Home
ಸುದ್ದಿಜಾಲ

ಬರಲಿದೆ 'ಆಪಲ್‌ ಟಿವಿ ಪ್ಲಸ್‌' ವಿಡಿಯೊ ಸ್ಟ್ರೀಮಿಂಗ್ ಆಪ್‌!.ತಿಂಗಳ ಶುಲ್ಕ 99ರೂ!

ಸದ್ಯ ವಿಡಿಯೊ ಸ್ಟ್ರೀಮಿಂಗ್ ಸೇವೆಗಳು ಆಪ್ಸ್‌ಗಳು ಭಾರೀ ಜನಪ್ರಿಯತೆ ಗಳಿಸುತ್ತಿವೆ. ಈ ನಿಟ್ಟಿನಲ್ಲಿ ಟೆಲಿಕಾಂ ಕಂಪನಿಗಳು ಸೇರಿದಂತೆ ಬಹುತೇಕ ಸಂಸ್ಥೆಗಳು ಈಗಾಗಲೇ ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳನ್ನು ಪರಿಚಯಿಸಿವೆ. ಹಾಗೆಯೇ ಟೆಕ್‌ ದಿಗ್ಗಜ 'ಆಪಲ್' ಸಹ 'ಆಪಲ್ ಟಿವಿ ಪ್ಲಸ್‌' ಹೆಸರಿನ ವಿಡಿಯೊ ಸ್ಟ್ರೀಮಿಂಗ್ ಸೌಲಭ್ಯವನ್ನು ಇದೀಗ ಸೇವೆಯನ್ನು ಭಾರತ ಸೇರಿದಂತೆ ವಿಶ್ವವ್ಯಾಪಿ ಬಿಡುಗಡೆ ಮಾಡಲು ನಿರ್ಧಾರ ಕೈಗೊಂಡಿದೆ.

ಆಪಲ್

ಹೌದು, ಆಪಲ್ ಕಂಪನಿಯು ಮೊನ್ನೆ (ಸೆ.10) ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಂಪನಿಯ ಐಫೋನ್ 11 ಸರಣಿಯ ಬಿಡುಗಡೆ ಕಾರ್ಯಕ್ರಮದಲ್ಲಿ ತನ್ನ 'ಆಪಲ್‌ ಟಿವಿ ಪ್ಲಸ್‌' ವಿಡಿಯೊ ಸ್ಟ್ರೀಮಿಂಗ್ ಸೇವೆಯನ್ನು ಇದೇ ನವಂಬರ್ 1ರಂದು ಲಾಂಚ್ ಮಾಡಲಾಗುವುದು ಎಂದು ತಿಳಿಸಿದೆ. ವಿಶ್ವವ್ಯಾಪಿಯಾಗಿ ಈ ಸೇವೆಯನ್ನು ಬಿಡುಗಡೆ ಮಾಡುತ್ತಿದ್ದು, ಭಾರತದಲ್ಲಿ ತಿಂಗಳಿಗೆ 99ರೂ ಶುಲ್ಕ ನಿಗದಿಪಡಿಸಿದೆ. ಹಾಗಾದರೇ ಆಪಲ್ ಟಿವಿ ಪ್ಲಸ್‌ ಸೇವೆಯ ಇನ್ನಷ್ಟು ಮಾಹಿತಿಗಳನ್ನು ಮುಂದೆ ತಿಳಿಯೋಣ ಬನ್ನಿರಿ.

ಆಪಲ್ ಟಿವಿ ಪ್ಲಸ್‌ ಕಂಟೆಂಟ್‌

ಆಪಲ್ ಟಿವಿ ಪ್ಲಸ್‌ ಕಂಟೆಂಟ್‌

ಆಪಲ್ ಸಂಸ್ಥೆಯು ಈ ಸೇವೆಗಾಗಿ ಸುಮಾರು $6 ಬಿಲಿಯನ್ (ಅಂದಾಜು 43,040ರೂ. ಕೋಟಿ) ಇನ್ವೆಸ್ಟ್‌ ಮಾಡಿದ್ದು, ಈ ಸೇವೆಯಲ್ಲಿ ಆಪಲ್ ಕೆಲವು ಸೀರಿಸ್‌ ಮತ್ತು ಡಾಕ್ಯುಮೆಂಟ್ರಿಗಳನ್ನು ಒಳಗೊಂಡಿರಲಿದೆ. ಹಾಸ್ಯ, ಮನರಂಜನೆ, ಹಿಸ್ಟರಿ, ನ್ಯೂಸ್‌ ಸೇರಿದಂತೆ ಎಲ್ಲ ವಿಷಯಗಳನ್ನು ಕವರ್ ಮಾಡಲಿದ್ದು, ಅವುಗಳಲ್ಲಿ 'ದಿ ಮಾರ್ನಿಂಗ್ ಶೋ', 'ಡಿಕಿನ್ಸನ್', 'ಗೇಮ್‌ ಆಫ್ ಥ್ರೋನ್ಸ್‌',ನಂತಹ ಮತ್ತಷ್ಟು ಸೀರಿಸ್‌ಗಳಿರಲಿವೆ.

ಆಪಲ್‌ ಸೇವೆಗಳು

ಆಪಲ್‌ ಸೇವೆಗಳು

ಆಪಲ್‌ ಸಂಸ್ಥೆ ತನ್ನ ಆಪ್ಸ್‌ ಸ್ಟೋರ್‌ನಲ್ಲಿ ಈಗಾಗಲೇ ಹಲವು ಮನರಂಜನೆಯ ಸೇವೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಆಪಲ್ ಮ್ಯೂಸಿಕ್, ಐಟ್ಯೂನ್‌, ಆಪಲ್ ಪ್ಲೇ, ಪರಿಚಿತ. ಹಾಗೆಯೇ ವಿಡಿಯೊ ಸ್ಟ್ರೀಮಿಂಗ್ ಸೇವೆಗಾಗಿ ಆಪಲ್ ಟಿವಿ ಪ್ಲಸ್‌, ಹಾಗೆಯೇ ಗೇಮಿಂಗ್‌ಗಾಗಿ ಆಪಲ್ ಆರ್ಕೆಡ್‌ ಮತ್ತು ನ್ಯೂಸ್‌ ಮಾಹಿತಿಗಾಗಿ ಆಪಲ್‌ ನ್ಯೂಸ್‌ ಪ್ಲಸ್‌ ಸೇವೆಗಳು ಗ್ರಾಹಕರಿಗೆ ದೊರೆಯಲಿವೆ.

ಚಂದಾ ಶುಲ್ಕ ಎಷ್ಟಿರಲಿದೆ

ಚಂದಾ ಶುಲ್ಕ ಎಷ್ಟಿರಲಿದೆ

ಆಪಲ್‌ ಟಿವಿ ಪ್ಲಸ್‌ ಸೇವೆಯ ಚಂದಾದಾರಿಕೆಯ ಶುಲ್ಕವನ್ನು ಭಾರತದಲ್ಲಿ ತಿಂಗಳಿಗೆ ಕೇವಲ 99ರೂ.ಗಳು ನಿಗದಿ ಮಾಡಿದೆ. ಹಾಗೆಯೇ ಒಂದು ತಿಂಗಳ ನಂತರ ಒಂದು ವಾರಗಳ ಕಾಲ ಉಚಿತವಾಗಿ ಪ್ರಾಯೋಗಿಕ ಸೇವೆ ನೀಡಲಿದೆ. ಇದರೊಂದಿಗೆ ಐಫೋನ್ 11 ಸರಣಿಯ ಹೊಸ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಒಂದು ವರ್ಷ ಉಚಿತ ಸದಸ್ಯತ್ವ ನೀಡಲಿದೆ. ಇದೇ ನವಂಬರ್ 1ರಿಂದ ಸುಮಾರು 10೦ ರಾಷ್ಟ್ರಗಳಲ್ಲಿ ಆಪಲ್ ಟಿವಿ ಪ್ಲಸ್ ಸೇವೆಯು ಚಾಲನೆಯಾಗಲಿದೆ.

ಆಕ್ಸಸ್‌ ಮತ್ತು ಲಭ್ಯತೆ

ಆಕ್ಸಸ್‌ ಮತ್ತು ಲಭ್ಯತೆ

ಆಪಲ್‌ ಟಿವಿ ಪ್ಲಸ್‌ ಸೇವೆಯು ನವಂಬರ್‌ 1ರಿಂದ, ಆಪಲ್, ಐಪೊಡ್‌, ಆಪಲ್ ಟಿವಿ, ಐಪೊಡ್‌ ಟಚ್, ಮ್ಯಾಕ್‌ ಗಳಲ್ಲಿ ದೊರೆಯಲಿದೆ. ಹಾಗೆಯೇ tv.apple.com ಸಫಾರಿ, ಕ್ರೋಮ್ ಮತ್ತು ಫೈರ್‌ಫಾಕ್ಸ್ ಸರ್ಚ್‌ ತಾಣಗಳಲ್ಲಿಯು ಲಭ್ಯವಾಗಲಿದೆ. ಜೊತೆಗೆ 'ಆಪಲ್ ಟಿವಿ ಆಪ್' ಅಮೆಜಾನ್ ಫೈರ್ ಟಿವಿ, ಎಲ್‌ಜಿ, ರೋಕು, ಸೋನಿ ಮತ್ತು ವೈಜೊ ಟಿವಿ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಲಭ್ಯವಾಗಲಿದೆ ಎಂದು ಕಂಪನಿಯು ತಿಳಿಸಿದೆ.

Best Mobiles in India

English summary
Apple tv+ service will cost Rs. 99 per month after a one-week free trial and will be available November 1 in more than 100 countries worldwide. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+