Subscribe to Gizbot

ಮತ್ತೊಂದು ಬಿಗ್ ಆಫರ್: ಉಚಿತ ಜಿಯೋ ಫೈ ಪಡೆಯಲು ಮಾಡಬೇಕಾದ್ದು ಇಷ್ಟೆ..!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶಿಯ ಮಾರುಕಟ್ಟೆಯಲ್ಲಿ ಹೊಸತನಕ್ಕೆ ಸಾಕ್ಷಿಯಾಗಿದ್ದು, ಬಳಕೆದಾರರು ನೀಡುವ ಬೆಲೆಗಿಂತಲೂ ಹೆಚ್ಚಿನ ಆಯ್ಕೆಗಳನ್ನು ಅವರಿಗೆ ನೀಡುತ್ತಿದೆ. ಇದೇ ಮಾದರಿಯ ಹೊಸದಾಗಿ ಹಾಟ್ ಸ್ಪಾಟ್ ಡಾಂಗಲ್ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನು ಮಾಡಲು ಮುಂದಾಗಿದೆ. ಈ ಹಿಂದೆ ರೂ.999ಕ್ಕೆ ಡಾಂಗಲ್ ಬಿಡುಗಡೆ ಮಾಡಿ ಹೊಸ ಸಂಚಲನವನ್ನು ಉಂಟು ಮಾಡಿದ್ದ ಮಾದರಿಯಲ್ಲಿಯೇ ಈ ಬಾರಿ ಮತ್ತೊಂದು ಭಾರೀ ಆಫರ್ ನೀಡಲು ಮುಂದಾಗಿದೆ.

ಮತ್ತೊಂದು ಬಿಗ್ ಆಫರ್: ಉಚಿತ ಜಿಯೋ ಫೈ ಪಡೆಯಲು ಮಾಡಬೇಕಾದ್ದು ಇಷ್ಟೆ..!

ಮಾರುಕಟ್ಟೆಯಲ್ಲಿ ತನ್ನ ಜಿಯೋ ಫೈ 4G ಹಾಟ್ ಸ್ಪಾಟ್ ಬೇಡಿಕೆಯನ್ನು ಏರಿಕೆ ಮಾಡುವ ಸಲುವಾಗಿಯೇ ಹೊಸದೊಂದು ಆಫರ್ ಲಾಂಚ್ ಮಾಡಿದ್ದು, ರೂ.1999 ನೀಡಿ ಗ್ರಾಹಕರು ಜಿಯೋ ಫೈ 4G ಹಾಟ್ ಸ್ಪಾಟ್ ಖರೀದಿ ಮಾಡಿರೆ ರೂ.3595 ರಷ್ಟು ಲಾಭವನ್ನು ಮಾಡಲಿಕೊಡಲಿದೆ ಎನ್ನಲಾಗದ್ದು, ಇದರಲ್ಲಿ ಆಫರ್ ನಲ್ಲಿ ಬಳಕೆದಾರರಿಗೆ ಜಿಯೋ ಫೈ 4G ಹಾಟ್ ಸ್ಪಾಟ್ ಸಂಪೂರ್ಣವಾಗಿ ಉಚಿತವಾಗಿ ದೊರೆಯಲಿದೆ. ಈ ಆಫರ್ ಕುರಿತ ಮಾಹಿತಿಯೂ ಈ ಮುಂದಿನಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಫರ್:

ಆಫರ್:

ರೂ.1999 ನೀಡಿ ಜಿಯೋ ಫೈ 4G ಹಾಟ್ ಸ್ಪಾಟ್ ಖರೀದಿಸುವ ಗ್ರಾಹಕರಿಗೆ ರೂ.1295 ರಷ್ಟು ಡೇಟಾ ಲಾಭವು ದೊರೆಯಲಿದೆ. ಇದಾದ ನಂತರ ರೂ.2300 ಗಳಷ್ಟು ಶಾಪಿಂಗ್ ವೂಚರ್ ಗಳು ಲಭ್ಯವಾಗಲಿದೆ. ಇದನ್ನು ಜಿಯೋ ಶಾಪಿಂಗ್, ರಿಲಯನ್ಸ್ ಡಿಜಿಟಲ್ ಮತ್ತು ಪೇಟಿಎಂ ನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ಡೈಲಿ ಡೇಟಾ ಆಫರ್:

ಡೈಲಿ ಡೇಟಾ ಆಫರ್:

ಈ ಆಫರ್ ನಲ್ಲಿ ರೂ.1295 ನಷ್ಟು ಡೇಟಾ ದೊರೆಯಲಿದ್ದು, ಇದರಲ್ಲಿ ಗ್ರಾಹಕರ ನಿತ್ಯ 1.5GB, 2GB ಮತ್ತು 3GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಗ್ರಾಹಕರು ಇಷ್ಟ ಬಂದ ಆಫರ್ ಗಳನ್ನು ರೀಚಾರ್ಜ್ ಮಾಡಿಸಿಕೊಂಡು ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಬುದ್ದಿವಂತಿಕೆಯಿಂದ ಆಯ್ಕೆ ಮಾಡಿಕೊಂಡರೆ ವರ್ಷಪೂರ್ತಿ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ರೂ.2300 ವೋಚರ್:

ರೂ.2300 ವೋಚರ್:

ಇದಲ್ಲದೇ ಜಿಯೋ ಫೈ 4G ಹಾಟ್ ಸ್ಪಾಟ್ ಖರೀದಿದಾರರಿಗೆ ರೂ.2300 ವೋಚರ್ ನೀಡಲಿದ್ದು, ಇದರಲ್ಲಿ ಪೇಟಿಎಂ, ರಿಲಯನ್ಸ್ ಡಿಜಿಟಲ್ ಮತ್ತು AJIO ಶಾಪಿಂಗ್ ತಾಣದಲ್ಲಿ ಗ್ರಾಹಕರು ಬೇಕಿರುದನ್ನು ಖರೀದಿ ಮಾಡಬಹುದಾಗಿದೆ. ಇದು ಗ್ರಾಹಕರಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ತಾವು ನೀಡಿರುವ ಬೆಲೆಗಿಂತಲೂ ಹೆಚ್ಚಿನದನ್ನು ಪಡೆದುಕೊಳ್ಳಬಹುದಾಗಿದೆ.

ಉತ್ತಮ ಆಫರ್:

ಉತ್ತಮ ಆಫರ್:

ಗ್ರಾಹಕರು ನೀಡುವ ಬೆಲೆಗೆ ಇದು ಉತ್ತಮ ಆಫರ್ ಎನ್ನಲಾಗಿದ್ದು, ಜಿಯೋ ಫೈ ನೊಂದಿಗೆ ವರ್ಷ ಪೂರ್ತಿ ಉಚಿತವಾಗಿ ನೀವು ಸೇವೆಯನ್ನು ಪಡೆಯುವುದಲ್ಲದೇ, ಜಿಯೋ ಶಾಪಿಂಗ್ ತಾಣದಲ್ಲಿ ನೀಡುವ ಬೆಲೆಯಷ್ಟೆ ವಸ್ತುಗಳನ್ನು ಖರೀದಿಸಬಹುದು. ಒಂದು ರೀತಿಯಲ್ಲಿ ಜಿಯೋ ಫೈ 4G ಹಾಟ್ ಸ್ಪಾಟ್ ಉಚಿತವಾಗಿ ದೊರೆತಂತೆ ಆಗಲಿದೆ.

2G-3G ಬಳಕೆದಾರರಿಗೆ:

2G-3G ಬಳಕೆದಾರರಿಗೆ:

ಜಿಯೋ ಫೈ 4G ಹಾಟ್ ಸ್ಪಾಟ್ ಆಫರ್ ಜಿಯೋ ಸೇವೆಯನ್ನು ಪಡೆಯದೆ ಇರುವ 2G-3G ಹಾಂಡ್ ಸೆಟ್ ಬಳಕೆ ಮಾಡಿಕೊಳ್ಳುತ್ತಿರುವವರಿಗೆ ಇದು ಉತ್ತಮ ಆಫರ್ ಆಗಲಿದೆ. ಹೊಸ ಮೊಬೈಲ್ ಫೋನ್ ಕೊಳ್ಳುವ ಬದಲು ಇದನ್ನೇ ಬಳಕೆ ಮಾಡಿಕೊಂಡು 4G ಡೇಟಾ ಮತ್ತು ಉಚಿತ ಕರೆಗಳನ್ನು ಮಾಡಬಹುದಾಗಿದೆ.

ಉಚಿತ ಕರೆ ಸಾಧ್ಯತೆ:

ಉಚಿತ ಕರೆ ಸಾಧ್ಯತೆ:

ಇದಲ್ಲದೇ ಜಿಯೋ ಫೈ 4G ಹಾಟ್ ಸ್ಪಾಟ್ ನಲ್ಲಿ ಮೊಬೈಲ್ ಕರೆಗಳನ್ನು ಉಚಿತವಾಗಿ ಮಾಡಬಹುದಾಗಿದ್ದು, ಇದರಿಂದಾಗಿ ಗ್ರಾಹಕರು ಡೇಟಾ ಮತ್ತು ಕರೆ ಸೇವೆಯ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಏರ್‌ಟೆಲ್‌ಗೆ ಮಾರಕ:

ಏರ್‌ಟೆಲ್‌ಗೆ ಮಾರಕ:

ಈ ಹಿಂದೆ ಜಿಯೋ ರೂ.999ಕ್ಕೆ ಜಿಯೋ ಫೈ 4G ಹಾಟ್ ಸ್ಪಾಟ್ ಮಾರಾಟ ಮಾಡಿದ್ದ ಸಂದರ್ಭದಲ್ಲಿ ಏರ್‌ಟೆಲ್ ಸಹ ತನ್ನ 4G ಹಾಟ್ ಸ್ಟಾಟ್ ಅನ್ನು ರೂ.999ಕ್ಕೆ ಮಾರಾಟ ಮಾಡಲು ಮುಂದಾಗಿತ್ತು. ಆದರೆ ಈಗ ಜಿಯೋ ನೀಡಿರುವ ಆಫರ್ ಏರ್‌ಟೆಲ್‌ಗೆ ಮಾರಕವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
JioFi Rs. 1,999 Offer to Give Free Data and Vouchers Worth Rs. 3,595. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot