ಆಂಡ್ರಾಯ್ಡ್ ಬಳಕೆದಾರರನ್ನು ಕಾಲೆಳೆದ ಆಪಲ್: ಚಿಕ್ಕ ವಿಡಿಯೋಗಳು ಚೊಕ್ಕವಾಗಿದೆ..!
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಕಾಲೆಳೆಯಲು ಮುಂದಾಗಿರುವ ಆಪಲ್, ಯೂಟ್ಯೂಬ್‌ನಲ್ಲಿ ಸರಣಿ ಆಡ್ ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಈ ವಿಡಿಯೋಗಳು ಸದ್ಯ ವೈರಲ್ ಆಗಿವೆ ಎನ್ನಲಾಗಿದೆ. ಚಿಕ್ಕ ವಿಡಿಯೋಗಳನ್ನು ಬಿಡುಗಡೆ ಮಾಡಿರುವ ಆಪಲ್ ಕ್ರಿಯೆಟಿವಿಟಿಯಲ್ಲಿ ಆಂಡ್ರಾಯ್ಡ್ ಕಾಲೆಳೆದಿದೆ.

ಆಂಡ್ರಾಯ್ಡ್ ಎಂಬುದನ್ನು ನೇರವಾಗಿ ಹೇಳದ ಆಪಲ್, ಯೂವರ್ ಫೋನ್ ಎನ್ನುವ ಮೂಲಕ ಆಂಡ್ರಾಯ್ಡ್ ಬಳಕೆದಾರರಿಗೆ ಟಾಂಗ್ ಕೊಡಲು ಮುಂದಾಗಿದೆ. ಯೂಟ್ಯೂಬ್‌ನಲ್ಲಿ ಈ ಮಾದರಿಯ ಆಡ್ ವಿಡಿಯೋಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸದ್ಯದ ಆಪಲ್ ವಿಡಿಯೋ ಹೆಚ್ಚು ಮಂದಿಯನ್ನು ಆಕರ್ಷಿಸಿದೆ.
ವಿಡಿಯೋ ಒಂದು:
ಐಫೋನ್ ತನ್ನ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಿದೆ ಎಂಬುದನ್ನು ತೋರಿಸಿದೆ.
ವಿಡಿಯೋ ಎರಡು:
ಅಲ್ಲದೇ ಆಪಲ್ ಇಕೋ ಫ್ರೆಂಡ್ಲಿಯಾಗಿದ್ದು, ಆಂಡ್ರಾಯ್ಡ್ ಬಳಕೆದಾರರಿಗಿಂತಲೂ ಹೆಚ್ಚಿನ ಅವಕಾಶವನ್ನು ಮಾಡಿಕೊಡಲಿದೆ.
ವಿಡಿಯೋ ಮೂರು:
ಆಪಲ್ ತನ್ನ ಬಳಕೆದಾರಿಗೆ ಸುಲಭವಾದ ಆಯ್ಕೆಗಳನ್ನು ನೀಡಲಿದೆ. ಇದು ಆಂಡ್ರಾಯ್ಡ್ ಗಿಂತಲೂ ಉತ್ತಮವಾಗಿದೆ ಎಂದಿದೆ.
ಸುರಕ್ಷತೆ:
ಆಂಡ್ರಾಯ್ಡ್ ಗಿಂತಲೂ ಆಪಲ್ ಹೆಚ್ಚು ಸುರಕ್ಷಿತವಾಗಿದೆ ಎನ್ನುವುದನ್ನು ಈ ವಿಡಿಯೋದಲ್ಲಿ ತೋರಿಸಲು ಮುಂದಾಗಿದೆ.
ಓದಿರಿ: ಮತ್ತೊಂದು ಬಿಗ್ ಆಫರ್: ಉಚಿತ ಜಿಯೋ ಫೈ ಪಡೆಯಲು ಮಾಡಬೇಕಾದ್ದು ಇಷ್ಟೆ..!


Click it and Unblock the Notifications








