iPhone: ಈ ವಿಶೇಷ ಐಫೋನ್ 15 ಪ್ರೊನ ಬೆಲೆ 6.5 ಲಕ್ಷ ರೂ.! ಶಾಕ್ ಆಗಬೇಡಿ.... ವಿಷಯ ಇದೆ
ಆಪಲ್ ಡಿವೈಸ್‌ಗಳು (Apple device) ಸಾಮಾನ್ಯವಾಗಿ ದುಬಾರಿ ಬೆಲೆಯನ್ನೇ ಹೊಂದಿರುತ್ತವೆ. ಆದರೆ ನಮ್ಮ ನಡುವೆ ಇರುವ ಸಿರಿವಂತರು ಹಾಗೂ ದೊಡ್ಡ ಮಟ್ಟದ ಸೆಲೆಬ್ರಿಟಿಗಳು ಈ ಬೆಲೆಗಿಂತಲೂ ಇನ್ನೂ ಹೆಚ್ಚು ಬೆಲೆ ಹೊಂದಿರುವ ಅದೇ ತಂತ್ರಜ್ಞಾನ ಆಯ್ಕೆ ಇರುವ ಡಿವೈಸ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಅಂತಹ ಜನರ ಬಯಕೆಯನ್ನು ಕೆಲವು ವರ್ಷಗಳಿಂದ ಕ್ಯಾವಿಯರ್ ಪೂರೈಸುತ್ತಿದೆ.
ಹೌದು, ಕ್ಯಾವಿಯರ್ (Caviar) ಅಂತಾರಾಷ್ಟ್ರೀಯ ಬ್ರಾಂಡ್ ಆಗಿದ್ದು, ಭಿನ್ನ ರೀತಿಯ ಉತ್ಪನ್ನಗಳನ್ನು ರಚಿಸುವಲ್ಲಿ, ಉನ್ನತ ತಂತ್ರಜ್ಞಾನಗಳ ಸೊಗಸಾದ ಸಂಯೋಜನೆಯನ್ನು ಬಳಕೆ ಮಾಡುವಲ್ಲಿ ಹೆಸರುವಾಸಿಯಾಗಿದೆ. ಅದರಲ್ಲೂ ಐಫೋನ್‌ಗಳು ಮತ್ತು ಸ್ಯಾಮ್‌ಸಂಗ್ (iPhones and Samsung) ಡಿವೈಸ್‌ಗಳ ಐಷಾರಾಮಿ ಪುನರಾವರ್ತನೆಗಳನ್ನು ರೂಪಿಸಲು ಹೆಸರುವಾಸಿಯಾಗಿದ್ದು, ಇದೀಗ ಹೊಸ ಐಫೋನ್ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ತಿಳಿದುಬಂದಿದೆ. ಹಾಗಿದ್ರೆ, ಅದರ ಬೆಲೆ ಎಷ್ಟು? ಕ್ಯಾವಿಯರ್ ಎಂದರೇನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಷಾರಾಮಿ ಐಫೋನ್: ಐಪೋನ್‌ಗಳೇ ಸಾಮಾನ್ಯವಾಗಿ ಐಷಾರಾಮಿ. ಆದರೂ ಸಹ ಈ ಫೋನ್‌ಗಳನ್ನು ವಿಶೇಷವಾಗಿ ಮರು ನಿರ್ಮಾಣ ಮಾಡಿ ಸಾಮಾನ್ಯ ಬೆಲೆಗಿಂತ ನಾಲ್ಕು ಅಥವಾ ಐದು ಪಟ್ಟು ಹೆಚ್ಚಿನ ಬೆಲೆಗೆ ಕ್ಯಾವಿಯರ್ ಸೇಲ್ ಮಾಡುತ್ತದೆ. ಈಗಾಗಲೇ ಐಫೋನ್ ಮಾತ್ರವಲ್ಲದೆ ಸ್ಯಾಮ್‌ಸಂಗ್ ಫೋನ್‌ಗಳನ್ನು ಸಹ ಚಿನ್ನ ಅಥವಾ ವಜ್ರ ಬಳಕೆ ಮಾಡಿಕೊಂಡು ನಿರ್ಮಾಣ ಮಾಡಿ ಜನರ ಹುಬ್ಬೇರಿಸುವಂತೆ ಮಾಡಿದೆ.
