Home
ಸುದ್ದಿಜಾಲ

ಸರ್ಕಾರಗಳ ವಿನಂತಿ ಹಿನ್ನೆಲೆ 1,474 ಆಪ್‌ಗಳನ್ನು ತೆಗೆದುಹಾಕಿದ ಆಪಲ್‌: ಭಾರತ, ಪಾಕ್‌ನಿಂದಲೂ ಮನವಿ!

ಆಪಲ್‌ ಟೆಕ್‌ ಲೋಕದ ದೈತ್ಯ ಎನಿಸಿಕೊಂಡಿದ್ದು, ಈ ಕಂಪೆನಿಯ ಎಲ್ಲಾ ಡಿವೈಸ್‌ಗಳಲ್ಲೂ ಬಳಕೆದಾರರರಿಗೆ ಉತ್ತಮ ಕಾರ್ಯಕ್ಷಮತೆ ಹಾಗೂ ದೀರ್ಘಬಾಳಿಕೆಯ ಗ್ಯಾರಂಟಿ ನೀಡಲಾಗುತ್ತದೆ. ಅದರಂತೆ ಬಳಕೆದಾರರಿಗೆ ಈ ಡಿವೈಸ್‌ಗಳು ಅತ್ಯುತ್ತಮವಾದ ಅನುಭವ ಸಹ ನೀಡುತ್ತವೆ. ಈ ನಡುವೆ ಸರ್ಕಾರದ ಆದೇಶದ ಮೇರೆಗೆ ಆಪರ್‌ ಮಹತ್ವದ ನಿರ್ಧಾರ ತೆಗದುಕೊಂಡಿದ್ದು, ಅದರ ವರದಿ ಬಿಡುಗಡೆ ಮಾಡಿದೆ.

ಹೌದು, ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಬಳಕೆದಾರರನ್ನು ವಂಚಿಸುವ ಪ್ರಕರಣ ಸಹ ಹೆಚ್ಚಾಗುತ್ತಿವೆ. ಇವುಗಳ ಮೇಲೆ ಸರ್ಕಾರ ಸದಾ ಕಣ್ಣಿರಿಸಿದ್ದು, ಅಂಥವರನ್ನು ಶಿಕ್ಷಿಸುವುದರ ಜೊತೆಗೆ ಅವರು ಬಳಕೆ ಮಾಡುವ ಆಪ್‌ಗಳು ಅಥವಾ ಇತರೆ ಡಿವೈಸ್‌ಗಳನ್ನೂ ಸಹ ನಿರ್ಬಂಧ ಮಾಡುತ್ತಾ ಬರಲಾಗುತ್ತಿದೆ. ಇದೇ ಕಾರಣಕ್ಕೆ ಇದೀಗ ಭಾರತವೂ ಸೇರಿದಂತೆ ಇತರೆ ಸರ್ಕಾರಗಳ ಮನವಿಯ ಮೇರೆಗೆ ಆಪಲ್‌ ತನ್ನ ಆಪ್‌ ಸ್ಟೋರ್‌ನಿಂದ ಬರೋಬ್ಬರಿ 1,474 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಹಾಗಿದ್ರೆ, ಬನ್ನಿ ಈ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ.

ಸರ್ಕಾರಗಳ ವಿನಂತಿ ಹಿನ್ನೆಲೆ 1,474 ಆಪ್‌ಗಳನ್ನು ತೆಗೆದುಹಾಕಿದ ಆಪಲ್‌....

2022 ರಲ್ಲಿ ಈ ಆಪ್‌ಗಳನ್ನು ತನ್ನ ಸ್ಟೋರ್‌ನಿಂದ ತೆಗೆದುಹಾಕುವಂತೆ ವಿವಿಧ ಸರ್ಕಾರಗಳ ವಿನಂತಿಗಳ ಮೇರೆಗೆ ಆಪಲ್‌ ತನ್ನ ಆಪ್ ಸ್ಟೋರ್‌ನಿಂದ 1,474 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಈ ಸಂಬಂಧ 2022 ಆಪ್ ಸ್ಟೋರ್ ಪಾರದರ್ಶಕತೆ ವರದಿಯನ್ನು ಪ್ರಕಟಿಸಿದೆ. ಇನ್ನು ಈ ಆಪ್‌ಗಳು ವಿವಿಧ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದವು ಎಂದು ತಿಳಿದುಬಂದಿದೆ. ಅದರಲ್ಲೂ 2021 ರಲ್ಲಿ ಆಪ್ ಸ್ಟೋರ್ ಡೆವಲಪರ್‌ಗಳೊಂದಿಗೆ ಕಂಪನಿಯ $100 ಮಿಲಿಯನ್ ಪರಿಹಾರದ ಭಾಗವಾಗಿ ಪ್ರಕಟವಾದ ಮೊದಲ ವರದಿ ಇದಾಗಿದೆ.

