Home
ಸುದ್ದಿಜಾಲ

Apple Watch: ಆಪಲ್ ವಾಚ್‌ಗಳು ಹೊಸ ವಿನ್ಯಾಸದಲ್ಲಿ! ಬಿಪಿ ಮಾನಿಟರಿಂಗ್ ಸೇರಿದಂತೆ ಹಲವು ಫೀಚರ್ಸ್‌

ಆಪಲ್‌ ಈಗಾಗಲೇ ತನ್ನ ಆಪಲ್‌ ವಾಚ್‌ಗಳಲ್ಲಿ (Apple Watch) ವಿವಿಧ ರೀತಿಯ ಆಕರ್ಷಕ ಫೀಚರ್ಸ್ ಅನ್ನು ನೀಡುವ ಮೂಲಕ ಹಲವಾರು ಜನರಿಗೆ ಅತ್ಯಂತ ನೆಚ್ಚಿನ ವಾಚ್‌ ಬ್ರ್ಯಾಂಡ್‌ ಎನಿಸಿಕೊಂಡಿದೆ. ಅಷ್ಟೆ ಅಲ್ಲದೆ ಕೆಲವರ ಪ್ರಾಣ ಉಳಿಸುವ ಮೂಲಕ ಜೀವ ರಕ್ಷಕವಾಗಿಯೂ ಹೆಸರು ಪಡೆದುಕೊಂಡಿದೆ. ಇದರ ಜೊತೆಗೆ ಈಗ ಆಪಲ್‌ ಈ ವಾಚ್‌ಗಳಲ್ಲಿ ಇನ್ನಷ್ಟು ಹೊಸ ಫೀಚರ್ಸ್‌ ನೀಡಲು ಸಜ್ಜಾಗಿದೆ.

ಹೌದು, ಆಪಲ್ ಮುಂದಿನ ವರ್ಷ ಅಂದರೆ 2024 ರಲ್ಲಿ ಗಮನಾರ್ಹ ಬದಲಾವಣೆಗಳೊಂದಿಗೆ ಆಪಲ್‌ ವಾಚ್‌ ಅನಾವರಣ ಮಾಡಲಾಗುತ್ತದೆ ಎನ್ನಲಾಗಿದೆ. ಈ ವಿಭಾಗದಲ್ಲಿ ಸ್ಲೀಕರ್ ವಿನ್ಯಾಸ ಮತ್ತು ರಕ್ತದೊತ್ತಡದ ಮೇಲ್ವಿಚಾರಣೆ (BP monitoring) ಮತ್ತು ಸ್ಲೀಪ್ ಅಪ್ನಿಯ ಪತ್ತೆಯಂತಹ (sleep apnea detection) ವಿಶೇಷ ಆರೋಗ್ಯ ಫೀಚರ್ಸ್‌ ಅನ್ನು ಹೊಂದಿರುತ್ತದೆ ಎನ್ನಲಾಗಿದೆ. ಹಾಗಿದ್ರೆ, ಏನಿವು ಹೊಸ ಫೀಚರ್ಸ್‌? ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಪಲ್ ವಾಚ್‌ಗಳು ಹೊಸ ವಿನ್ಯಾಸದಲ್ಲಿ! ಬಿಪಿ ಮಾನಿಟರಿಂಗ್ ಸೇರಿದಂತೆ ಹಲವು ಫೀಚರ್ಸ್

ಹೊಸ ಫೀಚರ್ಸ್‌ನೊಂದಿಗೆ ಆಪಲ್‌ ವಾಚ್‌ಗಳು: ಆಪಲ್ 2024 ರಲ್ಲಿ ತನ್ನ ಐಕಾನಿಕ್ ಆಪಲ್ ವಾಚ್‌ನ ಗಮನಾರ್ಹ ಪರೀಕ್ಷೆಗೆ ಸಜ್ಜಾಗುತ್ತಿದೆ ಎಂದು ತಿಳಿದುಬಂದಿದೆ. ಇದು ವಿಶ್ವಾದ್ಯಂತ ಟೆಕ್ ಉತ್ಸಾಹಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಬ್ಲೂಮ್‌ಬರ್ಗ್‌ನ ಟೆಕ್ ತಜ್ಞ ಮಾರ್ಕ್ ಗುರ್‌ಮನ್ (Bloomberg's Mark Gurman) ಈ ಬಗ್ಗೆ ಸುಳಿವು ನೀಡಿದ್ದು, ಮುಂದಿನ ಪೀಳಿಗೆಯ ಮಾದರಿಯು ಹೊಸ ಮ್ಯಾಗ್ನೆಟಿಕ್ ಬ್ಯಾಂಡ್ ಅಟ್ಯಾಚ್‌ಮೆಂಟ್ ಮೆಕ್ಯಾನಿಸಂ ಜೊತೆಗೆ ನಯವಾದ ಹಾಗೂ ತೆಳುವಾದ ವಿನ್ಯಾಸವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಆರೋಗ್ಯ ಫೀಚರ್ಸ್‌ ಕಡೆ ಗಮನಹರಿಸುವುದಾದರೆ ಗುರ್ಮನ್‌ರ ವರದಿಯು ಎರಡು ಪ್ರಮುಖ ಸೇರ್ಪಡೆಗಳನ್ನು ಸೂಚಿಸುತ್ತದೆ. ಅದರಲ್ಲಿ ಒಂದು ರಕ್ತದೊತ್ತಡದ ಮೇಲ್ವಿಚಾರಣೆ ಮತ್ತೊಂದು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಪತ್ತೆ. ಈ ಎರಡು ವಿಶೇಷ ಫೀಚರ್ಸ್‌ ಮೂಲಕ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಆಪಲ್‌ ದೊಡ್ಡದಾಗಿ ಸೌಂಡ್‌ ಮಾಡಲಿದೆ ಎನ್ನಲಾಗಿದೆ. ಜೊತೆಗೆ ಇದು ಗಮನಾರ್ಹ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಈ ಮೂಲಕ ಸಂಭಾವ್ಯ ರಕ್ತದೊತ್ತಡ ಸಮಸ್ಯೆಗಳನ್ನು ಪೂರ್ವದಲ್ಲೇ ಕಂಡುಕೊಂಡು ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

ಆಪಲ್ ವಾಚ್‌ಗಳು ಹೊಸ ವಿನ್ಯಾಸದಲ್ಲಿ! ಬಿಪಿ ಮಾನಿಟರಿಂಗ್ ಸೇರಿದಂತೆ ಹಲವು ಫೀಚರ್ಸ್

ಇನ್ನು ಸ್ಲೀಪ್ ಅಪ್ನಿಯ ಪತ್ತೆ ಫೀಚರ್ಸ್‌ ಇತ್ತೀಚಿನ ದಿನಗಳಲ್ಲಿ ಜನರಿಗೆ ಬೇಕಾದ ಅತ್ಯಂತ ಅಗತ್ಯ ಫೀಚರ್ಸ್‌ ಆಗಿದೆ. ಯಾಕೆಂದರೆ ಇದು ನೀವು ಮಲಗಿರುವಾಗ ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವ ಕೆಲಸ ಮಾಡುತ್ತದೆ. ಅಂದರೆ ನಿಮ್ಮ ಉಸಿರಿನ ಮೇಲೆ ನಿಗಾ ಇಡಲಿದ್ದು, ಏನಾದರೂ ಸಮಸ್ಯೆಗಳು ಕಂಡುಬಂದರೆ ತಕ್ಷಣವೇ ನಿಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಜೊತೆಗೆ ತಮ್ಮ ಯೋಗಕ್ಷೇಮಕ್ಕಾಗಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

ಈ ವಿಶೇಷ ಫೀಚರ್ಸ್‌ ಆಯ್ಕೆ ಕೇವಲ ವದಂತಿ ಆಧಾರದಲ್ಲಿ ಇರುವುದರಿಂದ ನಿಖರವಾದ ಫೀಚರ್ಸ್‌ ಏನು ಅನ್ನೋದನ್ನು ತಿಳಿಯಲು ಆಪಲ್‌ನ ಅಧಿಕೃತ ಹೇಳಿಕೆಗೆ ಕಾಯಬೇಕಿದೆ. ಅದೇನೇ ಇದ್ದರೂ, ಗುರ್ಮನ್ ಟೆಕ್ ಕ್ಷೇತ್ರದಲ್ಲಿ ನಿಖರವಾದ ಮುನ್ನೋಟಗಳ ದಾಖಲೆಯನ್ನು ಹೊಂದಿದ್ದು, ಈ ಸಂಭಾವ್ಯ ಫೀಚರ್ಸ್‌ ಮುಂದಿನ ಸ್ಮಾರ್ಟ್‌ವಾಚ್‌ಗಳಲ್ಲಿ ಇರಬಹುದು ಎಂಬುದೂ ಸಹ ಬಲವಾಗಿದೆ.

ಆಪಲ್ ವಾಚ್‌ಗಳು ಹೊಸ ವಿನ್ಯಾಸದಲ್ಲಿ! ಬಿಪಿ ಮಾನಿಟರಿಂಗ್ ಸೇರಿದಂತೆ ಹಲವು ಫೀಚರ್ಸ್

ಇನ್ನು 2024 ಆಪಲ್ ವಾಚ್‌ನ 10 ನೇ ವಾರ್ಷಿಕೋತ್ಸದ ಹಿನ್ನೆಲೆ ಈ ವಿಶೇಷ ವಾಚ್‌ಗಳ ಹೊಸ ಫೀಚರ್ಸ್‌ ಅನ್ನು ಪರಿಚಯಿಸಬಹುದು ಎಂದೂ ಸಹ ಹೇಳಲಾಗಿದೆ. ಈ ಮೂಲಕ ಆಪಲ್‌ ಪ್ರಿಯರು ಈ ದಿನಕ್ಕಾಗಿ ಕಾತುರದಿಂದ ಕಾದು ಕುಳಿತಿದ್ದಾರೆ ಎಂದು ತಿಳಿದುಬಂದಿದೆ. ಅದೇನೇ ಇದ್ದರೂ ಆಪಲ್‌ ಮಾತ್ರ ತನ್ನ ಗ್ರಾಹಕರಿಗೆ ನಿರಾಸೆ ಮಾಡುವ ಕೆಲಸ ಮಾಡುವುದಿಲ್ಲ. ಅಂದರೆ ಖಂಡಿತಾ ವಿಶೇಷ ಫೀಚರ್ಸ್‌ನೊಂದಿಗೆ ಈ ಡಿವೈಸ್‌ಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

Best Mobiles in India

English summary
Apple watch may have appearing in special features from 2024. It is said to have a sleek design and special health features like BP monitoring and sleep apnea detection. \
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+