ನಿಮ್ಮನ್ನು ನಿಬ್ಬೆರಗಾಗಿಸುವ 2015 ರ ಆಪಲ್ ಯೋಜನೆಗಳೇನು?

By Shwetha
|

ಕ್ಯುಪರ್ಟಿನೋ ದಿಗ್ಗಜ ಆಪಲ್ ತನ್ನ ತ್ರೈಮಾಸಿಕ ಆದಾಯವಾದ $74.6 ಬಿಲಿಯನ್ ಅನ್ನು ಘೋಷಿಸಿದ್ದು ಐಫೋನ್ ಮಾರಾಟದ ತ್ರೈಮಾಸಿಕ ಆದಾಯ $18.4 ಬಿಲಿಯನ್ ಆಗಿದೆ.

ಐಫೋನ್ 6, ಮ್ಯಾಕ್ ಮತ್ತು ಆಪ್ ಸ್ಟೋರ್‌ನಿಂದ ಆಪಲ್ ಭರ್ಜರಿ ಆದಾಯವನ್ನು ಗಳಿಸಿಕೊಳ್ಳುತ್ತಿದ್ದು ಐಫೋನ್‌ನ ಮಾರಾಟದಿಂದ ಬಂದ ಆದಾಯ 74.5 ಮಿಲಿಯನ್ ಆಗಿದ್ದು ಕಂಪೆನಿ 1 ಬಿಲಿಯನ್ ಐಓಎಸ್ ಡಿವೈಸ್‌ಗಳನ್ನು ಮಾರಾಟ ಮಾಡಿದೆ. ಐಫೋನ್ 6 ಹಾಗೂ 6 ಪ್ಲಸ್ ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರ ಮನವೊಲಿಸಿ ಐಫೋನ್ ಅನ್ನು ತಮ್ಮದಾಗಿಸಿಕೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ಇಂದಿನ ಲೇಖನದಲ್ಲಿ ನಿಮ್ಮನ್ನು ಮೋಡಿ ಮಾಡುವ ಆಪಲ್‌ನ ಮುಂದೆ ಲಾಂಚ್ ಆಗಬಹುದಾದ ಡಿವೈಸ್‌ಗಳೊಂದಿಗೆ ನಾವು ಬಂದಿದ್ದು ಇದು ನಿಮ್ಮನ್ನು ಮಂತ್ರಮುಗ್ಧಗೊಳಿಸಲಿದೆ. ಆ ಡಿವೈಸ್‌ಗಳು ಯಾವುವು ಎಂಬುದನ್ನು ಅರಿತುಕೊಳ್ಳಲು ಕೆಳಗಿನ ಸ್ಲೈಡರ್ ಪರಿಶೀಲಿಸಿ.

ವೇರಿಯೇಬಲ್ಸ್

ವೇರಿಯೇಬಲ್ಸ್

1.5 ಹಾಗೂ 1.7 ಇಂಚಿನ ಪರದೆ ಗಾತ್ರಗಳೊಂದಿಗೆ ಬಂದಿರುವ ಆಪಲ್ ವಾಚ್ ರೆಟೀನಾ ಡಿಸ್‌ಪ್ಲೇಯೊಂದಿಗೆ ಮಾರುಕಟ್ಟೆಗೆ ಆಗಮಿಸಲಿದೆ. ಇದು ಬಲವಾದ ಟಚ್ ಅನ್ನು ಪಡೆದುಕೊಳ್ಳಲಿದ್ದು, ಬ್ಲ್ಯೂಟೂತ್ 4.0 ಎನ್‌ಎಫ್‌ಸಿ, ವೈಫೈ ಮತ್ತು ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಈ ವಾಚ್ ಪಡೆದುಕೊಳ್ಳಲಿದೆ.

ಟ್ಯಾಬ್ಲೆಟ್

ಟ್ಯಾಬ್ಲೆಟ್

ಸುಂದರ ಗಾತ್ರದ ಐಪ್ಯಾಡ್ ಅನ್ನು ಈ ವರ್ಷ ಆಪಲ್ ಲಾಂಚ್ ಮಾಡಲಿದ್ದು, ವದಂತಿಗಳು ಹೇಳುವಂತೆ "ಐಪ್ಯಾಡ್ ಪ್ರೊ" ಅಥವಾ "ಐಪ್ಯಾಡ್ ಪ್ಲಸ್" ಎಂಬ ಹೆಸರನ್ನು ಇದು ಪಡೆದುಕೊಳ್ಳಲಿದೆ. ಡಿವೈಸ್‌ನ ಬಲಭಾಗದಲ್ಲಿ ವಾಲ್ಯೂಮ್ ರಾಕರ್ ಅನ್ನು ಇದು ಪಡೆದುಕೊಳ್ಳಲಿದ್ದು ಬಲ ಮೇಲ್ಭಾಗದಲ್ಲಿ ಲಾಕ್ ಬಟನ್ ಅನ್ನು ನೀವು ಕಾಣಬಹುದು.

ಇನ್ನೊಂದು ಐಪ್ಯಾಡ್

ಇನ್ನೊಂದು ಐಪ್ಯಾಡ್

ಐಪ್ಯಾಡ್ ಏರ್ ಅನ್ನು ಈ ವರ್ಷದಲ್ಲಿ ಲಾಂಚ್ ಮಾಡಲಿದ್ದು ಐಪ್ಯಾಡ್ ಏರ್ 3ಯ RAM ಸಾಮರ್ಥ್ಯ 4 ಜಿಬಿಯಾಗಿದೆ. ಎ9 ಚಿಪ್ ಅನ್ನು ಇದರಲ್ಲಿ ಬಳಸಲಾಗುತ್ತದೆ ಎಂಬ ಮಾಹಿತಿ ಕೂಡ ಇದೆ.

