Home
ಸುದ್ದಿಜಾಲ

ಇನ್ನೇನು ಸಾವಿಗೀಡಾಗಬೇಕಾದ ವ್ಯಕ್ತಿಯ ಜೀವ ಉಳಿಸಿದ ಆಪಲ್‌ ವಾಚ್‌; ಅದೇಗೆ ಅಂತೀರಾ!?

ನೀವು ಈಗಾಗಲೇ ಆಪಲ್‌ ಫೋನ್‌ ಅಥವಾ ಆಪಲ್ ವಾಚ್‌ ಹಲವು ಜನರ ಜೀವ ಉಳಿಸಿದೆ ಎಂದು ಕೇಳಿರಬಹುದು, ಓದಿರಬಹುದು. ಅದರಂತೆ ಈಗ ಆಪಲ್‌ ವಾಚ್‌ ಇದೇ ರೀತಿಯ ಮಹತ್ವದ ಕೆಲಸವೊಂದನ್ನು ಮಾಡಿದೆ. ಅದರಲ್ಲೂ ಆ ವ್ಯಕ್ತಿ ಎಚ್ಚರ ಆಗುವವರೆಗೂ ಎಚ್ಚರಿಕೆ ನೀಡಿರುವುದು ಮತ್ತೊಂದು ವಿಷಯ. ಇನ್ನು ಆಪಲ್‌ನ ಡಿವೈಸ್‌ಗಳು ಸಾಮಾನ್ಯವಾಗಿ ಅಧಿಕ ಬೆಲೆ ಹೊಂದಿದ್ದರೂ ಸಹ ಇವುಗಳಿಂದ ಆಗುವ ಲಾಭ ಮಾತ್ರ ಗಣನೀಯವಾದುದು.

ಇನ್ನೇನು ಸಾವಿಗೀಡಾಗಬೇಕಾದ ವ್ಯಕ್ತಿಯ ಜೀವ ಉಳಿಸಿದ ಆಪಲ್‌ ವಾಚ್‌; ಅದೇಗೆ ಅಂತೀರಾ!?

ಹೌದು, ಆಪಲ್‌ ಸ್ಮಾರ್ಟ್‌ವಾಚ್‌ ಬಳಕೆದಾರರ ಜೀವವನ್ನು ಉಳಿಸುವಲ್ಲಿ ಮಹತ್ವದ ಕಾರ್ಯ ಮಾಡುತ್ತಾ ಬರುತ್ತಿದ್ದು, ಇದೀಗ ಈ ವಾಚ್‌ ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯ ಜೀವ ಉಳಿಸಿ ಸೈ ಎನಿಸಿಕೊಂಡಿದೆ. ಹಾಗಿದ್ರೆ, ಆಪಲ್‌ ವಾಚ್‌ ಮಾಡಿದ ಮಹತ್ಕಾರ್ಯವಾದರೂ ಏನು?, ಇದು ಬಳಕೆದಾರರಿಗೆ ಹೇಗೆಲ್ಲಾ ಸಹಾಯಕವಾಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪಲ್ಸ್ ಮಾನಿಟರ್‌ನಿಂದ ಉಳಿದ ಜೀವ

ಆಪಲ್‌ ವಾಚ್‌ನಲ್ಲಿ ಇರುವ ಪಲ್ಸ್ ಮಾನಿಟರ್ ಫೀಚರ್ಸ್‌ ಈಗಾಗಲೇ ಹಲವಾರು ಜನರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವ ಮೂಲಕ ಅವರು ಜೀವಭಯದಿಂದ ಹೊರಬರುವಂತೆ ಮಾಡಿದೆ. ಹಾಗೆಯೇ ಇಲ್ಲೋರ್ವ ಬಳಕೆದಾರರು ಈ ವಾಚ್‌ ಮೂಲಕ ನಾಡಿ ಬಡಿತ ಹೆಚ್ಚಾಗಿರುವುದನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತೀವ್ರವಾದ ಆಂತರಿಕ ರಕ್ತಸ್ರಾವದ ಮಾಹಿತಿ ಸಹ ಈ ವೇಳೆ ತಿಳಿದುಬಂದಿದೆ.

ಯಾವ ವಾಚ್‌ ಇದು?

