Apple WWDC 2024 ಹೈಲೈಟ್ಸ್; ಆಪಲ್‌ನ ಹೊಸ ಫೀಚರ್ಸ್ ಬಗ್ಗೆ ತಿಳಿದ್ರೆ, ಅಚ್ಚರಿ ಪಡ್ತೀರಾ!
ಟೆಕ್ ದಿಗ್ಗಜ ಆಪಲ್ (Apple) ಸಂಸ್ಥೆಯು ತನ್ನ ವಾರ್ಷಿಕ ವರ್ಲ್ಡ್‌ವೈಡ್ ಡೆವಲಪರ್‌ಗಳ ಸಮ್ಮೇಳನ (WWDC - Worldwide Developers Conference - 2024) ಕಾರ್ಯಕ್ರಮದಲ್ಲಿ ಸಾಕಷ್ಟು ಅಪ್‌ಡೇಟ್‌ಗಳನ್ನು ಘೋಷಿಸಿದ್ದು, ಈ ಮೂಲಕ ಆಪಲ್ ಪ್ರಿಯ ಗ್ರಾಹಕರಿಗೆ ಭರ್ಜರಿಯಾಗಿಯೇ ಖುಷಿ ನೀಡಿದೆ. ಈ ಬಹುನಿರೀಕ್ಷಿತ ಕಾರ್ಯಕ್ರಮದಲ್ಲಿ ಆಪಲ್ ಸಂಸ್ಥೆಯು ಆಪಲ್ ಇಂಟೆಲಿಜೆನ್ಸ್ (AI) ಕೃತಕ ಬುದ್ಧಿಮತ್ತೆ ಫೀಚರ್ಸ್‌ಗಳನ್ನು ತನ್ನ ಐಫೋನ್, ಮ್ಯಾಕ್, ಐಪಾಡ್, ಆಪಲ್ ಟಿವಿ ಹಾಗೂ ಆಪಲ್ ವಾಚ್ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿದೆ.
ಹೌದು, ಬಹುನಿರೀಕ್ಷಿತ ವಾರ್ಷಿಕ ವರ್ಲ್ಡ್‌ವೈಡ್ ಡೆವಲಪರ್‌ಗಳ ಸಮ್ಮೇಳನ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಆಪಲ್ ತನ್ನ ಸಾಫ್ಟ್‌ವೇರ್ ಅಪ್‌ಡೇಟ್ ಘೋಷಿಸಿದೆ. AI ಸೇರ್ಪಡೆ ಜೊತೆಗೆ ಹಲವು ಹೊಸತನಗಳ ಆಯ್ಕೆ ಪರಿಚಯಿಸಿದೆ. ಮುಖ್ಯವಾಗಿ ವಿಷನ್ OS 2, ಐಓಎಸ್ 18 (ios 18) ಪರಿಚಯಿಸಿದ್ದು, ಇದರ ಜೊತೆಗೆ ಏರ್‌ಪಾಡ್ಸ್, ಆಲ್ ಟಿಟಿಗಾಗಿ ಟಿವಿ ಓಎಸ್ (tvOS)ನಲ್ಲಿ ಅಪ್‌ಡೇಟ್ ತಿಳಿಸಿದೆ. ಇತರೆ ಹೈಲೈಟ್ಸ್ ಮಾಹಿತಿ ಇಲ್ಲಿದೆ.

ಆಪಲ್ ಸಂಸ್ಥೆಯು ಆಪಲ್ ವಾಚ್‌ಗಾಗಿ ವಾಚ್ ಓಎಸ್ (watch OS) ಇದರೊಂದಿಗೆ ಟ್ರೈನಿಂಗ್ ಲೋಡ್ ಆಯ್ಕೆ ನೀಡಿದೆ. ಆಪಲ್ ಐಓಎಸ್ 18 ಹೊತ್ತು ತಂದಿದ್ದು, ಸಂಸ್ಥೆಯು ತನ್ನ ಬಳಕೆದಾರರಿಗೆ ಹೋಮ್ ಸ್ಕ್ರೀನ್ ಅನ್ನು ಕಸ್ಟಮೈಸ್ ಮಾಡಲು ಅವಕಾಶ ಮಾಡಿದೆ. ಈ ಆಯ್ಕೆಯು ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯ ಇದ್ದರೂ, ಆಪಲ್ ಬಳಕೆದಾರರಿಗೆ ಈ ಅವಕಾಶ ಇದೇ ಮೊದಲು ಆಗಿದೆ.
ಹಾಗೆಯೇ ಆಪಲ್ ಏರ್‌ಪಾಡ್ಸ್ (AirPods) ಬಳಕೆದಾರರು ತಲೆದೂಗುವ ಮೂಲಕ ಸಿರಿಗೆ ವಾಯಿಸ್ ಆದೇಶ ನೀಡಲು ಹೊಸ ಫೀಚರ್ಸ್ ಲಭ್ಯವಾಗಲಿದೆ. ಅಲ್ಲದೇ ಬಳಕೆದಾರರು ತಮ್ಮ ನಿಯಂತ್ರಣಗಳನ್ನು ಸೆಟ್ ಮಾಡಿಕೊಳ್ಳಬಹುದಾಗಿದ್ದು, ನೂತನ ನಿಯಂತ್ರಣಗಳು ಲಾಕ್ ಸ್ಕ್ರೀನ್‌ನಲ್ಲಿಯೂ ಹಾಗೂ ಗ್ಯಾಲರಿಯಲ್ಲಿ ಕೂಡ ಇದೆ. ಅಲ್ಲದೇ ಆಪಲ್ ಹೊಸ ಫೋಟೋ ಆಪ್ ಅನ್ನು ಸಹ ಪರಿಚಯಿಸಿದೆ.
ಅದೇ ರೀತಿ ಆಪಲ್ ಸಂಸ್ಥೆಯು (mail) ಮೇಲ್ ಆಯ್ಕೆಯಲ್ಲಿಯೂ ಅಪ್‌ಡೇಟ್ ತಿಳಸಿದೆ. ಇ-ಮೇಲ್‌ಗಳನ್ನು ವಿವಿಧ ವರ್ಗಗಳಾಗಿ ವರ್ಗೀಕರಿಸಲಿದ್ದು, ಮೇಲ್‌ಗಳನ್ನು ಆಟೋಮ್ಯಾಟಿಕ್ ಆಗಿ ವರ್ಗೀಕರಿಸಲಾಗಿದ್ದರೂ, ಬಳಕೆದಾರರು ಅವರಿಗೆ ಅನುಗುಣವಾಗಿ ಮತ್ತೆ ವರ್ಗೀಕರಿಸಲು ಸಾಧ್ಯ ಇರುತ್ತದೆ. ಅಂದಹಾಗೆ ಈ ಮೇಲ್ ವರ್ಗೀಕರಣವು ಆಯ್ಕೆಯು ಈ ವರ್ಷದ ಬಳಿಕ ಲಭ್ಯ ಎಂದು ಆಪಲ್ ಹೇಳಿದೆ.
ಆಪಲ್ ವಾಲೆಟ್ ಆಪ್‌ನಲ್ಲಿ ಅಪ್‌ಡೇಟ್ ಮಾಡಿದ್ದು, ಇನ್ನು ವಾಲೆಟ್ ಟ್ಯಾಪ್ ಟು ಕ್ಯಾಶ್ ಆಯ್ಕೆ ಕಾಣಿಸಲಿದೆ. ಈ ಆಯ್ಕೆಯು ಬಳಕೆದಾರರಿಗೆ ಸುಲಭವಾಗಿ ಪಾವತಿ ಪ್ರಕ್ರಿಯೆ ಮಾಡಲು ನೆರವಾಗಲಿದೆ. ಇದರೊಂದಿಗೆ ಆಪಲ್ ಇ-ಮೇಲ್, ಜರ್ನಲ್, ಗೇಮಿಂಗ್ ಸೇರಿದಂತೆ ಇತರೆ ವಿಭಾಗಗಳಲ್ಲಿ ಹೊಸ ಅಪ್‌ಡೇಟ್ ಪರಿಚಯಿಸಿದೆ. ಫೋಟೋಗಳ ಆಪ್‌ನಲ್ಲಿಯೂ ಅಪ್‌ಡೇಟ್ ಮಾಡಿದ್ದು, ಫೋಟೋಗಳ ಗ್ರಿಡ್ ಮತ್ತು ಕೆಳಗಿನ ಸಂಗ್ರಹಣೆಗಳ ಸ್ಥಳದೊಂದಿಗೆ ಮರುವಿನ್ಯಾಸ ಮಾಡಲಾಗಿದೆ.
ಆಪಲ್ ಸಂಸ್ಥೆಯು 'ಸ್ಯಾಟ್‌ಲೈಟ್ ಮೆಸೆಜ್' (Messages via Satellite) ಆಯ್ಕೆಯನ್ನು ಹೊಸದಾಗಿ ಪರಿಚಯಿಸಿದೆ. ಈ ನೂತನ ಆಯ್ಕೆಯು ಆಪಲ್‌ನ ತುರ್ತು SOS ಫೀಚರ್ ನಂತೆಯೇ ಕೆಲಸ ಮಾಡಲಿದೆ. ಬಳಕೆದಾರರಿಗೆ ಯಾವುದೇ ಟೆಲಿಕಾಂ ಸಿಗ್ನಲ್ ಸಿಗದೇ ಇದ್ದ ಸಂದರ್ಭದಲ್ಲಿಯೂ ಸಹ, ಡೇಟಾವನ್ನು ರಿಲೇ ಮಾಡಲು ಸ್ಯಾಟ್‌ಲೈಟ್ ಅನ್ನು ಸರ್ಚ್ ಮಾಡುವ ಆಯ್ಕೆಯನ್ನು ಒದಗಿಸುತ್ತದೆ.
ಹಾಗೆಯೇ ಆಪಲ್ ವಿಷನ್ ಓಎಸ್ 2 (VisionOS 2) ತಿಳಿಸಿದ್ದು, ಇದು ಸಾಮಾನ್ಯ ಫೋಟೋಗಳನ್ನು ಕೂಡಾ ಅದ್ಭುತವಾಗಿ ಕಾಣಿಸಲು ಪೂರಕವಾಗಿ ಕೆಲಸ ಮಾಡುತ್ತದೆ. ಅಲ್ಲದೇ ಸಂಸ್ಥೆಯ ಇತ್ತೀಚಿನ ಓಎಸ್ ಆವೃತ್ತಿಯನ್ನು MacOS Sequoia ಎನ್ನಲಾಗಿದ್ದು, iPhone mirroring -ಐಫೋನ್ ಮೀರರಿಂಗ್ ಪ್ರಮುಖ ಆಯ್ಕೆಯಾಗಿ ಇದೆ. ಆಪಲ್ ಟಿವಿ+ ನಲ್ಲಿ ನೂತನವಾಗಿ InSight ಆಯ್ಕೆ ಸೇರ್ಪಡೆ ಮಾಡಿದೆ.


Click it and Unblock the Notifications








