Home
ಸುದ್ದಿಜಾಲ

ಈ ಲೋನ್‌ ಆಪ್‌ಗಳನ್ನು ನಿರ್ಬಂಧಿಸಿದ ಆಪಲ್‌; ನಿಮ್ಮ ಫೋನ್‌ನಲ್ಲಿದ್ರೆ ಈಗಲೇ ಡಿಲೀಟ್‌ ಮಾಡಿ!

ಜನರು ಎಲ್ಲಾ ಸಮಯದಲ್ಲೂ ಹಣ ಹೊಂದಿರುವುದಿಲ್ಲ. ಈ ಕಾರಣಕ್ಕಾಗಿಯೇ ಅಗತ್ಯ ಮೂಲಗಳಿಂದ ಸಾಲ ಪಡೆದು ಜೀವನ ನಡೆಸುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಲೋನ್‌ ಆಪ್‌ಗಳು ಲಭ್ಯ ಇದ್ದು, ಈ ಮೂಲಕ ಕ್ಷಣ ಮಾತ್ರದಲ್ಲಿ ಅಗತ್ಯ ಹಣವನ್ನು ಪಡೆದುಕೊಳ್ಳಬಹುದು. ಆದರೆ, ಈ ಲೋನ್‌ ಆಪ್‌ಗಳೂ ನೀಡುವ ಕಿರುಕುಳ ಮಾತ್ರ ಅಷ್ಟಿಷ್ಟಲ್ಲ.

ಹೌದು, ಲೋನ್‌ ಆಪ್‌ಗಳು ಎಷ್ಟು ಜನಪ್ರಿಯತೆ ಪಡೆದುಕೊಂಡಿವೆಯೋ ಅಷ್ಟೇ ಪ್ರಮಾಣದಲ್ಲಿ ಜನರಿಗೆ ಕಿರುಕುಳ ಸಹ ನೀಡುತ್ತಿವೆ. ಅದರಲ್ಲೂ ಭಾರತದಲ್ಲಿ ಇದು ಜಾಸ್ತಿ ಆಗಿತ್ತು. ಈ ಕಾರಣಕ್ಕೆ ಸರ್ಕಾರ ಹಾಗೂ ಆಪ್‌ಸ್ಟೋರ್‌ಗಳು ಕೆಲವು ನೀತಿ ನಿಮಯಗಳನ್ನು ಜಾರಿ ಮಾಡಿದೆ. ಅದಾಗ್ಯೂ ಲೋನ್‌ ಆಪ್‌ಗಳು ಜನರನ್ನು ವಿವಿಧ ರೀತಿಯಲ್ಲಿ ಟಾರ್ಚರ್‌ ಕೊಟ್ಟು ಹಿಂಸಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಈ ಕಾರಣಕ್ಕೆ ಆಪಲ್‌ ಈ ಲೋನ್‌ ಆಪ್‌ಗಳಿಗೆ ಕಡಿವಾಣ ಹಾಕಿದೆ.

ಈ ಲೋನ್‌ ಆಪ್‌ಗಳನ್ನು ನಿರ್ಬಂಧಿಸಿದ ಆಪಲ್‌; ಫೋನ್‌ನಲ್ಲಿದ್ರೆ ಈಗಲೇ ಡಿಲೀಟ್‌ ಮಾಡಿ

ಬಳಕೆದಾರರ ಕಳವಳದ ಬಳಿಕ ಆಪಲ್ ಭಾರತದಲ್ಲಿನ ಆಪ್ ಸ್ಟೋರ್‌ನಿಂದ ಸುಮಾರು ಆರು ಸಾಲದ ಆಪ್‌ಗಳನ್ನು ತೆಗೆದುಹಾಕಿದೆ. ಈ ಆಪ್‌ಗಳು ಹಣಕಾಸು ಸಂಸ್ಥೆಗಳಂತೆ ನಟಿಸಿ, ಹೆಚ್ಚಿನ ಶುಲ್ಕವನ್ನು ವಿಧಿಸುವುದು ಮತ್ತು ಮರುಪಾವತಿಗಾಗಿ ಸಾಲಗಾರರಿಗೆ ಬೆದರಿಕೆ ಹಾಕುವಂತಹ ಅನೈತಿಕ ತಂತ್ರಗಳನ್ನು ಬಳಕೆ ಮಾಡುತ್ತಿದ್ದಾಗಿ ತಿಳಿದುಬಂದಿದೆ. ಇನ್ನು ಬ್ಯಾನ್ ಆದ ಆಪ್‌ಗಳಲ್ಲಿ ವೈಟ್ ಕ್ಯಾಶ್, ಪಾಕೆಟ್ ಕ್ಯಾಶ್ ಮತ್ತು ಗೋಲ್ಡನ್ ಕ್ಯಾಶ್‌ನಂತಹ ಕೆಲವು ಆಪ್‌ ಸೇರಿವೆ.

