Home
ಸುದ್ದಿಜಾಲ

ಆಪಲ್ ಸೇಲ್‌ ಡೇಸ್‌ ಆರಂಭ: iPhone 14 ಸರಣಿಯ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!

ಆಪಲ್‌ ಐಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಇದ್ದು, ಈ ನಡುವೆ ಕೆಲವು ಇ-ಕಾಮರ್ಸ್‌ ಸೈಟ್‌ಗಳು ಐಫೋನ್‌ಗಳಿಗೆ ಆಗಾಗ್ಗೆ ಡಿಸ್ಕೌಂಟ್‌ ಘೋಷಣೆ ಮಾಡಿಕೊಂಡು ಬರುತ್ತಿರುತ್ತವೆ. ಆದರೆ. ಈಗ ಅಮೆಜಾನ್‌ನಲ್ಲಿ ಆಪಲ್ ಸೇಲ್ ಡೇಸ್ ನಡೆಯುತ್ತಿದ್ದು, ಈ ಮೂಲಕ ಯಾರೆಲ್ಲಾ ಕೈಗೆಟಕುವ ದರದಲ್ಲಿ ಐಫೋನ್‌ಗಳನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದಾರೋ ಅವರಿಗೆ ಸುವರ್ಣಾವಕಾಶ.

ಹೌದು, ಅಮೆಜಾನ್ ಆಪಲ್‌ ಡೇಸ್‌ ಸೇಲ್‌ನಲ್ಲಿ ಹೆಚ್ಚು ಮಾರಾಟವಾಗುವ ಐಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ. ಈ ಮಾರಾಟವು ಒಂದು ವಾರದವರೆಗೆ ಮುಂದುವರಿಯುತ್ತದೆ. ಇದರಲ್ಲಿ ಐಫೋನ್‌ 14 ಸರಣಿ ಅನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಬಯಸುವ ಖರೀದಿದಾರರು ಜೂನ್ 17 ರ ಮೊದಲು ಕೊಂಡುಕೊಳ್ಳಬೇಕಿದೆ. ಇಷ್ಟು ಮಾತ್ರವಲ್ಲ ಬ್ಯಾಂಕ್‌ ರಿಯಾಯಿತಿ, ವಿನಿಮಯ ಹಾಗೂ ಇಎಂಐ ಆಫರ್‌ ಸಹ ಲಭ್ಯ ಇದೆ. ಹಾಗಿದ್ರೆ ಬನ್ನಿ ಯಾವೆಲ್ಲಾ ಫೋನ್‌ಗಳು ಆಫರ್‌ ಪಡೆದಿವೆ ತಿಳಿಯೋಣ.

ಆಪಲ್ ಸೇಲ್‌ ಡೇಸ್‌ ಆರಂಭ: iPhone 14 ಸರಣಿಯ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!

ಐಫೋನ್ 14 ಗೆ ಏನಿದೆ ಆಫರ್‌?: ಆಪಲ್ ಕಳೆದ ವರ್ಷ ಐಫೋನ್ 14 ಸರಣಿಯನ್ನು ಲಾಂಚ್‌ ಮಾಡಿತ್ತು. ಈ ಸರಣಿಯಲ್ಲಿ ಐಫೋನ್ 14, ಐಫೋನ್ 14 ಪ್ಲಸ್‌, ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್‌ (iPhone 14, iPhone 14 Plus, iPhone 14 Pro and iPhone 14 Pro Max) ಫೋನ್‌ಗಳಿವೆ. ಅದರಂತೆ ಪ್ರತಿ ಫೋನ್‌ಗಳು ಸಹ ವಿವಿಧ ವೇರಿಯಂಟ್‌ನಲ್ಲಿ ಲಭ್ಯ. ಇನ್ನು 128GB ವೇರಿಯಂಟ್‌ನ ಐಫೋನ್ 14 67,999ರೂ.ಗಳಿಗೆ ಮಾರಾಟ ಆಗುತ್ತಿದೆ. ಇದರ ಬೆಲೆ 79,999ರೂ.ಗಳು.

ಜೊತೆಗೆ ಐಫೋನ್ 14 ನ 256GB ವೇರಿಯಂಟ್ಗೆ 13 % ರಿಯಾಯಿತಿ ನೀಡಲಾಗಿದ್ದು, 89,900ರೂ. ಬೆಲೆಯ ಫೋನ್‌ ಅನ್ನು 77,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ 512GB ಸ್ಟೋರೇಜ್ ವೇರಿಯಂಟ್‌ ಫೋನ್ 11 % ಡಿಸ್ಕೌಂಟ್‌ ಪಡೆದುಕೊಂಡಿದ್ದು, 97,999ರೂ.ಗಳಲ್ಲಿ ಖರೀದಿ ಮಾಡಬಹುದು. ಇದರ ಮೂಲ ದರ 1,09,900ರೂ. ಗಳಾಗಿದೆ.

ಆಪಲ್ ಸೇಲ್‌ ಡೇಸ್‌ ಆರಂಭ: iPhone 14 ಸರಣಿಯ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!

ಐಫೋನ್‌ 14 ಪ್ಲಸ್‌ಗೆ ಏನೆಲ್ಲಾ ಆಫರ್‌ ಇದೆ?: ಐಫೋನ್ 14 ಗೆ ಹೋಲಿಸಿದರೆ ಇದು ದೊಡ್ಡ ಡಿಸ್‌ಪ್ಲೇ ಹಾಗೂ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದರಲ್ಲಿ 128GB ಸ್ಟೋರೇಜ್ ಹೊಂದಿರುವ ಐಫೋನ್‌ 14 ಪ್ಲಸ್ ಅನ್ನು 76,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 89,900ರೂ.ಗಳು. ಹಾಗೆಯೇ 256GB ರೂಪಾಂತರಕ್ಕೆ 13% ಡಿಸ್ಕೌಂಟ್‌ ನೀಡಲಾಗಿದ್ದು, 86,999ರೂ.ಗಳಿಗೆ ಕೊಂಡುಕೊಳ್ಳಬಹುದು. ಇದರ ಸಾಮಾನ್ಯ ದರ 99,900ರೂ.ಗಳು.

ಐಫೋನ್ 14 ಪ್ರೊ: ಐಫೋನ್ 14 ಪ್ರೊ ವಿಚಾರಕ್ಕೆ ಬರುವುದಾದರೆ ಈ ಫೋನ್‌ನ 128GB ವೇರಿಯಂಟ್‌ ಬೆಲೆ 1,19,999ರೂ.ಗಳಾಗಿದೆ. ಇದರ ಸಾಮಾನ್ಯ ದರ 1,29,900ರೂ.ಗಳು. ಜೊತೆಗೆ 256GB ವೇರಿಯಂಟ್‌ನ ಬೆಲೆ 1,39,900ರೂ.ಗಳಾಗಿದ್ದು, ಇದರ ಆಫರ್‌ ಬೆಲೆ 1,34,990ರೂ. ಗಳಾಗಿದೆ.

ಐಫೋನ್ 14 ಪ್ರೊ ಮ್ಯಾಕ್ಸ್‌: ಈ ಫೋನ್‌ನ 128GB ವೇರಿಯಂಟ್‌ನ ಫೋನ್‌ಗೆ 1,27,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದರ ಸಾಮಾನ್ಯ ದರ 1,39,900ರೂ.ಗಳು. ಹಾಗೆಯೇ 256GB ವೇರಿಯಂಟ್‌ನ ಫೋನ್‌ಗೆ 1,43,990ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ ಸಾಮಾನ್ಯ ದರ 1,49,900ರೂ.ಗಳು. ಈ ರಿಯಾಯಿತಿ ಜೊತೆಗೆ ಬ್ಯಾಂಕ್‌ ಕಾರ್ಡ್‌ಗಳ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿ ನೀಡಲಾಗುತ್ತದೆ.

ಆಪಲ್ ಸೇಲ್‌ ಡೇಸ್‌ ಆರಂಭ: iPhone 14 ಸರಣಿಯ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!

ಈ ಐಫೋನ್ 14 ಪ್ರೊ ಮ್ಯಾಕ್ಸ್‌ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 1290x2796 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 48MP ಪ್ರಮುಖ ಕ್ಯಾಮೆರಾದಿಂದ ಆಕರ್ಷಕವಾಗಿದ್ದು, ಆಪಲ್ A16 ಬಯೋನಿಕ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಇನ್ನುಳಿದಂತೆ 4323mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಉತ್ತಮ ಬ್ಯಾಕಪ್‌ ನೀಡಲಿದೆ.

Best Mobiles in India

English summary
Amazon offering huge discounts on the best-selling iPhones in the Apple Days Sale. This sale will continue for a week. In this, the iPhone 14 series can be bought at a more affordable price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+