ಅಧಿಕೃತ ವಿಶ್ವದ ಶ್ರೀಮಂತ ಕಂಪನಿ 'ಆಪಲ್': ರೂಪಾಯಿಯಲ್ಲಿ ಲೆಕ್ಕಾಹಾಕಕ್ಕೇ ಆಗ್ತಿಲ್ಲ..!
ಕೇವಲ ಐಫೋನ್, ಐಪ್ಯಾಪ್ ಮತ್ತು ಮ್ಯಾಕ್ ತಯಾರಿಕೆಗೆ ಮಾತ್ರವೇ ಸಿಮೀತಗೊಳ್ಳದೆ ಸೆಲ್ಫ್ ಡ್ರೈವಿಂಗ್ ಕಾರುಗಳ ನಿರ್ಮಾಣಕ್ಕೂ ಮುಂದಾಗಿರುವ ಆಪಲ್ ಸಂಸ್ಥೆ ಇಂದು ವಿಶ್ವದಲ್ಲಿ ಅತೀ ಹೆಚ್ಚಿನ ಮೌಲ್ಯ ಹೊಂದಿರುವ ಕಂಪನಿ ಎನ್ನವ ಖ್ಯಾತಿಗೆ ಪಾತ್ರವಾಗಿದೆ. ಇದರೊಂದಿಗೆ ಆಪಲ್ ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿಗೆ 1 ಟ್ರಲಿಯನ್ ಡಾಲರ್ (1 ಲಕ್ಷ ಕೋಟಿ ಡಾಲರ್ = ಅಂದಾಜು ರೂ.68 ಲಕ್ಷ ಕೋಟಿ) ಮೌಲ್ಯವನ್ನು ತಲುಪಿದ ಕಂಪನಿ ಎನ್ನಿಸಿಕೊಂಡಿದೆ. ಇದುವರೆಗೂ ಯಾವ ಕಂಪನಿಗಳು ಇಷ್ಟು ದೊಡ್ಡ ಪ್ರಮಾಣದ ಮೌಲ್ಯವನ್ನು ಹೊಂದಿರಲಿಲ್ಲ ಎನ್ನಬಹುದು.

ಓದಿರಿ: ಪೋಷಕರೇ ಎಚ್ಚರ: ವಾಟ್ಸ್‌ಆಪ್‌ನಲ್ಲಿ ಶುರುವಾಗಿದೆ ಮೊಮೊ ಸುಸೈಡ್ ಗೇಮ್...!
ತನ್ನ ಐಫೋನ್ ಮೂಲಕವೇ ಜಾಗತಿಕವಾಗಿ ಪರಿಚಿತಗೊಂಡಿರುವ ಆಪಲ್, ಇಂದಿಗೂ ಪ್ರತಿಷ್ಠೆಯನ್ನು ಉಳಿಸಿಕೊಂಡಿದೆ. ಆಪಲ್ ಗ್ಯಾಜೆಟ್‌ಗಳು ಬಳಸುವವರು ಅದನ್ನು ಪ್ರತಿಷ್ಠೆಯ ಸಂಕೇತವಾಗಿಯೇ ಬಳಸುತ್ತಿದ್ದಾರೆ ಎನ್ನುವ ವರದಿಯೂ ಇದೇ ಕೆಲವು ದಿನಗಳ ಹಿಂದೆ ಪ್ರಕಟವಾಗಿದ್ದನ್ನು ನಾವು ಗಮನಿಸಬೇಕಾಗಿದೆ. ಗುಣಮಟ್ಟ ಮತ್ತು ವಿಭಿನ್ನತೆಗೆ ಸಾಕ್ಷಿಯಾಗಿರುವ ಆಪಲ್, ಅರ್ಹವಾಗಿಯೇ ವಿಶ್ವದಲ್ಲಿ ಅತೀ ಹೆಚ್ಚಿನ ಮೌಲ್ಯ ಹೊಂದಿರುವ ಕಂಪನಿ ಎನ್ನವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಷೇರು ಮೌಲ್ಯದಲ್ಲಿ ಶೇ.50,000 ಏರಿಕೆ:
ನ್ಯೂಯಾರ್ಕ್ ಶೇರು ಮಾರುಕಟ್ಟೆಗೆ ಎಂಟ್ರಿ ಪಡೆದ ಸಂದರ್ಭದಲ್ಲಿದ್ದ ಆಪಲ್ ಶೇರುಗಳ ಮೌಲ್ಯವು ಇಂದು ಶೇ.50,000ದಷ್ಟು ಏರಿಕೆಯಾಗಿದೆ. ಇದಕ್ಕೇ ಕಾರಣ ಆಪಲ್ ಮೇಲೆ ಬಳಕೆದಾರರಿಗೆ ಇರುವ ನಂಬಿಕೆ. ತನ್ನ ಹೊಸ ಆವಿಷ್ಕಾರದ ಮೂಲಕ ಮೊಬೈಲ್ ಮಾರುಕಟ್ಟೆಯ ದಿಕ್ಸೂಚಿಯಂತಿರುವ ಆಪಲ್ ತನ್ನ ಮೌಲ್ಯವನ್ನು ಇಷ್ಟು ಏರಿಕೆ ಮಾಡಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.

ಒಂದು ಶೇರಿನ ಮೌಲ್ಯ 207.39 ಡಾಲರ್:
ನ್ಯೂಯಾರ್ಕ್ ಶೇರು ಮಾರುಕಟ್ಟೆಯಲ್ಲಿ ಆಪಲ್ ಕಂಪನಿಯ ಸದ್ಯ ಒಂದು ಶೇರಿ ಬೆಲೆಯೂ 207.39 ಡಾಲರ್ (ರೂ.14,271.54) ಗಳಾಗಿದೆ. ಶುಕ್ರವಾರದಲ್ಲಿ ಮತ್ತೇ ಏರಿಕೆ ಖಂಡಿರುವ ಶೇರಿನ ಮೌಲ್ಯವು +5.89 (2.92%)ರಷ್ಟು ಹೆಚ್ಚಾಗಿದೆ.

42 ವರ್ಷಗಳ ಹಿಂದೆ ಆರಂಭ:
ಆಪಲ್ ಕಂಪನಿಯೂ ಅಮೆರಿಕಾದಲ್ಲಿ 1976ರ ಏಪ್ರೀಲ್ 1 ರಂದು ಪ್ರಾರಂಭವಾಯಿತು. ಸ್ಟೀವ್ಸ್ ಜಾಬ್ಸ್ ಆಪಲ್ ಕಂಪನಿಯ ಸಂಸ್ಥಾಪಕರಾಗಿದ್ದು, ಇಷ್ಟು ದೊಡ್ಡ ಮಟ್ಟದ ಯಶಸ್ಸಿನಲ್ಲಿ ಅವರ ಪಾತ್ರ ತುಂಬ ದೊಡ್ಡದಿದೆ. 2011ರಲ್ಲಿ ಸ್ಟೀವ್ ಜಾಬ್ಸ್ ನಿಧರಾಗಿದ್ದು, ಇದಾದ ನಂತರದಲ್ಲಿ ಸದ್ಯ ಟಿಮ್ ಕುಕ್ ಆಪಲ್ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.

ಆಪಲ್ ವಿಶೇಷತೆ:
ಆಪಲ್ ಕಂಪನಿಯೂ ತನ್ನದೇ ಯೂನಿಕ್ ಉತ್ಪನ್ನಗಳನ್ನು ಹೊಂದಿದೆ. ಇದು ಯಾವುದನ್ನು ಇನ್ನೊಬ್ಬರಿಂದ ಕದಿಯುವುದಿಲ್ಲ ಮತ್ತು ಕಾಪಿ ಮಾಡುವುದಿಲ್ಲ. ಹಾಗಿಯೇ ತನ್ನದನ್ನು ಇನ್ನೊಬ್ಬರಿ ಬಳಕೆ ಮಾಡಿಕೊಳ್ಳಲು ನೀಡುವುದಿಲ್ಲ. ಆಪಲ್‌ನಲ್ಲಿ ದೊರೆಯುವ ಉತ್ಪನ್ನಗಳು ಮತ್ತು ಸೇವೆಗಳು ಬೇರೆಲ್ಲಿಯೂ ನಿಮಗೆ ದೊರೆಯುವುದಿಲ್ಲ. ಇವು ಗುಣಮಟ್ಟಕ್ಕೆ ಮತ್ತು ಬಾಳಿಕಗೆ ಹೆಸರು ವಾಸಿಯಾಗಿದೆ.

ಆಪಲ್ ಉತ್ಪನ್ನಗಳು:
ಸದ್ಯ ಮಾರುಕಟ್ಟೆಯಲ್ಲಿ ಹಲವು ಆಪಲ್ ಉತ್ಪನ್ನಗಳನ್ನು ನೀವು ನೋಡಬಹುದಾಗಿದೆ. ಅವುಗಳೆಂದರೆ. ಮ್ಯಾಕ್ ಸಂತೋಷ್, ಐಪಾಡ್, ಐಫೋನ್, ಐಪ್ಯಾಡ್, ಆಪಲ್ ವಾಚ್, ಆಪಲ್ ಟಿವಿ, ಹೋಮ್ ಪಾಡ್, ಮ್ಯಾಕ್OS, iOS, ವಾಚ್ OS, TV OS, ಐಲೈಫ್, ಐವರ್ಕ್, ಫೈನಲ್ ಕಟ್ ಪ್ರೊ, ಲಾಜಿಕ್ ಪ್ರೊ.

ಆಪಲ್ ಸೇವೆಗಳು:
ತನ್ನ ಉತ್ಪನ್ನಗಳನ್ನು ಬಳಕೆ ಮಾಡಿಕೊಳ್ಳುತ್ತಿರುವವರಿಗೆ ತನ್ನದೇ ವಿಶೇಷ ಸೇವೆಗಳನ್ನು ಆಪಲ್ ನೀಡುತ್ತಿದೆ. ಆವುಗಳೆಂದರೆ, ಆಪಲ್ ಪೇ, ಆಪಲ್ ಸ್ಟೋರ್, ಐಟ್ಯೂನ್ಸ್ ಸ್ಟೋರ್, ಆಪ್ ಸ್ಟೋರ್, ಮ್ಯಾಕ್ ಆಪ್ ಸ್ಟೋರ್, ಐಬುಕ್ಸ್ ಸ್ಟೋರ್, ಐಕ್ಲೌಡ್, ಆಪಲ್ ಮ್ಯೂಸಿಕ್.

ಆದಾಯ:
ಜಾಗತಿಕವಾಗಿ ಐಫೋನ್ ಬೇಡಿಕೆ ಹೆಚ್ಚಾಘಿದೆ. ಈ ಹಿನ್ನಲೆಯಲ್ಲಿ ಆಪಲ್ ಕಂಪನಿಯ ಆದಾಯದಲ್ಲಿ ಹೆಚ್ಚಿನ ಪ್ರಮಾಣವೂ ಐಫೋನ್ ಮಾರಾಟದಿಂದ ಬರುತ್ತಿದೆ. ಉಳಿದ ಉತ್ಪನ್ನಗಳು ಸಹ ಉತ್ತಮವಾದ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.


Click it and Unblock the Notifications