'ಆಪಲ್ ವಾಚ್ ಸೀರಿಸ್‌ 5'ನ ಫೀಚರ್ಸ್‌ಗಳು ಖಂಡಿತಾ ಅಚ್ಚರಿ ಎನಿಸಲಿವೆ!

|

ಟೆಕ್‌ ದಿಗ್ಗಜ್ ಆಪಲ್ ಸಂಸ್ಥೆಯು ಐಫೋನ್‌ಗಳ ಜೊತೆಗೆ ಆಪಲ್ ವಾಚ್‌ಗಳಿಂದಲೂ ಹೆಸರುವಾಸಿ ಆಗಿದೆ. ಕಂಪನಿಯ 'ಆಪಲ್ ವಾಚ್ 4 ಸೀರಿಸ್' ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಆ ಸಾಲಿಗಿಗ ಹೊಸದಾಗಿ 'ಆಪಲ್ ವಾಚ್ ಸೀರಿಸ್ 5' ಸೇರಿಕೊಂಡಿದ್ದು, ಈ ವಾಚ್‌ನ ಫೀಚರ್ಸ್‌ಗಳನ್ನು ನೋಡಿದರೇ ಇದು ಮಾರುಕಟ್ಟೆಯಲ್ಲಿ ಅಬ್ಬರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಐಫೋನ್

ಐಫೋನ್

ಹೌದು, ಆಪಲ್ ಸಂಸ್ಥೆಯು ಇದೇ ಸೆಪ್ಟಂಬರ್ 10 ರಂದು ಕ್ಯಾಲಿಫೋರ್ನಿಯಾದಲ್ಲಿ ತನ್ನ ಐಫೋನ್‌ 11 ಸರಣಿಯನ್ನು ಲಾಂಚ್ ಮಾಡಿದೆ. ಈ ಸರಣಿಯಲ್ಲಿ 'ಐಫೋನ್ 11, ಐಫೋನ್ 11 ಪ್ರೊ, ಐಫೋನ್ 11 ಪ್ರೊ ಮ್ಯಾಕ್ಸ್‌' ಸೇರಿದಂತೆ ಐಫೋಡ್‌ ಮತ್ತು ಆಪಲ್ ವಾಚ್‌ ಸೀರಿಸ್ 5 ಡಿವೈಸ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಆಪಲ್ ವಾಚ್ 5 ಸೀರಿಸ್ ವಿಶೇಷ ಫೀಚರ್ಸ್‌ಗಳಿಂದ ಭಾರೀ ಗಮನ ಸೆಳೆದಿದೆ. ಹಾಗಾದರೇ 'ಆಪಲ್ ವಾಚ್ ಸೀರಿಸ್ 5'ನ ಪ್ರಮುಖ 5 ಸಂಗತಿಗಳನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : 'ಐಫೋನ್ 11 ಪ್ರೊ ಮ್ಯಾಕ್ಸ್‌' ರಿಲೀಸ್‌!..ಫೀಚರ್ಸ್‌ ಮತ್ತು ಬೆಲೆ ಅಬ್ಬಬ್ಬಾ!ಓದಿರಿ : 'ಐಫೋನ್ 11 ಪ್ರೊ ಮ್ಯಾಕ್ಸ್‌' ರಿಲೀಸ್‌!..ಫೀಚರ್ಸ್‌ ಮತ್ತು ಬೆಲೆ ಅಬ್ಬಬ್ಬಾ!