ಎಲ್ಲೆಲ್ಲಿ ಎಷ್ಟು ಆಪ್‌ಗಳ ವಿರುದ್ಧ ಕ್ರಮ?: ಭಾರತ ಮಾತ್ರವಲ್ಲದೆ ಜಗತ್ತಿನ ಎಲ್ಲಾ ದೇಶಗಳು ಆಯಾ ದೇಶದ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಆಪ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದವು. ಅದರಂತೆ ಚೀನಾದಿಂದ ಬಂದ ದೂರಿನ ಮೇರೆಗೆ 1435 ಆಪ್‌ಗಳನ್ನು ತೆಗೆದುಹಾಕಲಾಗಿದ್ದು, ಭಾರತದ ವಿಷಯಕ್ಕೆ ಬಂದರೆ 14 ಆಪ್‌ಗಳನ್ನು ತೆರೆದುಹಾಕಲಾಗಿದೆ. ಹಾಗೆಯೇ ಪಾಕಿಸ್ತಾನದಲ್ಲಿ 10 ಆಪ್‌ಗಳು ಮತ್ತು ರಷ್ಯಾದಲ್ಲಿ ಏಳು ಆಪ್‌ಗಳನ್ನು ಆಪ್‌ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.

ಎಷ್ಟು ದೂರು ದಾಖಲಾಗಿದ್ದವು?: ಆಪಲ್‌ ಸ್ಟೋರ್‌ನಲ್ಲಿ ಕಂಡುಬರುತ್ತಿದ್ದ ದೋಷಪೂರಿತ ಆಪ್‌ಗಳನ್ನು ಪಟ್ಟಿ ಮಾಡುತ್ತಿದ್ದ ಆಯಾ ದೇಶಗಳು ಅವುಗಳನ್ನು ಆಪ್‌ಸ್ಟೋರ್‌ನಿಂದ ತೆಗೆದುಹಾಕಬೇಕು ಎಂದು ಸೂಚಿಸಿದ್ದವು. ಅದರಂತೆ ಭಾರತದಿಂದ 709 ಮನವಿಗಳು ಸಲ್ಲಿಕೆಯಾಗಿದ್ದರೆ, ಚೀನಾದಿಂದ 5,484 ಮನವಿಗಳು ದಾಖಲಾಗಿದ್ದವರು. ಈ ಮೂಲಕ ವಿಶ್ವದಾದ್ಯಂತ ವಿವಿಧ ಏಜೆನ್ಸಿಗಳಿಂದ ಒಟ್ಟಾರೆ 18,412 ಮನವಿಗಳನ್ನು ಸಲ್ಲಿಕೆ ಮಾಡಲಾಗಿತ್ತು.

ಸರ್ಕಾರಗಳ ವಿನಂತಿ ಹಿನ್ನೆಲೆ 1,474 ಆಪ್‌ಗಳನ್ನು ತೆಗೆದುಹಾಕಿದ ಆಪಲ್‌....

ಆಪಲ್‌ ಸ್ಟೋರ್‌ನಲ್ಲಿ ಎಷ್ಟು ಆಪ್‌ಗಳಿವೆ?: 2022 ರ ಹೊತ್ತಿಗೆ ಆಪಲ್ ಆಪ್ ಸ್ಟೋರ್‌ನಲ್ಲಿ ಒಟ್ಟು 1,783,232 ಆಪ್‌ಗಳು ಇದ್ದವು. ಈ ನಡುವೆ ಆಪ್‌ ಸ್ಟೋರ್‌ನಲ್ಲಿ ಸ್ಥಾನ ಪಡೆದುಕೊಳ್ಳಲು 6,101,913 ಅರ್ಜಿಗಳು ಸಲ್ಲಿಕೆ ಆಗಿದ್ದವು. ಜೊತೆಗೆ ಆಪ್ ಸ್ಟೋರ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ವರ್ಷ 1,679,694 ಆಪ್‌ಗಳ ಮನವಿಯನ್ನು ತಿರಸ್ಕರಿಸಲಾಗಿತ್ತು. ಇದಾದ ನಂತರ ಅಂದರೆ 6,101,913 ಆಪ್‌ಗಳ ಮನವಿಯಲ್ಲಿ 253,466 ಆಪ್‌ಗಳಿಗೆ ಅನುಮತಿ ನೀಡಲಾಗಿದ್ದು, ಬಳಿಕ ಒಟ್ಟು ಆಪ್‌ಗಳಲ್ಲಿ 2022 ರಲ್ಲಿ186,195 ಆಪ್‌ಗಳನ್ನು ಹೊರದಬ್ಬಲಾಗಿದೆ.

ಯಾವ ವಿಭಾಗದ ಆಪ್‌ಗಳ ವಿರುದ್ಧ ಕ್ರಮ: ಆಪ್‌ಸ್ಟೋರ್‌ನಿಂದ ತೆಗೆದುಹಾಕಲಾದ ಆಪ್‌ಗಳ ವರ್ಗವಾರು ಮಾಹಿತಿ ಪರಿಶೀಲನೆ ಮಾಡುವುದಾದರೆ ಗೇಮಿಂಗ್‌ ವಿಭಾಗದಲ್ಲಿ 38,883, ಯುಟಿಲಿಟೀಸ್ ವಿಭಾಗದಲ್ಲಿ 20,045 ಮತ್ತು ವ್ಯಾಪಾರ ವಿಭಾಗದಲ್ಲಿ 16,997 ಆಪ್‌ಗಳನ್ನು ತೆಗೆದುಹಾಕಲಾಗಿದೆ. ಅದರಂತೆ ಆಪ್ ಸ್ಟೋರ್‌ನಲ್ಲಿ ಒಟ್ಟು ನೋಂದಾಯಿತ ಆಪಲ್ ಡೆವಲಪರ್‌ಗಳ ಸಂಖ್ಯೆ 36,974,015 ಆಗಿದ್ದು, ಕಂಪನಿಯು 2022 ರಲ್ಲಿ ತನ್ನ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ 428,487 ಡೆವಲಪರ್ ಖಾತೆಗಳಿಗೆ ನಿರ್ಬಂಧ ಹೇರಿದೆ.

ಸರ್ಕಾರಗಳ ವಿನಂತಿ ಹಿನ್ನೆಲೆ 1,474 ಆಪ್‌ಗಳನ್ನು ತೆಗೆದುಹಾಕಿದ ಆಪಲ್‌....

ಆಪಲ್ ಪ್ರಕಾರ, ಆಪಲ್‌ ತನ್ನ ಆಪ್ ಸ್ಟೋರ್ 2022 ರಲ್ಲಿ $ 2.09 ಶತಕೋಟಿಗೂ ಹೆಚ್ಚು ಮೋಸದ ವಹಿವಾಟುಗಳನ್ನು ತಡೆಗಟ್ಟಿದೆ ಎಂದು ಘೋಷಣೆ ಮಾಡಿದೆ. ಅಂದರೆ ಸುಮಾರು 3.9 ಮಿಲಿಯನ್ ಕದ್ದ ಕ್ರೆಡಿಟ್ ಕಾರ್ಡ್‌ಗಳನ್ನು ಖರೀದಿ ಮಾಡಲು ಬಳಕೆ ಮಾಡದಂತೆ ನಿರ್ಬಂಧ ಹೇರಿದೆ. ಜೊತೆಗೆ 7,14,000 ಖಾತೆಗಳಲ್ಲಿ ಮತ್ತೆ ವಹಿವಾಟು ಮಾಡುವುದನ್ನು ನಿಷೇಧಿಸಿದೆ. ಈ ಮೂಲಕ ಬಳಕೆದಾರರ ಭದ್ರತೆಗೆ ಸದಾ ಸಿದ್ಧವಾಗಿರುತ್ತದೆ.

Best Mobiles in India

English summary
Apple removed 1,474 apps from app store after received appeal from many govt include india.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+