Home
ಸುದ್ದಿಜಾಲ

ಐಫೋನ್‌ ಬಳಕೆದಾರರೇ ಕೂಡಲೇ iOS 16.3.1 ಅಪ್‌ಡೇಟ್‌ ಮಾಡಿ; ಖಂಡಿತಾ ನಿಮಗೆ ಉಪಯುಕ್ತ

ಆಪಲ್‌ನ ಡಿವೈಸ್‌ಗಳು ಎಲ್ಲಾ ರೀತಿಯಲ್ಲೂ ಬಳಕೆದಾರರಿಗೆ ವಿಶೇಷವಾದ ಸೇವೆ ನೀಡುತ್ತಾ ಬರುತ್ತಿವೆ. ಅದರಲ್ಲೂ ಕೆಲವು ಫೀಚರ್ಸ್‌ಗಳಂತೂ ಬಳಕೆದಾರರ ಜೀವವನ್ನೇ ಕಾಪಾಡುವಷ್ಟು ಸಾಮರ್ಥ್ಯ ಪಡೆದುಕೊಂಡಿವೆ. ಅದರಲ್ಲಿ ವಿಶೇ‍ಷ SOS ಸೌಲಭ್ಯ ಪ್ರಮುಖವಾಗಿದೆ. ಇಷ್ಟಾಗಿಯೂ ಆಪಲ್‌ ಸಂಸ್ಥೆಯು ತನ್ನ ಎಲ್ಲಾ ಸ್ಮಾರ್ಟ್‌ ಡಿವೈಸ್‌ಗಳಿಗೆ ಇನ್ನಷ್ಟು ಭದ್ರತಾ ಫೀಚರ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ.

ಐಫೋನ್‌ ಬಳಕೆದಾರರೇ ಕೂಡಲೇ iOS 16.3.1 ಅಪ್‌ಡೇಟ್‌ ಮಾಡಿ; ಖಂಡಿತಾ ನಿಮಗೆ ಉಪಯುಕ್ತ

ಹೌದು, ಆಪಲ್‌ ಐಫೋನ್‌, ಐಪ್ಯಾಡ್‌ ಹಾಗೂ ಮ್ಯಾಕ್‌ ಬಳಕೆದಾರರು ಈ ವಿಷಯದಿಂದ ಖಂಡಿತಾ ಸಂತಸಪಡಬಹುದು. ಯಾಕೆಂದರೆ ಈಗಾಗಲೇ ಇರುವ ಭದ್ರತಾ ಫೀಚರ್ಸ್‌ಗಳ ಜೊತೆಗೆ ಇನ್ನಷ್ಟು ಭದ್ರತಾ ಫೀಚರ್ಸ್‌ಗಳನ್ನು ಸೇರಿಸುವ ಕೆಲಸಕ್ಕೆ ಆಪಲ್‌ ಮುಂದಾಗಿದ್ದು, ಈ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡಲು ಮುಂದಾಗಿದೆ. ಹಾಗೆಯೇ ಈ ಹಿಂದೆ ಇದ್ದ ಕೆಲವು ದೋಷಗಳು ಇನ್ಮುಂದೆ ಕಾಣಿಸಿಕೊಳ್ಳುವುದಿಲ್ಲ ಎಂದು ಆಪಲ್‌ ಈ ಮೂಲಕ ತಿಳಿಸಿದೆ. ಹಾಗಿದ್ರೆ, ಹೊಸ ನವೀಕರಣದಲ್ಲಿ ಏನೆಲ್ಲಾ ಸೌಲಭ್ಯ ಲಭ್ಯ ಎನ್ನುವ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭದ್ರತಾ ನವೀಕರಣ