ಆಲ್ವೆಸ್‌ ಆನ್ ಡಿಸ್‌ಪ್ಲೇ

ಆಲ್ವೆಸ್‌ ಆನ್ ಡಿಸ್‌ಪ್ಲೇ

ಆಪಲ್ ವಾಚ್ ಸೀರಿಸ್ 5 ಡಿವೈಸ್‌ನಲ್ಲಿ ಕಂಪನಿಯು ಮೊದಲ ಬಾರಿಗೆ 'ಆಲ್ವೆಸ್‌ ಆನ್ ಡಿಸ್‌ಪ್ಲೇ' ಫೀಚರ್‌ ಅನ್ನು ಪರಿಚಯಿಸುತ್ತಿದೆ. ಡಿವೈಸ್‌ ಡಿಸ್‌ಪ್ಲೇಯು ಯಾವಾಗಲೂ ಆನ್‌ ಮೋಡ್‌ನಲ್ಲಿಯೇ ಇರುವಂತಹ ಫೀಚರ್‌ ಇದಾಗಿದ್ದು, ಸುಲಭವಾಗಿ ಟೈಮ್, ಸೇರಿದಂತೆ ಅಗತ್ಯ ಮಾಹಿತಿಗಳನ್ನು ನೋಡಬಹುದಾಗಿದೆ. ಅದರೊಂದಿಗೆ LTPO ತಂತ್ರಜ್ಞಾನ ನೀಡಿದ್ದು, ಜೊತೆಗೆ ಅಲ್ಟ್ರಾ ಲೋ ಪವರ್ ಡಿಸ್‌ಪ್ಲೇ ಡ್ರೈವರ್ ಒಳಗೊಂಡಿದೆ. 18 ಗಂಟೆಗಳ ಬ್ಯಾಟರಿ ಲೈಫ್‌ ಪಡೆದುಕೊಂಡಿದೆ.

ನ್ಯಾವಿಗೇಶನ್‌

ನ್ಯಾವಿಗೇಶನ್‌

ಆಪಲ್ ವಾಚ್‌ಗಳು ಕೇವಲ ಫಿಟ್ನೆಸ್‌ ಟ್ರಾಕ್‌ ಮಾಡಲಷ್ಟೇ ಅಲ್ಲದೇ ಗೊತ್ತಿಲ್ಲದ ಮಾರ್ಗ ತಿಳಿಯಲು ಅತ್ಯುತ್ತಮ ನ್ಯಾವಿಗೇಶನ್‌ ಡಿವೈಸ್‌ ಆಗಿಯು ಬಳಕೆ ಆಗುತ್ತವೆ. ಈಗಾಗಲೇ ಆಪಲ್ ವಾಚ್ ಸೀರಿಸ್‌ಗಳು ನ್ಯಾವಿಗೇಶನ್ ಫೀಚರ್ ಒಳಗೊಂಡಿವೆ. ಆದ್ರೆ ಹೊಸ ಆಪಲ್ ವಾಚ್ ಸೀರಿಸ್ 5 ಡಿವೈಸ್‌ ಇನ್‌ಬಿಲ್ಟ್‌ ಕಂಪಾಸ್‌ ಸೌಲಭ್ಯವನ್ನು ಪಡೆದುಕೊಂಡಿದೆ. ಅಕ್ಷಾಂಶ, ರೇಖಾಂಶ, ದಿಕ್ಕು ಹೀಗೆ ಹಲವು ನ್ಯಾವಿಗೇಶನ್ ಸೌಲಭ್ಯಗಳಿಗೆ ದೊರೆಯಲಿವೆ.

ಓದಿರಿ : ಗ್ರಾಹಕರಿಗೆ ಗುಡ್‌ನ್ಯೂಸ್‌!..ಐಫೋನ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ!ಓದಿರಿ : ಗ್ರಾಹಕರಿಗೆ ಗುಡ್‌ನ್ಯೂಸ್‌!..ಐಫೋನ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ!

ಇಂಟರ್ನ್ಯಾಷನಲ್ ಎಮರ್ಜೆನ್ಸಿ ಕಾಲಿಂಗ್

ಇಂಟರ್ನ್ಯಾಷನಲ್ ಎಮರ್ಜೆನ್ಸಿ ಕಾಲಿಂಗ್

ಆಪಲ್‌ ವಾಚ್ ಸೀರಿಸ್‌ 5 ಡಿವೈಸ್‌ನಲ್ಲಿ ಭಾರೀ ಗಮನ ಸೆಳೆಯುವ ಫೀಚರ್ ಅಂದರೇ ಅದು ಇಂಟರ್ನ್ಯಾಷನಲ್ ಎಮರ್ಜೆನ್ಸಿ ಕಾಲಿಂಗ್ ಸೌಲಭ್ಯ. ಹೌದು, ವಿದೇಶ ಪ್ರಯಾಣದಲ್ಲಿದ್ದಾಗ ಏನಾದರೋ ತೊಂದರೇ ಎದುರಾದರೇ ಬಳಕೆದಾರರು ಈ ಎಮರ್ಜೆನ್ಸಿ ಫೀಚರ್ ಬಳಕೆಮಾಡಬಹುದಾಗಿದೆ. ಬಳಕೆದಾರರ ಫೋನಿನಲ್ಲಿ ರೋಮಿಂಗ್ ಪ್ಲ್ಯಾನ್‌ ಇರಲಿ ಅಥವಾ ಇಲ್ಲದಿರಲಿ ಈ ಫೀಚರ್ ಖಂಡಿತಾ ನೆರವಿಗೆ ಬರಲಿದೆ ಎಂದಿದೆ ಕಂಪನಿ.

