ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್ ಹೊಂದಿರುವವರೇ. ಆದರೆ ಫೋನ್ ಅನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬುದರ ಅರಿವು ನಮಗಿಲ್ಲ. ನಮಗೆ ತೋಚಿದಂತೆ ನಾವು ನಮ್ಮ ಫೋನ್ ಅನ್ನು ಬಳಸಿಕೊಳ್ಳುತ್ತೇವೆ. ಅದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ಮನವರಿಕೆ ಮಾಡಿಕೊಡಲಿದ್ದು ಫೋನ್ ಅನ್ನು ಬಳಸುವ ಸರಿಯಾದ ವಿಧಾನ ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.
ಓದಿರಿ: ವಿಶ್ವ ಅಂತ್ಯವಾದಾಗ ಹೀಗೆಲ್ಲಾ ಸಂಭವಿಸುತ್ತದಂತೆ!
ಇಂದಿನ ಲೇಖನ ಫೋನ್ ಬಳಸುವ ಉತ್ತಮ ಮಾರ್ಗದರ್ಶಿ ಎಂದೂ ಕೂಡ ಪರಿಗಣಿಸಲಾಗಿದ್ದು ನೀವು ಮಾಡುವ ಕೆಲವೊಂದು ತಪ್ಪುಗಳನ್ನು ಇದು ಎತ್ತಿ ತೋರಿಸುತ್ತದೆ. ಬನ್ನಿ ಅದು ಏನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

#1
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ನಿಮ್ಮ ಫೋನ್ ಬಳಸಿ ಚಾಟ್ ಮಾಡುವುದು ಅಂತೆಯೇ ಕರೆಗಳನ್ನು ಮಾಡುವುದು ನಿಮಗಿಷ್ಟ ಇಲ್ಲ ಎಂದಾದಲ್ಲಿ ನಿಮ್ಮ ಫೋನ್‌ಗೆ ಪಾಸ್‌ವರ್ಡ್ ಅಥವಾ ಪ್ಯಾಟ್ರನ್ ಹಾಕಿರಿ. ಕ್ಲಿಷ್ಟಕರವಾದ ಪಾಸ್‌ವರ್ಡ್‌ಗಳನ್ನು ಫೋನ್‌ನಲ್ಲಿ ಅಳವಡಿಸುವುದರಿಂದ ಅವರಿಗೆ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಾಗಬಹುದು.

#2
ಉಚಿತ ವೈಫೈ ಉಚಿತ ತೊಂದರೆಯನ್ನು ಒದಗಿಸುತ್ತದೆ. ಸಾರ್ವಜನಿಕ ವೈಫೈ ನೆಟ್‌ವರ್ಕ್‌ಗಳು ದುರ್ಬಲವಾಗಿದ್ದು ಈ ಸಂಪರ್ಕಗಳನ್ನು ಬಳಸಿಕೊಂಡು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಅವರುಗಳು ಪ್ರವೇಶಿಸಬಹುದು ಆದ್ದರಿಂದ ವೈಫೈ ನೆಟ್‌ವರ್ಕ್‌ಗಳನ್ನು ಪಾಸ್‌ವರ್ಡ್ ಸಂರಕ್ಷಿತಗೊಳಿಸಿ. ಸಾರ್ವಜನಿಕ ವೈಫೈ ಬಳಸಲೇಬೇಕು ಎಂದಾದಲ್ಲಿ ವಿಪಿಎನ್ ಮೂಲಕ ಸಂಪರ್ಕ ಪಡೆದುಕೊಳ್ಳಿ. ಇದರಿಂದ ಸಾರ್ವಜನಿಕ ನೆಟ್‌ವರ್ಕ್‌ಗಳನ್ನು ನಿಮಗೆ ಸುಭದ್ರವಾಗಿ ಪ್ರವೇಶಿಸಬಹುದಾಗಿದೆ.

