗ್ ಮತ್ತು ಹಾರ್ಡ್‌ವೇರ್ ತಂತ್ರಜ್ಞಾನಗಳು, ಕಾರ್ಯಾಚರಣೆಗಳು, ಗ್ರಾಹಕ ಬೆಂಬಲ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ನಮ್ಮ ಅನೇಕ ಪ್ರತಿಭಾವಂತ ತಂಡಗಳಿಗೆ ನೆಲೆಯಾಗಿದೆ. ಈ ಆಫೀಸ್ ಅನ್ನೂ ಸಹ ನಾವೀನ್ಯತೆ, ಸೃಜನಶೀಲತೆ ಮತ್ತು ಸಂಪರ್ಕವನ್ನು ಬೆಳೆಸಲು ನಿರ್ಮಾಣ ಮಾಡಲಾಗಿದೆ. ಅಲ್ಲದೆ ನಮ್ಮ ತಂಡಗಳು ಸಹಯೋಗಿಸಲು ಇದು ಅದ್ಭುತ ಸ್ಥಳವಾಗಿದೆ ಎಂದು ತಿಳಿಸಿದೆ.
ಎಲ್ಲಿದೆ ಈ ಆಫೀಸ್?: ಭಾರತದಲ್ಲಿ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಆಪಲ್ ಇಲ್ಲಿ ಆಫೀಸ್ ಓಪನ್ ಮಾಡಿದೆ ಎಂದು ತಿಳಿದುಬಂದಿದೆ. ಇದು ವಿಧಾನಸೌಧ, ಕರ್ನಾಟಕ ಹೈಕೋರ್ಟ್, ಕೇಂದ್ರ ಗ್ರಂಥಾಲಯ, ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ ಮತ್ತು ಐಕಾನಿಕ್ ಕಬ್ಬನ್ ಪಾರ್ಕ್ ಒಳಗೊಂಡಂತೆ ನಗರದ ಹೃದಯಭಾಗದಲ್ಲಿರುವ ಮಿನ್ಸ್ಕ್ ಚೌಕದಲ್ಲಿ ಹೊಸ ಕಚೇರಿ ಓಪನ್ ಮಾಡಲಿದೆ. ಅಲ್ಲದೆ ಈ ಆಪಲ್ ಕಚೇರಿಯು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪದಲ್ಲಿರುವುದರಿಂದ ಉದ್ಯೋಗಿಗಳಿಗೆ ಸುಲಭವಾಗಲಿದೆ.


Click it and Unblock the Notifications