ಇನ್ನಷ್ಟು ಐಪ್ಯಾಡ್‌ಗಳು

ಇನ್ನಷ್ಟು ಐಪ್ಯಾಡ್‌ಗಳು

ಇನ್ನು ಐಪ್ಯಾಡ್ ಮಿನಿ 4 ಈ ವರ್ಷದಲ್ಲೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದು ವೇಗವಾಗಿರುವ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಟಚ್ ಐಡಿ ಮತ್ತು ಉತ್ತಮ ಕ್ಯಾಮೆರಾವನ್ನು ಒಳಗೊಂಡಿದೆ.

ಐಫೋನ್

ಐಫೋನ್

ಸಪ್ಟೆಂಬರ್ ಮಧ್ಯಭಾಗದಲ್ಲಿ ನಾವು ಐಫೋನ್ 7 ಅನ್ನು ನಿರೀಕ್ಷಿಸಬಹುದಾಗಿದ್ದು ಇದು 3ಡಿ ಡಿಸ್‌ಪ್ಲೇ, ಎರಡು ಲೆನ್ಸ್‌ಗಳಿರುವ ಕ್ಯಾಮೆರಾ ಮತ್ತು "ಡಿಎಸ್‌ಎಲ್ಆರ್ ಕ್ವಾಲಿಟಿ ಇಮೇಜರಿಯನ್ನು" ಪಡೆದುಕೊಳ್ಳಲಿದೆ.

ಐಫೋನ್ 6 ಆವೃತ್ತಿಗಳು

ಐಫೋನ್ 6 ಆವೃತ್ತಿಗಳು

ಆಪಲ್ ಐಫೋನ್ 6 ಬಗ್ಗೆಯೂ ಕೆಲಸ ಮಾಡುತ್ತಿದೆ ಎಂಬ ಸುದ್ದಿ ಕೂಡ ಇದ್ದು ಇದು ಐಫೋನ್ 6 ವಿನ್ಯಾಸದಲ್ಲಿ ಬರಲಿದೆ ಹಾಗೂ 4 ಇಂಚಿನ ಫ್ರೇಮ್ ಅನ್ನು ಒಳಗೊಂಡಿದೆ.

ಐಓಎಸ್

ಐಓಎಸ್

ಆಪಲ್ ತನ್ನ ಐಪ್ಯಾಡ್, ಐಫೋನ್ ಮತ್ತು ಐಪೋಡ್ ಟಚ್‌ಗಾಗಿ ಐಓಎಸ್ ಸಾಫ್ಟ್‌ವೇರ್ ಅನ್ನು ವರ್ಷಕ್ಕೆ ಒಮ್ಮೆ ಅಪ್‌ಡೇಟ್ ಮಾಡುತ್ತದೆ. ಇದಕ್ಕೆ ಸಮನಾಗಿ 2015 ರಲ್ಲಿ ಐಓಎಸ್ 9 ಆಗಮಿಸಲಿದ್ದು WWDC 2015 ಕ್ಕೆ ನಾವು ನಿರೀಕ್ಷಿಸಹುದಾಗಿದೆ.

ಮ್ಯಾಕ್ ಓಎಸ್

ಮ್ಯಾಕ್ ಓಎಸ್

ಓಎಸ್ ಎಕ್ಸ್ ಎಂಬ ಹೊಸ ಆವೃತ್ತಿಯನ್ನು ಆಪಲ್ ಬಹುಶಃ ಈ ವರ್ಷ ಹೊರತರಲಿದೆ.

ಮ್ಯಾಕ್ ಬುಕ್

ಮ್ಯಾಕ್ ಬುಕ್

2015 ರ ಪ್ರಥಮಾರ್ಧದಲ್ಲಿ ಹೊಸ 12 ಇಂಚಿನ ಮ್ಯಾಕ್ ಬುಕ್ ಏರ್ ಬರಲಿದೆ ಎಂಬುದು ಹೆಚ್ಚಿನ ಆಪಲ್ ಅಭಿಮಾನಿಗಳ ನಿರೀಕ್ಷೆಯಾಗಿದೆ. ಇನ್ನಷ್ಟು ಆಕರ್ಷಕ ವಿನ್ಯಾಸಗಳೊಂದಿಗೆ ಮ್ಯಾಕ್ ಬುಕ್ ಏರ್ 2015 ರಲ್ಲಿ ಅಪ್‌ಡೇಟ್ ಆಗಲಿದೆ.

ಮ್ಯಾಕ್

ಮ್ಯಾಕ್

ಬ್ರಾಡ್ ವೆಲ್ ಪ್ರೊಸೆಸರ್ ಅನ್ನು ಹೊಂದಿರುವ 27 ಇಂಚಿನ ರೆಟೀನಾ ಐಮ್ಯಾಕ್, ಅಂತೆಯೇ 21 ಇಂಚಿನ ರೆಟೀನಾ ಮಾಡೆಲ್‌ಗಳನ್ನು ನಾವು 2015 ರಲ್ಲಿ ಕಾಣಬಹುದಾಗಿದೆ.

Best Mobiles in India

English summary
This article tells about Apple Plans to Launch These 10 Devices in 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X