Home
ಸುದ್ದಿಜಾಲ

Apple Event 2023 : ಆಪಲ್‌ ವಾಚ್‌ 9 ಸೀರಿಸ್‌ ಲಾಂಚ್‌: ಈ ಡಬಲ್‌ ಟ್ಯಾಪ್‌ ಫೀಚರ್ಸ್‌ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲಿದೆ!

ಆಪಲ್‌ನ ಈ ವಂಡರ್‌ಲಸ್ಟ್‌ ಈವೆಂಟ್‌ನಲ್ಲಿ ಕೇವಲ ಐಫೋನ್‌ಗಳು ಮಾತ್ರವಲ್ಲದೆ ಬಹುನಿರೀಕ್ಷಿತ ಹಾಗೂ ಆಕರ್ಷಕ ಫೀಚರ್ಸ್‌ ಇರುವ ಆಪಲ್‌ ವಾಚ್‌ಗಳನ್ನು ಆರಂಭದಲ್ಲೇ ಘೋಷಣೆ ಮಾಡಲಾಯಿತು. ಈ ವಾಚ್‌ಗಳ ವಿಭಾಗದಲ್ಲಿ ಆಪಲ್‌ ವಾಚ್‌ 9 (Apple Watch 9), ಹಾಗೂ ಆಪಲ್‌ ವಾಚ್‌ 9 ಅಲ್ಟ್ರಾ (Apple Watch 9 Ultra) ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಲಾಗಿದ್ದು, ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಇವು ಸುನಾಮಿಯನ್ನೇ ಎಬ್ಬಿಸಲಿವೆ.

ಹೌದು, ಸಾಮಾನ್ಯವಾಗಿ ಆಪಲ್‌ ಐಫೋನ್‌ಗಳಿಗಿಂತ ಇತ್ತೀಚಿನ ದಿನಗಳಲ್ಲಿ ಆಪಲ್‌ ವಾಚ್‌ಗಳಿಗೆ ಹೆಚ್ಚಿನ ಮೌಲ್ಯ ಇದೆ. ಅದರಲ್ಲೂ ಹಲವಾರು ಜನರ ಜೀವ ಕಾಪಾಡಿದ ಜೀವರಕ್ಷಕವಾಗಿ ಈ ವಾಚ್‌ಗಳು ಕೆಲಸ ಮಾಡುತ್ತಿದ್ದು, ಈ ನಡುವೆ ಈಗ ಲಾಂಚ್‌ ಆಗಿರುವ ಆಪಲ್‌ ವಾಚ್‌ 9, ಹಾಗೂ ಆಪಲ್‌ ವಾಚ್‌ 9 ಅಲ್ಟ್ರಾ ಸ್ಮಾರ್ಟ್‌ವಾಚ್‌ ಇನ್ನಷ್ಟು ಸುಧಾರಿತ ಫೀಚರ್ಸ್‌ ಆಯ್ಕೆ ಪಡೆದುಕೊಂಡಿವೆ. ಹಾಗಿದ್ರೆ, ಈ ವಾಚ್‌ಗಳ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಪಲ್‌ ವಾಚ್‌ 9 ಸೀರಿಸ್‌ ಲಾಂಚ್‌: ಡಬಲ್‌ ಟ್ಯಾಪ್‌ ಫೀಚರ್ಸ್‌ ಸುನಾಮಿ ಎಬ್ಬಿಸಲಿದೆ

ಡಬಲ್‌ ಟ್ಯಾಪ್‌ ಫೀಚರ್ಸ್‌: ಆಪಲ್‌ ವಾಚ್‌ 9 ನ ಆಕರ್ಷಕ ಫೀಚರ್ಸ್‌ಗಳಲ್ಲಿ ಪ್ರಮುಖವಾದುದು ಎಂದರೆ‌ ಶಕ್ತಿಶಾಲಿ ನ್ಯೂರಲ್ ಎಂಜಿನ್ ಬಳಕೆ ಮಾಡಲಾಗಿರುವುದು. ಬಳಕೆದಾರರು ತೋರು ಬೆರಳು ಹಾಗೂ ಹೆಬ್ಬೆರಳನ್ನು ಎರಡು ಬಾರಿ ಟ್ಯಾಪ್‌ ಮಾಡುವ ಮೂಲಕ ವಾಚ್‌ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಅಂದರೆ ಕರೆ ಮ್ಯೂಸಿಕ್‌, ಅಲಾರಂ ಸೇರಿದಂತೆ ಅನೇಕ ಸೌಲಭ್ಯಗಳನ್ನು ಈ ಮೂಲಕ ಕಂಟ್ರೋಲ್‌ ಮಾಡಬಹುದು.

ಈ ಡಬಲ್‌ ಟ್ಯಾಪ್‌ ಮೂಲಕ ಬಳಕೆದಾರರು ರಕ್ತದ ಹರಿವಿನ ಸೂಕ್ಷ್ಮ ಬದಲಾವಣೆಗಳನ್ನು ಕಂಡುಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೆ ಈ ವಾಚ್‌ಗಳ ಒಳಭಾಗದಲ್ಲಿ ವಿನ್ಯಾಸವನ್ನು ಚೇಂಜ್‌ ಮಾಡಲಾಗಿದೆ. ಅಂದರೆ ಈ ವಾಚ್ S9 ಚಿಪ್ ಅನ್ನು ಹೊಂದಿದ್ದು, ಈ ಮೂಲಕ ಹಿಂದಿನ ಮಾದರಿಗಳಿಗಿಂತ ಹಲವು ಪಟ್ಟು ಹೆಚ್ಚಿನ ವೇಗವನ್ನು ಈ ವಾಚ್‌ ಹೊಂದಿವೆ. ಇದರೊಂದಿಗೆ ಈ ಮೊದಲೇ ತಿಳಿಸಲಾದ ಡಬಲ್‌ ಟ್ಯಾಪ್‌ ಮೂಲಕ ಸಿರಿ ಫೀಚರ್ಸ್‌ ಅನ್ನು ಸಹ ಸಕ್ರಿಯಗೊಳಿಸಬಹುದಾಗಿದೆ.

ಇಷ್ಟು ಮಾತ್ರವಲ್ಲದೆ ಹೆಚ್ಚು ನಿಖರ ಸ್ಥಳ ಪತ್ತೆಗಾಗಿ ಎರಡನೇ ತಲೆಮಾರಿನ ಅಲ್ಟ್ರಾವೈಡ್‌ ಬ್ಯಾಂಡ್‌ ಚಿಪ್ ಹೊಂದಿರುವುದು ಈ ವಾಚ್‌ನ ವಿಶೇಷತೆಗಳಲ್ಲಿ ಒಂದು. ಆಪಲ್ 2030 ರ ವೇಳೆಗೆ ನಿವ್ವಳ ಶೂನ್ಯ ಕಾರ್ಬನ್ ಉತ್ಪನ್ನವನ್ನು ಹೊಂದುವುದಾಗಿ ತಿಳಿಸಿದ್ದು, ಅದರಂತೆ ಆಪಲ್‌ ವಾಚ್‌ 9 ಸರಣಿಯಲ್ಲಿ ಮರುಬಳಕೆಯ ಲೋಹಗಳನ್ನು ಬಳಕೆ ಮಾಡಲಾಗಿದೆ.

ಜೊತೆಗೆ ಈ ವಾಚ್‌ನಲ್ಲಿ ಹೊಸ ಸೈಕ್ಲಿಂಗ್‌ ಫೀಚರ್ಸ್‌, ಸುಧಾರಿತ ಸೈಕ್ಲಿಂಗ್‌ ಟ್ರ್ಯಾಕಿಂಗ್ ನೊಂದಿಗೆ 2000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದ್ದು, ಹಿಂದಿನ ಮಾದರಿಗಿಂತ ಎರಡುಪಟ್ಟು ಹೆಚ್ಚಳವಾಗಿದೆ. ಇದರ ಜೊತೆಗೆ ಹೊಸ ಶೈಲಿಯ ಬ್ಯಾಂಡ್‌ ಆಯ್ಕೆ ನೀಡಲಾಗಿದೆ. ಈ ಬ್ಯಾಂಡ್‌ ವಾಚ್‌ಗೆ ಇನ್ನಷ್ಟು ಮೆರಗು ನೀಡುವುದರಲ್ಲಿ ಎರಡು ಮಾತಿಲ್ಲ.

ಇನ್ನು ಅಲ್ಟ್ರಾ ಮಾದರಿ ವಿಚಾರಕ್ಕೆ ಬರುವುದಾದರೆ ಫಾಸ್ಟ್‌ ಚಾರ್ಜಿಂಗ್ ಫೀಚರ್ಸ್‌ ಹಾಗೂ ಫ್ಲ್ಯಾಶ್‌ಲೈಟ್ ಬೂಸ್ಟ್, ಹೊಸ ಗೆಸ್ಚರ್‌ ಆಯ್ಕೆ, ಐಫೋನ್‌ಗಳಿಗೆ ನಿಖರವಾದ ಶೋಧನೆ ಸೇರಿದಂತೆ ಅನೇಕ ಸುಧಾರಿತ ಫೀಚರ್ಸ್‌ ಅನ್ನು ಈ ವಾಚ್‌ ಪಡೆದುಕೊಂಡಿದೆ. ಅದೆಲ್ಲಕ್ಕೂ ಮಿಗಿಲಾಗಿ ಈ ವಾಚ್‌ 3000 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆದಿದ್ದು,ವಿಶೇಷವಾದ ಆಕ್ಷನ್ ಬಟನ್ ಹೊಂದುವ ಮೂಲಕ ಇನ್ನಷ್ಟು ಆಕರ್ಷಕವಾಗಿದೆ.

ಆಪಲ್ ವಾಚ್ ಸರಣಿ 9 ವಾಚ್‌ಓಎಸ್ 10 ನಲ್ಲಿ ಕಾರ್ಯನಿರ್ವಹಿಸುತ್ತವೆ. ಇದು ಆಪಲ್‌ನ ಸ್ಮಾರ್ಟ್‌ವಾಚ್ ಆಪರೇಟಿಂಗ್ ಸಿಸ್ಟಮ್‌ನ ಇತ್ತೀಚಿನ ಆವೃತ್ತಿಯಾಗಿದೆ. ಉಳಿದಂತೆ ಆಪಲ್ ವಾಚ್ ಸರಣಿ 9 ರ ಅಲ್ಯೂಮಿನಿಯಂ ಆವೃತ್ತಿಯನ್ನು ಪಿಂಕ್, ಸ್ಟಾರ್‌ಲೈಟ್, ಸಿಲ್ವರ್, ಮಿಡ್‌ನೈಟ್ ಮತ್ತು ಉತ್ಪನ್ನ ಕೆಂಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಿಸಲಾಗಿದೆ. ಹಾಗೆಯೇ ಸ್ಟೇನ್‌ಲೆಸ್ ಸ್ಟೀಲ್ ಆವೃತ್ತಿಯು ಚಿನ್ನ, ಬೆಳ್ಳಿ ಮತ್ತು ಗ್ರ್ಯಾಫೈಟ್‌ ಬಣ್ಣದಲ್ಲೂ ಲಭ್ಯ .

ಆಪಲ್‌ ವಾಚ್‌ 9 ಸೀರಿಸ್‌ ಲಾಂಚ್‌: ಡಬಲ್‌ ಟ್ಯಾಪ್‌ ಫೀಚರ್ಸ್‌ ಸುನಾಮಿ ಎಬ್ಬಿಸಲಿದೆ

ಈ ವಾಚ್‌ಗಳ ಬೆಲೆ ವಿವರ: ಆಪಲ್‌ ವಾಚ್‌ 9 ವಾಚ್‌ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ. ಅಂದರೆ GPS ರೂಪಾಂತರಕ್ಕಾಗಿ $399 ಮತ್ತು ಸೆಲ್ಯುಲಾರ್ ಮಾದರಿಗೆ $499 ರಿಂದ ಪ್ರಾರಂಭವಾಗುತ್ತವೆ. ಅಲ್ಟ್ರಾ ಮಾದರಿ $799 ರಿಂದ ಆರಂಭ ಆಗುತ್ತದೆ. ಅಂದರೆ ಭಾರತದಲ್ಲಿ ಸರಿಸುಮಾರು 67,000 ರೂ.ಗಳಾಗಲಿದೆ. ಈ ವಾಚ್‌ಗಳು ಸೆಪ್ಟೆಂಬರ್‌ 22 ರಿಂದ ಲಭ್ಯ ಇರಲಿವೆ.

Best Mobiles in India

English summary
One of the attractive features of Apple Watch 9 is the use of a powerful neural engine. This means that users can control the watch by double-tapping their index finger and thumb.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+