Home
ಸುದ್ದಿಜಾಲ

37 ಲಕ್ಷದ ಈ ಹೆಡ್‌ಸೆಟ್‌ನಲ್ಲಿ ಅಂತುಹುದ್ದೇನಿದೆ? ಅಷ್ಟಕ್ಕೂ ಈ ಪರಿ ಬೆಲೆ ಏಕೆ?

ಆಪಲ್‌ನ ಡಿವೈಸ್‌ಗಳು ಹೆಚ್ಚು ಕಾರ್ಯಕ್ಷಮತೆ ಹಾಗೂ ಉತ್ತಮ ಬಾಳಿಕೆಗೆ ಹೆಸರಾಗಿವೆ. ಈ ಕಾರಣಕ್ಕೆ ಈ ಡಿವೈಸ್‌ಗಳ ಬೆಲೆ ಇತರೆ ಸಾಮಾನ್ಯ ಡಿವೈಸ್‌ಗಳಿಗಿಂತ ಹೆಚ್ಚಾಗಿಯೇ ಇರುತ್ತದೆ. ಆದರೆ, ನಾವಿಲ್ಲಿ ತಿಳಿಸಿಕೊಡುವ ಡಿವೈಸ್‌ ಮಾತ್ರ ನೀವು ಊಹೆಯನ್ನೂ ಮಾಡಲಾಗದ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಂದರೆ ಬರೋಬ್ಬರಿ 37 ಲಕ್ಷಗಳು.

ಹೌದು, ನಿಮ್ಮಲ್ಲಿ ಈಗ ಒಂದು ಪ್ರಶ್ನೆ ಕಾಡಬಹುದು. ಅದ್ಯಾವುದಪ್ಪಾ 37 ಲಕ್ಷದ ಡಿವೈಸ್‌? ಅಂತಹುದ್ದೇನಿದೆ ಅದರಲ್ಲಿ? ಅದನ್ನು ಯಾರು ತಾನೆ ಖರೀದಿ ಮಾಡುತ್ತಾರೆ ಅಂತಾ. ಆದರೆ, ಈ ಡಿವೈಸ್‌ ಸಾಮಾನ್ಯವಾದುದ್ದಲ್ಲ, ಇದರ ಕಾರ್ಯಕ್ಷಮತೆ ಹಾಗೂ ನಿರ್ಮಾಣ ವಿಷಯಕ್ಕೆ ಈ ಬೆಲೆ ಕೊಡಲೇ ಬೇಕು. ಹಾಗಿದ್ರೆ, ತಡ ಯಾಕೆ ಬನ್ನಿ ಈ ವಿಶೇಷ ಡಿವೈಸ್‌ ಯಾಕೆ ಇಷ್ಟು ಬೆಲೆ ಹೊಂದಿದೆ?, ಇದರ ಫೀಚರ್ಸ್‌ ಏನು ಎಂಬ ಸ್ವಾರಸ್ಯಕರ ಮಾಹಿತಿಯನ್ನು ತಿಳಿಯೋಣ.

37 ಲಕ್ಷದ ಈ ಹೆಡ್‌ಸೆಟ್‌ನಲ್ಲಿ ಅಂತುಹುದ್ದೇನಿದೆ? ಅಷ್ಟಕ್ಕೂ ಈ ಪರಿ ಬೆಲೆ ಏಕೆ?

ಚಿನ್ನ ಲೇಪಿತ ವಿಷನ್ ಪ್ರೊ: ಸಾಮಾನ್ಯವಾಗಿ ಈಗಾಗಲೇ ಚಿನ್ನ ಲೇಪಿತ ಐಫೋನ್‌ಗಳ ಬಗ್ಗೆ ಕೇಳಿರಬಹುದು. ಇವುಗಳನ್ನು ಕೆಲವರು ಬಳಕೆ ಮಾಡುತ್ತಿದ್ದಾರೆ. ಅದರಂತೆ ಈಗ ಆಪಲ್‌ ಚಿನ್ನ ಲೇಪಿತ ವಿಷನ್ ಪ್ರೊ ಬಗ್ಗೆ ಘೋಷಣೆ ಮಾಡಿದೆ. ಅದರಲ್ಲೂ ಇತ್ತೀಚೆಗೆ ಘೋಷಣೆ ಮಾಡಲಾದ ಆಪಲ್‌ನ ವಿಷನ್ ಪ್ರೊ $3,499 ಬೆಲೆ ಹೊಂದಿದ್ದು, ಇದನ್ನೇ ದುಬಾರಿ ಎಂದು ಭಾವಿಸಲಾಗಿದೆ. ಈ ನಡುವೆ ಈ ಚಿನ್ನದ ವಿಷನ್ ಪ್ರೊ ಇದರ ಹತ್ತು ಪಟ್ಟು ಹೆಚ್ಚಿನ ಬೆಲೆ ಹೊಂದಿದ್ದು, ಈ ವಿಷಯ ಕೇಳಿ ಕೆಲವರು ದಿಗ್ಭ್ರಮೆಗೊಂಡಿದ್ದಾರೆ.

ಆಪಲ್ ವಿಷನ್ ಪ್ರೊ ಸಿವಿಆರ್ ಆವೃತ್ತಿ ಆಗಿರುವ ಕ್ಯಾವಿಯರ್‌ನ ವಿಷನ್ ಪ್ರೊ (Caviar's Vision Pro) ಡಿವೈಸ್‌ 18 K ಚಿನ್ನದ ಲೇಪಿತ ಲೆದರ್ ಹೆಡ್ ಮೌಂಟ್ ಮತ್ತು ಹೆಡ್‌ಸೆಟ್‌ನ ಮುಂಭಾಗವನ್ನು ಆವರಿಸುವ ಚಿನ್ನದ ಫೇಸ್‌ ಮಾಸ್ಕ್‌ ಅನ್ನು ಹೊಂದಿದ್ದು, ಈ ಕಾರಣಕ್ಕೆ ಇದು $46,000 ಬೆಲೆಯನ್ನು ಹೊಂದಿದೆ. ಅಂದರೆ ಭಾರತೀಯ ಬೆಲೆಯಲ್ಲಿ ಇದು ಸುಮಾರು 37 ಲಕ್ಷದ 74 ಸಾವಿರದ 139 ರೂ.ಗಳಾಗಿದೆ.

ಇನ್ನು ಈ ವಿಶೇಷ ಡಿವೈಸ್‌ ಟಾಮ್ ಫೋರ್ಡ್‌ನ ಫ್ಲಿಪ್-ಅಪ್ ಗ್ಲಾಸ್‌ಗಳು ಮತ್ತು ಗುಸ್ಸಿ ಸ್ಕೀ ಮಾಸ್ಕ್‌ಗಳಂತಹ ಉನ್ನತ ಫ್ಯಾಷನ್ ಟೂಲ್ಸ್‌ಗಳಿಂದ ಸ್ಫೂರ್ತಿ ಪಡೆದಿದೆಯಂತೆ. ಈ ಹೆಡ್‌ಸೆಟ್‌ 1.5 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕ ಹೊಂದಿದ್ದು, ಹೆಡ್ ಮೌಂಟ್ ಅನ್ನು ಕೊನೊಲಿ ಲೆದರ್‌ನಿಂದ ನಿರ್ಮಾಣ ಮಾಡಲಾಗಿದೆ. ಈ ಲೆದರ್‌ ಅನ್ನೇ ಬ್ರಿಟಿಷ್ ರಾಯಲ್ ಕೋರ್ಟ್ ಮತ್ತು ರೋಲ್ಸ್ ರಾಯ್ಸ್‌ಗೆ ಸರಬರಾಜು ಮಾಡಲಾಗುತ್ತದೆ.

ಇನ್ನು ಈ ಕ್ಯಾವಿಯರ್ ವಿಷನ್ ಪ್ರೊನ ಐಸೈಟ್ ವಿಚಾರದ ಬಗ್ಗೆ ಮಾತನಾಡುವುದಾದರೆ ಇದು ಬಳಕೆದಾರರ ಕಣ್ಣುಗಳನ್ನು ಹೊರಗೆ ತೋರಿಸುತ್ತದೆ. ಫೀಚರ್ಸ್‌ ಇದೀಗ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಆದಾಗ್ಯೂ, ಕ್ಯಾವಿಯರ್ ಬಳಕೆದಾರರಿಗೆ ತಮ್ಮ ಗೌಪ್ಯತೆಯ ಮೇಲೆ ಸಂಪೂರ್ಣ ಕಂಟ್ರೋಲ್‌ ಅನ್ನು ನೀಡುವ ಪರಿಹಾರದೊಂದಿಗೆ ಬಂದಿದ್ದು, ಹೆಡ್‌ಸೆಟ್ ಅನ್ನು ಆವರಿಸುವ ಚಿನ್ನದ ಲೇಪಿತ ಮಾಸ್ಕ್‌ ಅನ್ನು ನೀಡಲಾಗಿದೆ.

37 ಲಕ್ಷದ ಈ ಹೆಡ್‌ಸೆಟ್‌ನಲ್ಲಿ ಅಂತುಹುದ್ದೇನಿದೆ? ಅಷ್ಟಕ್ಕೂ ಈ ಪರಿ ಬೆಲೆ ಏಕೆ?

ಅದೆಲ್ಲಾ ಇರಲಿ ಇದನ್ನು ಖರೀದಿ ಮಾಡುವುದು ಹೇಗೆ ಎಂದು ನೀವೇನಾದರೂ ಅಂದುಕೊಂಡರೆ ಸ್ವಲ್ಪ ಕಾಯಬೇಕಿದೆ. ಅದರಲ್ಲೂ ಕೇವಲ 24 ಯೂನಿಟ್‌ಗಳು ಮಾತ್ರ ಲಭ್ಯ ಇದ್ದು, 2024 ರ ಆರಂಭದಲ್ಲಿ ಖರೀದಿಗೆ ಮುಕ್ತವಾಗುತ್ತವೆ ಎಂದು ತಿಳಿದುಬಂದಿದೆ. ಏನೇ ಆದರೂ ಇಷ್ಟೊಂದು ದೊಡ್ಡ ಮೊತ್ತದ ಈ ವಿಶೇಷ ಡಿವೈಸ್‌ ಅನ್ನು ಯಾರೆಲ್ಲಾ ಖರೀದಿ ಮಾಡುತ್ತಾರೆ, ಅವರ ಬಳಕೆಯ ಅನುಭವ ಹೇಗಿತ್ತು ಎಂಬುದನ್ನು ಕಾದು ನೋಡಬೇಕಿದೆ.

Best Mobiles in India

English summary
Apple's Vision Pro is priced at $3,499, which is considered expensive. Meanwhile, the gold Vision Pro costs ten times more, and some people are shocked to hear this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+