ನಿಮ್ಮ ಸ್ಮಾರ್ಟ್‌ಫೋನ್‌ಗೆ ಮಾರಕವಾಗಿರುವ ಅಪ್ಲಿಕೇಶನ್‌ಗಳು

By Shwetha
|

ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬಾಳಿಕೆ ಸಮಸ್ಯೆಯು ಹೆಚ್ಚಿನ ಬಳಕೆದಾರರಿಗೆ ತಲೆನೋವಿನ ಸಂಗತಿ ಎಂದೆನಿಸಿದೆ. ಫೋನ್‌ನ ರಚನೆ ಮತ್ತು ವಿಶೇಷತೆಗಳನ್ನು ಸ್ಮಾರ್ಟ್‌ಫೋನ್ ಬ್ಯಾಟರಿಯು ಅವಲಂಬಿಸಿದ್ದು ನಮ್ಮ ಬಳಕೆಯನ್ನು ಆಧರಿಸಿದೆ. ದಾಖಲೆಗಳನ್ನು ಎಡಿಟ್ ಮಾಡಲು, ಮ್ಯೂಸಿಕ್ ಅಥವಾ ವೀಡಿಯೊಗಳನ್ನು ಪ್ಲೇ ಮಾಡಲು, ಗೇಮ್ಸ್ ಆಡಲು, ಅಪ್ಲಿಕೇಶನ್‌ಗಳೊಂದಿಗೆ ಸಂಪರ್ಕವನ್ನು ಪಡೆದುಕೊಂಡಿರಲು ಹೀಗೆ ಹಲವಾರು ಬಗೆಯಲ್ಲಿ ಇಂಟರ್ನೆಟ್ ಖರ್ಚಾಗುತ್ತದೆ.

ಓದಿರಿ: ಅತಿ ಕಡಿಮೆ ಬೆಲೆಯಲ್ಲಿ ಐಫೋನ್ 7 ಲಭ್ಯ!!!

ಹಾಗಿದ್ದರೆ ನಿಮ್ಮ ಫೋನ್‌ನ ಬ್ಯಾಟರಿ ಬಾಳ್ವಿಕೆಗೆ ಮಾರಕವಾಗಿರುವ ಅಪ್ಲಿಕೇಶನ್‌ಗಳ ವಿವರಗಳನ್ನು ಇಂದಿಲ್ಲಿ ನೀಡುತ್ತಿದ್ದು ನೀವು ಇದನ್ನು ಗಮನಿಸಿಕೊಳ್ಳಬಹುದಾಗಿದೆ.

ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳು

ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳು

ಬ್ಯಾಟರಿ ಸೇವರ್ ಅಥವಾ RAM ಕ್ಲೀನಿಂಗ್ ಅಪ್ಲಿಕೇಶನ್‌ಗಳು ಹಿನ್ನಲೆಯಲ್ಲಿ ಮೌನವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ಇದು ಫೋನ್ ಅನ್ನು ಸ್ಕ್ಯಾನ್ ಮಾಡುತ್ತಿರುತ್ತದೆ ಇದು ನಿಮಗೆ ಸೂಚನೆಯನ್ನು ನೀಡದೆಯೇ ಫೋನ್ ಶಟ್‌ ಡೌನ್ ಮಾಡಬಹುದು.

ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು

ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು

ಹೆಚ್ಚು ಜನಪ್ರಿಯ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಆದ ಫೇಸ್‌ಬುಕ್, ಹೆಚ್ಚು ಬ್ಯಾಟರಿ ಡ್ರೈನಿಂಗ್ ಅಪ್ಲಿಕೇಶನ್ ಎಂದೇ ಪರಿಚಯಿತವಾಗಿದೆ. ಇದು ಹಿನ್ನಲೆಯಲ್ಲಿ ರನ್ ಆಗುತ್ತಿರುತ್ತದೆ ಮತ್ತು ಅಧಿಸೂಚನೆಗಳನ್ನು ಕಳುಹಿಸುತ್ತಿರುತ್ತದೆ. ಇದರ ಮೆಸೆಂಜರ್ ಅಪ್ಲಿಕೇಶನ್ ಕೂಡ ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ಖರ್ಚು ಮಾಡಬಹುದು.

ಆಂಟಿ ವೈರಸ್ ಅಪ್ಲಿಕೇಶನ್‌ಗಳು

ಆಂಟಿ ವೈರಸ್ ಅಪ್ಲಿಕೇಶನ್‌ಗಳು

ಆಂಟಿ ವೈರಸ್ ಅಪ್ಲಿಕೇಶನ್ ಅಂದರೆ ಬ್ಯಾಟರಿ ಸೇವರ್ ಮತ್ತು RAM ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್‌ಗಳು ಕೂಡ ಹಿನ್ನಲೆಯಲ್ಲಿ ಚಾಲನೆಯಾಗುತ್ತಿರುತ್ತವೆ ಮತ್ತು ಫೋನ್ ಸ್ಕ್ಯಾನ್ ಮಾಡುವುದರ ಮೂಲಕ ಫೋನ್‌ನ ಅಪಾಯಗಳನ್ನು ನಿವಾರಿಸುತ್ತದೆ. ಹೆಚ್ಚಿನ ಸಂಖ್ಯೆಯ ಅಪ್ಲಿಕೇಶನ್‌ಗಳು ಫೋನ್ ಸ್ಕ್ಯಾನ್ ಮಾಡುವುದರ ಜೊತೆಗೆ ಬ್ಯಾಟರಿಯನ್ನು ಡ್ರೈನ್ ಮಾಡುತ್ತದೆ.

ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳು

ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳು

ನಿಮಗೆ ಫೋಟೋಗ್ರಫಿ ಹೆಚ್ಚು ಇಷ್ಟ ಎಂದಾದಲ್ಲಿ ಚಿತ್ರಗಳನ್ನು ತೆಗೆಯಿರಿ, ಅವುಗಳನ್ನು ಎಡಿಟ್ ಮಾಡಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೀರಿ. ಆದರೆ ಇಂತಹ ಅಪ್ಲಿಕೇಶನ್‌ಗಳು ಗಾತ್ರದಲ್ಲಿ ಹೆಚ್ಚು ತೂಕದ್ದಾಗಿದ್ದು ಹೆಚ್ಚಿನ ಪ್ರೊಸೆಸಿಂಗ್ ಪವರ್ ಅನ್ನು ಬಳಸಿಕೊಳ್ಳುತ್ತವೆ.

ಇಂಟರ್ನೆಟ್ ಬ್ರೌಸರ್ ಅಪ್ಲಿಕೇಶನ್‌ಗಳು

ಇಂಟರ್ನೆಟ್ ಬ್ರೌಸರ್ ಅಪ್ಲಿಕೇಶನ್‌ಗಳು

ನಿಮ್ಮ ಫೋನ್‌ನಲ್ಲಿ ಡೀಫಾಲ್ಟ್ ಬ್ರೌಸರ್ ಅಪ್ಲಿಕೇಶನ್‌ನಂತೆ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಬ್ರೌಸರ್ ಅಪ್ಲಿಕೇಶನ್‌ಗಳನ್ನು ಸ್ಮಾರ್ಟ್‌ಫೋನ್‌ನಿಂದ ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

ಗೇಮಿಂಗ್ ಅಪ್ಲಿಕೇಶನ್‌ಗಳು

ಗೇಮಿಂಗ್ ಅಪ್ಲಿಕೇಶನ್‌ಗಳು

ಈ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಕೊಂಚ ಕಷ್ಟವಾಗಿದ್ದರೂ, ಗೇಮಿಂಗ್ ಅಪ್ಲಿಕೇಶನ್‌ಗಳು ಹೆಚ್ಚುವರಿ ಬ್ಯಾಟರಿಯನ್ನು ಬಳಸಿಕೊಳ್ಳುತ್ತವೆ. ಇನ್ನು ಅನ್‌ಇನ್‌ಸ್ಟಾಲ್ ಮಾಡುವುದು ನಿಮಗೆ ಬೇಡ ಎಂದಾದಲ್ಲಿ, ಅವುಗಳನ್ನು ಫೋರ್ಸ್ ಮಾಡಿ ನಿಲ್ಲಿಸಬಹುದಾಗಿದೆ. ಅದನ್ನು ಸ್ಪರ್ಶಿಸುವುದು ಅಪ್ಲಿಕೇಶನ್ ಅನ್ನು ಆಕ್ಟಿವೇಟ್ ಮಾಡುತ್ತದೆ.

Best Mobiles in India

English summary
In this article we can see Apps that are worst for your smartphone.Below is a list of apps you should uninstall right away if you want to boost your smartphone’s battery life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X