ಆಪಲ್‌ WWDC 2021: ಆಕರ್ಷಕ ಫೀಚರ್ಸ್‌ಗಳೊಂದಿಗೆ ಐಓಎಸ್‌ 15 ಅನಾವರಣ!

|

ಆಪಲ್ ಕಂಪನಿಯ ವಾರ್ಷಿಕ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2021 ಇಂದು ಚಾಲನೆ ಆಗಿದೆ. ಕೊರೊನಾ ಸಾಂಕ್ರಾಮಿಕ ವೈರಸ್‌ ಕಾರಣದಿಂದಾಗಿ ಈ ಬಾರಿಯು ಆಪಲ್ ಸಂಸ್ಥೆಯ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) ಆನ್‌ಲೈನ್‌ ಮೂಲಕವೇ ಅಧಿಕೃತವಾಗಿ ಪ್ರಾರಂಭವಾಗಿದೆ.

ಆಪಲ್‌ WWDC 2021: ಆಕರ್ಷಕ ಫೀಚರ್ಸ್‌ಗಳೊಂದಿಗೆ ಐಓಎಸ್‌ 15 ಅನಾವರಣ!

ಆಪಲ್ ತನ್ನ ಪ್ರಸಕ್ತ ಸಾಲಿನ ವಾರ್ಷಿಕ ಡೆವಲಪರ್ ಸಮ್ಮೇಳನವನ್ನು(WWDC) 2021 ಅನ್ನು ಇಂದು ಆನ್‌ಲೈನ್‌ನಲ್ಲಿ ಆರಂಭಿಸಿದೆ. ಈ ಸಮ್ಮೇಳನದಲ್ಲಿ ಬಹುನಿರೀಕ್ಷಿತ ಆಪಲ್ ಐಓಎಸ್ 15 ಓಎಸ್‌ನೊಂದಿಗೆ ಅನಾವರಣ ಆಗಿದ್ದು, ಈ ಓಎಸ್‌ ಈ ಹಿಂದಿನ ಓಎಸ್‌ಗಳಿಗಿಂತ ಸಾಕಷ್ಟು ಅಪ್‌ಡೇಟ್ ಫೀಚರ್ಸ್‌ಗಳನ್ನು ಪಡೆದಿದೆ. ಮುಖ್ಯವಾಗಿ ಫೇಸ್‌ಟೈಮ್, ಮೆಸೆಜ್‌ಗಳು, ಫೋಟೋಗಳು, ವ್ಯಾಲೆಟ್, ಹವಾಮಾನ ಮತ್ತು ನಕ್ಷೆಗಳ ಅಪ್ಲಿಕೇಶನ್‌ಗೆ ಹೊಸ ಫೀಚರ್ಸ್‌ ಪರಿಷ್ಕರಣೆ ಆಗಿದೆ.

ಆಪಲ್‌ WWDC 2021: ಆಕರ್ಷಕ ಫೀಚರ್ಸ್‌ಗಳೊಂದಿಗೆ ಐಓಎಸ್‌ 15 ಅನಾವರಣ!

ಆಪಲ್ ಐಓಎಸ್‌ 15 ಅನಾವರಣ
ಐಒಎಸ್ 15 ಅಪ್‌ಡೇಟ್‌ನಲ್ಲಿ ಆಪಲ್ ಫೇಸ್‌ಟೈಮ್ ಅಪ್ಲಿಕೇಶನ್ ಹಲವಾರು ಹೊಸ ಫೀಚರ್ಸ್‌ಗಳನ್ನು ಪಡೆಯುತ್ತದೆ. ಮೊದಲನೆಯದಾಗಿ, ಫೇಸ್‌ಟೈಮ್ ಈಗ ಪ್ರಾದೇಶಿಕ ಆಡಿಯೊವನ್ನು ಪಡೆಯುತ್ತದೆ ಅದು ಕರೆ ಮಾಡುವವರ ಧ್ವನಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಫೇಸ್‌ಟೈಮ್ ಧ್ವನಿ ಪ್ರತ್ಯೇಕತೆಯನ್ನು ಪಡೆಯುತ್ತದೆ. ಅದು ಸುತ್ತುವರಿದ ಶಬ್ದವನ್ನು ನಿರ್ಬಂಧಿಸುತ್ತದೆ. ಗ್ರಿಡ್ ವೀಕ್ಷಣೆ, ಭಾವಚಿತ್ರ ಮೋಡ್, ಫೇಸ್‌ಟೈಮ್ ಕರೆಗಾಗಿ ಲಿಂಕ್‌ಗಳನ್ನು ರಚಿಸುವ ಸಾಮರ್ಥ್ಯ, ವಿಂಡೋಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಈ ಲಿಂಕ್‌ಗಳೊಂದಿಗೆ ಕರೆ ಮಾಡಲು ಅನುವು ಮಾಡಿಕೊಡುತ್ತದೆ.