ಈ ಆಪ್‌ಗಳು ಬಳಕೆದಾರರ ಸಂಪರ್ಕ ಲಿಸ್ಟ್‌‌ ಮತ್ತು ಮೀಡಿಯಾ ಫೈಲ್‌ಗೆ ಅನಗತ್ಯ ಎಂಟ್ರಿ ನೀಡುತ್ತಿದ್ದವು. ಅಷ್ಟು ಮಾತ್ರವಲ್ಲದೆ ಹೆಚ್ಚಿನ ಅನಗತ್ಯ ಶುಲ್ಕವನ್ನು ಸಹ ವಿಧಿಸಿಸವೆ ಎಂದು ವರದಿ ಆಗಿದೆ. ಅಂದರೆ ಸಾಲದ ಅರ್ಧದಷ್ಟು ಮೊತ್ತದ 'ಸಂಸ್ಕರಣಾ ಶುಲ್ಕ' ವಿಧಿಸುವುದು ಕಂಡು ಬಂದಿದೆ. ಇದರೊಂದಿಗೆ ಅತಿಯಾದ ಬಡ್ಡಿದರಗಳು ಸಾಲ ಪಡೆಯುವವರಿಗೆ ಇನ್ನಿಲ್ಲದ ಹಿಂಸೆಯಾಗಿ ಪರಿಣಮಿಸಿದೆ.

ಇನ್ನು ಈ ಆಪ್‌ಗಳು ಮರುಪಾವತಿಗಾಗಿ ಬಳಕೆದಾರರಿಗೆ ಕಿರುಕುಳ ಮತ್ತು ಬೆದರಿಕೆ ಹಾಕುತ್ತಿದ್ದು, ನಿಗದಿತ ದಿನಾಂಕದ ಮೊದಲು ಪಾವತಿ ಮಾಡದಿದ್ದರೆ ಬಳಕೆದಾರರ ಸಂಪರ್ಕಗಳಿಗೆ ಮೆಸೆಜ್‌ ಕಳುಹಿಸುವುದಾಗಿ ಇವು ಬೆದರಿಕೆ ಹಾಕಿವೆ. ಅಷ್ಟು ಮಾತ್ರವಲ್ಲದೆ ನಕಲಿ ನಗ್ನತೆ ಚಿತ್ರಗಳನ್ನು ಸೃಷ್ಟಿಸಿ ಸಾಲ ಪಡೆದವರ ಸಂಪರ್ಕಗಳಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿವೆ ಎಂದು ಸಹ ತಿಳಿದುಬಂದಿದೆ.

ಆಪಲ್ ಡೆವಲಪರ್ ಪ್ರೋಗ್ರಾಂ ಪರವಾನಗಿ ಒಪ್ಪಂದ ಮತ್ತು ಮಾರ್ಗಸೂಚಿಗಳ ನಿಯಮಗಳಿಗೆ ವಿರುದ್ಧವಾಗಿ ಈ ಆಪ್‌ಗಳು ನಡೆದುಕೊಂಡ ಪರಿಣಾಮ ಆಪ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ ಎಂದು ಆಪಲ್‌‌ ಹೇಳಿದೆ. ಅಷ್ಟು ಮಾತ್ರವಲ್ಲದೆ ಈ ಆಪ್‌ಗಳು ಹಣಕಾಸು ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವುದಾಗಿಯೂ ಹೇಳಿಕೊಂಡಿರುವುದನ್ನು ಆಪಲ್ ಕಂಡುಕೊಂಡಿದೆ. ಆದರೆ ಇವು ನಕಲಿ ಆಪ್‌ಗಳಾಗಿವೆ.

2022 ರಲ್ಲಿ ಆಪ್ ಸ್ಟೋರ್ $2 ಶತಕೋಟಿ ಮೋಸದ ವಹಿವಾಟುಗಳನ್ನು ತಡೆದಿದ್ದು, ಗುಣಮಟ್ಟ ಮತ್ತು ಸುರಕ್ಷತೆಗಾಗಿ ಆಪಲ್‌ನ ಮಾನದಂಡಗಳನ್ನು ಪೂರೈಸದ ಸುಮಾರು 1.7 ಮಿಲಿಯನ್ ಆಪ್‌ಗಳ ವಿನಂತಿ ಸಲ್ಲಿಕೆಗಳನ್ನು ತಿರಸ್ಕರಿದೆ. ಜೊತೆಗೆ ಮೋಸದ ಚಟುವಟಿಕೆಯ ಕಾರಣದಿಂದ 428,000 ಡೆವಲಪರ್ ಖಾತೆಗಳನ್ನು ಕ್ಲೋಸ್‌ ಮಾಡಿದೆ. ಇದರೊಂದಿಗೆ ನಮ್ಮ ಮಾರ್ಗಸೂಚಿಗಳ ಮೂಲಕ ನಾವು ನಮ್ಮ ಬಳಕೆದಾರರಿಗೆ ಸಾಧ್ಯವಾದಷ್ಟು ಸುರಕ್ಷಿತ ಅನುಭವವನ್ನು ಒದಗಿಸುತ್ತಿದ್ದೇವೆ ಎಂದು ಆಪಲ್‌ ಹೇಳಿದೆ.

ಈ ಲೋನ್‌ ಆಪ್‌ಗಳನ್ನು ನಿರ್ಬಂಧಿಸಿದ ಆಪಲ್‌; ಫೋನ್‌ನಲ್ಲಿದ್ರೆ ಈಗಲೇ ಡಿಲೀಟ್‌ ಮಾಡಿ

ನಾವು ಎಂದಿಗೂ ಆಪ್ ಸ್ಟೋರ್‌ನಲ್ಲಿ ಮೋಸದ ಚಟುವಟಿಕೆಯನ್ನು ಸಹಿಸುವುದಿಲ್ಲ ಮತ್ತು ಸಿಸ್ಟಮ್ ಅನ್ನು ಮೋಸಗೊಳಿಸಲು ಪ್ರಯತ್ನಿಸುವ ಆಪ್‌ಗಳು ಹಾಗೂ ಡೆವಲಪರ್‌ಗಳ ವಿರುದ್ಧ ಕಠಿಣ ನಿಯಮಗಳನ್ನು ಹೊಂದಿದ್ದೇವೆ ಎಂದು ಎಚ್ಚರಿಸಿದ್ದು, ಈ ಕಾರಣಕ್ಕಾಗಿಯೇ ಈಗ ಈ ಆಪ್‌ಗಳನ್ನು ಆಪ್‌ಸ್ಟೋರ್‌ನಿಂದ ತೆಗೆದುಹಾಕಲಾಗಿದೆ ಎಂದು ತಿಳಿದಿದೆ. ಇದರೊಂದಿಗೆ ಈ ವರ್ಷದ ಆರಂಭದಲ್ಲಿ, ನೀತಿ ಉಲ್ಲಂಘನೆಯ ಕಾರಣಕ್ಕಾಗಿ ಗೂಗಲ್ ಭಾರತದಲ್ಲಿ ಪ್ಲೇ ಸ್ಟೋರ್‌ನಿಂದ ಸುಮಾರು 3,500 ಕ್ಕೂ ಹೆಚ್ಚು ಸಾಲದ ಆಪ್‌ಗಳನ್ನ ತೆಗೆದುಹಾಕಿತ್ತು.

Best Mobiles in India

English summary
As popular as loan apps are, they are also harassing people. For this reason, Apple has removed some apps from its App Store.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+