Home
ಸುದ್ದಿಜಾಲ

ಭರ್ಜರಿ ಸಿಹಿಸುದ್ದಿ ಕೊಟ್ಟ ಸಿದ್ದು ಸರ್ಕಾರ; ಮನೆಯಲ್ಲೇ ಮಾಡಬಹುದು ಮದ್ವೆ ರಿಜಿಸ್ಟರ್!

ಕರ್ನಾಟಕ ಸರ್ಕಾರ (Government of Karnataka) ಇತ್ತೀಚಿಗೆ ರಾಜ್ಯದ ಜನತೆಗೆ ಒಂದಾದ ಮೇಲೊಂದರಂತೆ ಸಿಹಿ ಸುದ್ದಿಗಳನ್ನು ನೀಡಿಕೊಂಡು ಬರುತ್ತಿದೆ. ಈ ನಡುವೆ ಒಂದು ಮಹತ್ವದ ಕೆಲಸಕ್ಕೆ ಕೈ ಹಾಕಿದ್ದು ಅದರಂತೆ ಕಚೇರಿಗಳಿಗೆ ಅಲೆದಾಡದೆ ಇರುವಲ್ಲಿಯೇ ಆನ್‌ಲೈನ್‌(Online) ಮೂಲಕ ವಿವಾಹ ನೋಂದಣಿ(Marriage registration) ಮಾಡಿಕೊಳ್ಳಬಹುದಾಗಿದೆ.

ಹೌದು, ಹಿಂದೂ ವಿವಾಹ ನೋಂದಣಿ ಕಾಯ್ದೆಯಡಿ (Hindu Marriage Registration Act) ವಿವಾಹ ನೋಂದಣಿ ಮಾಡಿಸಿಕೊಳ್ಳಲು ಈ ವರೆಗೂ ನವವಿವಾಹಿತರು ಭಾರೀ ತೊಂದರೆ ಅನುಭವಿಸುತ್ತಿದ್ದರು. ಅದರಲ್ಲೂ ಏಜೆಂಟ್‌ಗಳಿಗೆ ಹೆಚ್ಚಿನ ಹಣ ನೀಡುವ ಅನಿವಾರ್ಯತೆ ಎದುರಾಗಿತ್ತು. ಆದರೆ, ಇನ್ಮುಂದೆ ಈ ಸಂಕಷ್ಟದಿಂದ ವಿವಾಹಿತರು ಪಾರಾಗಲಿದ್ದಾರೆ. ಯಾಕೆಂದರೆ ಇರುವ ಜಾಗದಿಂದಲೇ ಆನ್‌ಲೈನ್‌ನಲ್ಲಿ ವಿವಾಹ ನೋಂದಣಿ ಮಾಡಿಕೊಳ್ಳಬಹುದು. ಹಾಗಿದ್ರೆ, ಈ ಪ್ರಕ್ರಿಯೆ ಹೇಗೆ ನಡೆಯಲಿದೆ?, ಇದರಿಂದ ಲಾಭ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಸಿಹಿಸುದ್ದಿ ಕೊಟ್ಟ ಸಿದ್ದು ಸರ್ಕಾರ; ಮನೆಯಲ್ಲೇ ಮಾಡಬಹುದು ಮದ್ವೆ ರಿಜಿಸ್ಟರ್...

ಕರ್ನಾಟಕದ ಬಹುಪಾಲು ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯ ಇವೆ. ಅದಾಗ್ಯೂ ಕೆಲವು ಅಗತ್ಯ ಸೇವೆಗಳನ್ನು ಕಚೇರಿಗೆ ಹೋಗಿ ಮಾಡಿಸಿಕೊಳ್ಳುವ ಅನಿವಾರ್ಯತೆ ಇತ್ತು. ಅದರಲ್ಲೂ ವಿವಾಹದ ವಿಷಯಕ್ಕೆ ಬಂದರೆ ಮಾತ್ರ ನವದಂಪತಿಗಳು ನೋಂದಣಿ ಮಾಡಿಸಿಕೊಳ್ಳಲು ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಅಲೆದು ಅಲೆದು ಸುಸ್ತಾಗುತ್ತಿದ್ದರು. ಅಷ್ಟು ಮಾತ್ರವಲ್ಲದೆ ಏಜೆಂಟ್‌ಗಳ ಕಾಟ ಬೇರೆ. ಆದರೆ, ಇದೆಲ್ಲಕ್ಕೂ ಮುಕ್ತಿಯಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಅಂದರೆ ಇನ್ಮುಂದೆ ಆನ್‌ಲೈನ್‌ ಮೂಲಕವೇ ಸುಲಭವಾಗಿ ಈ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಹಾಗೂ ನೋಂದಣಿ ಪತ್ರವನ್ನು ಆನ್‌ಲೈನ್‌ನಲ್ಲಿಯೇ ಪಡೆದುಕೊಳ್ಳಬಹುದು. ಇದರಿಂದಾಗಿ ನೋಂದಣಿ ಕಚೇರಿಯಲ್ಲಿ ಕ್ಯೂ ನಿಲ್ಲುವ ಅಥವಾ ಕೇಳಿದ್ದಷ್ಟು ಲಂಚ ನೀಡಿ ಪ್ರಮಾಣ ಪತ್ರ ಪಡೆಯುವ ತಾಪತ್ರಯ ಇರುವುದಿಲ್ಲ. ಅಷ್ಟಕ್ಕೂ ಈ ನಿರ್ಧಾರ ಯಾಕೆ ಮಾಡಲಾಗಿದೆ ಗೊತ್ತಾ?.

ರಾಜ್ಯದಲ್ಲಿ ಅದೆಷ್ಟೋ ವಿವಾಹಗಳು ಜರುಗುತ್ತವೆ. ಆದರೆ ಎಲ್ಲರೂ ಸಹ ವಿವಾಹ ನೋಂದಣಿ ಮಾಡಿಸಿಕೊಳ್ಳುವ ಆಲೋಚನೆ ಮಾಡುವುದಿಲ್ಲ. ಕಾರಣ ಕಚೇರಿಗಳಿಗೆ ಅಲೆದಾಟ. ಅದರಲ್ಲೂ ವಿವಾಹ ಪ್ರಮಾಣಕ್ಕೆ ಹೋಲಿಸಿದರೆ ಈವರೆಗೂ ವಿವಾಹ ನೋಂದಣಿ ಕೇವಲ 1% ಅಷ್ಟೇ ಆಗುತ್ತಿದೆಯಂತೆ. ಇದರಿಂದಾಗಿಯೇ ವಿವಾಹ ನೋಂದಣಿ ಕಾರ್ಯ ಸುಲಭವಾಗಲಿ ಹಾಗೂ ಎಲ್ಲರೂ ಈ ಪ್ರಮಾಣ ಪತ್ರ ಪಡೆದುಕೊಳ್ಳಲು ಎಂದು ಕಾವೇರಿ-2 ತಂತ್ರಾಂಶದಲ್ಲೇ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

ಈ ಮೊದಲು ನೋಂದಣಿಗೆ ಏನೆಲ್ಲಾ ಮಾಡಬೇಕಿತ್ತು?: ಈ ಮೊದಲು ಸಹ ಆನ್‌ಲೈನ್‌ನಲ್ಲಿ ಎಲ್ಲಾ ಪ್ರಕ್ರಿಯೆ ನಡೆಯುತ್ತದ್ದರೂ ಸಹ ಖುದ್ದಾಗಿ ವಿವಾಹಿತರು ಸಾಕ್ಷಿಗಳು ಅಲ್ಲಿ ಹಾಜರಿರಬೇಕಿತ್ತು. ಜೊತೆಗೆ ವಧು-ವರ ಫೋಟೋಗಳ ದ್ವಿಪ್ರತಿ, ಸೇರಿದಂತೆ ಅನೇಕ ಅಗತ್ಯ ದಾಖಲೆಗಳನ್ನು ಆ ವೇಳೆ ಹಾಜರು ಪಡಿಸಬೇಕಿತ್ತು. ಆದರೆ, ಈ ಕೆಲಸ ಈಗ ಸರಳವಾಗಿದೆ. ಆನ್‌ಲೈನ್‌ನಲ್ಲಿ ಲಗ್ನಪತ್ರಿಕೆ, ಸಾಕ್ಷಿದಾರರ ವಿವರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ವಧು-ವರ ಹಾಗೂ ಮೂವರು ಸಾಕ್ಷಿದಾರರ ಆಧಾರ್‌(Aadhaar) ಸಂಖ್ಯೆ ಮಾತ್ರ ಅಗತ್ಯ ಇದೆ.

ಆನ್‌ಲೈನ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಅದು ಪರಿಶೀಲನೆಗೆ ಒಳಪಡುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ವೆಬ್‌ಸೈಟ್‌ನಿಂದ ಪ್ರಮಾಣ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ ಎಂದು ಇಲಾಖೆ ಮೂಲಗಳಿಂದ ತಿಳಿದುಬಂದಿದೆ. ಇದನ್ನು 'ಕಾವೇರಿ-2' (https://kaveri.karnataka.gov.in/)ತಂತ್ರಾಂಶದಲ್ಲೇ ಮಾಡಬಹುದಾಗಿದೆ. ಇನ್ನು ಆಧಾರ್‌ ಸಂಖ್ಯೆ ನೀಡಲು ಬಯಸದವರಿಗೆ ಈಗಿನ ವ್ಯವಸ್ಥೆಯಲ್ಲೇ ಪ್ರಮಾಣಪತ್ರ ಪಡೆಯುವ ಅವಕಾಶ ಸಹ ಇರಲಿದೆ.

ಸಿಹಿಸುದ್ದಿ ಕೊಟ್ಟ ಸಿದ್ದು ಸರ್ಕಾರ; ಮನೆಯಲ್ಲೇ ಮಾಡಬಹುದು ಮದ್ವೆ ರಿಜಿಸ್ಟರ್...

ಈ ವಿವಾಹ ನೋಂದಣಿ ಅಗತ್ಯವೇ?: ಖಂಡಿತಾ ಅಗತ್ಯ. ಇದು ಹಲವಾರು ಸರ್ಕಾರಿ ಪ್ರಯೋಜನಗಳನ್ನು ಪಡೆದುಕೊಳ್ಳಲು. ಹಾಗೂ ಸಮಾಜದಲ್ಲಿ ಆಗುತ್ತಿರುವ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ನೀಡಲು, ಜೊತೆಗೆ ವಿದೇಶ ಪ್ರಯಾಣ ಮಾಡುವಾಗ ಈ ದಾಖಲೆಗಳು ಅಗತ್ಯವಾಗಿವೆ. ಇದರೊಂದಿಗೆ ಈ ದಾಖಲೆ ಇನ್ನೂ ಹಲವಾರು ರೀತಿಯಲ್ಲಿ ಅನುಕೂಲ ಒದಗಿಸಲಿದ್ದು, ಹೊಸದಾಗಿ ಮದುವೆ ಆದವರು ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಒಳಿತಾಗಲಿದೆ.

Best Mobiles in India

English summary
Newlyweds used to ace great difficulty in getting their marriage registered under the Hindu Marriage Registration Act. But henceforth application can be submitted online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+