ಈ ನಡುವೆ ಕಂಪನಿಯು ಈಗ ಆಪಲ್ ವಿಷನ್ ಪ್ರೊ ನಿಂದ ಸ್ಫೂರ್ತಿ ಪಡೆದ ಐಫೋನ್ 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ನ (Apple Vision Pro-Inspired iPhone 15 Pro ) ಕಸ್ಟಮೈಸ್ ಮಾಡಿದ ಆವೃತ್ತಿಯನ್ನು ಘೋಷಣೆ ಮಾಡಲಾಗಿದೆ. ಈ ಕಸ್ಟಮೈಸ್ ಮಾಡಿದ ಐಫೋನ್ 15 ಪ್ರೊ ಮಿಶ್ರ ರಿಯಾಲಿಟಿ ಹೆಡ್‌ಸೆಟ್‌ನಲ್ಲಿ ಇರುವ ಕೆಲವು ಅಂಶಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಆಪಲ್ ವಿಷನ್ ಪ್ರೊ ಪ್ರೇರಿತ ಐಫೋನ್ 15 ಪ್ರೊ ಸರಣಿ: ಸಾಂಪ್ರದಾಯಿಕ ಡಿವೈಸ್‌ಗಳು ಮತ್ತು ತಂತ್ರಜ್ಞಾನದಿಂದ ಸ್ಫೂರ್ತಿ ಪಡೆದು ಈ ವಿಶೇಷ ಆವೃತ್ತಿಯನ್ನು ಐಷಾರಾಮಿ ಪ್ರಿಯರಿಗಾಗಿ ರಚಿಸಲಾಗಿದೆ ಎಂದು ಕ್ಯಾವಿಯರ್ ಹೇಳಿದೆ. ಈ ನಡುವೆ ಕ್ಯಾವಿಯರ್ ಟೆಸ್ಲಾ ಸೈಬರ್ಟ್ರಕ್-ಪ್ರೇರಿತ ಸ್ಯಾಮ್‌ಸಂಗ್ S24 ಅಲ್ಟ್ರಾವನ್ನು (Tesla Cybertruck-inspired Samsung S24 Ultra) ಸಹ ಲಾಂಚ್ ಮಾಡಿದೆ.
ಇನ್ನು ಪ್ರಮುಖ ವಿಷಯಕ್ಕೆ ಬರುವುದಾದರೆ ಆಪಲ್ ವಿಷನ್ ಪ್ರೊ ಥೀಮಿನ ಆಧಾರದ ಮೇಲೆ ಐಫೋನ್ 15 ಪ್ರೊ ಅನ್ನು ರಚಿಸಲಾಗಿದ್ದು, ಇದು ಹೆಡ್‌ಸೆಟ್‌ನ ವೃತ್ತಾಕಾರದ ದ್ವಾರಗಳು ಮತ್ತು ಡಿವೈಸ್‌ನ ಮೇಲ್ಭಾಗದಲ್ಲಿ ಆಕರ್ಷಕವಾದ ಕಿತ್ತಳೆ ಬಣ್ಣದ ಲೈನ್ ಅನ್ನು ಕಾಣಬಹುದಾಗಿದೆ. ಇನ್ನು ಕೆಳಗಿನ ಭಾಗವು ವಿಷನ್ ಪ್ರೊನ ಮುಂಭಾಗದ ವಿನ್ಯಾಸವನ್ನು ಪ್ರತಿಬಿಂಬಿಸುತ್ತದೆ.
ಆರಂಭದಲ್ಲಿ ಇದನ್ನು ನೋಡಿದ್ರೆ ಅಷ್ಟು ಸುಲಭವಾಗಿ ಇದನ್ನು ಗಮನಿಸಲು ಸಾಧ್ಯವಾಗುವುಲ್ಲ. ಆದರೆ, ನೀವು ಏನಾದರೂ ಆಪಲ್‌ನ ಹೆಡ್‌ಸೆಟ್ ಅನ್ನು ಬಳಕೆ ಮಾಡಿದ್ದರೆ ಅಥವಾ ಅದನ್ನು ನೋಡಿದ್ರೆ ಇದರ ಸೂಕ್ಷ್ಮತೆ ಅರ್ಥವಾಗಲಿದೆ. ಇದೇ ವಿನ್ಯಾಸ ಮ್ಯಾಕ್ಸ್ ವೇರಿಯಂಟ್‌ನಲ್ಲೂ ಕಾಣಿಸಿಕೊಂಡಿದ್ದು, ಈ ಎರಡೂ ಸ್ಮಾರ್ಟ್‌ಫೋನ್‌ಗಳು ಆಪಲ್‌ನ ಅತ್ಯಂತ ಪ್ರಭಾವಶಾಲಿ ಐಫೋನ್‌ಗಳಾಗಿ ಗುರುತಿಸಿಕೊಂಡಿವೆ.

