ಪೋಷಕರೇ ಎಚ್ಚರ: ವಾಟ್ಸ್‌ಆಪ್‌ನಲ್ಲಿ ಶುರುವಾಗಿದೆ ಮೊಮೊ ಸುಸೈಡ್ ಗೇಮ್...!

|

ಇಂದು ಸೋಶಿಯಲ್ ಮೀಡಿಯಾಗಳು ಉತ್ತಮ ಜೀವನಕ್ಕೆ ಬೇಕಾದ ವಿಷಯಗಳನ್ನು ತಿಳಿಸುವುದರಕ್ಕಿಂತ ಪ್ರಾಣ ತೆಗೆಯುವ ಆಟಗಳಿಗೆ ಫೇಮಸ್ ಆಗುತ್ತಿದೆ. ಜಗತ್ತಿನಲ್ಲಿ ಹಲವು ಬಲಿ ಪಡೆದ ಬ್ಲೂವೇಲ್ ಗೇಮ್ ಪ್ರಭಾವ ಮಾಸುವ ಮುನ್ನವೇ ಮತ್ತೊಂದು ಸುಸೈಡ್ ಗೇಮ್ ವಾಟ್ಸ್‌ಆಪ್‌ನಲ್ಲಿ ಹರಿದಾಡುತ್ತಿದೆ. ಇದು ಹೆಚ್ಚಾಗಿ ಹದಿಹರೆಯದ ಮಕ್ಕಳನ್ನು ಟಾರ್ಗೇಟ್ ಮಾಡುವ ಗೇಮ್ ಆಗಿದ್ದು, ಮೊಮೊ ಹೆಸರಿನ ಹೊಸ ಗೇಮ್ ಯಮ ರಾಜನ ಹಾಗೇ ಕಾಡುತ್ತಿದೆ. ಈಗಾಗಲೇ ಹಲವು ಮಂದಿಯನ್ನು ಬಲಿ ಪಡೆದಿದೆ.

ಪೋಷಕರೇ ಎಚ್ಚರ: ವಾಟ್ಸ್‌ಆಪ್‌ನಲ್ಲಿ ಶುರುವಾಗಿದೆ ಮೊಮೊ ಸುಸೈಡ್ ಗೇಮ್...!

ಓದಿರಿ: ಜಿಯೋ ಮೇಲೆ ಕಣ್ಣಿಟ್ಟ ಶಿಯೋಮಿ: ಆಚ್ಚರಿಯ ಬೆಲೆಯಲ್ಲಿ 4G ಫೀಚರ್ ಫೋನ್ ಲಾಂಚ್...!

ಬ್ಲೂ ವೇಲ್‌ಗಿಂಗಲೂ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಹೆಚ್ಚಿನ ವೇಗದಲ್ಲಿ ಜಾಗತಿಕವಾಗಿ ಮೊಮೊ ಗೇಮ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಬ್ಲೂವೇಲ್ ಗೇಮ್ ಭೂಗತ ಮೂಲಗಳಿಂದ ದೊರೆಯುತ್ತಿದ್ದರೇ, ಮೊಮೊ ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆ ಮಾಡುತ್ತಿರುವ ವಾಟ್ಸ್ಆಪ್ ಮೂಲಕ ವೈರಸ್ ಮಾದರಿಯಲ್ಲಿ ಹರಡುತ್ತಿದೆ. ಇದು ಸಹ ಬ್ಲೂ ವೇಲ್ ಮಾದರಿಯಲ್ಲಿ ಆಟಗಾರರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೆಪಿಸುತ್ತದೆ ಎನ್ನಲಾಗಿದೆ. ಕೇಲವ ವಾಟ್ಸ್‌ಆಪ್ ಮಾತ್ರವಲ್ಲದೇ ಚಾಟಿಂಗ್ ಆಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

ರಷ್ಯಾದಲ್ಲಿ 130 ಬಲಿ:

ರಷ್ಯಾದಲ್ಲಿ 130 ಬಲಿ:

ಬ್ಲೂ ವೇಲ್‌ಗಿಂತಲೂ ಹೆಚ್ಚು ಪ್ರಭಾವ ಶಾಲಿಯಾಗಿರುವ ಮೊಮೊ ಗೇಮ್‌ ಈಗಾಗಲೇ ಹಲವು ಮಕ್ಕಳನ್ನು ಬಲಿ ಪಡೆದುಕೊಂಡಿದೆ. ಬ್ಲೂ ವೇಲ್ ರಷ್ಯಾ ಒಂದಲ್ಲಿಯೇ ಸುಮಾರು 130 ಮಂದಿಯನ್ನು ಬಲಿ ಪಡೆದುಕೊಂಡಿತ್ತು ಎನ್ನಲಾಗಿದ್ದು, ಈ ಮೊಮೊ ಗೇಮ್ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯನ್ನು ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಮೇಸೆಂಜಿಂಗ್ ಆಪ್‌ ಮೂಲಕ

