ಚೀನಾದ ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಪ್ರತಿಭಟನೆ

By Ashwath
|

ಇಲ್ಲಿಯವರಗೆ ಆಪಲ್‌ ಉತ್ಪನ್ನದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿತ್ತು. ಆದರೆ ಈಗ ತನ್ನ ಉತ್ಪನ್ನಗಳನ್ನು ತಯಾರಿಸುವ ಫ್ಯಾಕ್ಟರಿಯಿಂದಾಗಿ ಆಪಲ್‌ ಈಗ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ವಿಶ್ವದ ಬಹುತೇಕ ಎಲ್ಲಾ ಎಲೆಕ್ಟ್ರಾನಿಕ್ಸ್‌ ಕಂಪೆನಿಗಳ ಹಾರ್ಡ್‌ವೇರ್ ಭಾಗಗಳು ಹೆಚ್ಚಾಗಿ ಚೀನಾದಲ್ಲಿ ತಯಾರಾಗುತ್ತವೆ. ಆದರಲ್ಲೂ ಆಪಲ್‌‌ ಐಫೋನ್‌,ಐ ಮ್ಯಾಕ್‌ಗಳ ಹಾರ್ಡ್‌‌ವೇರ್‌ ಭಾಗಗಳು ಚೀನಾದ ಫ್ಯಾಕ್ಟರಿಯಲ್ಲಿ ಜೋಡಣೆಯಾಗಿ ನಂತರ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ.

ಆಪಲ್‌ನ ಐಫೋನ್‌‌, ಮ್ಯಾಕ್‌ ಮತ್ತು ಕಡಿಮೆ ಬೆಲೆಯ ಐಫೋನ್‌ 5 ಸಿ ಗಳ ಭಾಗಗಳನ್ನು ಜೋಡಿಸುವ ಪೆಗಟ್ರನ್‌(Pegatron) ಫ್ಯಾಕ್ಟರಿ ಈಗ ಸುದ್ದಿಯಲ್ಲಿದೆ. ನ್ಯೂಯಾರ್ಕ್‌ ಮೂಲದ ಚೀನಾ ಲೇಬರ್‌ ವಾಚ್‌ ಎನ್ನುವ ಸಂಸ್ಥೆಯೊಂದು ಮಾರ್ಚ್‌ನಿಂದ ಜುಲೈ ವರೆಗಿನ ಅವಧಿಯಲ್ಲಿ 200 ಜನ ಉದ್ಯೋಗಿಗಳನ್ನು ಮಾತನಾಡಿಸಿ ತನ್ನ ವರದಿಯನ್ನು ಪ್ರಕಟಿಸಿದೆ. ಈ ಫ್ಯಾಕ್ಟರಿಯ ಪರಿಸ್ಥಿತಿ ತೀರಾ ಹದೆಗೆಟ್ಟಿದೆಯಂತೆ. ಸಿಕ್ಕಾಪಟ್ಟೆ ಕೆಲಸ, ಜೊತೆಗೆ ಹಿರಿಯ ಅಧಿಕಾರಿಗಳು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ನೌಕರರು ಸಂದರ್ಶ‌ನದಲ್ಲಿ ಹೇಳಿದ್ದಾರೆ.

ಈ ಶಾಕಿಂಗ್‌ ವರದಿ ಬಹಿರಂಗವಾಗುತ್ತಿದ್ದಂತೆ ಆಪಲ್‌ ಈ ಫ್ಯಾಕ್ಟರಿಯ ಗುಣಮಟ್ಟದ ಬಗ್ಗೆ ತನಿಖೆಗೆ ಆರಂಭಿಸಿದೆ. ಅಷ್ಟೇ ಅಲ್ಲದೇ ಆಪಲ್‌ ಕಂಪೆನಿಯ ಉತ್ಪನ್ನ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಳ್ಳಲು ಇದು ಒಂದು ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಿಡಬ್ಲೂಸಿ ನೀಡಿರುವ ಶಾಕಿಂಗ್‌‌ ವರದಿಯಲ್ಲಿ ಏನೇನಿದೆ ಎನ್ನುವ ಮಾಹಿತಿ ಮತ್ತು ಈ ಕೆಟ್ಟ ಫ್ಯಾಕ್ಟರಿಯ ಒಳಗಡೆ ಹೇಗಿದೆ ಎನ್ನುವ ವೀಡಿಯೋ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

