ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್; ನಾಲ್ಕು ಹೊಸ ಅಂಗಡಿಗಳನ್ನು ತೆರೆಯಲು ಮುಂದಾದ Apple!
ಯುಎಸ್ ಮೂಲದ ಟೆಕ್ ದೈತ್ಯ ಆಪಲ್ (Apple) ಭಾರತದಲ್ಲಿರುವ ತನ್ನ ರಿಟೇಲ್ ಸ್ಟೋರ್‌ಗಳಿಗೆ ಸಿಕ್ಕಿರುವ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಪ್ರೇರೇಪಿಸಲ್ಪಟ್ಟ ಇದೀಗ ಮತ್ತೆ ಹೊಸದಾಗಿ ನಾಲ್ಕು ರೀಟೆಲ್ ಸ್ಟೋರ್‌ಗಳನ್ನು ತೆರೆಯಲು ಸಜ್ಜಾಗಿದೆ. ಆಪಲ್ ಸಂಸ್ಥೆಯು ತನ್ನ ಸ್ವಂತ ಸ್ಟೋರ್ ಮೂಲಕ ಐಫೋನ್ ಸೇರಿದಂತೆ ತನ್ನ ಇತರೆ ಉತ್ಪನ್ನಗಳನ್ನು ಮಾರಾಟ ಮಾಡಲು ಯೋಜನೆ ಮಾಡಿದೆ.
ಹೌದು, ಆಪಲ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಮುಂಬೈ ಹಾಗೂ ದೆಹಲಿ ನಗರಗಳಲ್ಲಿ ರೀಟೆಲ್ ಸ್ಟೋರ್‌ಗಳನ್ನು ಹೊಂದಿದೆ. ಅದರ ಮುಂದುವರಿದ ಭಾಗವಾಗಿ ಸಂಸ್ಥೆಯು ಈಗ ನೂತನವಾಗಿ ಬೆಂಗಳೂರು, ಪುಣೆ, ದೆಹಲಿ-ಎನ್‌ಸಿಆರ್ ಮತ್ತು ಮುಂಬೈನಲ್ಲಿ ಇನ್ನೊಂದು ಸ್ಟೋರ್ ತೆರೆಯಲು ಸಜ್ಜಾಗಿದೆ. ಈ ಮೂಲಕ ಅಧಿಕೃತ ಮಳಿಗೆಯಲ್ಲಿ ಐಫೋನ್ ಖರೀದಿಸಬೇಕು ಎನ್ನುವ ಗ್ರಾಹಕರಿಗೆ ಖುಷಿ ನೀಡಿದೆ.

ಇನ್ನು ಬೆಂಗಳೂರು, ಪುಣೆ, ದೆಹಲಿ-ಎನ್‌ಸಿಆರ್ ಮತ್ತು ಮುಂಬೈ ನಗರಗಳಲ್ಲಿ ಸಂಸ್ಥೆಯು ಯಾವಾಗ ಅಂಗಡಿಗಳನ್ನು ಅಧಿಕೃತವಾಗಿ ತೆರೆಯುತ್ತವೆ ಎನ್ನುವ ಬಗ್ಗೆ ಇನ್ನು ಯಾವುದೇ ಕಾಲಮಿತಿ ನಿಗದಿ ಮಾಡಿಲ್ಲ. ಇನ್ನು ಕಂಪನಿಯು ಈಗ ಐಫೋನ್ 16 (iPhone 16) ಸರಣಿಯನ್ನು ಭಾರತದಲ್ಲಿ ತಯಾರಿಸುತ್ತಿದೆ. ಹಾಗೆಯೇ ಆಪಲ್ ಹೊಸ ಅಂಗಡಿಗಳನ್ನು ತೆರೆಯುವ ಮೂಲಕ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಸಿದ್ಧವಾಗಿದೆ.
