ಆಪಲ್‌ನ ಹೊಸ 'iOS 13 ಓಎಸ್' ಲಾಂಚ್!.ಈ ಐಫೋನ್‌ಗಳು ಅಪ್‌ಡೇಟ್ ಆಗಲಿವೆ!
ವಿಶ್ವದ ಜನಪ್ರಿಯ ಟೆಕ್ ಸಂಸ್ಥೆ ಆಪಲ್ ಕಂಪನಿಯ ತನ್ನ ಬಹುನಿರೀಕ್ಷಿತ ಹೊಸ 'iOS 13' ಓಎಸ್ ಅಪ್‌ಡೇಟ್ ವರ್ಷನ್ ಅನ್ನು ಬಿಡುಗಡೆ ಮಾಡಿದ್ದು, ಈ ಸುದ್ದಿ ಈಗ ಇಡಿ ಟೆಕ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸಿದೆ. ಹೊಸ ವರ್ಷನ್ ಒಳಗೊಂಡಿರುವ ಫೀಚರ್ಸ್‌ಗಳನ್ನು ನೋಡಿ ಐಓಎಸ್ ಬಳಕೆದಾರರು ಬೆರಗುಗೊಂಡಿದ್ದು, ಯಾವೆಲ್ಲಾ ಐಫೋನ್ ಮಾದರಿಗಳು ಅಪ್‌ಡೇಟ್ ವರ್ಷನ್‌ಗೆ ಲಭ್ಯ ಎಂದು ತಿಳಿಯಲು ಖಾತರರಾಗಿದ್ದಾರೆ.

ಹೌದು, ಆಪಲ್ ಸಂಸ್ಥೆಯು ತನ್ನ ಹೊಸ iOS 13 ಓಎಸ್ ಅನ್ನು ಕ್ಯಾಲಿಫೊರ್ನಿಯದಲ್ಲಿ ನಡೆದ 'ವರ್ಲ್ಡ್ ವೈಡ್ ಡೆವಲಪರ್ಸ್ ಕಾನ್ಫರೆಸ್ಸ್'ನಲ್ಲಿ(WWDC) ಅನಾವರಣ ಮಾಡಿದ್ದು, ಇನ್ಮುಂದೆ ಕಂಪನಿಯ ಆಯ್ದ ಐಫೋನ್ ಮತ್ತು ಐಫೋಡ್ ಡಿವೈಸ್‌ಗಳಲ್ಲಿ ಹೊಸ iOS 13 ಓಎಸ್ ಕೆಲಸಮಾಡಲಿದ್ದು, ಬಳಕೆದಾರರಿಗೆ ಅತ್ಯುತ್ತಮ ನೂತನ ಇನ್‌ಬಿಲ್ಟ್ ಫೀಚರ್ಸ್‌ಗಳ ಪರಿಚಯವಾಗಲಿದೆ.

ಹೊಸ iOS 13 ಓಎಸ್‌ನಲ್ಲಿ ಡಾರ್ಕ್ ಮೋಡ್, ರಿಮೈಂಡರ್ ಆಪ್, ಫೈಂಡ್ ಮೈ ಐಫೋನ್ ಸೇರಿದಂತೆ ಮತ್ತಷ್ಟು ಫೀಚರ್ಸ್‌ಗಳು ಇವೆ. ಹಾಗಾದರೇ ಆಪಲ್‌ನ ಹೊಸ iOS 13 ಓಎಸ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಮತ್ತು ಯಾವ ಐಫೋನ್ ಡಿವೈಸ್‌ಗಳು iOS 13 ಓಎಸ್‌ನ ಹೊಸ ವರ್ಷನ್‌ಗೆ ಬೆಂಬಲಿಸಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹೊಸ iOS 13 ಓಎಸ್ ಬೆಂಬಲಿತ ಐಫೋನ್‌ಗಳ ಲಿಸ್ಟ್
*ಐಫೋನ್ ಎಕ್ಸ್ಎಸ್
*ಐಫೋನ್ XS ಮ್ಯಾಕ್ಸ್
*ಐಫೋನ್ ಎಕ್ಸ್ಆರ್
*ಐಫೋನ್ ಎಕ್ಸ್
*ಐಫೋನ್ 8
*ಐಫೋನ್ 8 ಪ್ಲಸ್
*ಐಫೋನ್ 7
*ಐಫೋನ್ 7 ಪ್ಲಸ್
*ಐಫೋನ್ 6 ಎಸ್
*ಐಫೋನ್ 6 ಎಸ್ ಪ್ಲಸ್
*ಐಫೋನ್ ಎಸ್ಇ

ಡಾರ್ಕ್ ಮೋಡ್
ಸಂಸ್ಥೆಯ ಹೊಸ ios ಓಎಸ್‌ನ ವಿಶೇಷತೆಲ್ಲಿ ಡಾರ್ಕ್ ಮೋಡ್ ಆಯ್ಕೆ ಹೆಚ್ಚು ಗಮನ ಸೆಳೆದಿದೆ. ಈ ಆಪ್ ಇನ್‌ಬಿಲ್ಟ್ ಆಗಿ ಸೇರಲಿದ್ದು. ಹೀಗಾಗಿ ಮುಂದಿನ ಐಫೋನ್ ಮತ್ತು ಐಫೋಡ್‌ಗಳಲ್ಲಿ ಬಳಕೆದಾರರು ಡಾರ್ಕ್ ಮೋಡ್ ಫೀಚರ್ ಲಭ್ಯವಾಗಲಿದೆ.

ಪರಿಷ್ಕೃತ ಹೆಲ್ತ ಆಪ್
ಆಪಲ್ ಕಂಪನಿಯು ತನ್ನ ಹೊಸ iOS 13 ಓಎಸ್‌ನಲ್ಲಿ ಪರಿಷ್ಕೃತ ಹೆಲ್ತ ಆಪ್ ಇನ್‌ಬಿಲ್ಟ್ ಆಗಿ ಸೇರಿಕೊಂಡಿರಲಿದ್ದು, ಗ್ರಾಹಕರಿಗೆ ರನ್ನಿಂಗ್, ಡೈಲಿ ಆಕ್ಟಿವಿಟಿ ಎಲ್ಲವನ್ನು ಟ್ರಾಕ್ ಮಾಡಿದೆ. ಇದರೊಂದಿಗೆ ಹೆಲ್ತ್ ಟ್ರಾಕ್‌ಗೆ ಸಂಭಂದಿಸಿದ ಹೆಚ್ಚಿನ ಆಯ್ಕೆಗಳನ್ನು ಒದಗಿಸಿದೆ.

ರಿಮೈಂಡರ್ ಮತ್ತು ಬುಕ್ಸ್ ಆಪ್
ಹೊಸ ಓಎಸ್‌ನಲ್ಲಿ ರಿಮೈಂಡರ್ ಮತ್ತು ಬುಕ್ಸ್ ಆಪ್ ಇರಲಿದ್ದು, ಇದು ನಾಲ್ಕು ಡಿಫಾಲ್ಟ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೇ ಆಲ್ ಟಾಸ್ಕ್, ಶೆಡ್ಯುಲ್ಡ್ ಟಾಸ್ಕ್, ಟಾಸ್ಕ್ ಟು ಬಿ ಡನ್ ಟುಡೇ ಮತ್ತು ಫ್ಲ್ಯಾಗ್ಡ್ ಟಾಸ್ಕ್. ಇವು ಬಳಕೆದಾರರಿಗೆ ನೆನೆಪಿಸುವ ಕೆಲಸ ಮಾಡಲಿದ್ದು, ರಿಮೈಂಡರ್ ಸೆಟ್ಟ್ ಮಾಡಿಕೊಳ್ಳಬೇಕು. ಬುಕ್ಸ್‌ಗೆ ಸಂಭಂದಿತ ಆಪ್ ಸಹ ಇದೆ.

ಐ ಮೆಸ್ಸೆಜ್ ಆಪ್
ಐ ಮೆಸ್ಸೆಜ್ ಆಪ್ ವಾಟ್ಸಪ್ ಮೆಸ್ಸೆಜ್ ರೀತಿಯಲ್ಲಿಯೇ ಇದ್ದು, ಪ್ರೋಫೈಲ್ ಪಿಚ್ಚರ್ ಮತ್ತು ಡಿಸ್‌ಪ್ಲೇ ನೇಮ್ ಆಯ್ಕೆಗಳನ್ನು ಹೊಂದಿದೆ. ಐ ಮೆಸ್ಸೆಜ್ ಆಪ್‌ನಲ್ಲಿ ಪ್ರೈವೆಸ್ಸಿ ಸೆಟ್ಟಿಂಗ್ ಮಾಡಿಕೊಳ್ಳಲು ಆಯ್ಕೆ ಇದ್ದು, ಯಾರು ನನ್ನ ಪ್ರೊಫೈಲ್ ನೋಡಬಹುದು ಎಂಬುದನ್ನು ನಿಯಂತ್ರಿಸಬಹುದಾಗಿದೆ. ಹಾಗೇ ಮೆಮ್ಸ್, ಇಮೋಜಿಗಳು, ಎನಿಮೋಜಿಗಳು, ಸ್ಟಿಕ್ಕರ್ ಆಯ್ಕೆಗಳು ಸಹ ಇವೆ.

ಮ್ಯಾಪ್ ಆಪ್‌ಗೆ ಹೊಸ ರೂಪ
ಐಫೋನ್ ಡಿವೈಸ್‌ಗಳಲ್ಲಿ ಆಪಲ್ ಮ್ಯಾಪ್ ಇದ್ದು, ಈ ಆಪ್ ನ್ಯಾವಿಗೇಶನ್ ಸೇವೆ ನೀಡುತ್ತದೆ. ಇದೀಗ ಹೊಸ ಅಪ್‌ಡೇಟ್ ಮಾದರಿಯ ಆಪ್‌ನಲ್ಲಿ ಗ್ರಾಹಕರಿಗೆ ಫ್ರಿಕ್ವೇಂಟ್ ಲೊಕೇಶನ್ ಸೆಟ್ಟ್ ಮಾಡಬಹುದಾಗಿದ್ದು, ಈ ಮೂಲಕ ವೇಗದ ನ್ಯಾವಿಗೇಶನ್ ಪಡೆಯಬಹುದಾಗಿದೆ. ಇದಲ್ಲದೇ ಆ ಫ್ರಕ್ವೆಂಟ್ ಲೊಕೇಶನ್‌ನಲ್ಲಿರುವವರು ಗ್ರೂಪ್ ಕ್ರಿಯೆಟ್ ಮಾಡಿಕೊಳ್ಳುವ ಆಯ್ಕೆಗಳು ಸೇರಿವೆ.

ಫೈಂಡ್ ಮೈ ಐಫೋನ್
ಆಪಲ್ 'ಫೈಂಡ್ ಮೈ ಐಫೋನ್' ಮತ್ತು 'ಫೈಂಡ್ ಮೈ ಫ್ರೆಂಡ್ಸ್' ಎರಡನ್ನು ಒಂದೇ ಆಪ್‌ನಲ್ಲಿ ವಿಲೀನ್ ಮಾಡಿದ್ದು, ಸದ್ಯ ಗ್ರೀನ್‌ಟಚ್ ಆಯ್ಕೆಯಿಂದ ಗುರುತಿಸಿಕೊಂಡಿದೆ. ಈ ಆಪ್ ಮೂಲಕ ಐಫೋನ್ ಹುಡುಕಬಹುದಾಗಿದ್ದು, ಜೊತೆಗೆ ಫೈಂಡ್ ಮೈ ಫ್ರೆಂಡ್ ಫೀಚರ್ ಸೇರಿಸಲಾಗಿದೆ.

ಮೇಲ್ ಆಪ್
ಹೊಸ iOS 13 ಓಎಸ್ ಹಲವು ಮಹತ್ತರ ಫೀಚರ್ಸ್‌ಗಳನ್ನು ತುಂಬಿಕೊಂಡಿದ್ದು, ಅವುಗಳಲ್ಲಿ ಮೇಲ್ ಆಪ್ ಒಂದಾಗಿದೆ. ಇದರಲ್ಲಿ ಬೇಡವಾದ ಮೇಲ್‌ಗಳನ್ನು ಬರದಂತೆ ತಡೆಯುವ ಆಯ್ಕೆಗಳು ನೀಡಲಾದ್ದು, ವೈಯಕ್ತಿಕ ಮೇಲ್ ಥ್ರೇಡ್ ಅನ್ನು ಮ್ಯೂಟ್ ಮಾಡುವ ಆಯ್ಕೆ ಸಹ ಇದೆ. ಪೊಲ್ಡರ್ ಮ್ಯಾನೇಜಮೆಂಟ್ ಆಯ್ಕೆಗಳು ಸಹ ಇವೆ.

ಸ್ಲಿಪ್ ಮೋಡ್
ಆಪಲ್ iOS 13 ಓಎಸ್ ಡಿವೈಸ್‌ಗಳಲ್ಲಿ ಸ್ಲಿಪ್ ಮೋಡ್ ಆಯ್ಕೆಯು ಸೇರಿಕೊಂಡಿದ್ದು, ಮಲಗುವ ಸಮಯದಲ್ಲಿ ಡಿವೈಸ್‌ಗಳ ನೋಟಿಫಿಕೇಶನಗಳಿಂದ ಡಿಸ್ಟರ್ಬ್ ಆಗಬಾರದೆಂದು ಈ ಆಯ್ಕೆಯನ್ನು ಗ್ರಾಹಕರು ಬಳಸಿಕೊಳ್ಳಬಹುದಾಗಿದೆ. ಡಾರ್ಕ್ ಮೋಡ್, ಲಾಕ್ ಸ್ಕ್ರೀನ್ ಮತ್ತು ನೋಟಿಫಿಕೇಶನ್‌ಗಳನ್ನು ಆಟೋ ಮ್ಯೂಟ್ ಮಾಡಿಕೊಳ್ಳಲಿದೆ.


Click it and Unblock the Notifications