iPhone: ಈ ಐಫೋನ್ ಬಳಕೆದಾರರಿಗೆ 9 ಸಾವಿರಕ್ಕಿಂತ ಹೆಚ್ಚಿನ ಪರಿಹಾರ ನೀಡಲು ಮುಂದಾದ ಆಪಲ್! ಕಾರಣ?
ಐಫೋನ್ (iPhone) ಅಂದಾಕ್ಷಣ ಎಲ್ಲರಿಗೂ ಕಣ್ಣಮುಂದೆ ಬರುವುದು ಆ ಫೋನ್‌ನ ವಿಶೇಷ ವಿನ್ಯಾಸ, ಕ್ಯಾಮೆರಾ ಫೀಚರ್ಸ್ ಹಾಗೂ ಭದ್ರತಾ ಫೀಚರ್ಸ್. ಇಷ್ಟಾಗಿಯೂ ಐಫೋನ್ ಕೆಲವು ಸಮಸ್ಯೆಗಳನ್ನು ಎದುರಿಸಿದೆ. ಈ ಕಾರಣಕ್ಕೆ ಈಗ ಐಫೋನ್ ಬಳಕೆದಾರರಿಗೆ 9 ಸಾವಿರಕ್ಕಿಂತ ಹೆಚ್ಚಿನ ಪರಿಹಾರ ನೀಡಲು ಮುಂದಾಗಿದೆ.
ಹೌದು, ನ್ಯಾಯಾಲಯದ ಆದೇಶ ಹಿನ್ನೆಲೆ ಉಲ್ಲೇಖಿತ ಐಫೋನ್ ಬಳಕೆದಾರರಿಗೆ ಆಪಲ್ 9,000 ರೂ.ಗಿಂತ ಹೆಚ್ಚಿನ ಪರಿಹಾರವನ್ನು ನೀಡಲಿದೆ. ಐಫೋನ್‌ನಲ್ಲಿ ದೂರುಗಳನ್ನು ವರದಿ ಮಾಡಿದ ಬಳಿಕ ಈ ಎಲ್ಲಾ ಬೆಳವಣಿಗೆ ಕಂಡುಬಂದಿದೆ. ಹಾಗಿದ್ರೆ, ಯಾರೆಲ್ಲಾ ಈ ಹಣ ಪಡೆಯಲು ಅರ್ಹರು?, ಐಫೋನ್ ಯಾಕೆ ಈ ಹಣ ನೀಡಬೇಕು?, ಐಫೋನ್‌ಗಳಲ್ಲಿ ಕಂಡುಬಂದಿದ್ದ ದೋಷಗಳು ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಐಫೋನ್ ಬಳಕೆದಾರರಿಗೆ ಪರಿಹಾರ ಹಣ ಯಾಕೆ? : ಕೆನಡಾದಲ್ಲಿ ಆಪಲ್ (Apple) ಈಗ ಕೆಲವು ಐಫೋನ್ ಬಳಕೆದಾರರಿಗೆ ಪರಿಹಾರವನ್ನು ನೀಡಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಇಲ್ಲಿ ಪ್ರತಿ ಬಳಕೆದಾರರಿಗೆ 9,000 ರೂ.ಗಿಂತ ಕ್ಕಿಂತ ಹೆಚ್ಚಿನ ಹಣವನ್ನು ನೀಡಲಾಗುತ್ತದಂತೆ. ಇನ್ನು ಕೆನಡಾದ ಕೆಲ ಐಫೋನ್ ಬಳಕೆದಾರರು ತಮ್ಮ ಐಫೋನ್ ಹಠಾತ್ ನಿಧಾನ ಆಗಿರುವ ಬಗ್ಗೆ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ಈ ಬಗ್ಗೆ ಆಪಲ್ ವಿರುದ್ಧ ಅವರು ಪ್ರಕರಣ ದಾಖಲು ಮಾಡಿದ್ದರೂ ಸಹ ಆಪಲ್ ಈ ಆರೋಪವನ್ನು ನ್ಯಾಯಾಲಯದಲ್ಲಿ ನಿರಾಕರಿಸಿತ್ತು. ಆದರೆ, ಇದೀಗ ಒಂದಷ್ಟು ಪರಿಹಾರ ನೀಡಿ ಈ ವಿಷಯಕ್ಕೆ ಸುಖಾಂತ್ಯ ಹೇಳಲು ಮುಂದಾಗಿದೆ. ಅದರಂತೆ $14.4 ಮಿಲಿಯನ್ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದೆ. ಆದರೆ, ನ್ಯಾಯಾಲಯ ಇದನ್ನು ಇನ್ನೂ ಅಂಗೀಕರಿಸಿಲ್ಲ ಜೊತೆಗೆ ಈ ಬಗ್ಗೆ ಅಂತಿಮ ತೀರ್ಪನ್ನು ನೀಡಿಲ್ಲ.

ನ್ಯಾಯಾಲಯವು ಪರಿಹಾರ ಮೊತ್ತವನ್ನು ಅನುಮೋದಿಸಿದ ನಂತರ ಕಂಪನಿಯು ದೂರು ಸಲ್ಲಿಸಿದ ಪ್ರತಿಯೊಬ್ಬ ಐಫೋನ್ ಬಳಕೆದಾರರಿಗೆ ಹಣವನ್ನು ಪಾವತಿ ಮಾಡಲು ಮುಂದಾಗುತ್ತದೆ. ಅದರಂತೆ ಕಂಪನಿಯು ಪ್ರತಿ ಬಳಕೆದಾರರಿಗೆ 150 ಕೆನಡಿಯನ್ ಡಾಲರ್‌ಗಳನ್ನು ನೀಡುತ್ತದೆ. ಅಂದರೆ ಇದು ಭಾರತೀಯ ರೂಪಾಯಿಗಳಲ್ಲಿ ಸುಮಾರು 9,320 ರೂ.ಗಳು. ಈ ಮೊತ್ತವು ಇಷ್ಟೇ ಅಲ್ಲದೆ ಇನ್ನೂ ಸಹ ಹೆಚ್ಚಾಗಬಹುದು ಅಥವಾ ಕಡಿಮೆ ಆಗಬಹುದು.
ಇನ್ನು ಇಂಡಿಯಾ ಟುಡೇ ವರದಿಯ ಪ್ರಕಾರ, ಮೊಕದ್ದಮೆಯಲ್ಲಿ ಒಳಗೊಂಡಿರುವ ಜನರ ಗುಂಪಿನಲ್ಲಿ ಡಿಸೆಂಬರ್ 21, 2017 ರ ಮೊದಲು ಕೆನಡಾದಲ್ಲಿ (ಕ್ವಿಬೆಕ್ ಹೊರತುಪಡಿಸಿ) ವಾಸಿಸುತ್ತಿದ್ದವರು ಮತ್ತು ನಿರ್ದಿಷ್ಟ ಐಫೋನ್ ಮಾಡೆಲ್‌ಗಳನ್ನು ಹೊಂದಿರುವವರು ಅಂದರೆ ಐಫೋನ್ 6, 6 ಪ್ಲಸ್, 6S. 6S ಪ್ಲಸ್, SE, 7, ಅಥವಾ 7 ಪ್ಲಸ್ ಫೋನ್ ಬಳಕೆ ಮಾಡುತ್ತಿರುವವರು ಈ ಪರಿಹಾರ ಪಡೆಯಲಿದ್ದಾರೆ.

ಈ ಬಳಕೆದಾರರು ತಮ್ಮ ಐಫೋನ್‌ನ ಹಠಾತ್ ನಿಧಾನಗತಿಯ ಬಗ್ಗೆ ಆಕ್ರೋಶ ಹೊರಹಾಕಿ ದೂರು ನೀಡಿದ್ದರು. ಆಪಲ್ ಉದ್ದೇಶಪೂರ್ವಕವಾಗಿ ಫೋನ್‌ಗಳನ್ನು ನಿಧಾನಗತಿಯಲ್ಲಿ ಕೆಲಸ ಮಾಡುವಂತೆ ಮಾಡಿದೆ ಎಂದು ಆರೋಪಿಸಿದ್ದರು. ಗಮನಿಸಬೇಕಾದ ವಿಷಯ ಏನೆಂದರೆ ವಾಸ್ತವವಾಗಿ, ಬ್ಯಾಟರಿಗಳು ಹಳೆಯದಾಗಿರುವ ಕೆಲವು ಮಾದರಿಗಳನ್ನು ನಿಧಾನಗೊಳಿಸುವ ಕೆಲಸವನ್ನೂ ಮಾಡಿದಂತೆ. ಆದರೆ ಈ ಬಗ್ಗೆ ಕಂಪನಿಯು ಬಳಕೆದಾರರಿಗೆ ಸರಿಯಾದ ಸಮಯಕ್ಕೆ ಸ್ಪಷ್ಟವಾದ ಮಾಹಿತಿಯನ್ನು ನೀಡಿರಲಿಲ್ಲ
ಈ ಎಲ್ಲಾ ಬೆಳವಣಿಗೆ ನಂತರ ಆಪಲ್ ಈ ವಿಷಯದ ಬಗ್ಗೆ ಜನರಿಗೆ ಬಹಿರಂಗವಾಗಿ ಮಾಹಿತಿ ನೀಡಿತ್ತು. ಜೊತೆಗೆ ಬ್ಯಾಟರಿಯನ್ನು ಬದಲಾಯಿಸುವ ವೆಚ್ಚವನ್ನು $ 29 ಗೆ ಸೀಮಿತಗೊಳಿಸಿತ್ತು. ಈ ಕಾರಣಕ್ಕೆ ಈಗ ಪರಿಹಾರ ನೀಡಬೇಕಾದ ಅನಿವಾರ್ಯತೆ ಆಪಲ್‌ಗೆ ಎದುರಾಗಿದೆ. ಇನ್ನು ಆಪಲ್ ಯುಎಸ್‌ನಲ್ಲೂ ಇದೇ ಸಮಸ್ಯೆಗೆ ಪರಿಹಾರ ನೀಡಲು ಸಜ್ಜಾಗಿದ್ದು, ಈ ಆಪಲ್ ಫೋನ್ ಬಳಕೆದಾರರು $92 ಪಡೆಯಲಿದ್ದಾರೆ.


Click it and Unblock the Notifications