#3
ಟಾಯ್ಲೆಟ್ ಸೀಟ್‌ಗಿಂತಲೂ ಅಧಿಕ ಕೀಟಾಣುಗಳು ನಿಮ್ಮ ಫೋನ್‌ನಲ್ಲಿರುತ್ತವೆ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ. ಆದ್ದರಿಂದ ನಿಮ್ಮ ಫೋನ್ ಅನ್ನು ಆಂಟಿ ಬ್ಯಾಕ್ಟೀರಿಯಲ್ ಸಲ್ಯೂಶನ್ ಬಳಸಿ ಸ್ವಚ್ಛಮಾಡಿ. ವಾರಕ್ಕೊಮ್ಮೆಯಾದರೂ ಹೀಗೆ ಮಾಡಿ. ಸ್ವಲ್ಪ ಆಂಟಿ ಬ್ಯಾಕ್ಟೀರಿಯಲ್ ದ್ರಾವಣವನ್ನು ತೆಗೆದುಕೊಂಡು ಕಾಟನ್ ಬಟ್ಟೆ ಬಳಸಿ ಸ್ಕ್ರೀನ್ ಅನ್ನು ಒರೆಸಿ.

#4
ರಾತ್ರಿ ಪೂರ್ತಿ ಫೋನ್ ಅನ್ನು ಚಾರ್ಜ್ ಮಾಡುವುದು ನಿಮ್ಮ ಸ್ಮಾರ್ಟ್‌ಫೋನ್‌ಗೆ ಹಾನಿಯನ್ನುಂಟು ಮಾಡುತ್ತದೆ. ಎಲ್ಲಾ ಸಮಯವು ಬ್ಯಾಟರಿಯನ್ನು 100%ವಾಗಿರಿಸುವಂತೆ ಇಲೆಕ್ಟ್ರಿಸಿಟಿ ಹರಿವು ಮಾಡುವುದರಿಂದ ದೀರ್ಘ ಅವಧಿಯಲ್ಲಿ ನಿಮ್ಮ ಬ್ಯಾಟರಿಗೆ ಇದು ಹಾನಿಯನ್ನುಂಟು ಮಾಡುತ್ತದೆ.

#5
ಸ್ಮಾರ್ಟ್‌ಫೋನ್ ಒಂದು ಸಣ್ಣ ಕಂಪ್ಯೂಟರ್ ಎಂದೆನಿಸಿದ್ದು ಕಂಪ್ಯೂಟರ್‌ಗೆ ಹೇಗೆ ಆಂಟಿವೈರಸ್ ಬೇಕೋ ಅಂತೆಯೇ ಫೋನ್‌ಗೂ ಇದು ಅತ್ಯವಶ್ಯಕವಾಗಿದೆ. ಆಂಟಿ ವೈರಸ್ ಅಪ್ಲಿಕೇಶನ್ ನಿಮ್ಮ ಫೋನ್ ಅನ್ನು ಮಾಲ್‌ವೇರ್ ಮತ್ತು ವೈರಸ್‌ನಿಂದ ಸಂರಕ್ಷಿಸಿ ಫೋನ್ ಅನ್ನು ಸುರಕ್ಷಿತವಾಗಿರಿಸುತ್ತದೆ.

#6
ಆಂಟಿ ಥೆಪ್ಟ್ ಅಪ್ಲಿಕೇಶನ್ ತಪ್ಪಾದ ವ್ಯಕ್ತಿಗಳ ಕೈಗೆ ಸಿಗದ ಹಾಗೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಅಳಿಸಿ ಹಾಕುತ್ತದೆ. ನಿಮ್ಮ ಫೋನ್ ಅನ್ನು ಇದು ಲೊಕೇಟ್ ಮಾಡುತ್ತದೆ.ಸರ್ಬಾರಸ್, ಫೈಂಡ್ ಮೈ ಫೋನ್ ಮತ್ತು ಪ್ರಿ ಆಂಟಿ ಥೆಪ್ಟ್ ಅಪ್ಲಿಕೇಶನ್‌ಗಳಿದ್ದು ಇವುಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ.

#7
ನಿಮ್ಮ ಫೋನ್‌ನ ಬ್ಯಾಟರಿ ಲೈಫ್, ಇಂಟರ್ಫೇಸ್ ಮೊದಲಾದ ಅಂಶಗಳನ್ನು ಸಾಫ್ಟ್‌ವೇರ್ ಮೂಲತಃ ಸುಧಾರಿಸುತ್ತದೆ. ಈ ಅಪ್‌ಡೇಟ್‌ಗಳ ನೆರವಿನಿಂದ ಭದ್ರತಾ ದೋಷಗಳನ್ನು ನಿಮಗೆ ಸರಿಪಡಿಸಿಕೊಳ್ಳಬಹುದು. ನಿಮ್ಮ ಫೋನ್ ಅನ್ನು ಸುಧಾರಣೀಯ ಮಟ್ಟದಲ್ಲಿ ಕೊಂಡೊಯ್ಯಲು ಸಾಫ್ಟ್‌ವೇರ್ ಅಪ್‌ಡೇಟ್ ಅತಿಮುಖ್ಯವಾದುದು.

#8
ಇತರ ಬಳಕೆದಾರರು ಉತ್ತಮ ಪ್ರತಿಕ್ರಿಯೆ ಮತ್ತು ರಾಕಿಂಗ್ ಅನ್ನು ನೀವು ಇನ್‌ಸ್ಟಾಲ್ ಮಾಡುತ್ತಿರುವ ಅಪ್ಲಿಕೇಶನ್‌ಗಳಿಗೆ ಬಳಕೆದಾರರು ನೀಡಿದ್ದಾರೆಯೇ ಎಂಬುದನ್ನು ಕಂಡುಕೊಳ್ಳುವುದು ಮುಖ್ಯವಾದುದು. ಕೆಲವೊಂದು ಅಪ್ಲಿಕೇಶನ್‌ಗಳು ಮಾಲ್‌ವೇರ್ ಮತ್ತು ಹ್ಯಾಕರ್‌ಗಳನ್ನು ಒಳಗೊಂಡಿರುವುದರಿಂದ ಇವುಗಳು ನಿಮ್ಮ ಫೋನ್‌ಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ.

#9
ಯಾರಾದರೂ ನಿಮಗೆ ಇಮೇಲ್ ಅಥವಾ ಎಸ್‌ಎಮ್‌ಎಸ್ ಮೂಲಕ ರಾಂಡಮ್ ಲಿಂಕ್ ಕಳುಹಿಸುತ್ತಾರೆ ಎಂದಾದಲ್ಲಿ ಅವುಗಳನ್ನು ಆದಷ್ಟು ಕ್ಲಿಕ್ ಮಾಡದಿರಿ. ಇದು ನಿಮ್ಮ ಫೋನ್‌ಗೆ ಅನಧಿಕೃತ ಪ್ರವೇಶವನ್ನು ನೀಡಬಹುದು. ಕೆಲವೊಬ್ಬರು ಹ್ಯಾಕರ್‌ಗಳು ನಿಮ್ಮ ಸ್ಥಾನ ಮತ್ತು ಇತರ ಸೂಕ್ಷ್ಮ ಮಾಹಿತಿಗಳನ್ನು ನಿಮ್ಮ ಫೋನ್‌ನಿಂದ ಎಗರಿಸಬಹುದು.

#10
ಬ್ಲ್ಯೂಟೂತ್ ಅನ್ನು ಸದಾ ಕಾಲ ಆನ್‌ನಲ್ಲಿರಿಸುವುದು ನಿಮ್ಮ ಬ್ಯಾಟರಿಯನ್ನು ಖಾಲಿ ಮಾಡುವುದು ಮಾತ್ರವಲ್ಲದೆ ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡುವ ಅವಕಾಶವನ್ನು ಹ್ಯಾಕರ್‌ಗಳಿಗೆ ನೀಡುತ್ತಾರೆ. ಬ್ಲ್ಯೂಟೂತ್ ಸಂಪರ್ಕವು 10 ಮೀಟರ್‌ಗಳ ಶ್ರೇಣಿಯನ್ನು ಹೊಂದಿದ್ದು, ಹ್ಯಾಕರ್ ನಿಮ್ಮ ಫೋನ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