ವಾಚ್‌ ಓಎಸ್‌ 6

ವಾಚ್‌ ಓಎಸ್‌ 6

ಆಪಲ್ ವಾಚ್ ಸೀರಿಸ್ 5, ಪ್ರತ್ಯೇಕ ವಾಚ್ ಓಎಸ್‌ 6 ಫೀಚರ್‌ ಅನ್ನು ಒಳಗೊಂಡಿದೆ. ಜೊತೆಗೆ ಸೈಕಲ್ ಟ್ರಾಕಿಂಗ್ ಆಪ್ ನೀಡಲಾಗಿದ್ದು, ಇದು ವಿಶೇಷವಾಗಿ (menstrual cycles Track ) ಮಹಿಳೆಯರಿಗೆ ಉಪಯುಕ್ತ ಎನಿಸಲಿದೆ. ಹಾಗೆಯೇ ಇದರೊಂದಿಗೆ ನಾಯಿಸ್‌ ಆಪ್ ಹೊಸದಾಗಿ ಸೇರಿಸಿದ್ದು, ಬಳಕೆದಾರರ ಸುತ್ತಲಿನ ಸೌಂಡ್‌ನಲ್ಲಿ ಹೆಚ್ಚು ಡಿಸ್ಟರ್ಬ್ ಅನಿಸುವ ಶಬ್ದ ಯಾವುದು ಎಂದು ತಿಳಿಯಲು ನೆರವಾಗಲಿದೆ.

ಓದಿರಿ : ಬಹುನಿರೀಕ್ಷಿತ 'ಐಫೋನ್ 11' ಸರಣಿ ಬಿಡುಗಡೆ!ಓದಿರಿ : ಬಹುನಿರೀಕ್ಷಿತ 'ಐಫೋನ್ 11' ಸರಣಿ ಬಿಡುಗಡೆ!

ಬೆಲೆ ಮತ್ತು ಲಭ್ಯತೆ

ಆಪಲ್ ವಾಚ್ ಸೀರಿಸ್‌ 5 ಡಿವೈಸ್‌ 'ಜಿಪಿಎಸ್‌' ಹಾಗೂ 'ಜಿಪಿಎಸ್‌ ಮತ್ತು ಸೆಲ್ಯೂಲರ್‌' ಮಾದರಿಯ ಎರಡು ವೇರಿಯಂಟ್‌ಗಳನ್ನು ಒಳಗೊಂಡಿದೆ. ಯುಎಸ್‌ನಲ್ಲಿ ಆಪಲ್ ವಾಚ್‌ ಸೀರಿಸ್‌ 5 ಆರಂಭಿಕ ಬೆಲೆಯು $399 ಆಗಿದೆ. ಹಾಗೆಯೇ ಭಾರತದಲ್ಲಿ ಜಿಪಿಎಸ್‌ ವೇರಿಯಂಟ್ ಆರಂಭಿಕ ಬೆಲೆಯು 40,900ರೂ.ಗಳಾಗಿದೆ. ಜಿಪಿಎಸ್‌ ಮತ್ತು ಸೆಲ್ಯೂಲರ್ ವೇರಿಯಂಟ್ ಆರಂಭಿಕ ಬೆಲೆಯು 49,900ರೂ.ಗಳಾಗಿದೆ.

ಓದಿರಿ : 'ಐಫೋನ್ 11 ಪ್ರೊ' ಲಾಂಚ್!..ಸಂಪೂರ್ಣ ಅಪ್‌ಗ್ರೇಡ್‌ ಫೀಚರ್ಸ್‌!ಓದಿರಿ : 'ಐಫೋನ್ 11 ಪ್ರೊ' ಲಾಂಚ್!..ಸಂಪೂರ್ಣ ಅಪ್‌ಗ್ರೇಡ್‌ ಫೀಚರ್ಸ್‌!

Best Mobiles in India

English summary
Apple Watch Series 5 comes with always on display feature and International emergency calling. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X