Click Here For New Apple Gadgets Gallery

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಆಪಲ್‌ನ ಐಫೋನ್‌‌, ಮ್ಯಾಕ್‌ ಮತ್ತು ಕಡಿಮೆ ಬೆಲೆಯ ಐಫೋನ್‌ 5 ಸಿ ಶಾಂಘೈಯಲ್ಲಿರುವ ಪೆಗಟ್ರನ್‌ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿವೆ. ಸುಮಾರು 70 ಸಾವಿರಕ್ಕಿಂತಲೂ ಅಧಿಕ ಮಂದಿ ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ನೌಕರರಿಗೆ ಇಲ್ಲಿ ಸರಿಯಾದ ಟ್ರೈನಿಂಗ್‌ ಇಲ್ಲ. ಅಷ್ಟೇ ಅಲ್ಲದೇ ಅನನುಭವಿ ಕೆಲಸಗಾರರು ಬೇರೆ ಎಜೆನ್ಸಿಗಳಿಗೆ ಹಣ ನೀಡಿ ಇಲ್ಲಿ ಕೆಲಸ ಪಡೆಯುತ್ತಿದ್ದಾರೆ.

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ವಾರದಲ್ಲಿ ಕೆಲಸಗಾರರು 66 ಗಂಟೆಗಳ ಕಾಲ ದುಡಿಯಲೇ ಬೇಕೆಂಬ ನಿಯಮ ಈ ಫ್ಯಾಕ್ಟರಿಯಲ್ಲಿದೆ.

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಪ್ರತಿದಿನ ಕೆಲಸಗಾರರು 11 ಗಂಟೆಗಿಂತ ಹೆಚ್ಚು ಸಮಯ ಕೆಲಸ ಮಾಡುತ್ತಿದ್ದು, ಹೆಚ್ಚು ಹೊತ್ತು ದುಡಿದರೂ ಕಂಪೆನಿ ಸಂಬಳ ಹೆಚ್ಚು ಮಾಡುವುದಿಲ್ಲ.

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಕೆಲವೊಂದು ಉದ್ಯೋಗಿಗಳು 600 ಐಪ್ಯಾಡ್‌ಗಳ ಜೋಡಣೆ ಮಾಡಲೇಬೇಕೆಂಬ ಕಡ್ಡಾಯ ನಿಯಮ ಈ ಫ್ಯಾಕ್ಟರಿಯಲ್ಲಿದೆ.

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಮಹಿಳಾ ಉದ್ಯೋಗಿಗಳನ್ನು ತೀರಾ ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಿದ್ದು, ಗರ್ಭಿ‌ಣಿ ಮಹಿಳೆಯರಿಗೆ ಹೆರಿಗೆ ರಜೆ ಈ ಫ್ಯಾಕ್ಟರಿಯಲ್ಲಿ ಇಲ್ಲವೆಂದು ತನ್ನ ವರದಿಯಲ್ಲಿ ತಿಳಿಸಿದೆ.

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ವಾರದಲ್ಲಿ ಆರು ದಿನ 11 ಗಂಟೆಗಿಂತಲೂ ಅಧಿಕ ಸಮಯ ಕೆಲಸಗಾರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.ಹಾಗಾಗಿ ನಿದ್ದೆ ಸರಿಯಿಲ್ಲದೇ ನೌಕರರ ಆರೋಗ್ಯ ಸ್ಥಿತಿ ಹದೆಗೆಡುತ್ತಿದೆ.

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ನೌಕರರ ಆರೋಗ್ಯದ ಬಗ್ಗೆ ಈ ಫ್ಯಾಕ್ಟರಿಯ ಆಡಳಿತ ಮಂಡಳಿ ಏನೇನು ಗಮನ ಹರಿಸಿಲ್ಲ.ನೂರು ಜನ ನೌಕರರಿಗೆ ನಾಲ್ಕು ಸ್ನಾನಗೃಹಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಚೀನಾ ಸರ್ಕಾರದ ಕಾನೂನನ್ನು ಇಲ್ಲಿ ಸಂಪೂರ್ಣ‌ವಾಗಿ ಉಲ್ಲಂಘಿಸಲಾಗಿದೆ ಎಂದು ಸಿಡಬ್ಲೂಎಲ್‌ ತನ್ನ ವರದಿಯಲ್ಲಿ ತಿಳಿಸಿದೆ.

ಆಪಲ್‌ ಫ್ಯಾಕ್ಟರಿಯಲ್ಲಿ ನೌಕರರ ಸ್ಥಿತಿ ಶೋಚನೀಯ

ಈ ವರದಿಯ ಪಿಡಿಎಫ್‌ ಫೈಲ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ: ಚೀನಾ ಲೇಬರ್‌ ವಾಚ್‌ ರಿಪೋರ್ಟ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X