ಮೇಸೆಂಜಿಂಗ್ ಆಪ್‌ ಮೂಲಕ

ಈಗಲೇ ಹೇಳಿದಂತೆ ಅತೀ ಹೆಚ್ಚಿನ ಮಂದಿಯನ್ನು ತಲುಪುವ ಯೋಜನೆಯನ್ನು ಹೊಂದಿರುವ ಮೊಮೊ ಗೇಮ್ ಇದಕ್ಕಾಗಿಯೇ ಮೇಸೆಂಜಿಂಗ್ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಅದರಲ್ಲಿಯೂ ಅಧಿಕ ಪ್ರಮಾಣದಲ್ಲಿ ವಾಟ್ಸ್‌ಆಪ್ ಮೂಲಕವೇ ಹರಿದಾಡುತ್ತಿದೆ. ಇದರಿಂದಾಗಿ ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ನೀಡದೆ ಇದ್ದರೆ ಉತ್ತಮ.

ಆದೇಶ ಪಾಲನೇ ಮಾಡಬೇಕು:

ಆದೇಶ ಪಾಲನೇ ಮಾಡಬೇಕು:

ಬ್ಲೂ ವೇಲ್ ಮಾದರಿಯಲ್ಲಿ ಕಾಣಿಸಿಕೊಂಡಿರುವ ಮೊಮೊ ಗೇಮ್, ತನ್ನ ಬಳಕೆದಾರರಿಗೆ ಕೆಲವು ಕಾರ್ಯಗಳನ್ನು ಮಾಡಲು ಆದೇಶಗಳನ್ನು ನೀಡಲಿದೆ. ಇದನ್ನು ಮಾಡಿದರೆ ಸರಿ, ಇಲ್ಲವಾದರೆ ಹೆದರಿಸುವ ಕಾರ್ಯವನ್ನು ಮಾಡಲಿದ್ದು, ಇದಲ್ಲದೇ ಮಾನಸಿಕವಾಗಿ ತೊಂದರೆಯನ್ನು ನೀಡುವ ಕಾರ್ಯವನ್ನು ಮಾಡಲಿದೆ.

ಅರ್ಜೆಂಟೀನಾದಲ್ಲಿ ವರದಿ:

ಅರ್ಜೆಂಟೀನಾದಲ್ಲಿ ವರದಿ:

ಈಗಾಗಲೇ ಅರ್ಜಿಂಟೀನಾದಲ್ಲಿ 12 ವರ್ಷದ ಬಾಲಕಿಯೊಬ್ಬಳು ಈ ಮೊಮೊ ಗೇಮ್‌ಗೆ ಬಲಿಯಾಗಿದ್ದಾಳೆ ಎನ್ನಲಾಗಿದ್ದು, ಮೊಮೊ ಗೇಮ್ ಕುರಿತಂತೆ ಅಲ್ಲಿನ ಫೊಲೀಸರು ಈಗಾಗಲೇ ತನಿಖೆಯನ್ನು ಆರಂಭಿಸಿದ್ದಾರೆ. ಇದರ ಪ್ರಭಾವನ್ನು ತಗ್ಗಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಭಯಾನಕ ವಿಡಿಯೋಗಳು

ಭಯಾನಕ ವಿಡಿಯೋಗಳು

ಮೊಮೊ ಗೇಮ್ ತನ್ನ ಆಟಗಾರರಿಗೆ ಭಯಾನಕ ವಿಡಿಯೋಗಳು ಮತ್ತು ಫೋಟೋಗಳನ್ನು ಕಳುಹಿಸಲಿದೆ, ಇದನ್ನು ನೋಡಬೇಕು ಮತ್ತು ಅವರು ಹೇಳಿದ ಹಾಗೆ ಕೇಳಬೇಕು ಎನ್ನಲಾಗಿದೆ. ಇದನ್ನು ಮಾಡದಿದ್ದರೇ ಹೆದರಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪೋಷಕರೇ ಎಚ್ಚರ:

ಪೋಷಕರೇ ಎಚ್ಚರ:

ಈ ಮೊಮೊ ಗೇಮ್ ಹೆಚ್ಚಾಗಿ ಚಾಟಿಂಗ್ ಆಪ್ ಮೂಲವೇ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ನೀವು ಮಕ್ಕಳ ಚಲನವಲನಗಳು ಹಾಗೂ ಮೊಬೈಲ್ ಬಳಕೆಯ ಮೇಲೆ ನಿಗಾ ಇಟ್ಟರೇ ಒಳ್ಳೆಯದು. ಇಲ್ಲವಾದರೆ ಭಯಾನಕ ಆಟಕ್ಕೆ ಮಕ್ಕಳು ಬಲು ಬೇಗನೇ ಬಲಿಯಾಗುವ ಸಾಧ್ಯತೆ ಅಧಿಕವಾಗಿದೆ.

Best Mobiles in India

English summary
Momo WhatsApp 'suicide' game. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X