ಆಪಲ್‌ ವಾಚ್‌ ಈ ವಿಷಯದಲ್ಲಿ ಆಗಾಗ್ಗೆ ಪ್ರಶಂಸೆಗೆ ಒಳಗಾಗುತ್ತಲೇ ಇದೆ. ಈ ವಾಚ್‌ನಲ್ಲಿನ ಹೃದಯ ಬಡಿತದ ಮೇಲ್ವಿಚಾರಣೆ, ತುರ್ತು ಎಸ್‌ಒಗಳು, ಇನ್‌ಬಿಲ್ಟ್‌ ಆರೋಗ್ಯ ಮತ್ತು ತುರ್ತು ಫೀಚರ್ಸ್‌ಗಳು ಸಾಕಷ್ಟು ಅನುಕೂಲಕರ ಸೌಲಭ್ಯಗಳನ್ನು ಕಲ್ಪಿಸಿವೆ. ಅದರಂತೆ ಆಪಲ್‌ ವಾಚ್‌ ಸರಣಿ 7 ಮೃತ್ಯವನ್ನೇ ಸೋಲಿಸಿದ ಕೀರ್ತಿಗೆ ಪಾತ್ರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇನ್ನೇನು ಸಾವಿಗೀಡಾಗಬೇಕಾದ ವ್ಯಕ್ತಿಯ ಜೀವ ಉಳಿಸಿದ ಆಪಲ್‌ ವಾಚ್‌; ಅದೇಗೆ ಅಂತೀರಾ!?

ಆಪಲ್‌ ವಾಚ್ ನಿಂದ ಬದುಕಿದ ವ್ಯಕ್ತಿ ಯಾರು?

ರೆಡ್ಡಿಟ್‌ ಪ್ರೊಫೈಲ್ ನಲ್ಲಿ ಡಿಜಿಟಲ್ ಮೊಫೊ ಎಂದು ಹೆಸರಿಟ್ಟುಕೊಂಡಿರುವ ವ್ಯಕ್ತಿ ಕೆಲವು ದಿನಗಳ ಹಿಂದೆ ಆಪಲ್‌ ವಾಚ್‌ನಿಂದ ಬದುಕುಳಿದಿದ್ದಾರೆ. ಆ ವೇಳೆ ಅವರಿಗೆ ಸ್ಮಾರ್ಟ್‌ವಾಚ್‌ ಮೂಲಕ ಹೆಚ್ಚಿನ ನಾಡಿ ರೇಟ್‌ ಮಾಹಿತಿ ತಿಳಿದುಬಂದಿದೆ. ಈ ಮೂಲಕ ಅವರು ಹಲವಾರು ಎಚ್ಚರಿಕೆಗಳನ್ನು ಪಡೆದುಕೊಂಡಿದ್ದಾರೆ. ವಿಷಯ ಏನೆಂದರೆ ಅವರು ಡಿಎನ್‌ಡಿ ಮೋಡ್ ಅನ್ನು ಸಕ್ರಿಯಗೊಳಿಸಿದ್ದರಿಂದಾಗಿ ಅವರು ಯಾವುದೇ ವಾಯ್ಸ್‌ ನೋಟಿಫಿಕೇಶನ್‌ ಅನ್ನು ಸ್ವೀಕಾರ ಮಾಡಲು ಸಾಧ್ಯವಾಗಿಲ್ಲ. ಅದಾಗ್ಯೂ ವಾಚ್‌ 10 ಕ್ಕೂ ಹೆಚ್ಚು ಎಚ್ಚರಿಕೆಗಳನ್ನು ನೀಡಿದೆ. ಜೊತೆಗೆ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡುವವರೆಗೂ ಇದು ತನ್ನ ಕೆಲಸ ಮುಂದುವರೆಸಿದೆಯಂತೆ.

ಇದಾದ ನಂತರ ಕೆಲಸದ ಒತ್ತಡದಿಂದ ಹೀಗೆ ಆಗುತ್ತಿದೆ ಎಂದು ವ್ಯಕ್ತಿ ಸುಮ್ಮನಾಗಿದ್ದಾರೆ. ಆದರೆ, ಕೊನೆಗೂ ನಾಡಿ ಬಡಿತದ ಎಚ್ಚರಿಕೆ ಹಾಗೂ ನಾಡಿ ಬಡಿತದ ತೀವ್ರತೆ ಹೆಚ್ಚಾಗಿದ್ದರಿಂದ ಏನಾದರೂ ಸಮಸ್ಯೆ ಇರಬಹುದೇ ಎಂದು ಭಾವಿಸಿಕೊಂಡು ವೈದ್ಯರನ್ನು ವಿಡಿಯೋ ಕರೆ ಮೂಲಕ ಸಂಪರ್ಕಿಸಿದ್ದಾರೆ. ಬಳಿಕ ಮಾಹಿತಿ ಪಡೆದ ವೈದ್ಯರು ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ಸೇರಿದ ನಂತರ ವ್ಯಕ್ತಿಯ ಹಿಮೋಗ್ಲೋಬಿನ್ ದರವು 3 ಗ್ರಾಂ/ಡಿಎಲ್‌ಗೆ ತೀವ್ರವಾಗಿ ಕುಸಿದಿದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ. ಪುರುಷರಿಗಾಗಿ ಸಾಮಾನ್ಯ ಹಿಮೋಗ್ಲೋಬಿನ್ 13 ಗ್ರಾಂ/ಡಿಎಲ್ ಗಿಂತ ಹೆಚ್ಚು ಮತ್ತು ಮಹಿಳೆಯರಿಗೆ 13 ಗ್ರಾಂ/ಡಿಎಲ್‌ ಗಿಂತ ಹೆಚ್ಚು ಇರಬೇಕು. ಆದರೆ, 5.0 ಗ್ರಾಂ/ಡಿಎಲ್‌ಗಿಂತ ಕಡಿಮೆ ಹಿಮೋಗ್ಲೋಬಿನ್ ಮಟ್ಟವು ಅಪಾಯಕಾರಿ ಮತ್ತು ಹೃದಯ ವೈಫಲ್ಯ ಅಥವಾ ಸಾವಿಗೆ ಕಾರಣವಾಗಬಹುದು. ಹೀಗಾಗಿ ಈ ವ್ಯಕ್ತಿಯು ಗಂಭೀರ ಸ್ಥಿತಿಯಲ್ಲಿದ್ದುದ್ದನ್ನು ವಾಚ್‌ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದೆ.

ಇನ್ನೇನು ಸಾವಿಗೀಡಾಗಬೇಕಾದ ವ್ಯಕ್ತಿಯ ಜೀವ ಉಳಿಸಿದ ಆಪಲ್‌ ವಾಚ್‌; ಅದೇಗೆ ಅಂತೀರಾ!?

ಆರಂಭದಲ್ಲಿ ಅವರು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಭಾವಿಸಿದರಾದರೂ ನಂತರದ ಪರೀಕ್ಷೆಗಳ ಪ್ರಕಾರ ಜೀರ್ಣಾಂಗವ್ಯೂಹದಲ್ಲಿ ರಕ್ತಸ್ರಾವ ಉಂಟಾಗಿದೆ ಎಂದು ಕಂಡುಕೊಂಡಿದ್ದಾರೆ. ಅದರಲ್ಲೂ ಸಮಯಕ್ಕೆ ಸರಿಯಾಗಿ ವಾಚ್‌ ಆ ಮಾಹಿತಿ ನೀಡದಿದ್ದರೆ ತಕ್ಷಣವೇ ಸಾಯುವ ಸಂಭವ ಹೆಚ್ಚಿತ್ತು ಎಂಬುದನ್ನೂ ಸಹ ತಿಳಿಸಿದ್ದಾರೆ.

ಆಪಲ್ ವಾಚ್‌ ಇಂತಹ ಸಮಸ್ಯೆಗಳನ್ನು ಹೇಗೆ ಪತ್ತೆ ಮಾಡುತ್ತದೆ?

ಯಾವುದೇ ವಾಚ್‌ಗಳಲ್ಲಿ ವಿವಿಧ ರೀತಿಯ ಆರೋಗ್ಯ ಮೇಲ್ವಿಚಾರಣಾ ವಿಷಯಗಳು ಕಂಡುಬರುತ್ತವೆ. ಆದರೆ, ಆಪಲ್‌ ವಾಚ್‌ ಈ ವಿಷಯದಲ್ಲಿ ಒಂದು ಕೈ ಮೇಲು ಎಂದು ಹೇಳಬಹುದು. ವಾಚ್‌ನಲ್ಲಿನ ಸೆನ್ಸರ್‌ಗಳ ಆಯ್ಕೆಯಲ್ಲಿ ಪಲ್ಸ್‌ ರೇಟ್‌ ಮಾನಿಟರ್‌ ಸೆನ್ಸರ್‌ ನಾಡಿ ಬಡಿತವನ್ನು ನಿರಂತರವಾಗಿ ಟ್ರ್ಯಾಕ್‌ ಮಾಡಿದರೆ, ಹೃದಯ ಮೇಲ್ವಿಚಾರಣಾ ವ್ಯವಸ್ಥೆಯು ಅನಿಯಮಿತ ಹೃದಯ ಲಯಗಳನ್ನು ಪತ್ತೆ ಮಾಡುತ್ತದೆ. ಹಾಗೆಯೇ SpO2 ಆಮ್ಲಜನಕದ ಮಟ್ಟವನ್ನು ಪತ್ತೆ ಮಾಡಲಿದ್ದು, ಈ ಎಲ್ಲಾ ಫೀಚರ್ಸ್‌ಗಳು ಸಂಯೋಜನೆಗೊಂಡು ದೇಹದ ಜೀವಕೋಶಗಳ ಮೇಲೆ ನಿಗಾ ಇಡುತ್ತವೆ. ಈ ನಡುವೆ ದೇಹದಲ್ಲಿ ಏನಾದರೂ ಅಸಹಜವಾದ ಘಟನೆ ಸಂಭವಿಸಿದರೆ ನೋಟಿಫಿಕೇಶನ್‌ ಮೂಲಕ ಮಾಹಿತಿ ನೀಡುತ್ತದೆ.

Best Mobiles in India

English summary
Apple Watch users have saved their lives due to their pulse rate information.The watch has constantly informed about the increase in pulse rate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+