ಆಪಲ್ ವಿಷನ್ ಪ್ರೊ ಪ್ರೇರಿತ ಐಫೋನ್ 15 ಪ್ರೊ ಸರಣಿ ಬೆಲೆ ಎಷ್ಟು?: ನಾವು ಈಗ ಪ್ರಮುಖ ವಿಷಯಕ್ಕೆ ಬರೋಣ. ಸಾಮಾನ್ಯವಾಗಿ ಕ್ಯಾವಿಯರ್ ವಿನ್ಯಾಸಗೊಳಿಸಿದ ಇತರೆ ಐಫೋನ್‌ಗಳಂತೆಯೇ ಇದು ಕೂಡ ಭಾರಿ ಬೆಲೆಯನ್ನು ಹೊಂದಿದೆ. ಅಂದರೆ ಇದರ ಆರಂಭಿಕ ಬೆಲೆ $8,060, (ಭಾರತದಲ್ಲಿ ಇದರ ಬೆಲೆ 6,68,000 ರೂ.ಗಳು). ನಿಮಗೆ ಈ ದುಬಾರಿ ಬೆಲೆಗೆ ಫೋನ್ ಬೇಕು ಎಂದರೆ ಅಧಿಕೃತ ಸೈಟ್ ಮೂಲಕ ಖರೀದಿ ಮಾಡಬಹುದು.
ಕ್ಯಾವಿಯರ್ ಬಗ್ಗೆ ಒಂದಿಷ್ಟು ಮಾಹಿತಿ: ಮೊದಲೇ ತಿಳಿಸಿದಂತೆ ಯಾವುದೇ ದುಬಾರಿ ಬೆಲೆಯ ಡಿವೈಸ್‌ಗಳನ್ನು ರೀ ಕ್ರಿಯೇಟ್ ಮಾಡಿ ಅದನ್ನು ಇನ್ನಷ್ಟು ದುಬಾರಿ ಬೆಲೆಗೆ ಸೇಲ್ ಮಾಡುತ್ತದೆ. ಈ ವೇಳೆ ಚಿನ್ನ, ವಜ್ರಗಳು, ನೈಸರ್ಗಿಕವಾದ ಚರ್ಮ, ದಂತ, ಉಲ್ಕೆಗಳು ಸೇರಿದಂತೆ ಅಪರೂಪದ ವಸ್ತುಗಳನ್ನು ಈ ವೇಳೆ ಬಳಕೆ ಮಾಡಲಾಗುತ್ತದೆ.
ಈ ಕಂಪೆನಿಯು ಏಪ್ರಿಲ್ 4, 2011 ರಂದು ಆರಂಭವಾಗಿದ್ದು, ಆರಂಭದಲ್ಲೇ ದೊಡ್ಡ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಅಂದಿನಿಂದ ಇಂದಿನ ವರೆಗೂ ಐಷಾರಾಮಿ ಪ್ರಿಯರ ಮನ ತಣಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ಅದಾಗ್ಯೂ ಏಪ್ರಿಲ್ 2022 ರಲ್ಲಿ ಕ್ಯಾವಿಯರ್ ರಷ್ಯಾ ಮತ್ತು ಕ್ಯಾವಿಯರ್ ಇಂಟರ್ನ್ಯಾಷನಲ್ ಎಂದು ಎರಡು ವಿಭಾಗವಾಗಿದೆ. ಕ್ಯಾವಿಯರ್ ಇಂಟರ್ನ್ಯಾಷನಲ್ ರಷ್ಯಾದ ಬ್ರ್ಯಾಂಡ್‌ನಿಂದ ಪ್ರತ್ಯೇಕವಾಗಿ ಕೆಲಸ ಮಾಡುತ್ತಿದ್ದು,ಇದರ ಪ್ರಧಾನ ಕಛೇರಿ ದುಬೈನಲ್ಲಿದೆ.


Click it and Unblock the Notifications