ಆಪಲ್ ಐಫೋನ್‌ನಲ್ಲಿ ಫೋಟೋಗಳ ಅಪ್ಲಿಕೇಶನ್ ಅನ್ನು ಅಪ್‌ಗ್ರೇಡ್ ಮಾಡಿದೆ. ಐಒಎಸ್ 15 ಈಗ ಲೈವ್ ಟೆಕ್ಸ್ಟ್ ಫೀಚರ್‌ ಅನ್ನು ಪರಿಚಯಿಸಲಿದೆ. ಇದು ಗೂಗಲ್ ಲೆನ್ಸ್‌ನಂತೆಯೇ ಇರುತ್ತದೆ. ಆಪಲ್ ಲೈವ್ ಟೆಕ್ಸ್ಟ್‌ ನಿಮ್ಮ ಫೋಟೋಗಳು, ಸ್ಕ್ರೀನ್‌ಶಾಟ್‌ಗಳಲ್ಲಿ ಟೆಕ್ಸ್ಟ್‌, ಸಂಖ್ಯೆಗಳು ಮತ್ತು ಸ್ಥಳವನ್ನು ಗುರುತಿಸುತ್ತದೆ. ಲೈವ್ ಟೆಕ್ಸ್ಟ್‌ ಇದೀಗ ಏಳು ಭಾಷೆಗಳಲ್ಲಿ ಮಾಹಿತಿಯನ್ನು ಹುಡುಕಬಹುದು. ಫೋಟೋಗಳ ಅಪ್ಲಿಕೇಶನ್ ಆಪಲ್ ಮ್ಯೂಸಿಕ್‌ನ ಬೆಂಬಲದೊಂದಿಗೆ ಸ್ಪಾಟ್‌ಲೈಟ್ ಮತ್ತು ಮೆಮೊರೀಸ್ ಫೀಚರ್ಸ್‌ಗಳಿಗೆ ಅಪ್‌ಗ್ರೇಡ್ ಪಡೆಯುತ್ತದೆ.

ಆಪಲ್‌ WWDC 2021: ಆಕರ್ಷಕ ಫೀಚರ್ಸ್‌ಗಳೊಂದಿಗೆ ಐಓಎಸ್‌ 15 ಅನಾವರಣ!

ಐಓಎಸ್‌ 15 ಅಪ್‌ಡೇಟ್ ಪಡೆದ ಐಫೋನ್‌ಗಳು
* ಐಫೋನ್ 12 ಮಿನಿ
* ಐಫೋನ್ 12
* ಐಫೋನ್ 12 ಪ್ರೊ
* ಐಫೋನ್ 12 ಪ್ರೊ ಮ್ಯಾಕ್ಸ್
* ಐಫೋನ್ 11
* ಐಫೋನ್ 11 ಪ್ರೊ
* ಐಫೋನ್ 11 ಪ್ರೊ ಮ್ಯಾಕ್ಸ್
* ಐಫೋನ್ ಎಕ್ಸ್‌ಎಸ್
* ಆಪಲ್ ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್
* ಐಫೋನ್ ಎಕ್ಸ್‌ಆರ್
* ಐಫೋನ್ ಎಕ್ಸ್
* ಐಫೋನ್ 8
* ಐಫೋನ್ 8 ಪ್ಲಸ್
* ಐಫೋನ್ 7
* ಐಫೋನ್ 7 ಪ್ಲಸ್

Best Mobiles in India

Read more about:
English summary
Apple WWDC 2021: Apple Announces iOS 15, Brings Updates to Apple Maps, Face Time and More.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X