ಆಪಲ್ ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಮ್ಯಾಕ್‌ಗಳಿಗಾಗಿ ಹೊಸ ಸಾಫ್ಟ್‌ವೇರ್ ನವೀಕರಣವನ್ನು ಪರಿಚಯಿಸಲಾಗುತ್ತಿದ್ದು, ಅದರಲ್ಲಿ ಇತ್ತೀಚಿನ ಐಓಎಸ್‌ 16.3.1, ಐಪ್ಯಾಡ್‌ಓಎಸ್‌ 16.3.1, ಮತ್ತು ಮ್ಯಾಕ್‌ ಓಎಸ್‌ ವೆಂಚುರಾ 13.2.1 ನವೀಕರಣಗಳು ಡಿವೈಸ್‌ಗಳಲ್ಲಿ ಕೆಲವು ದೋಷಗಳನ್ನು ಸರಿಪಡಿಸುತ್ತವೆ ಎಂದು ಆಪಲ್‌ ಹೇಳಿದೆ. ಅದರಲ್ಲೂ ಹೊಸ ಮ್ಯಾಕ್‌ ಓಎಸ್‌ ವೆಂಚುರಾ 13.2.1 ಅಪ್‌ಡೇಟ್ ವೆಬ್‌ಕಿಟ್‌ನಲ್ಲಿನ ಭದ್ರತಾ ದೋಷವನ್ನು ತಿಳಿಸಲಿದ್ದು, ಇಲ್ಲಿನ ಸಮಸ್ಯೆ ಕಡಿಮೆ ಮಾಡದಿದ್ದರೆ ಅನಿಯಂತ್ರಿತ ಕೋಡ್ ಎಕ್ಸಿಕ್ಯೂಶನ್‌ಗೆ ಕಾರಣವಾಗಲಿದ್ದು, ಹ್ಯಾಕರ್‌ಗಳು ಸಿಸ್ಟಮ್‌ಗೆ ಪ್ರವೇಶವನ್ನು ಪಡೆಯಬಹುದು ಎಂದು ಆಪಲ್ ತಿಳಿಸಿದೆ.

ಐಫೋನ್‌ ಬಳಕೆದಾರರೇ ಕೂಡಲೇ iOS 16.3.1 ಅಪ್‌ಡೇಟ್‌ ಮಾಡಿ; ಖಂಡಿತಾ ನಿಮಗೆ ಉಪಯುಕ್ತ

ಐಫೋನ್‌ಗಳು, ಐಪ್ಯಾಡ್, ಮ್ಯಾಕ್‌ಗಳಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್‌ ಪರಿಶೀಲಿಸುವುದೇಗೆ?

ಐಫೋನ್‌ನಲ್ಲಿ ಬಳಕೆದಾರರು ಮೊದಲು ಸೆಟ್ಟಿಂಗ್‌ ವಿಭಾಗಕ್ಕೆ ಹೋಗಬೇಕು. ಅಲ್ಲಿ ಜನರಲ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿದರೆ ಸಾಫ್ಟ್‌ವೇರ್ ಅಪ್‌ಡೇಟ್‌ ಆಯ್ಕೆ ಕಾಣಬಹುದು. ಈ ವಿಭಾಗದಲ್ಲಿ ಹೊಸ ಐಓಎಸ್‌ 16.3.1 ನಿಮಗೆ ಲಭ್ಯ ಇದ್ದು, ಇದು 331MB ಗಾತ್ರ ಹೊಂದಿದೆ. ಹಾಗೆಯೇ ಐಪ್ಯಾಡ್‌ಗಳಲ್ಲಿ ಇದೇ ರೀತಿಯ ಮಾರ್ಗವನ್ನು ಅನುಸರಿಸುವ ಮೂಲಕ ಅಪ್‌ಡೇಟ್‌ ಮಾಡಬಹುದು.

ಹೊಸ ಅಪ್‌ಡೇಟ್‌ ಯಾರಿಗೆಲ್ಲಾ ಲಭ್ಯ?

ಇನ್ನು ಈ ಹೊಸ ಓಎಸ್‌ ನವೀಕರಣಗಳು ಎಲ್ಲಾ ಆಪಲ್‌ ಡಿವೈಸ್‌ ಬಳಕೆದಾರರಿಗೆ ಲಭ್ಯವಾಗುವುದಿಲ್ಲ. ಬದಲಾಗಿ ಅರ್ಹ ಸ್ಮಾರ್ಟ್‌ ಡಿವೈಸ್‌ಗಳಿಗೆ ಮಾತ್ರ ಲಭ್ಯ ಇರಲಿವೆ. ಐಫೋನ್‌ 14, ಐಫೋನ್‌ 14 ಪ್ಲಸ್‌, ಐಫೋನ್‌ 14 ಪ್ರೊ, ಐಫೋನ್‌ 14 ಪ್ರೊ ಮ್ಯಾಕ್ಸ್‌, ಐಫೋನ್‌ 13, ಐಫೋನ್‌ 13 ಮಿನಿ, ಐಫೋನ್‌ 13 ಪ್ರೊ, ಐಫೋನ್‌ 13 ಪ್ರೊ ಮ್ಯಾಕ್ಸ್ , ಐಫೋನ್‌ 12, ಐಫೋನ್‌ 12 ಮಿನಿ, ಐಫೋನ್‌ 12 ಪ್ರೊ, ಐಫೋನ್‌ 12 ಪ್ರೊ ಮ್ಯಾಕ್ಸ್‌, ಐಫೋನ್‌ 11, ಐಫೋನ್‌ 11 ಪ್ರೊ, ಐಫೋನ್‌ 11 ಪ್ರೊ ಮ್ಯಾಕ್ಸ್‌, ಐಫೋನ್‌ XS, ಐಫೋನ್‌ XS ಮ್ಯಾಕ್ಸ್‌, ಐಫೋನ್‌ XR, ಐಫೋನ್‌ X, ಐಫೋನ್‌ 8, ಐಫೋನ್‌ 8 ಪ್ಲಸ್‌, ಐಫೋನ್‌ SE ( 3 ನೇ ಜನ್) ಹಾಗೂ ಐಫೋನ್‌ SE (2 ನೇ ಜನ್)ಫೋನ್ ಬಳಕೆದಾರರಿಗೆ ಈ ಹೊಸ ನವೀಕರಣ ಲಭ್ಯವಿದೆ.

ಐಫೋನ್‌ ಬಳಕೆದಾರರೇ ಕೂಡಲೇ iOS 16.3.1 ಅಪ್‌ಡೇಟ್‌ ಮಾಡಿ; ಖಂಡಿತಾ ನಿಮಗೆ ಉಪಯುಕ್ತ

ಹೊಸ ಸಾಫ್ಟ್‌ವೇರ್‌ ಏನೆಲ್ಲಾ ದೋಷ ಪರಿಹರಿಸಲಿದೆ?

ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಮ್ಯಾಕ್‌ಗಳಿಗೆ ಪರಿಚಯಿಸಲಾಗುತ್ತಿರುವ ಈ ಹೊಸ ನವೀಕರಣದ ಮೂಲಕ ಪ್ರಮುಖ ದೋಷ ಪರಿಹಾರಗಳು ಮತ್ತು ಭದ್ರತಾ ನವೀಕರಣಗಳನ್ನು ಕಾಣಬಹುದಾಗಿದ್ದು, ಅದರಲ್ಲಿ ಪ್ರಮುಖವಾಗಿ ಐಕ್ಲೌಡ್ ಸಮಸ್ಯೆ ಮತ್ತು ಸಿರಿ ಫೈಂಡ್ ಮೈ ರಿಕ್ವೆಸ್ಟ್‌ ದೋಷ ಪರಿಹಾರಗಳು ಇದರಿಂದ ಆಗುತ್ತವೆ. ಹಾಗೆಯೇ ಐಫೋನ್‌ 14 ಮತ್ತು ಐಫೋನ್‌ 14 ಪ್ರೊ ನಲ್ಲಿ ಕ್ರ್ಯಾಶ್ ಪತ್ತೆಯನ್ನು ಉತ್ತಮಗೊಳಿಸಲಿದೆ ಎನ್ನಲಾಗಿದೆ.

ಇದರೊಂದಿಗೆ ವೆಂಚುರಾ 13.2.1 ಸಾಮಾನ್ಯ ದುರ್ಬಲತೆಗಳು ಮತ್ತು ಮಾನ್ಯತೆಗಳ (CVE) ಗ್ರೂಪ್‌ ಬಗ್ಗೆ ಮಾಹಿತಿ ನೀಡಲಿದ್ದು, ಈ ಮೂಲಕ ವೆಬ್‌ಕಿಟ್, ಆಪಲ್ ಶಾರ್ಟ್‌ಕಟ್‌ಗಳು ಮತ್ತು ಕರ್ನಲ್ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸಲಾಗುತ್ತದೆ.

Best Mobiles in India

English summary
Apple is rolling out a new software update for their Devices. The latest iOS 16.3.1, iPadOS 16.3.1, and macOS Ventura 13.2.1 iterations fix some bugs in iPhone, iPad, and Mac.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+