ಐಫೋನ್ 16 (iPhone 16) ಸರಣಿಯನ್ನು ತಯಾರಿಸಲು ಆಪಲ್ Foxconn, Pegatron ಹಾಗೂ Tata Electronics ಜೊತೆಗೆ ಪಾಲುದಾರಿಕೆ ಹೊಂದಿದೆ ಎಂದು ವರದಿಯಿಂದ ತಿಳಿದುಬಂದಿದೆ. Foxconn ಐಫೋನ್ 16, ಐಫೋನ್ 16 ಪ್ಲಸ್ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ವೇರಿಯಂಟ್ ಮಾಡೆಲ್‌ಗಳ ಉಸ್ತುವಾರಿಯನ್ನು ಒಳಗೊಂಡಿದೆ. ಆದರೆ Pegatron ಐಫೋನ್ 16 ಮತ್ತು ಐಫೋನ್ 16 ಪ್ರೊ ಮಾಡೆಲ್ ಅನ್ನು ನಿರ್ವಹಿಸುತ್ತಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಐಫೋನ್ 16 ಹಾಗೂ ಐಫೋನ್ 16 ಪ್ಲಸ್ ಮಾದರಿಗಳನ್ನು ಸಹ ತಯಾರಿಸಲಿದೆ.
ಇನ್ನು ಇತ್ತೀಚಿನ ಐಫೋನ್ 16 ಫೋನ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, ಹಾಗೆಯೇ ಐಫೋನ್ 16 ಪ್ಲಸ್ ಮೊಬೈಲ್ 6.7 ಇಂಚಿನ ಡಿಸ್‌ಪ್ಲೇ ರಚನೆ ಅನ್ನು ಹೊಂದಿದೆ. ಐಫೋನ್ 16 ಮೊಬೈಲ್ A18 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದ್ದು, ಇದು ಐಫೋನ್ 15 ನಲ್ಲಿನ CPU ಗಿಂತ 30 ಪ್ರತಿಶತದಷ್ಟು ವೇಗ ಪಡೆದಿರುತ್ತದೆ. ಇನ್ನು ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.
ಇದರ ಜೊತೆಗೆ 12 ಮೆಗಾ ಪಿಕ್ಸಲ್‌ನ ಟೆಲಿಫೋಟೋ ಲೆನ್ಸ್ ಸಹ ಪಡೆದಿದೆ. ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ಕಾರ್ಯ ಮಾಡಲಿದೆ. ಹೊಸ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹಿಂದಿನ ಮಾದರಿಗಳಿಗಿಂತ 2.6 ಪಟ್ಟು ಹೆಚ್ಚು ಬೆಳಕನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಇದು ಮ್ಯಾಕ್ರೋ ಫೋಟೋಗ್ರಫಿಯನ್ನು ಸಪೋರ್ಟ್ ಮಾಡುತ್ತದೆ.
ಹಾಗೆಯೇ ಐಫೋನ್ 16 ಹಾಗೂ ಐಫೋನ್ 16 ಪ್ಲಸ್ ಮೊಬೈಲ್ ತನ್ನ ಈ ಹಿಂದಿನ ಸರಣಿಗಿಂತ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದು ಐಫೋನ್ ಪ್ರಿಯರ ಗಮನ ಸೆಳೆದಿದೆ. ಹಾಗೆಯೇ ಇದು ಡೈನಾಮಿಕ್ ಐಲ್ಯಾಂಡ್ (Dynamic Island) ಆಯ್ಕೆಯನ್ನು ಪಡೆದಿದೆ. ಇದು 5G ಸಪೋರ್ಟ್ ಪಡೆದಿದೆ ಅಲ್ಲದೇ ವಾಯರ್‌ಲೆಸ್ ಕನೆಕ್ಟಿವಿಟಿ ಸೌಲಭ್ಯ ಸಹ ಪಡೆದಿದೆ. ಇದರ ಜೊತೆಗೆ ರೋಡ್ ಸೈಡ್ ಅಸಿಸ್ಟಂಟ್ ವೈಯಾ ಸೆಟಲೈಟ್ ಆಯ್ಕೆ ಲಭ್ಯ.


Click it and Unblock the Notifications








