Subscribe to Gizbot

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಆಪಲ್ ಕಂಪೆನಿಯ ಮತ್ತೊಂದು ಘಟಕ!!

Written By:

ಭಾರತದಲ್ಲಿ ಐಫೋನ್ ಬಿಡಿ ಭಾಗಗಳ ಜೋಡಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಆಪಲ್ ಕಂಪೆನಿ ಮುಂದಾಗಿದೆ. ಆಪಲ್‌ ಕಂಪನಿಯ ಗುತ್ತಿಗೆದಾರ ಕಂಪನಿಗಳಲ್ಲೊಂದಾಗಿರುವ ತೈವಾನ್‌ ಮೂಲದ ವಿಸ್ಟ್ರೋನ್ ಕಾರ್ಪ್ ಬೆಂಗಳೂರಿನಲ್ಲಿ ತನ್ನ ಮತ್ತೊಂದು ಅಸೆಂಬ್ಲಿ ಘಟಕದ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದಿದೆ. !!

ಕರ್ನಾಟಕ ಸರ್ಕಾರ ವಿಸ್ಟ್ರೋನ್ ಇನ್ಫೋಕಾಮ್ ಮಾನ್ಯುಫಾಕ್ಚರಿಂಗ‌ ಇಂಡಿಯಾ ಕಂಪನಿ ಸಲ್ಲಿಸಿರುವ 43 ಎಕರೆ ಭೂ ಪ್ರದೇಶದ ಬೇಡಿಕೆ ಕುರಿತ ಅರ್ಜಿಯನ್ನು ಅನುಮೋದಿಸಿದೆ ಎಂದು ತಿಳಿದುಬಂದಿದ್ದು, ನೂತನ ಘಟಕವು ಬೆಂಗಳೂರಿನಿಂದ 65 ಕಿ.ಮೀ ವ್ಯಾಪ್ತಿಯಲ್ಲಿ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. !!

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಆಪಲ್ ಕಂಪೆನಿಯ ಮತ್ತೊಂದು ಘಟಕ!!

ಆಪಲ್‌ ಕಂಪನಿಗೆ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಭಾರತಕ್ಕೆ ಆಮದು ಮಾಡಲು ಹೆಚ್ಚು ಸುಂಕ ಪಾವತಿಸಬೇಕಾಗಿ ಬರುವುದರಿಂದ ಸ್ಥಳೀಯವಾಗಿ ಅಸೆಂಬ್ಲಿ ಘಟಕದ ಮೂಲಕ ಅಭಿವೃದ್ಧಿಪಡಿಸಿ ಭಾರತದ ಮಾರುಕಟ್ಟೆಗೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಲು ಆಪಲ್ ಕಂಪೆನಿ ಮುಂದಾಗಿದೆ ಎಂದು ಹೇಳಲಾಗಿದೆ.!

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಆಪಲ್ ಕಂಪೆನಿಯ ಮತ್ತೊಂದು ಘಟಕ!!

ಹಾಗಾಗಿ, ಬೆಂಗಳೂರಿನಿಂದ 65 ಕಿ.ಮೀ ವ್ಯಾಪ್ತಿಯಲ್ಲಿ ಆಪಲ್ ಸ್ಮಾರ್ಟ್‌ಪೋನ್ ತಯಾರಿಕ ನೂತನ ಘಟಕವು ನಿರ್ಮಾಣವಾಗಲಿದ್ದು, 682 ಕೋಟಿ ಬಂಡವಾಳ ಹೂಡಲಾಗುವ 43 ಎಕರೆ ಭೂ ಪ್ರದೇಶದ ನೂತನ ಘಟಕದಲ್ಲಿ ಸ್ಮಾರ್ಟ್‌ಫೋನ್‌ ಉತ್ಪಾದನೆ, ಇಂಟರ್‌ನೆಟ್‌ ಆಫ್‌ ಥಿಂಗ್ಸ್ ಸಾಧನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿದುಬಂದಿದೆ.!!

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?

ಓದಿರಿ: ಇನ್ಮುಂದೆ ಮನೆ\ಆಸ್ತಿ ಖರೀದಿಸುವವರು ಆನ್‌ಲೈನಿನಲ್ಲಿಯೇ ದಾಖಲೆ ಪರಿಶೀಲಿಸಬಹುದು!!

English summary
Apple supplier Wistron to invest Rs 682 crore to set up new manufacturing facility. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot