Subscribe to Gizbot

17 ರ ಹರೆಯದ ಯುವಕನ ಜೀವ ರಕ್ಷಕನಾದ ಆಪಲ್ ವಾಚ್

Written By:

ಆಪಲ್ ವಾಚ್ ತನ್ನಲ್ಲಿ ಅನೂಹ್ಯವಾದ ವಿಶೇಷತೆಗಳನ್ನು ಒಗ್ಗೂಡಿಸಿಕೊಂಡಿದೆ ಎಂಬುದನ್ನು ನೀವು ನಂಬಲೇಬೇಕು. ಆದರೆ ಇದನ್ನು ಬಳಸದೆ ಇದರ ಬಗ್ಗೆ ತಿಳಿಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಹೈಸ್ಕೂಲ್ ಫುಟ್‌ಬಾಲ್ ಆಟಗಾರನೊಬ್ಬ ಆಪಲ್‌ನ ಹಾರ್ಟ್ ರೇಟ್ ಮಾನಿಟರ್ ತನ್ನ ಆಪತ್ಬಾಂಧವನಾಗಿ ಬಂದ ಕಥೆಯನ್ನು ಹೇಳಿಕೊಂಡಿದ್ದಾನೆ.

ಓದಿರಿ: ರೋಗಿಯನ್ನು ಆರೋಗ್ಯವಂತನನ್ನಾಗಿಸುವ ಆಪಲ್ ವಾಚ್ ರಹಸ್ಯವೇನು?

ಇಂದಿನ ಲೇಖನದಲ್ಲಿ ಈ ಹುಡುಗನಿಗೆ ಆಪಲ್ ವಾಚ್ ಹೇಗೆ ರಕ್ಷಕನಾಗಿ ಬಂದಿದೆ ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಾಲ್ ಹಾಲ್

ಪಾಲ್ ಹಾಲ್

ಪಾಲ್ ಹಾಲ್ 17 ವರ್ಷದ ಮೆಸಚೂಸೆಟ್‌ನ ಫುಟ್‌ಬಾಲ್ ಆಟಗಾರ ಎದೆ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದ.

ಡೀಹೈಡ್ರೆಟ್ ಸ್ಥಿತಿ

ಡೀಹೈಡ್ರೆಟ್ ಸ್ಥಿತಿ

ಆದರೂ ಫುಟ್‌ಬಾಲ್ ಅಭ್ಯಾಸವನ್ನು ಮಾಡುತ್ತಿದ್ದ ಮತ್ತು ಒಂದು ದಿನ ತರಬೇತಿಯ ಸಂದರ್ಭದಲ್ಲಿ ಹೆಚ್ಚು ಆಯಾಸಗೊಂಡ ಮತ್ತು ಡೀಹೈಡ್ರೆಟ್ ಸ್ಥಿತಿಗೆ ಒಳಗಾಗಿದ್ದಾನೆ.

ನೋವು ಅಷ್ಟೊಂದು ತೀವ್ರವಾಗಿ ಇದ್ದಿರಲಿಲ್ಲ

ನೋವು ಅಷ್ಟೊಂದು ತೀವ್ರವಾಗಿ ಇದ್ದಿರಲಿಲ್ಲ

ಆದರೆ ಈ ನೋವು ಅಷ್ಟೊಂದು ತೀವ್ರವಾಗಿ ಇದ್ದಿರಲಿಲ್ಲವಾದ್ದರಿಂದ ಆತ ತನ್ನ ವಿಶ್ರಾಂತಿ ಕೊಠಡಿಗೆ ಹೋಗಿ ನಿದ್ದೆ ಮಾಡಿದ್ದಾನೆ.

70 ಅಧಿಕ ಬಡಿತ

70 ಅಧಿಕ ಬಡಿತ

ಆದರೆ ಅವನು ಎದ್ದಾಗ ತನ್ನ ವಾಚ್ ಅನ್ನು ಪರಿಶೀಲಿಸಿಕೊಂಡಿದ್ದಾನೆ ಮತ್ತು ಇದರಲ್ಲಿ ಹಾರ್ಟ್ ರೇಟ್ 145 ಬಿಪಿಎಮ್ ಎಂಬುದಾಗಿ ನಮೂದಿಸಿತ್ತು ಅಂದರೆ ಸಾಮಾನ್ಯ ಹೃದಯ ಬಡಿತಕ್ಕಿಂತ 70 ಅಧಿಕ ಬಡಿತ ಎಂಬುದಾಗಿತ್ತು.

ವಾಚ್ ಹಾಳಾಗಿದೆ

ವಾಚ್ ಹಾಳಾಗಿದೆ

ಮೊದಲಿಗೆ ತನ್ನ ವಾಚ್ ಹಾಳಾಗಿದೆ ಎಂದೇ ಆತ ಅಂದುಕೊಂಡಿದ್ದ, ಆದರೆ ತನ್ನ ಕೋಚ್ ಅನ್ನು ಭೇಟಿಯಾದ ನಂತರ ಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಹಾರ್ಟ್ ರೇಟ್ ನಿಜವಾಗಿತ್ತು

ಹಾರ್ಟ್ ರೇಟ್ ನಿಜವಾಗಿತ್ತು

ಆದರೆ ಆಪಲ್ ವಾಚ್ ಪಾಲ್‌ಗೆ ತಿಳಿಸಿದ ಹಾರ್ಟ್ ರೇಟ್ ನಿಜವಾಗಿತ್ತು. ಇದು ಮಸಲ್ ಕೋಶಗಳ ಬ್ರೇಕ್‌ಡೌನ್ ಆದ ರಬ್ಡೊಮೊಲಿಸೀಸ್‌ನ ಸೂಚನೆಯಾಗಿತ್ತು.

ಹಾನಿ

ಹಾನಿ

ಇದು ತೀವ್ರತರವಾದ ಹಾನಿಯನ್ನು ದೇಹದ ಭಾಗಕ್ಕೆ ಉಂಟುಮಾಡಿ ಅದರ ಚಲನೆಯನ್ನು ನಿಲ್ಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿತ್ತು.

ಎಲ್‌ಇಡಿ ಲೈಟ್‌

ಎಲ್‌ಇಡಿ ಲೈಟ್‌

ಇನ್ನು ಆಪಲ್ ವೆಬ್‌ಸೈಟ್ ಹೇಳುವಂತೆ ವಾಚ್ ಎಲ್‌ಇಡಿ ಲೈಟ್‌ಗಳನ್ನು ಬಳಸುತ್ತಿದ್ದು ನಿಮ್ಮ ಮಣಿಗಂಟಿನಲ್ಲಿ ರಕ್ತದ ಹರಿವನ್ನು ಇದು ಪರಿಶೋಧಿಸುತ್ತದೆ.

ಕೂದಲೆಳೆಯ ಅಂತರ

ಕೂದಲೆಳೆಯ ಅಂತರ

ಇನ್ನು ಪಾಲ್ ಆಸ್ಪತ್ರೆಯಲ್ಲಿ ತನಗೆ ನಡೆದ ಚಿಕಿತ್ಸೆಯನ್ನು ವಿವರಿಸಿದ್ದು ಆಪಲ್ ವಾಚ್‌ನ ತೋರಿಸಿರುವ ಹಾರ್ಟ್ ರೇಟ್‌ನಿಂದಾಗಿ ನಾನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದೇನೆ.

ಇಂಟರ್ನ್‌ಶಿಪ್

ಇಂಟರ್ನ್‌ಶಿಪ್

ಆಪಲ್ ಸಿಇಒ ಟಿಮ್ ಕುಕ್ ಪಾಲ್ ಅನ್ನು ಭೇಟಿಯಾಗಿ ಹೊಸ ಐಫೋನ್ ಮತ್ತು ಮತ್ತು ಆಪಲ್ ಮುಖ್ಯ ಕಚೇರಿಯಲ್ಲಿ ಬೇಸಿಗೆ ಇಂಟರ್ನ್‌ಶಿಪ್ ಅನ್ನು ಕಲ್ಪಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Apple Watch is loaded with gimmicky features and applications that nobody ever uses, but a high school football player in Massachusetts says the Apple Watch's heart rate monitor saved his life.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot